ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
➤ನೇಣಿಗೆ ಶರಣಾದ ಮೂವರು ಸಹೋದರಿಯರು – News Kadaba

➤ನೇಣಿಗೆ ಶರಣಾದ ಮೂವರು ಸಹೋದರಿಯರು

(ನ್ಯೂಸ್ ಕಡಬ) newskadaba.com, ತುಮಕೂರು, ಜ. 20. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಕನಹಾಲ್ ತಾಂಡ್ಯ ಬಳಿಯ ಒಂದು ಮನೆಯಲ್ಲಿ ಮೂವರು  ಹೆಣ್ಣು ಮಕ್ಕಳು ವಾಸವಿದ್ದರು. ಆದರೆ ಈಗ ಆ ಮನೆಯಲ್ಲಿ ದುರಂತವೊಂದು ಸಂಭವಿಸಿದೆ. ಈ ಘಟನೆಯಿಂದ ತಾಂಡ್ಯದ ಜನರೇ ಬೆಚ್ಚಿಬಿದ್ದಿದ್ದಾರೆ. ಮೂವರು ಅನಾಥ ಸಹೋದರಿಯರು ನೇಣಿಗೆ ಶರಣಾದ ದಾರುಣ ಘಟನೆ ಸಂಭವಿಸಿದೆ.

ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಒಂಬತ್ತು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ರಂಜಿತಾ (24), ಬಿಂದು (21), ಚಂದನ (18) ಆತ್ಮಹತ್ಯೆಗೆ ಶರಣಾದ ಸಹೋದರಿಯರು ಎಂದು ತಿಳಿದುಬಂದಿದೆ. ಹಲವು ವರ್ಷಗಳ ಹಿಂದೆಯೇ ಈ ಮೂವರುಹೆಣ್ಣು ಮಕ್ಕಳ ಪೋಷಕರು ಮೃತಪಟ್ಟಿದ್ದರು. ಅಂದಿನಿಂದ ಅಜ್ಜಿ ಜೊತೆಯಲ್ಲಿ ಮೂವರು ಸಹೋದರಿಯರು ವಾಸವಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Scroll to Top