➤ಸೌದಿ ಅರೇಬಿಯಾ ಕಾರಿಗೆ ಅಡ್ಡ ಬಂದ ಒಂಟೆ ➤ ಮಂಗಳೂರು ಮೂಲದ ಮೂವರು ಮೃತ್ಯು!

(ನ್ಯೂಸ್ ಕಡಬ) newskadaba.com. ಮಂಗಳೂರು, ಫೆ.4.  ಸೌದಿ ಅರೇಬಿಯಾದ ಅಲ್-ಹಸಾ ಪ್ರದೇಶದ ಖುರೈಸ್ ಹೆದ್ದಾರಿಯಲ್ಲಿ ಹಠಾತ್ತನೆ ಒಂಟೆಯೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ.

ಮೃತರನ್ನು ಹಳೆಯಂಗಡಿ ಬಳಿಯ ಕದಿಕೆ ನಿವಾಸಿ 23 ವರ್ಷದ ರಿಜ್ವಾನ್, ಮಂಗಳೂರು ಬೆಂಗರೆ ನಿವಾಸಿ ಅಕೀಲ್, ಸುರತ್ಕಲ್ ಕೃಷ್ಣಾಪುರದ ಶಿಹಾಬ್ ಹಾಗೂ ಬಾಂಗ್ಲಾದೇಶದ ನಾಸೀರ್ ಎಂದು ಗುರುತಿಸಲಾಗಿದೆ.

Scroll to Top