ಕ್ರೈಮ್ ನ್ಯೂಸ್

Death, deadbody, Waterfall

ಮಂಗಳೂರು: ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ..!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.06. ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುದ್ರೋಳಿಯ ಟಿಪ್ಪು ಸುಲ್ತಾನ್ ನಗರದಲ್ಲಿ ನಡೆದಿದೆ. ಕುದ್ರೋಳಿ ನಿವಾಸಿ ರಿಯಾಝ್‌ ಎಂಬವರ ಪುತ್ರಿ ಖತೀಜಾ ರೀನಾ(16)ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಎಂದು ಗುರುತಿಸಲಾಗಿದೆ. ಬಾಲಕಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಾಲಕಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಂದರ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.    

ಮಂಗಳೂರು: ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಪಡುಬಿದ್ರಿ: ಪೋಕ್ಸೋ ಪ್ರಕರಣ; ಕರಾಟೆ ಶಿಕ್ಷಕನಿಗೆ 22 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ)newskadaba.com  ಪಡುಬಿದ್ರೆ, ಫೆ.05. ಕರಾಟೆ ಕಲಿಯಲು ತನ್ನ ತರಬೇತಿ ಕೇಂದ್ರಕ್ಕೆ ಬರುತ್ತಿದ್ದ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕರಾಟೆ ತರಬೇತುದಾರ ಹಾಗೂ ಪಡುಬಿದ್ರಿ ಸಮೀಪದ ಹೆಜಮಾಡಿ ನಿವಾಸಿ ಉಮೇಶ್ ಬಂಗೇರ (48) ಎಂಬಾತನಿಗೆ 22 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀನಿವಾಸ್ ಸುವರ್ಣ ಅವರು ತೀರ್ಪು ನೀಡಿದ್ದಾರೆ. ಅಪರಾಧಿ ಪಡುಬಿದ್ರಿಯಲ್ಲಿ ಕರಾಟೆ ತರಗತಿ ನಡೆಸುತ್ತಿದ್ದು,

ಪಡುಬಿದ್ರಿ: ಪೋಕ್ಸೋ ಪ್ರಕರಣ; ಕರಾಟೆ ಶಿಕ್ಷಕನಿಗೆ 22 ವರ್ಷ ಜೈಲು ಶಿಕ್ಷೆ Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

ವಿದ್ಯುತ್ ಸ್ಪರ್ಶಿಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.05. ಬೆಂಗಳೂರಿನ ಕೋಣನಕುಂಟೆ ಬಳಿಯ ಅಪಾರ್ಟ್ ಮೆಂಟ್ ನಲ್ಲಿ ವಿದ್ಯುತ್ ಶಾಕ್ ನಿಂದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕೋಣನಕುಂಟೆ ಬಳಿಯ ಪ್ರೆಸ್ಟೀಜ್ ಗ್ರೂಪ್ ನ ಅಪಾರ್ಟ್ ಮೆಂಟ್ ನಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕರನ್ನು ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ರಘು ಹಾಗೂ ಅಸ್ಸಾಂ ಮೂಲದ ದಿಲೀಪ್ ಎಂದು ಗುರುತಿಸಲಾಗಿದೆ. ಇಬ್ಬರು ಕಾರ್ಮಿಕರು ಅಪಾರ್ಟ್ ಮೆಂಟ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.

ವಿದ್ಯುತ್ ಸ್ಪರ್ಶಿಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಕಾದ ಕಬ್ಬಿಣದಿಂದ ಬರೆ ➤ ಕಂದಮ್ಮ ಬಲಿ..!

(ನ್ಯೂಸ್ ಕಡಬ)newskadaba.com ಭೋಪಾಲ್, ಫೆ.05. ನ್ಯುಮೋನಿಯಾದಿಂದ ಬಳಲುತ್ತಿದ್ದ ಮೂರು ತಿಂಗಳ ಹೆಣ್ಣು ಮಗುವಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಕಾದ ಕಬ್ಬಿಣದಿಂದ ಹೊಟ್ಟೆಯ ಮೇಲೆ ಬರೆ ಎಳೆದು ಗಾಯಗೊಳಿಸಿದ ಆಘಾತಕಾರಿ ಘಟನೆ ಭೋಪಲ್ ನಿಂದ ವರದಿಯಾಗಿದೆ. ಶಹದೋಲ್ ಜಿಲ್ಲೆಯ ಆದಿವಾಸಿ ಪ್ರದೇಶದಲ್ಲಿ ಜ್ವರದಿಂದ ಬಳಲುತ್ತಿದ್ದ ಮಗುವಿಗೆ 51 ಬಾರಿ ಕಬ್ಬಿಣದಿಂದ ಬರೆ ಹಾಕಲಾಗಿದೆ. ಕಾದ ಕಬ್ಬಿಣದ ಬರೆ ಹಾಕಿದರೆ ಗುಣಮುಖವಾಗುತ್ತದೆ ಎಂಬ ಮೂಢನಂಬಿಕೆ ಈ ಭಾಗದ ಜನರಿಗಿದೆ. ಮಗುವಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಮಗು ಮೃತಪಟ್ಟಿದೆ.ಇದೀಗ

ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಕಾದ ಕಬ್ಬಿಣದಿಂದ ಬರೆ ➤ ಕಂದಮ್ಮ ಬಲಿ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ➤ ಬಂಟ್ವಾಳ ನಿವಾಸಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.05. ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ನಿವಾಸಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿ.ಸಿ ರೋಡ್ ನ ಮುಹಮ್ಮದ್ ಇಬ್ರಾಹಿಂ ತೌಫಿಕ್ (23) ಬಂಧಿತ. ತೌಫಿಕ್ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರ್ಥಿನಿಯೋರ್ವಳನ್ನು ಆಮಿಷ ತೋರಿಸಿ ವಿವಿಧೆಡೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ನೀಡಿದ ದೂರಿನಂತೆ ತನಿಖೆ ನಡೆಸಿದ ಮಂಜೇಶ್ವರ ಪೊಲೀಸರು ತೌಫಿಕ್ ನನ್ನು ಬಂಧಿಸಿದ್ದಾರೆ.  

ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ➤ ಬಂಟ್ವಾಳ ನಿವಾಸಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿ ಹತ್ಯೆ ಕೇಸ್ ➤ಆರೋಪಿಗಾಗಿ ಮುಂದುವರಿದ ಶೋಧ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.05. ನಗರದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಹಾಡಹಗಲೇ ಸಿಬ್ಬಂದಿ ರಾಘವೇಂದ್ರ ಆಚಾರ್ಯರನ್ನು ಚೂರಿಯಿಂದ ಇರಿದು ಕೊಲೆಗೈದು ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಂದರು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ ಎನ್ನಲಾಗಿದೆ. ಘಟನೆ ವೇಳೆ ಅಂಗಡಿಯಲ್ಲಿದ್ದ ಒಟ್ಟು 12 ಗ್ರಾಂ ತೂಕದ 60,000 ರೂ. ಮೌಲ್ಯದ 3 ಚಿನ್ನದ ಸರಗಳನ್ನು ದರೋಡೆ ಮಾಡಲಾಗಿದೆ. ಆರೋಪಿಯ ಪತ್ತೆಗಾಗಿ ಅಕ್ಕಪಕ್ಕದ ಅಂಗಡಿಗಳು ಸೇರಿದಂತೆ ಹಲವಾರು ಕಟ್ಟಡಗಳ ಸಿಸಿ ಕೆಮರಾ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ದುಷ್ಕರ್ಮಿ ಕೃತ್ಯ ನಡೆಸಿದ ಬಳಿಕ ತುಂಬಾ

ಮಂಗಳೂರು: ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿ ಹತ್ಯೆ ಕೇಸ್ ➤ಆರೋಪಿಗಾಗಿ ಮುಂದುವರಿದ ಶೋಧ Read More »

ಕರಾವಳಿ, ಕ್ರೈಮ್ ನ್ಯೂಸ್

➤ಸೌದಿ ಅರೇಬಿಯಾ ಕಾರಿಗೆ ಅಡ್ಡ ಬಂದ ಒಂಟೆ ➤ ಮಂಗಳೂರು ಮೂಲದ ಮೂವರು ಮೃತ್ಯು!

(ನ್ಯೂಸ್ ಕಡಬ) newskadaba.com. ಮಂಗಳೂರು, ಫೆ.4.  ಸೌದಿ ಅರೇಬಿಯಾದ ಅಲ್-ಹಸಾ ಪ್ರದೇಶದ ಖುರೈಸ್ ಹೆದ್ದಾರಿಯಲ್ಲಿ ಹಠಾತ್ತನೆ ಒಂಟೆಯೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಹಳೆಯಂಗಡಿ ಬಳಿಯ ಕದಿಕೆ ನಿವಾಸಿ 23 ವರ್ಷದ ರಿಜ್ವಾನ್, ಮಂಗಳೂರು ಬೆಂಗರೆ ನಿವಾಸಿ ಅಕೀಲ್, ಸುರತ್ಕಲ್ ಕೃಷ್ಣಾಪುರದ ಶಿಹಾಬ್ ಹಾಗೂ ಬಾಂಗ್ಲಾದೇಶದ ನಾಸೀರ್ ಎಂದು ಗುರುತಿಸಲಾಗಿದೆ.

➤ಸೌದಿ ಅರೇಬಿಯಾ ಕಾರಿಗೆ ಅಡ್ಡ ಬಂದ ಒಂಟೆ ➤ ಮಂಗಳೂರು ಮೂಲದ ಮೂವರು ಮೃತ್ಯು! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಕಲೇಶಪುರ: ಅಟ್ಟಾಡಿಸಿಕೊಂಡು ಬಂದ ಕಾಡಾನೆಗಳು ➤ ಕೂದಲೆಳೆ ಅಂತರದಲ್ಲಿ ಇಟಿಎಫ್ ಸಿಬಂದಿ ಪಾರು

(ನ್ಯೂಸ್ ಕಡಬ)newskadaba.com ಸಕಲೇಶಪುರ, ಫೆ.04. ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಡುವ ಸಿಬಂದಿಯನ್ನು ಕಿರೇಹಳ್ಳಿ ಸಮೀಪ ಓಡಿಸಿಕೊಂಡು ಹೋದ ಘಟನೆ ನಡೆದಿದೆ. ತಾಲೂಕಿನ ಹಲಸುಲಿಗೆ ಹಾಗೂ ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆಯ ಆರ್.ಆರ್.ಟಿ ಸಿಬಂದಿ ಕಾಡಾನೆಗಳ ಚಲನವಲನದ ಮೇಲೆ ತೀವ್ರ ನಿಗಾವಹಿಸಿದ್ದಾರೆ. ಈ ನಡುವೆ ಒಂದು ಬದಿಯಿಂದ ಮತ್ತೊಂದು ಬದಿಗೆ ಕಾಡಾನೆಗಳು ದಾಟುತ್ತಿದ್ದ ವೇಳೆ ಇಟಿಎಫ್ ಸಿಬಂದಿ ಒಬ್ಬರನ್ನು ಕಾಡಾನೆಗಳು ಅಟ್ಟಿಸಿಕೊಂಡು ಘೀಳಿಡುತ್ತಾ

ಸಕಲೇಶಪುರ: ಅಟ್ಟಾಡಿಸಿಕೊಂಡು ಬಂದ ಕಾಡಾನೆಗಳು ➤ ಕೂದಲೆಳೆ ಅಂತರದಲ್ಲಿ ಇಟಿಎಫ್ ಸಿಬಂದಿ ಪಾರು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: 1.300 ಕಿಲೋ ಚಿನ್ನ ಸಹಿತ ವ್ಯಕ್ತಿ ಬಂಧನ

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.04. ಕಾಸರಗೋಡು ನಿಲ್ದಾಣದಲ್ಲಿ ರೈಲಿನಿಂದ ಬಂದಿಳಿದ ಚೆರ್ಕಳ ಸಿಟಿಜನ್‌ ನಗರದ ಮೊಹಮ್ಮದ್‌ ಫಾಹಿಸ್‌ (34) ಎಂಬಾತನ ಬ್ಯಾಗ್‌ ತಪಾಸಣೆ ಮಾಡಿದಾಗ 1.300 ಕಿಲೋ ಚಿನ್ನ ಪತ್ತೆಯಾಗಿದ್ದು, ಆತನನ್ನು ಕಸ್ಟಂಸ್‌ ತಂಡ ಬಂಧಿಸಿದೆ. ಚಿನ್ನ ಸಾಗಾಟದ ಬಗ್ಗೆ ಕಾಸರಗೋಡು ಕಸ್ಟಮ್ಸ್ ಯೂನಿಟ್‌ನ ಸೂಪರಿಂಟೆಂಡೆಂಟ್‌ ಪಿ.ಟಿ.ರಾಜೀವ್‌ ಅವರಿಗೆ ರಹಸ್ಯ ಮಾಹಿತಿ ಲಭಿಸಿತ್ತು. ಅದರಂತೆ ಅವರು ಮತ್ತು ಕಾಸರಗೋಡು ಕಸ್ಟಮ್ಸ್ ವಿಭಾಗದ ಹೆಡ್‌ ಹವಾಲ್ದಾರ್‌ಗಳಾದ ಆನಂದ ಕೆ. ಚಂದ್ರಶೇಖರ ಕೆ. ಮತ್ತು ವಿಶ್ವನಾಥ ಎಂ. ನೇತೃತ್ವದ ತಂಡ

ಕಾಸರಗೋಡು: 1.300 ಕಿಲೋ ಚಿನ್ನ ಸಹಿತ ವ್ಯಕ್ತಿ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎತ್ತಿನಗಾಡಿ-ಬೈಕ್ ಮುಖಾಮುಖಿ ಢಿಕ್ಕಿ ➤ ಬೈಕ್ ಸವಾರ- ಎತ್ತು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಚಿಕ್ಕಮಗಳೂರು, ಫೆ.04. ಜಾತ್ರೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಎತ್ತಿನಗಾಡಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಹಾಗೂ ಎತ್ತು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಮೃತ್ ಮಹಲ್ ಕಾವಲ್ ಬಳಿ ಸಂಭವಿಸಿದೆ. ಮೃತ ಬೈಕ್ ಸವಾರ ಶಿವಮೊಗ್ಗ ಮೂಲದ ಸುರೇಶ್ (50) ಎಂದು ಗುರುತಿಸಲಾಗಿದೆ. ಬೈಕಿ ನಲ್ಲಿದ್ದ ಮತ್ತೋರ್ವ ಸವಾರ ರವಿ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಅಜ್ಜಂಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜ್ಜಂಪುರ ತಾಲೂಕಿನಲ್ಲಿ ಕಳೆದೊಂದು

ಎತ್ತಿನಗಾಡಿ-ಬೈಕ್ ಮುಖಾಮುಖಿ ಢಿಕ್ಕಿ ➤ ಬೈಕ್ ಸವಾರ- ಎತ್ತು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top