ಕ್ರೈಮ್ ನ್ಯೂಸ್

ಸುಳ್ಯ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಸುಳ್ಯ, ಜ.27. ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಅಜ್ಜಾವರ ಗ್ರಾಮದ ಪಡ್ಡಂಬೈಲು ಸಮೀಪದ ನಾಂಗುಳಿ ಎಂಬಲ್ಲಿ ಸಂಭವಿಸಿದೆ. ಶರತ್ ಎಂಬವರ ಪತ್ನಿ ಮಲ್ಲಿಕಾ(26) ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಎನ್ನಲಾಗಿದೆ. ಮೃತ ಮಹಿಳೆ ಮಲ್ಲಿಕಾ ಅವರು ಕೆ.ವಿ.ಜಿ. ಆಯುರ್ವೇದಿಕ್ ನಲ್ಲಿ ಉದ್ಯೋಗಿಯಾಗಿದ್ದರು. ರಜೆ ಹಿನ್ನಲೆ ಮಲ್ಲಿಕಾ ಮನೆಯಲ್ಲಿದ್ದರು. ಸಂಜೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ. ಶವವನ್ನು ಸುಳ್ಯ ಸರಕಾರಿ […]

ಸುಳ್ಯ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಾಗಡಿ ರಸ್ತೆ ಅಪಘಾತ ➤ ಮಹಿಳೆ ಮೃತ್ಯು..!

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 26. ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಅಪಘಾತದಲ್ಲಿ ಮಹಿಳೆಯೊಬ್ಬರು ಬಲಿಯಾಗಿರುವ ದಾರುಣ ಘಟನೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಖಾಸಗಿ ಶಾಲೆಯ ಉದ್ಯೋಗಿ ನಳಿನಾ ಮೃತಪಟ್ಟವರು. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯ ಬಳಿ ಇಂದು ಬೆಳಿಗ್ಗೆ ಸ್ಕೂಟರ್ ನಲ್ಲಿ ನಳಿನಾ ಅವರು ಹೋಗುತ್ತಿದ್ದಾಗ ರಸ್ತೆ ಕಾಮಗಾರಿಯ ಗುಂಡಿ ತಪ್ಪಿಸಲು ಹೋದಾಗ ಕ್ಯಾಂಟರ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಾಗಡಿ ರಸ್ತೆ ಅಪಘಾತ ➤ ಮಹಿಳೆ ಮೃತ್ಯು..! Read More »

ಕ್ರೈಮ್ ನ್ಯೂಸ್

ಬಿಹಾರ ಅತ್ಯಾಚಾರ ಯತ್ನ ➤ವೇಗವಾಗಿ ಚಲಿಸುತ್ತಿದ್ದ ಬಸ್‌ನಿಂದ ಜಿಗಿದ ಶಿಕ್ಷಕಿ ಸ್ಥಿತಿ ಗಂಭೀರ!

(ನ್ಯೂಸ್ ಕಡಬ) newskadaba.com, ಪಾಟ್ನಾ, ಜ. 26. ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ಐವರು ಅತ್ಯಾಚಾರಕ್ಕೆ ಯತ್ನಿಸಿದ ನಂತರ ವೇಗವಾಗಿ ಚಲಿಸುತ್ತಿದ್ದ ಬಸ್‌ನಿಂದ ಜಿಗಿದ ನಂತರ ಸಿಲ್ಲಿಗುರಿಯ 35 ವರ್ಷದ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ರಾತ್ರಿ ಬಯಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ದಾಲ್ಕೊಳ ಚೆಕ್‌ಪೋಸ್ಟ್ ಬಳಿ ಈ ಘಟನೆ ನಡೆದಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಪುರ್ನಿಯಾದಲ್ಲಿ ದಾಖಲಾಗಿರುವ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ. ಸಂತ್ರಸ್ತೆ ವೈಶಾಲಿಯಿಂದ ಸಿಲಿಗುರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹತ್ತಿದ್ದಾರೆ. ವೈಶಾಲಿಯಿಂದ ಬಸ್ಸು

ಬಿಹಾರ ಅತ್ಯಾಚಾರ ಯತ್ನ ➤ವೇಗವಾಗಿ ಚಲಿಸುತ್ತಿದ್ದ ಬಸ್‌ನಿಂದ ಜಿಗಿದ ಶಿಕ್ಷಕಿ ಸ್ಥಿತಿ ಗಂಭೀರ! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾರ್ಕಳ: ದ್ವಿಚಕ್ರ ವಾಹನ -ಟಿಪ್ಪರ್ ನಡುವೆ ಅಪಘಾತ ➤ ಓರ್ವ ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com  ಕಾರ್ಕಳ, ಜ.26. ದ್ವಿಚಕ್ರ ವಾಹನ ಹಾಗೂ ಟಿಪ್ಪರ್ ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಅತ್ತೂರಿನಲ್ಲಿ ನಡೆದಿದೆ. ಮೃತ ವಾಹನ ಸವಾರೆಯನ್ನು ಜಾಹಿರ ಬಾನು ಎಂದು ಗುರುತಿಸಲಾಗಿದೆ. ಟಿಪ್ಪರ್ ಹಾಗೂ ಸ್ಕೂಟಿ ಅತ್ತುರಿನತ್ತ ಸಾಗುತಿತ್ತು ಎನ್ನಲಾಗಿದೆ.

ಕಾರ್ಕಳ: ದ್ವಿಚಕ್ರ ವಾಹನ -ಟಿಪ್ಪರ್ ನಡುವೆ ಅಪಘಾತ ➤ ಓರ್ವ ಮಹಿಳೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಜಡ್ಜ್ ಮನೆಯಲ್ಲಿ ಕಳವು ಇಬ್ಬರು ಖದೀಮರು ಸೆರೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.26. ವಾರದ ಹಿಂದಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ಇಬ್ಬರು ಖದೀಮರು ಚಾಳಿ ಬಿಡದೆ ಮತ್ತದೇ ದುಷ್ಕೃತ್ಯವೆಸಗಿ ಹೆಣ್ಣೂರು ಪೊಲೀಸರಿಗೆ ಸಿಕ್ಕಿಬಿದ್ದು ಪುನಃ ಜೈಲುಪಾಲಾಗಿದ್ದಾರೆ. ಕುಖ್ಯಾತ ಮನೆಗಳ್ಳರಾದ ಫಯಾಜ್ ಮತ್ತು ಪ್ರಸಾದ್ ಬಂಧಿತ ಆರೋಪಿಗಳಾಗಿದ್ದಾರೆ. ಹೆಣ್ಣೂರು, ರಾಮಮೂರ್ತಿನಗರ ಸೇರಿದಂತೆ ಹಲವೆಡೆ ಅರವತ್ತು ಸಲ ಮನೆಗಳ್ಳತನ ಮಾಡಿದ್ದ ಇವರು ಕೋಲಾರದಲ್ಲಿ ನ್ಯಾಯಾಧೀಶರ ನಿವಾಸದಲ್ಲೂ ಕಳ್ಳತನ ಮಾಡಿದ್ದರು.

ಜಡ್ಜ್ ಮನೆಯಲ್ಲಿ ಕಳವು ಇಬ್ಬರು ಖದೀಮರು ಸೆರೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ವ್ಯಾನ್‌ನಲ್ಲಿಯೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ ಆತ್ಮಹತ್ಯೆ..!

ನ್ಯೂಸ್ ಕಡಬ) newskadaba.com. ಮಂಗಳೂರು , ಜ. 26. ಉಡುಪಿ ಜಿಲ್ಲೆಯ ಮುಂಡ್ಕೂರು ಗ್ರಾಮದಲ್ಲಿ 46 ವರ್ಷದ ವ್ಯಕ್ತಿಯೊಬ್ಬರು ತಮ್ಮ ವ್ಯಾನ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಮೃತರನ್ನು ಕೃಷ್ಣ ಸಫಲಿಗ ಎಂದು ಗುರುತಿಸಲಾಗಿದ್ದು, ಮೃತರು ತಮ್ಮ ಮಾಲೀಕತ್ವದ ವ್ಯಾನ್ ಅನ್ನು ಟ್ಯಾಕ್ಸಿಯಾಗಿ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಬುಧವಾರ ತಡರಾತ್ರಿ ವಾಹನದಲ್ಲಿ ಕುಳಿತು ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ತನ್ನ ಸೋದರನ ಮನೆಯಲ್ಲಿ ನಡೆದ ‘ಮೆಹೆಂದಿ’ ಕಾರ್ಯಕ್ರಮದಿಂದ ವಾಪಸಾಗುತ್ತಿದ್ದ ಅವರು

➤ ವ್ಯಾನ್‌ನಲ್ಲಿಯೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ ಆತ್ಮಹತ್ಯೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದ ನೌಕರ ಕುಸಿದು ಬಿದ್ದು ಮೃತ್ಯು..!

(ನ್ಯೂಸ್ ಕಡಬ)newskadaba.com  ಸಿಂಧನೂರು, ಜ.26. ನಗರದ ತಾಲೂಕು ಕ್ರೀಡಾಂಗಣದಲ್ಲಿ 74ನೇ ಗಣರಾಜ್ಯೋತ್ಸವದ ವೇಳೆ ಕೋಲಾಟ ಆಡುತ್ತಿದ್ದ ನೌಕರ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಸ್ಥಳೀಯ ಸರಕಾರಿ ಆಸ್ಪತ್ರೆಯ ನೌಕರ ಮಹಾಂತೇಶ ಪೂಜಾರ್ (40) ಮೃತ ಎಂದು ಗುರುತಿಸಲಾಗಿದೆ. ಗರಡು ಗಮನ ಕೀರ್ತನೆಗೆ ತಂಡದೊಟ್ಟಿಗೆ ಕೋಲಾಟದಲ್ಲಿ ನಿರತರಾಗಿದ್ದಾಗ ದಿಢೀರ್ ಮೈದಾನದಲ್ಲೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ನಗರಸಭೆಯ ಕಾರಿನಲ್ಲಿ ಆಸ್ಪತ್ರೆಗೆ ಕರೆ ತಂದರು. ಆಸ್ಪತ್ರೆಗೆ ಕರೆ ತರುವ ಮುನ್ನವೇ ಹೃದಯಾಘಾತದಿಂದ

ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದ ನೌಕರ ಕುಸಿದು ಬಿದ್ದು ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮೊದಲು ಹಣ; ಉಳಿದಿದ್ದೆಲ್ಲಾ ನಂತರ..! ➤ ನಾಲ್ವರ ಜಗಳದಿಂದ ಬಯಲಾಯ್ತು ವೇಶ್ಯಾವಾಟಿಕೆ ದಂಧೆ

(ನ್ಯೂಸ್ ಕಡಬ)newskadaba.com ದಾವಣಗೆರೆ, ಜ.26. ಹೊರರಾಜ್ಯಗಳಿಂದ ಯುವತಿಯರನ್ನು ಕರೆತಂದು ರಾಜ್ಯದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಗುಜರಾತ್ನಿಂದ ಇಬ್ಬರು ಯುವತಿಯರನ್ನು ದಾವಣಗೆರೆಗೆ ಕರೆತಂದಿದ್ದರು. ಶಿವಮೊಗ್ಗ ಮೂಲದ ಇಬ್ಬರು ವ್ಯಕ್ತಿಗಳೊಂದಿಗೆ ವೇಶ್ಯಾವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಆಗಿದ್ದೇ ಬೇರೆ. ಗುಜರಾತ್ ಮೂಲದ ಯುವತಿರು ಹಾಗೂ ವೇಶ್ಯಾವಾಟಿಕೆಗೆ ಕರೆಸಿದ್ದವರ ನಡುವೆ ಹಣದ ವಿಚಾರವಾಗಿ ಜಗಳ ಆರಂಭವಾಗಿದೆ. ಇದರಿಂದ ಸಿಟ್ಟಾದ ಯುವತಿಯರು ದಾವಣಗೆರೆಗೆ ಕರೆಯಿಸಿ ವೇಶ್ಯಾವಾಟಿಕೆ ಯತ್ನಿಸಿದ ಕುರಿತು ಪೊಲೀಸ್ ದೂರು ನೀಡಿದ್ದಾರೆ. ಸದ್ಯ ಹಣದ ವಿಚಾರವಾಗಿ

ಮೊದಲು ಹಣ; ಉಳಿದಿದ್ದೆಲ್ಲಾ ನಂತರ..! ➤ ನಾಲ್ವರ ಜಗಳದಿಂದ ಬಯಲಾಯ್ತು ವೇಶ್ಯಾವಾಟಿಕೆ ದಂಧೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗಣರಾಜ್ಯೋತ್ಸವದ ಧ್ವಜಾರೋಹಣ ನಡೆಸಿ ವಾಪಾಸ್ಸಾಗುವಾಗ ರಸ್ತೆ ಅಪಘಾತ ! ➤ ಪಿಡಿಒಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com  ಹನೂರು, ಜ.26. ಗಣರಾಜ್ಯೋತ್ಸವದ ಹಿನ್ನೆಲೆ ಧ್ವಜಾರೋಹಣ ನೆರವೇರಿಸಿ ವಾಪಾಸ್ಸಾಗುವಾಗ ಸಂಭವಿಸಿದ ಅಪಘಾತದಲ್ಲಿ ಪಿಡಿಒ ಗಂಭೀರವಾಗಿ ಗಾಯಗೊಂಡ ಘಟನೆ ರಾಮಾಪುರ – ದಿನ್ನಳ್ಳಿ ಮಾರ್ಗ ಮಧ್ಯದಲ್ಲಿ ಸಂಭವಿಸಿದೆ ಎನ್ನಲಾಗಿದೆ. ಪಿಡಿಒ ಸೋಮಶೇಖರ್ ಅವರು ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ವಾಪಸ್ಸಾಗುವಾಗ ಗೂಡ್ಸ್ ಆಟೋ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸೋಮಶೇಖರ್ ತಲೆಗೆ ತೀವ್ರವಾದ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಗಣರಾಜ್ಯೋತ್ಸವದ ಧ್ವಜಾರೋಹಣ ನಡೆಸಿ ವಾಪಾಸ್ಸಾಗುವಾಗ ರಸ್ತೆ ಅಪಘಾತ ! ➤ ಪಿಡಿಒಗೆ ಗಂಭೀರ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ       ➤ ಆರೋಪಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜ.25. ಬಾಲಕಿಯ ಇಚ್ಚೆಗೆ ವಿರುದ್ದವಾಗಿ ಅನೇಕ ಬಾರಿ ಲೈಂಗಿಕ ಸಂಪರ್ಕ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ 20 ವರ್ಷಗಳ ಕಾರಾಗೃಹ ಹಾಗೂ 50 ಸಾವಿರ ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ 6 ಕಠಿಣ ಕಾರಾಗೃಹ ವಾಸ ವಿಧಿಸಿ ನ್ಯಾಯಲಯ ಆದೇಶ ಹೊರಡಿಸಿದೆ. ಅಪರಾಧಿಯನ್ನು ಬಾಬಿ(48) ಎಂದು ಗುರುತಿಸಲಾಗಿದೆ. ಬೆಳ್ತಂಗಡಿಯ ಎರ್ಮಳಪಲ್ಕೆ ಎಂಬಲ್ಲಿ ಆರೋಪಿಯು ಬಾಲಕಿಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ಸಂಪರ್ಕ ನಡೆಸಿದ್ದು, ಈ ಬಗ್ಗೆ ಬಾಲಕಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು,

ಬಂಟ್ವಾಳ: ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ       ➤ ಆರೋಪಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top