ಕ್ರೈಮ್ ನ್ಯೂಸ್

crime, arrest, suspected

ಮಂಗಳೂರು:  ಎಂಡಿಎಂಎ ಮಾದಕ ದ್ರವ್ಯ ಮಾರಾಟ ➤  ಆರೋಪಿ ಅಂದರ್ !

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.24. ನಗರದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಂದರು ಜೆ.ಎಂ ರೋಡ್ ನ ತೂಸಿಮನ್ ಹೌಸ್ ನ ನಿವಾಸಿ ಇಕ್ಬಾಲ್ ಆಲಿ ಅಹಮ್ಮದ್ ಯಾನೆ ಇಕ್ಬಾಲ್ (38) ಎಂದು ಗುರುತಿಸಲಾಗಿದೆ. ಆರೋಪಿ ಕುದ್ರೋಳಿಯ ಮೊಯಿದ್ದಿನ ನಗರದ ಬಳಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ವಸ್ತುವನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈ ವೇಳೆ 11.13 ಗ್ರಾಂ […]

ಮಂಗಳೂರು:  ಎಂಡಿಎಂಎ ಮಾದಕ ದ್ರವ್ಯ ಮಾರಾಟ ➤  ಆರೋಪಿ ಅಂದರ್ ! Read More »

ಕರಾವಳಿ, ಕ್ರೈಮ್ ನ್ಯೂಸ್

ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ)newskadaba.com  ದಾವಣಗೆರೆ. ಜ.24. ಲಾರಿ ಚಕ್ರಕ್ಕೆ ಬೈಕ್ ಸವಾರ ಸಿಲುಕಿ ಮೃತಪಟ್ಟಿರುವ ಘಟನೆ ಹರಪನಹಳ್ಳಿಯ ಗೌಳೆರಹಟ್ಟಿ ಕ್ರಾಸ್ ಬಳಿ ನಡೆದಿದೆ. ತಾಲ್ಲೂಕಿನ ಹಿರೇಮೆಗಳಗೆರೆ ಗ್ರಾಮದ ರಮೇಶ್ (30) ಮೃತ ಯುವಕ. ರಮೇಶ್ ಉಚ್ಚಂಗಿದುರ್ಗದಿಂದ ಹಿರೇಮೆಗಳಗೆರೆ ಕಡೆಗೆ ಹೋಗುತ್ತಿರುವಾಗ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಅನಂತರ ಸವಾರ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಸಾರ್ವಜನಿಕರು ಘಟನಾ ಸ್ಥಳಕ್ಕೆ ಆಗಮಿಸಿದ್ದರು. ಘಟನೆ ಸ್ಥಳಕ್ಕೆ ಅರಸೀಕೆರೆ ಸಬ್ ಇನ್‌ಸ್ಪೆಕ್ಟರ್‌ ಎ. ಕಿರಣ್ ಕುಮಾರ್ ಭೇಟಿ

ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದಲೇ ರೇಪ್‌

(ನ್ಯೂಸ್ ಕಡಬ)newskadaba.com  ಬಾಗಲಕೋಟೆ, ಜ.24. ಅನುದಾನಿತ ಶಾಲೆಯೊಂದರ ಶಿಕ್ಷಕ ಅಪ್ರಾಪ್ತ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಸಾವಳಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅನುದಾನಿತ ಶಾಲೆಯೊಂದರ ಶಿಕ್ಷಕ ಲಕ್ಷ್ಮಣ ದೇವೆಂದ್ರಪ್ಪ ಕೊಪ್ಪದ ಬಂಧಿತ ಆರೋಪಿ. ಆರೋಪಿ ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಕಾಲುವೆ ಯಲ್ಲಾಪೂರ ಗ್ರಾಮದವನು. ಕಳೆದೊಂದು ವರ್ಷದಿಂದ ತನ್ನ ಮನೆಯಲ್ಲಿ ಇಂಗ್ಲಿಷ್‌ ಟ್ಯೂಷನ್‌ ಹೇಳಿಕೊಡುವುದಾಗಿ ಕರೆಸಿಕೊಂಡು ಟ್ಯೂಷನ್‌ ಬಿಟ್ಟ

ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದಲೇ ರೇಪ್‌ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಈಜಲು ನೀರಿಗಿಳಿದ ಯುವಕ ನಾಪತ್ತೆ

(ನ್ಯೂಸ್ ಕಡಬ)newskadaba.com  ಸಾಗರ, ಜ.24. ಕೆರೆಗೆ ಈಜಲು ಹೋದ ಯುವಕನೋರ್ವ ನಾಪತ್ತೆಯಾದ ಘಟನೆ ಭೀಮನಕೋಣೆ ಕೆರೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಸಾಗರ ಪಟ್ಟಣದ ಯಶ್ವಂತ್ (22) ನಾಪತ್ತೆಯಾದ ಯುವಕ. ಯಶ್ವಂತ್ ತನ್ನ ಸ್ನೇಹಿತರೊಂದಿಗೆ ಭೀಮನಕೋಣೆ ಕೆರೆಗೆ ಹೋಗಿದ್ದರು. ಈ ವೇಳೆ ಯಶ್ವಂತ್, ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಇಳಿದಿದ್ದಾನೆ.ಆದರೆ ಆತನಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.  

ಈಜಲು ನೀರಿಗಿಳಿದ ಯುವಕ ನಾಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ವಿಜ್ಞಾನ ವಿಷಯ ಇಷ್ಟವಾಗಲಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com, ವಿಜಯಪುರ, ಜ. 24. ವಿಜ್ಞಾನ ವಿಷಯ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು 17 ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ. ಈಕೆ ತಾಲೂಕಿನ ಕೋಮಲಾಪುರ ನಿವಾಸಿ ಪದ್ಮಾವತಿ ನಾಗರಬೆಟ್ಟದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾರ್ಥಿನಿ ಸ್ನಾನಗೃಹದಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಎಷ್ಟು ಹೊತ್ತಾದರೂ ಆಕೆ ಹೊರಗೆ ಬಾರದೇ ಇದ್ದಾಗ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಒಳಗೆ ಇಣುಕಿ ನೋಡಿದಾಗ ಘಟನೆ ಬಳಕಿಗೆ ಬಂದಿದೆ.

➤ ವಿಜ್ಞಾನ ವಿಷಯ ಇಷ್ಟವಾಗಲಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ..! Read More »

ಕ್ರೈಮ್ ನ್ಯೂಸ್

ಬೆಂಗಳೂರಲ್ಲಿ ಮಾನವೀಯತೆ ಮರೆತ ಜನ….! ➤  ರಕ್ತದ ಮಡುವಿನಲ್ಲಿ ಒದ್ದಾಡಿ ಯುವತಿ ಮೃತ್ಯು !

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.24. ಖಾಸಗಿ ಬಸ್ ಓವರ್ ಸ್ಪೀಡ್‌ ಆಗಿ ಬಂದು ಸೈಡ್‌ ಅಲ್ಲಿ ನಿಂತಿದ್ದ ಗಾಡಿಗೆ ಗುದ್ದಿದ ಭೀಕರ ಅಪಘಾತ ಯಶವಂತಪುರದಲ್ಲಿ ನಡೆದಿದೆ. ಅಪಘಾತದಲ್ಲಿ ಡಿಯೋ ಗಾಡಿ ಓಡಿಸುತ್ತಿದ್ದ ಯುವತಿ ತಲೆಗೆ ಗಂಭೀರ ಪೆಟ್ಟು ಬಿದ್ದು ಕೆಳಗೆ ಬಿದ್ದಿದ್ದಾರೆ. ಅರ್ಧಗಂಟೆಗಳ ಕಾಲ ರಕ್ತದ ಮಡುವಿನಲ್ಲಿ ಯುವತಿ ನರಳಾಡುತ್ತಿದ್ರೂ ಜನ ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕಿದ್ದಾರೆ. ಗಾಡಿಯನ್ನು ಸೈಡ್‌ಗೆ ಹಾಕಿದ್ದ ವಿನುತಾ ಯಶವಂತಪುರ ಸತ್ವ ಅಪಾರ್ಟ್‌ಮೆಂಟ್‌ ಮುಂಭಾಗದ ರಸ್ತೆಯಲ್ಲಿ ಈ ಅವಘಡ ನಡೆದಿದೆ. ಡಿಯೋ ಓಡಿಸುತ್ತಿದ್ದ

ಬೆಂಗಳೂರಲ್ಲಿ ಮಾನವೀಯತೆ ಮರೆತ ಜನ….! ➤  ರಕ್ತದ ಮಡುವಿನಲ್ಲಿ ಒದ್ದಾಡಿ ಯುವತಿ ಮೃತ್ಯು ! Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ಬಿಹಾರದಲ್ಲಿ ಕಳ್ಳಬಟ್ಟಿ ದುರಂತ ➤ 5 ಸಾವು, ಹಲವರು ಗಂಭೀರ!

(ನ್ಯೂಸ್ ಕಡಬ) newskadaba.com, ಪಾಟ್ನಾ, ಜ. 24. ಬಿಹಾರದಲ್ಲಿ ಮತ್ತೊಂದು ಕಳ್ಳಬಟ್ಟಿ ದುರಂತ ಸಂಭವಿಸಿದ್ದು, ನಕಲಿ ಮದ್ಯ ಸೇವಿಸಿ ಕನಿಷ್ಠ 5 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಬಿಹಾರದ ಸಿವಾನ್ ಜಿಲ್ಲೆಯ ಲಕಾರಿ ನಬಿಗಂಜ್‌ನ ಬಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಸೋಮವಾರ ಐದಕ್ಕೆ ಏರಿಕೆಯಾಗಿದೆ. ನಕಲಿ ಮದ್ಯ ಸೇವಿಸಿ ತೀವ್ರವಾಗಿ ಅಸ್ವಸ್ಥರಾಗಿರುವ ಎಲ್ಲರೂ ಸಿವಾನ್‌ನ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಈ ನಕಲಿ ಮದ್ಯ

➤ಬಿಹಾರದಲ್ಲಿ ಕಳ್ಳಬಟ್ಟಿ ದುರಂತ ➤ 5 ಸಾವು, ಹಲವರು ಗಂಭೀರ! Read More »

ಕ್ರೈಮ್ ನ್ಯೂಸ್

ವಿದ್ಯುತ್ ಸ್ಪರ್ಶದಿಂದ ಲೈನ್‌ಮ್ಯಾನ್ ಮೃತ್ಯು..! ➤ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದ ಕುಟುಂಬಸ್ಥರು

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.24. ಟ್ರಾನ್ಸ್ ಫಾರ್ಮರ್ ದುರಸ್ತಿ ಮಾಡುತಿದ್ದ 26 ವರ್ಷದ ಲೈನ್‌ಮ್ಯಾನ್ ಒಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಟ್ರಾನ್ಸ್‌ಫಾರ್ಮರ್ ದುರಸ್ತಿ ಮಾಡುತ್ತಿದ್ದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) 26 ವರ್ಷದ ಲೈನ್‌ಮ್ಯಾನ್ ಗೌತಮ್ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ. ಮೃತ ಗೌತಮ್ ಅವರು ಕಳೆದ ಆರು ವರ್ಷಗಳಿಂದ ಬೆಸ್ಕಾಂನಲ್ಲಿ ಖಾಯಂ ಉದ್ಯೋಗಿಯಾಗಿದ್ದು, ಟ್ರಾನ್ಸ್‌ಫಾರ್ಮರ್ ಸಮಸ್ಯೆಯಿಂದ ವಿದ್ಯುತ್ ಕಡಿತವಾಗಿದೆ ಎಂಬ ದೂರಿನ ಮೇರೆಗೆ ತನ್ನ ಸಹೋದ್ಯೋಗಿ ಸಿದ್ದರಾಮ

ವಿದ್ಯುತ್ ಸ್ಪರ್ಶದಿಂದ ಲೈನ್‌ಮ್ಯಾನ್ ಮೃತ್ಯು..! ➤ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದ ಕುಟುಂಬಸ್ಥರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿಮಾನದಲ್ಲಿ ಗಗನಸಖಿಯ ಜೊತೆ ಅನುಚಿತ ವರ್ತನೆ..! ➤ ಪ್ರಯಾಣಿಕರ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಜ.24. ವಿಮಾನದಲ್ಲಿ ಪ್ರಯಾಣಿಕರ ದುರ್ವರ್ತನೆಗೆ ನಿಯಂತ್ರಣವೇ ಇಲ್ಲದಂತಾಗಿದೆ. ಹೊಸದಿಲ್ಲಿಯಿಂದ ಹೈದರಾಬಾದ್‌ಗೆ ಹೊರಟಿದ್ದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಗಗನಸಖೀಯ ಜತೆಗೆ ಇಬ್ಬರು ವ್ಯಕ್ತಿಗಳು ನಿಯಮ ಮೀರಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಅವರಿಬ್ಬರನ್ನು ತಕ್ಷಣವೇ ವಿಮಾನದಿಂದ ಇಳಿಸಲಾಗಿದೆ. ಅವರಿಬ್ಬರು ಗಗನಸಖೀಯ ಜತೆಗೆ ವಾಗ್ವಾದದಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕೂಡಲೇ ಅವರಿಬ್ಬರನ್ನು ಹೊಸದಿಲ್ಲಿ ಏರ್‌ಪೋರ್ಟ್‌ನ ಭದ್ರತಾ ಸಿಬಂದಿ ವಶಕ್ಕೆ ಒಪ್ಪಿಸಲಾಗಿದೆ. ಇಬ್ಬರ ಪೈಕಿ ಒಬ್ಟಾತ ಸಿಬಂದಿ ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು

ವಿಮಾನದಲ್ಲಿ ಗಗನಸಖಿಯ ಜೊತೆ ಅನುಚಿತ ವರ್ತನೆ..! ➤ ಪ್ರಯಾಣಿಕರ ವಿರುದ್ದ ದೂರು ದಾಖಲು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಕ್ಕಿ ಸಾಗಿಸುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದ ಕಾರು ➤ ಐವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಕೇರಳ, ಜ.24. ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಅಂಬಲಪುಳ ಬಳಿ ನಸುಕಿನ ವೇಳೆ ನಡೆದಿದೆ. ಇವರಲ್ಲಿ ನಾಲ್ವರು ತಿರುವನಂತಪುರಂ ಮೂಲದವರಾಗಿದ್ದು, ನಗರದ ಇಸ್ರೋ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶದಿಂದ ಅಕ್ಕಿ ಸಾಗಿಸುತ್ತಿದ್ದ ಲಾರಿ ಹಾಗೂ ಐವರು ಪ್ರಯಾಣಿಸುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿದ್ದ ಮತ್ತೊಬ್ಬರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಕ್ಕಿ ಸಾಗಿಸುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದ ಕಾರು ➤ ಐವರು ಸ್ಥಳದಲ್ಲೇ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top