ಕ್ರೈಮ್ ನ್ಯೂಸ್

ನಿಧಿಯಾಸೆಗೆ ಬಾಣಂತಿಯ ಭೀಕರ ಹತ್ಯೆ

(ನ್ಯೂಸ್ ಕಡಬ) newskadaba.com ಕೊಪ್ಪಳ, ಮಾ. 21. ನಿಧಿ ಆಸೆಗಾಗಿ ಒಂದೂವರೆ ತಿಂಗಳ ಬಾಣಂತಿಯ ಭೀಕರ ಹತ್ಯೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ನೇತ್ರಾವತಿ(26) ಎಂದು ಗುರುತಿಸಲಾಗಿದೆ. ಮನೆಯ ಸ್ವಲ್ಪ ದೂರದಲ್ಲೇ ಬೆಂಕಿ ಹಚ್ಚಿ ನೇತ್ರಾವತಿ ಕೊಲೆ ಮಾಡಲಾಗಿದ್ದು, ನಿಧಿಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮಾಂತರ ಪೊಲೀಸರು ಭೇಟಿ ನೀಟಿ ಪರಿಶೀಲನೆ ನಡೆಸಿದ್ದಾರೆ.

ನಿಧಿಯಾಸೆಗೆ ಬಾಣಂತಿಯ ಭೀಕರ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆಸ್ತಿ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 21. ಆಸ್ತಿ ವಿಚಾರಕ್ಕೆ ಸಂಬಂಧಿಸಿ ಚಾಕುವಿನಿಂದ ಇರಿದು ಯುವಕನೋರ್ವನ ಕೊಲೆ‌ ಮಾಡಿರುವ ಬಗ್ಗೆ ಹೊಸಕೋಟೆ ತಾಲೂಕಿನ ಮೇಡಿಮಲ್ಲಸಂದ್ರ ಗ್ರಾಮದಿಂದ ವರದಿಯಾಗಿದೆ. ಹತ್ಯೆಯಾದವರನ್ನು ಇಸ್ಮಾಯಿಲ್ ಖಾನ್(26) ಎಂದು ಗುರುತಿಸಲಾಗಿದೆ. ಕಳೆದ ಹಲವು ದಿನಗಳಿಂದ ಇವರ ಮಧ್ಯೆ ಆಸ್ತಿ ವಿಚಾರಕ್ಕೆ ಕಲಹ ನಡೆಯುತ್ತಿದ್ದು ಈ ನಡುವೆ ಮನೆ ಮುಂದೆ ಕಳೆದ ರಾತ್ರಿ ಕಾರು ನಿಲ್ಲಿಸುವ ವಿಚಾರಕ್ಕೆ ಜಗಳ ನಡೆದಿದೆ. ಬಳಿಕ ಮಾತಿನ‌ ಚಕಮಕಿ ವಿಕೋಪಕ್ಕೆ ತಿರುಗಿ ಡ್ರಾಗರ್ ನಿಂದ ಇರಿದು ಕೊಲೆ ಮಾಡಲಾಗಿದೆ.

ಆಸ್ತಿ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಕಾಲಿಕ ಮಳೆಗೆ ಮನೆ ಕುಸಿದು ಬಿದ್ದು ಬಾಲಕಿ ಮೃತ್ಯು

(ನ್ಯೂಸ್ ಕಡಬ) newskadaba.com ರಾಯಚೂರು, ಮಾ. 21. ಅಕಾಲಿಕ ಮಳೆಗೆ ಮನೆ ಕುಸಿದು ಬಿದ್ದ ಪರಿಣಾಮ ಬಾಲಕಿಯೋರ್ವಳು ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ಕುರುವಕುಲ ಗ್ರಾಮದಲ್ಲಿ ನಡೆದಿದೆ.   ತಾಲೂಕಿನ ಕುರುವಕುಲ ಗ್ರಾಮದಲ್ಲಿ ಅಕಾಲಿಕ ಮಳೆ ಸುರಿದಿದ್ದು, ಭಾರೀ ಮಳೆಯ ಆರ್ಭಟಕ್ಕೆ ಶಿಥಿಲಗೊಂಡಿದ್ದ ಮನೆ ಕುಸಿದುಬಿದ್ದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಬಾಲಕಿಯ ತಾಯಿ ಹಾಗೂ ತಂಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಯಾಪಲಡಿನ್ನಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಕಾಲಿಕ ಮಳೆಗೆ ಮನೆ ಕುಸಿದು ಬಿದ್ದು ಬಾಲಕಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಬರೊಬ್ಬರಿ 1ಕೋಟಿ ರೂ.ವಂಚನೆ ➤ ಕೇರಳ ಮೂಲದ ಆರೋಪಿ ಅರೆಸ್ಟ್ 

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 21. ಹೂಡಿಕೆದಾರರಿಗೆ 1 ಕೋಟಿ ರೂ.ವಂಚಿಸಿದ ಆರೋಪದ ಮೇಲೆ ಮಂಗಳೂರು ಸೆನ್  ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ಕ್ಯಾಲಿಕಟ್ ನಿವಾಸಿ ಜಿಜೋ ಜಾನ್ ಪಿ ಕೆ(29) ಎಂದು ಗುರುತಿಸಲಾಗಿದೆ. ಈತ ಮಂಗಳೂರಿನ ಶಕ್ತಿನಗರದ ಹೂಡಿಕೆದಾರರಿಂದ ಹೆಚ್ಚಿನ ಆದಾಯವನ್ನು ತಂದುಕೊಡುವ ಭರವಸೆ ನೀಡಿ, ಹಣವನ್ನು ಪಡೆದುಕೊಂಡಿದ್ದ. ಇದೀಗ ಆತನ ಭರವಸೆ ಸುಳ್ಳು ಎಂದು ಸಾರ್ವಜನಿಕರಿಗೆ ತಿಳಿದುಬಂದಿದ್ದು, ಹಣವನ್ನು ಹಿಂದಿರುಗಿಸಲು ವಿಫಲವಾಗಿದ್ದಾನೆ. ಈ ಕುರಿತು ಆರೋಪಿ ವಿರುದ್ಧ ದೂರು ನೀಡಲಾಗಿದ್ದು, ಪೊಲೀಸರು

ಮಂಗಳೂರು: ಬರೊಬ್ಬರಿ 1ಕೋಟಿ ರೂ.ವಂಚನೆ ➤ ಕೇರಳ ಮೂಲದ ಆರೋಪಿ ಅರೆಸ್ಟ್  Read More »

ಕರಾವಳಿ, ಕ್ರೈಮ್ ನ್ಯೂಸ್

ಅಕ್ರಮ ಮರಳು ದಂಧೆಕೋರರಿಂದ ಸ್ಕೂಟರ್ ಗೆ ಹಾನಿ  ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 21. ಇಲ್ಲಿಗೆ ಸಮೀಪದ ಉದ್ಯಾವರ ಮಠದಕುದ್ರು ಪಾಪನಾಶಿನಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ಅದಮಾರು ಮಠದ ಸ್ವಾಮೀಜಿಯವರು ಕರೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಸ್ಥಳೀಯ ನಿವಾಸಿ ಭಾಸ್ಕರ್ ಕರ್ಕೇರಾ ಎಂಬವರ ಸ್ಕೂಟರ್‌ನ್ನು ದುಷ್ಕರ್ಮಿಗಳು ಹಾನಿಗೈದಿರುವ ಕುರಿತು ವರದಿಯಾಗಿದೆ. ಭಾಸ್ಕರ್ ಅವರು ಅದಮಾರು ಶ್ರೀಗಳ ಮರಳು ಮಾಫಿಯಾದ ವಿರುದ್ದ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ವೇಳೆ ತಮ್ಮ ಮನೆಯ ಸಮೀಪ ನಿಲ್ಲಿಸಿದ್ದ ಸ್ಕೂಟರನ್ನು ಯಾರೋ ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್

ಅಕ್ರಮ ಮರಳು ದಂಧೆಕೋರರಿಂದ ಸ್ಕೂಟರ್ ಗೆ ಹಾನಿ  ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ವಿದ್ಯಾರ್ಥಿ ನಿಲಯಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 21. 2022-2023ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಟ್ರಿಕ್ ನಂತರದ (ಸ್ನಾತಕೋತ್ತರ ಹಾಗೂ ವೃತ್ತಿಪರ ಕೋರ್ಸಗಳ ವಿದ್ಯಾರ್ಥಿಗಳು) ವಿದ್ಯಾರ್ಥಿ ನಿಲಯಗಳಿಗೆ ಹೂಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಆನ್ ಲೈನ್ https://shp.karnataka.gov.in/ ಮೂಲಕ ಅರ್ಜಿ ಆಹ್ವಾನಿಸಿದ ದಿನಾಂಕನ್ನು ವಿಸ್ತರಿಸಲಾಗಿದೆ. ಈ ಹಿಂದೆ ಫೆ.11 ಅಂತಿಮ ದಿನವಾಗಿತ್ತು. ಆದರೆ ಕೆಲವೂಂದು ವೃತ್ತಿಪರ ಪದವಿ ಮತ್ತು ಸ್ನಾತ್ತಕೋತ್ತರ ಕೋರ್ಸಿನ ತರಗತಿಗಳು ತಡವಾಗಿ ಪ್ರಾರಂಭವಾಗಿರುವುದರಿಂದ ಅರ್ಜಿ ಸಲ್ಲಿಸುವ ಅವಧಿಯನ್ನು 2023ರ ಮಾ.27ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ

ವಿದ್ಯಾರ್ಥಿ ನಿಲಯಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ವಿಟ್ಲ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com  ಕೊಣಾಜೆ, ಮಾ.21. ಯುವಕನೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ವಿಟ್ಲ ಕನ್ಯಾನ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪುತ್ರ ಹರೀಶ್ (33) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಹರೀಶ್ ಮನೆಗೆ ಬರುವಾಗ ಕೈಯಲ್ಲಿ ಪೆಟ್ರೋಲ್ ನ್ನು ಕ್ಯಾನಿನಲ್ಲಿ ಹಿಡಿದುಕೊಂಡು ಬಂದಿದ್ದಾರೆ. ಮಾತುಕತೆ ಆರಂಭವಾಗುವ ಮುನ್ನವೇ ಅಂಗಳದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌‌ ಎನ್ನಲಾಗಿದೆ.    

ವಿಟ್ಲ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್
Theft, crime, Robbery

ಹಾಡಹಗಲೇ 2 ಮನೆಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

(ನ್ಯೂಸ್ ಕಡಬ) newskadaba.com ಮೂಡಬಿದ್ರೆ, ಮಾ. 21. ಮನೆಯಲ್ಲಿ ಯಾರೂ ಇಲ್ಲದ ವೇಳೆ ಎರಡು ಮನೆಗಳಿಗೆ ಬೆಳಗ್ಗಿನ ಜಾವ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾದ ಘಟನೆ ಮೂಡಬಿದ್ರೆಯಲ್ಲಿ ನಡೆದಿದೆ. ಬ್ಯಾಂಕ್ ಉದ್ಯೋಗಿಗಳಾಗಿರುವ ರತ್ನಾಕರ ಜೈನ್ ಮತ್ತು ಪಕ್ಕದ ಮನೆಯ ಧೀರೇಂದ್ರ ಹೆಗ್ಡೆ ಎಂಬವರು ಕುಟುಂಬ ಸಮೇತ ಬೆಳಿಗ್ಗೆ 8 ಗಂಟೆಯ ವೇಳೆ ಪೂಜೆ ಸಲ್ಲಿಸಲೆಂದು ಬಸದಿಗಳಿಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಕಳ್ಳರು ರತ್ನಾಕರ ಜೈನ್ ಅವರ ಮನೆಯ ಹಿಂಬಾಗಿಲಿನ ಚಿಲಕವನ್ನು ಮುರಿದು ಒಳ

ಹಾಡಹಗಲೇ 2 ಮನೆಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಪಾರ್ಕಿಂಗ್ ಗೆ ನಿಲ್ಲಿಸಿದ್ದ ಆಟೋ ಚಾಲಕನಿಗೆ ಥಳಿಸಿ ಹಲ್ಲೆ ➤ ಪ್ರಕರಣ ದಾಖಲು   

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 21.ಪಾರ್ಕಿಂಗ್ ಗೆ ನಿಲ್ಲಿಸಿದ್ದ ಆಟೋ ಚಾಲಕನೊಬ್ಬನಿಗೆ ಉಳಿದ ಆಟೋ ಚಾಲಕರು ಥಳಿಸಿ ಗಾಯಗೊಳಿಸಿದ ಘಟನೆ ಪಣಂಬೂರು ಬೀಚ್ ನಲ್ಲಿ ನಡೆದಿದೆ. ಗಾಯಗೊಂಡ ಚಾಲಕನನ್ನು ಹೇಮಚಂದ್ರ ಎಂದು ಗುರುತಿಸಲಾಗಿದೆ. ಪ್ರಯಾಣಿಕರೊಬ್ಬರ ಬಾಡಿಗೆ ನಿಮಿತ್ತ ಹೇಮಚಂದ್ರ ಅವರು ಪಣಂಬೂರು ಪಾರ್ಕ್ ಗೆ ಹೋಗಿದ್ದು, ಈ ವೇಳೆ ಸ್ಥಳಕ್ಕೆ ಬಂದ 10 ಮಂದಿ ಆಟೋ ಚಾಲಕರ ತಂಡ “ನೀನು ಇಲ್ಲಿ ಬಾಡಿಗೆ ಮಾಡಬಾರದು. ಇದು ನಮ್ಮ ಏರಿಯಾ, ಇಲ್ಲಿ ನಾವು ಮಾತ್ರ ಬಾಡಿಗೆ ಮಾಡುವುದು”

ಮಂಗಳೂರು: ಪಾರ್ಕಿಂಗ್ ಗೆ ನಿಲ್ಲಿಸಿದ್ದ ಆಟೋ ಚಾಲಕನಿಗೆ ಥಳಿಸಿ ಹಲ್ಲೆ ➤ ಪ್ರಕರಣ ದಾಖಲು    Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಪ್ರಯಾಣಿಕ ಮೃತ್ಯು

(ನ್ಯೂ ಸ್ ಕಡಬ) newskadaba.com ಬೈಂದೂರು, ಮಾ. 21.  ಆಕಸ್ಮಿಕವಾಗಿ ವ್ಯಕ್ತಿಯೊಬ್ಬರು ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ನಾವುಂದ ಗ್ರಾಮದ ಮಸ್ಕಿ ಎಂಬಲ್ಲಿ ನಡೆದಿದೆ. ಎರ್ನಾಕುಲಂಗೆ ತೆರಳುತ್ತಿದ್ದ ಮರುಸಾಗರ ರೈಲಿನಲ್ಲಿ ಅಜ್ಮೀರ್ ಜಂಕ್ಷನ್‌ನಿಂದ ಹತ್ತಿದ್ದ ವ್ಯಕ್ತಿ ರೈಲಿನಿಂದ ಆಕಸ್ಮಿಕವಾಗಿ ಬಿದ್ದಿದ್ದು, ಪರಿಣಾಮ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಪ್ರಯಾಣಿಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top