ಕ್ರೈಮ್ ನ್ಯೂಸ್

ಮೈಮೇಲೆ ಕಬ್ಬಿಣದ ಗೇಟ್ ಬಿದ್ದು ಬಾಲಕಿ ಮೃತ್ಯು !

(ನ್ಯೂಸ್ ಕಡಬ)newskadaba.com ಚೆನ್ನೈ, ಜ.30. ಕಬ್ಬಿಣದ ಗೇಟ್‌ ಬಿದ್ದು, 5 ವರ್ಷದ ಬಾಲಕಿ ಮೃತಪಟ್ಟ ಘಟನೆ ಚೆನ್ನೈನಲ್ಲಿ ವದರಿಯಾಗಿದೆ. ಶಂಕರ್ ಮತ್ತು ವಾಣಿ ದಂಪತಿಯ ಪುತ್ರಿ ಹರಿಣಿ (5) ಮೃತ ಬಾಲಕಿ. ಚೆನ್ನೈನ ಕಿಲ್ಲಿಪಾಕ್ಕಂನ ಹರ್ಲಿಕ್ಸ್ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಶಂಕರ್ ಕೆಲಸ ಮಾಡುತ್ತಿದ್ದು, ಶಂಕರನ ಹೆಂಡತಿ ವಾಣಿ ಮತ್ತು ಅವನ ಮಗಳು ಹರಿಣಿ ಅವನನ್ನು ನೋಡಲು ಬಟ್ಟೆ ಅಂಗಡಿಗೆ ಬಂದಿದ್ದಾರೆ‌. ಆವರಣದಲ್ಲಿದ್ದ 20 ಅಡಿ ಅಗಲದ ಸ್ಲೈಡಿಂಗ್ ಕಬ್ಬಿಣದ ಗೇಟ್ ತೆರೆಯಲು ಯತ್ನಿಸುತ್ತಿದ್ದಾಗ ಗೇಟ್ ಬಾಲಕಿ […]

ಮೈಮೇಲೆ ಕಬ್ಬಿಣದ ಗೇಟ್ ಬಿದ್ದು ಬಾಲಕಿ ಮೃತ್ಯು ! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ: ಗಿಫ್ಟ್ ನೆಪದಲ್ಲಿ ಸಾವಿರಾರು ರೂ. ವಂಚನೆ

(ನ್ಯೂಸ್ ಕಡಬ)newskadaba.com ಉಡುಪಿ, ಜ.30. ಎಲೆಕ್ಟ್ರಾನಿಕ್ಸ್‌ ಸಾಮಾಗ್ರಿ ಗಿಫ್ಟ್ ವಿಜೇತರಾಗಿದ್ದೀರಿ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದೀಚ್ಚಾ ಪರೇಶ್‌ ಕಾಮತ್‌ ಎಂಬವರಿಗೆ ಯಾರೋ ಕರೆ ಮಾಡಿ ಎಲೆಕ್ಟ್ರಾನಿಕ್ಸ್‌ ಸಾಮಾಗ್ರಿ ಗಿಫ್ಟ್ ಬಂದಿದೆ ಎಂದು ನಂಬಿಸಿದ್ದರು. ಗಿಫ್ಟ್ ಕಳುಹಿಸಲು ಬ್ಯಾಂಕ್‌ ಖಾತೆ ನೀಡಿ ಇದಕ್ಕೆ ಹಣ ವರ್ಗಾಯಿಸುವಂತೆ ತಿಳಿಸಿದ್ದು, ಅದರಂತೆ ಒಟ್ಟು 33,998 ರೂ. ಪಾವತಿಸಿ, ಗಿಫ್ಟ್ ಹಾಗೂ ಹಣ ಹಿಂದೆ ಕೊಡದೇ ವಂಚಿಸಿದ್ದಾರೆ ಎಂದು

ಉಡುಪಿ: ಗಿಫ್ಟ್ ನೆಪದಲ್ಲಿ ಸಾವಿರಾರು ರೂ. ವಂಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

ಐಡಿಬಿಐ ಬ್ಯಾಂಕಿನಲ್ಲಿಟ್ಟಿದ್ದ ಗ್ರಾಹಕರ ಎಫ್ಡಿ ಹಣ ದೋಖಾ ಪ್ರಕರಣ ➤ಆರೋಪಿ ಬಂಧನ!

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ.30. ಬೆಂಗಳೂರು: ಐಡಿಬಿಐ ಬ್ಯಾಂಕ್​ನಲ್ಲಿ ಗ್ರಾಹಕರ ಎಫ್​​ಡಿ ಹಣ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಐಡಿಬಿಐ ಬ್ಯಾಂಕ್​ನ ರಿಲೇಷನ್​ಶಿಪ್​ ಮ್ಯಾನೇಜರ್​ ಆಗಿದ್ದ ಆರೋಪಿ ಸಜಿಲಳನ್ನು ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿ ಮೂಲದ ಸಜಿಲ ಬೆಂಗಳೂರಿನ ಗಾಂಧಿನಗರ ಶಾಖೆಯಲ್ಲಿ 18 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದಳು. ಬ್ಯಾಂಕ್​ನಲ್ಲಿ ಲೆಕ್ಕಪರಿಶೋಧನೆ ವೇಳೆ ಸಜಿಲಳ ಕಳ್ಳಾಟ ಬಯಲಾಗಿತ್ತು. ಬ್ಯಾಂಕ್​ ಮ್ಯಾನೇಜರ್​ ದೂರಿನ ಮೇರೆಗೆ ಮತ್ತೊಂದು ಎಫ್​ಐಆರ್​ ದಾಖಲಾಗಿದೆ.  

ಐಡಿಬಿಐ ಬ್ಯಾಂಕಿನಲ್ಲಿಟ್ಟಿದ್ದ ಗ್ರಾಹಕರ ಎಫ್ಡಿ ಹಣ ದೋಖಾ ಪ್ರಕರಣ ➤ಆರೋಪಿ ಬಂಧನ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.30. ಕಲ್ಲಾಪು ಸನಿಹ ನೇತ್ರಾವತಿ ನದಿಯ ತಂತ್ರಿ ರಸ್ತೆ ಬಳಿ ಅಪರಿಚಿತ ಮೃತದೇಹ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಮೂರು ದಿನಗಳ ಹಿಂದೆ ನದಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಲುಂಗಿ, ಟೀಶರ್ಟ್ ಧರಿಸಿದ್ದು ಕೈಯಲ್ಲಿ ವಾಚ್, ಪತ್ತೆಯಾಗಿದೆ. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಬಜಾಲ್ ಅಥವಾ ಬಂಟ್ವಾಳ ಭಾಗದಲ್ಲಿ ನದಿಗೆ ಬಿದ್ದಿರುವ ಶಂಕೆವ್ಯಕ್ತವಾಗಿದ್ದು , ನದಿ ಮಧ್ಯದಲ್ಲಿ ತೇಲುತ್ತಿದ್ದ ಮೃತದೇಹವನ್ನು ಸಮಾಜ ಸೇವಕ

ಮಂಗಳೂರು: ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

➤ತಂದೆ ಸಹೋದರನಿಂದ ವೈದ್ಯಕೀಯ ವಿದ್ಯಾರ್ಥಿನಿಯ ಬೆಂಕಿ ಹಚ್ಚಿ ಹತ್ಯೆ!

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ.28.  ವೈದ್ಯಕೀಯ ವಿದ್ಯಾರ್ಥಿನಿಯನ್ನು ತಂದೆ ಮತ್ತು ಸಹೋದರ ಹಾಗೂ ಇತರ ಮೂವರು ಸಂಬಂಧಿಕರು ಸೇರಿ ಕತ್ತು ಹಿಸುಕಿ ಹತ್ಯೆಗೈದು ಬೆಂಕಿ ಹಚ್ಚಿದ ಘಟನೆ ಮಹಾರಾಷ್ಟ್ರದ ನಾಂದೇಡ್ ನಲ್ಲಿ ನಡೆದಿದೆ.  ಈ ಘಟನೆಗೆ ಸಂಬಂಧಿಸಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಿಎಚ್ ಎಂಎಸ್ ಮೂರನೇ ವರ್ಷದ ವಿದ್ಯಾರ್ಥಿನಿ ಶುಭಾಂಗಿನಿ ಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಕುಟುಂಬ ಆಯ್ಕೆ ಮಾಡಿದ ವ್ಯಕ್ತಿಯೊಂದಿಗೆ ಶುಭಾಂಗಿನಿ ಮದುವೆಗೆ ಒಪ್ಪಲಿಲ್ಲ. ತಾನು ಇನ್ನೋರ್ವನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಳು. ಇದರಿಂದ ವಿವಾಹ ಮುರಿದು

➤ತಂದೆ ಸಹೋದರನಿಂದ ವೈದ್ಯಕೀಯ ವಿದ್ಯಾರ್ಥಿನಿಯ ಬೆಂಕಿ ಹಚ್ಚಿ ಹತ್ಯೆ! Read More »

ಕ್ರೈಮ್ ನ್ಯೂಸ್

➤ಪ್ರವಾಸಿ ಮಂದಿರದಲ್ಲಿ PWD ಅಧಿಕಾರಿ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ.28.  ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿಯ ವ್ಯವಸ್ಥಾಪಕರೊಬ್ಬರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗಾ ಪ್ರವಾಸಿ ಮಂದಿರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ತುಮಕೂರು ಜಿಲ್ಲೆ ಮಧುಗಿರಿಯ ಲಕ್ಷ್ಮೀನರಸಿಂಹಯ್ಯ(56) ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಎಂದು ತಿಳಿದು ಬಂದಿದೆ. ಕಚೇರಿಗೆ ಸಂಬಂಧಪಟ್ಟ ದಾಖಲಾತಿ ಪುಸ್ತಕ ಕಳೆದು ಹೋಗಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ಪ್ರಕರಣ  ದಾಖಲಿಸಿಕೊಂಡಿದ್ದಾರೆ.

➤ಪ್ರವಾಸಿ ಮಂದಿರದಲ್ಲಿ PWD ಅಧಿಕಾರಿ ಆತ್ಮಹತ್ಯೆ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಹಾಸಿಗೆ ಹಿಡಿದಿದ್ದ ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.28. ಕಾಪಿಕಾಡ್‌ನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಪತಿಯೊಬ್ಬ ಹಾಸಿಗೆ ಹಿಡಿದಿದ್ದ ತನ್ನ ಪತ್ನಿಯನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಶೈಲಜಾ (64) ಮತ್ತು ನಿವೃತ್ತ ಕೆನರಾ ಬ್ಯಾಂಕ್ ಮ್ಯಾನೇಜರ್ ದಿನೇಶ್ ರಾವ್ (65) ಎಂದು ಗುರುತಿಸಲಾಗಿದೆ. ಶೈಲಜಾ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದು, ಇವರನ್ನು ನೋಡಿಕೊಳ್ಳಲು ಹೋಮ್ ನರ್ಸ್ ಬಂದು ಹೋಗುತ್ತಿದ್ದರು. ದಿನೇಶ್ ಪತ್ನಿಯನ್ನು ಕೊಂದು ಹೆಂಡತಿ ಮೃತಪಟ್ಟಿರುವ ಪಕ್ಕದ ಕೋಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮಂಗಳೂರು: ಹಾಸಿಗೆ ಹಿಡಿದಿದ್ದ ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

(ನ್ಯೂಸ್ ಕಡಬ)newskadaba.com ಲಕ್ಷ್ಮೇಶ್ವರ, ಜ.28. ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಸಂಶಿ ಗ್ರಾಮದಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಕ್ಷ್ಮೇಶ್ವರ ಹುಬ್ಬಳ್ಳಿ ರಸ್ತೆಯ ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಾನವೀಯತೆ ಮರೆತ ಪಾಪಿಗಳು ➤ ನಾಯಿಯನ್ನು  ಗೋಣಿಚೀಲದಲ್ಲಿ ಹಾಕಿ ದೊಣ್ಣೆಯಿಂದ ಹೊಡೆದು ಕೊಲೆ!

(ನ್ಯೂಸ್ ಕಡಬ) newskadaba.com, ಉಡುಪಿ, ಜ.28. ಕಾಲೇಜು ವಿದ್ಯಾರ್ಥಿನಿ ನಾಯಿಯೊಂದಿಗೆ ಆಟವಾಡಿದಳು ಎಂಬ ಕಾರಣಕ್ಕೆ ನಾಯಿಯನ್ನು ಗೋಣಿಚೀಲದಲ್ಲಿ ಹಾಕಿ ಬರ್ಬರವಾಗಿ ಬಡಿದುಕೊಲೆ ಮಾಡಿರುವ ಅಮಾನವೀಯ ಘಟನೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದಲ್ಲಿ ನಡೆದಿದೆ. ಬಂಟಕಲ್ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ  ಈ ಘಟನೆ ನಡೆದಿದ್ದು, ಕಾಲೇಜಿನ ವಾರ್ಡನ್​ ರಾಜೇಶ್ ವಿಕೃತ್  ಎಂಬಾತ ಈ ನೀಚ ಕೃತ್ಯ ಮೆರೆದಿದ್ದಾನೆ. ಕಾಲೇಜು ವಿದ್ಯಾರ್ಥಿನಿ ನಾಯಿ ಜೊತೆ ಆಟವಾಡಿದ್ದಕ್ಕೆ ನಾಯಿಯನ್ನೇ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು,

ಮಾನವೀಯತೆ ಮರೆತ ಪಾಪಿಗಳು ➤ ನಾಯಿಯನ್ನು  ಗೋಣಿಚೀಲದಲ್ಲಿ ಹಾಕಿ ದೊಣ್ಣೆಯಿಂದ ಹೊಡೆದು ಕೊಲೆ! Read More »

ಕರಾವಳಿ, ಕ್ರೈಮ್ ನ್ಯೂಸ್

ಕುಂದಾಪುರ: ಬಸ್ ಹರಿದು ವಿದ್ಯಾರ್ಥಿಯೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಕುಂದಾಪುರ, ಜ.28. ಬಸ್ ಫೂಟ್ ಬೋರ್ಡ್ ಮೇಲೆ ನಿಂತು ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವ ಕೆಳಗೆ ಇಳಿಯುವ ಸಂದರ್ಭದಲ್ಲಿ ಆಯತಪ್ಪಿ ಖಾಸಗಿ ಬಸ್ ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಹೆಮ್ಮಾಡಿಯಲ್ಲಿ ನಡೆದಿದೆ. ಹೆಮ್ಮಾಡಿ ಸಮೀಪದ‌ ಕಟ್ ಬೇಲ್ತೂರು ನಿವಾಸಿ, ಕೋಟೇಶ್ವರ ಕಾಗೇರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸುದೀಪ್ (20) ಮೃತ ದುರ್ದೈವಿ. ಸಾಗರದಿಂದ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ನಲ್ಲಿ ಸುದೀಪ್ ಸಂಚರಿಸುತ್ತಿದ್ದಾಗ ಈ ಅವಘಡ ನಡೆದಿದೆ. ಹೆಮ್ಮಾಡಿ

ಕುಂದಾಪುರ: ಬಸ್ ಹರಿದು ವಿದ್ಯಾರ್ಥಿಯೋರ್ವ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top