ಕ್ರೈಮ್ ನ್ಯೂಸ್

ಕಡಬ: KSRTC ಚಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ ➤ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

(ನ್ಯೂಸ್ ಕಡಬ)newskadaba.com ಕಡಬ, ಏ.07. KSRTC ಚಾಲಕನ ಮೃತದೇಹ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಪತ್ತೆಯಾದ ಘಟನೆ ಕಡಬದಲ್ಲಿ ವರದಿಯಾಗಿದೆ. ರಾತ್ರಿ ಕರ್ತವ್ಯದಿಂದ ಇಳಿದ ಪುತ್ತೂರು ವಿಭಾಗದ ಕೆಎಸ್ಆರ್ ಟಿಸಿ ಕಂಡಕ್ಟರ್ ಕಮ್ ಡ್ರೈವರ್ ಆಗಿರುವ ಕುಸುಮಾಧರ ಗೌಡ ಅಭೀರ (34) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸುಮಾರು 8 ವರ್ಷಗಳಿಂದ ಕೆಎಸ್ಆರ್ ಟಿಸಿ ಊದ್ಯೋಗಿಯಾಗಿದ್ದ ಮೃತರು 1 ವರ್ಷದ ಹಿಂದೆ ಮದುವೆಯಾಗಿದ್ದರು. ದುರ್ಘಟನೆ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಮಧ್ಯರಾತ್ರಿ ನಡೆದಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿರುವ […]

ಕಡಬ: KSRTC ಚಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ ➤ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ:  ರೈಲ್ವೆ ಹಳಿಯ ಸಮೀಪ ಅಗ್ನಿ ಅವಘಡ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.07. ಬಿಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದ ಬಳಿ ರೈಲ್ವೆ ಹಳಿಯ ಸಮೀಪ ಹಾಗೂ ಅದರ ಎದುರು ಬದಿಯ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಕೆಲ ಹೊತ್ತು ಬಿಸಿರೋಡಿನಿಂದ ನಂದಾವರಕ್ಕೆ ತೆರಳುವ ರಸ್ತೆ ಬಂದ್ ಆಗಿರುವ ಘಟನೆ ವರದಿಯಾಗಿದೆ. ರಸ್ತೆಯ ಎರಡೂ ಭಾಗದಲ್ಲಿ ಕಸದ ರಾಶಿ ಬಿದ್ದಿದ್ದು ಕಸದ ರಾಶಿಗೆ ಯಾರೋ ಬೆಂಕಿ ಹಾಕಿರ ಬೇಕು ಎಂದು ಹೇಳಲಾಗುತ್ತಿದ್ದು, ರಸ್ತೆ ತುಂಬಾ ಹೊಗೆ ತುಂಬಿದ್ದು, ಬೆಂಕಿಯ ಜ್ವಾಲೆ ವಿಪರೀತವಾಗಿ ಹರಡಿತ್ತು. ಆದರೆ

ಬಂಟ್ವಾಳ:  ರೈಲ್ವೆ ಹಳಿಯ ಸಮೀಪ ಅಗ್ನಿ ಅವಘಡ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ದ್ವಿಚಕ್ರ ವಾಹನದಿಂದ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.07. ದ್ವಿಚಕ್ರ ವಾಹನದಿಂದ ಮಹಿಳೆಯೋರ್ವರು ಬಿದ್ದು ಮೃತಪಟ್ಟ ಘಟನೆ ಕಟೀಲು ಸಮೀಪದ ಕಲ್ಲಕುಮೇರು ಬಳಿ ನಡೆದಿದೆ ಎಂದು ವರದಿ ತಿಳಿಸಿದೆ. ಮೃತ ಮಹಿಳೆಯನ್ನು ಕಾರ್ಕಳದ ಈದು ಗ್ರಾಮದ ಮಮತಾ ಶೆಟ್ಟಿ (35) ಎಂದು ಗುರುತಿಸಲಾಗಿದೆ. ಮಮತಾ ಕಾರ್ಕಳದಿಂದ ಕಟೀಲಿಗೆ ತನ್ನ ಪತಿಯ ಜೊತೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ವೇಗವಾಗಿ ಬರುತ್ತಿದ್ದ ದ್ವಿಚಕ್ರವಾಹನ ಕಲ್ಲಕುಮೇರು ಬಳಿ ಹಂಪ್ಸ್ ಗಮನಿಸದ ಹಿನ್ನೆಲೆ ವೇಗವಾಗಿ ಬಂದ ಕಾರಣ ಮಮತಾ ದ್ವಿಚಕ್ರ ವಾಹನದಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮಂಗಳೂರು: ದ್ವಿಚಕ್ರ ವಾಹನದಿಂದ ಬಿದ್ದು ಮಹಿಳೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ಬಾಲಕನ ಮೈಮೇಲೆ ಬಿದ್ದ ಮನೆ ಗೇಟ್..! ➤ ಬಾಲಕ ಮೃತ್ಯು

(ನ್ಯೂಸ್ ಕಡಬ)newskadaba.com ಹುಬ್ಬಳ್ಳಿ, ಏ.07. ನಿರ್ಮಾಣ ಹಂತದ ಮನೆಯೊಂದರ ಗೇಟ್ ಬಿದ್ದು 7 ವರ್ಷದ ಬಾಲಕ ಮೃತಪಟ್ಟ ಘಟನೆ ನಗರದ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯೊಂದರ ಸಮೀಪ ಬಾಲಕ ಆಟವಾಡುತ್ತಿದ್ದಾಗ ಗೇಟ್ ಬಾಲಕನ ಮೈಮೇಲೆ ಬಿದ್ದಿದೆ. ಗಾಯಾಳು ಬಾಲಕನನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.  

ಬಾಲಕನ ಮೈಮೇಲೆ ಬಿದ್ದ ಮನೆ ಗೇಟ್..! ➤ ಬಾಲಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನೆಲ್ಯಾಡಿ: ಹೊಟ್ಟೆ ನೋವಿನಿಂದ ಬಳಲಿ ಯುವತಿಯರಿಬ್ಬರು ಮೃತ್ಯು ➤ ಆತ್ಮಹತ್ಯೆ ಶಂಕೆ

(ನ್ಯೂಸ್ ಕಡಬ)newskadaba.com ನೆಲ್ಯಾಡಿ, ಏ.07. ಹೊಟ್ಟೆ ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾದ ನೆರೆಕರೆಯ ಮನೆಯ ಇಬ್ಬರು ಯುವತಿಯರು ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಪಟ್ರಮೆ ಗ್ರಾಮದ ಪಟ್ಟೂರು ಬಾಬು ಎಂಬವರ ಪುತ್ರಿ ರಕ್ಷಿತಾ (22) ಮತ್ತು ಶ್ರೀನಿವಾಸ ಆಚಾರ್ಯ ಎಂಬವರ ಪುತ್ರಿ ಲಾವಣ್ಯ (21) ಸುರತ್ಕಲ್ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ.  

ನೆಲ್ಯಾಡಿ: ಹೊಟ್ಟೆ ನೋವಿನಿಂದ ಬಳಲಿ ಯುವತಿಯರಿಬ್ಬರು ಮೃತ್ಯು ➤ ಆತ್ಮಹತ್ಯೆ ಶಂಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಮ್ರಾ ಯಾತ್ರಾರ್ಥಿಗಳು ತೆರಳುತ್ತಿದ್ದ ಕಾರು ಅಪಘಾತ ➤ ಐವರು ಭಾರತೀಯರು ಮೃತ್ಯು

(ನ್ಯೂಸ್ ಕಡಬ)newskadaba.com ಸೌದಿ ಅರೇಬಿಯಾ, ಏ.07. ಉಮ್ರಾಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಮಕ್ಕಳು ಸೇರಿದಂತೆ ಐವರು ಭಾರತೀಯರು ಮೃತಪಟ್ಡಿರುವ ಬಗ್ಗೆ ವರದಿಯಾಗಿದೆ. ಸೌದಿ ಅರೇಬಿಯಾದ ರಿಯಾದ್ ನಿಂದ ಉಮ್ರಾ ಯಾತ್ರೆಗೆ ಹೊರಟಿದ್ದ ಭಾರತೀಯ ಮೂಲದ ತಂಡ ಪ್ರಯಾಣಿಸುತ್ತಿದ್ದ ಕಾರು ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.  

ಉಮ್ರಾ ಯಾತ್ರಾರ್ಥಿಗಳು ತೆರಳುತ್ತಿದ್ದ ಕಾರು ಅಪಘಾತ ➤ ಐವರು ಭಾರತೀಯರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಿಡ್ನಿಯಲ್ಲಿನ ಕಲ್ಲನ್ನು ತೆಗೆಯುವ ಬದಲು ಕಿಡ್ನಿಯನ್ನೇ ತಗೆದ ವೈದ್ಯರು ➤ ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಘಾಝಿಯಾಬಾದ್, ಏ.07. ಮೂತ್ರಪಿಂಡದ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆಯ ವೇಳೆ 30 ವರ್ಷದ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿನ ಸ್ಪರ್ಶ್ ಆಸ್ಪತ್ರೆಯನ್ನು ಅಧಿಕಾರಿಗಳು ಸೀಲ್ ಮಾಡಿದ್ದು ವೈದ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಸ್ಪತ್ರೆ ನಡೆಸುತ್ತಿರುವ ದಾಖಲೆಗಳು ಹಾಗೂ ವೈದ್ಯರ ವೈದ್ಯಕೀಯ ಪದವಿಯ ಸಿಂಧುತ್ವವನ್ನು ಪರಿಶೀಲಿಸಲು ನಾಲ್ವರು ವೈದ್ಯರ ಸಮಿತಿಯನ್ನು ರಚಿಸಲಾಗಿದೆ.  

ಕಿಡ್ನಿಯಲ್ಲಿನ ಕಲ್ಲನ್ನು ತೆಗೆಯುವ ಬದಲು ಕಿಡ್ನಿಯನ್ನೇ ತಗೆದ ವೈದ್ಯರು ➤ ಯುವಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಲೆಗೂದಲು ಚಿಕ್ಕದಾಗಿ ಕತ್ತರಿಸಿದ್ದಕ್ಕೆ ಮನನೊಂದ ಬಾಲಕ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com. ಮುಂಬೈ, ಏ.6. ಹೇರ್‌ಕಟ್‌ ಮಾಡಿಸಲು ಹೋಗಿದ್ದ ಬಾಲಕನೊಬ್ಬ ತನಗೆ ಸರಿಯಾಗಿ ಕ್ಷೌರ ಮಾಡಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಹಾರಾಷ್ಟ್ರದ ಭಾಯಂದರ್‌ ಪ್ರದೇಶದ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಈತ ಮಂಗಳವಾರ ತನ್ನ ಸೋದರ ಸಂಬಂಧಿಯ ಹುಡುಗನ ಜೊತೆಗೆ ಮನೆಯ ಸಮೀಪ ಇರುವ ಮೆನ್ಸ್ ಸೆಲೂನ್‌ಗೆ ಹೇರ್‌ ಕಟ್ ಮಾಡಲು ಹೋಗಿದ್ದ. ಅಲ್ಲದೇ ತನಗೆ ಬೇಕಾದಂತೆ ಹೇರ್‌ಕಟ್ ಮಾಡಲು ಸೂಚಿಸಿದ್ದ.  ಆದರೆ ಸೆಲೂನ್‌ನಲ್ಲಿದ್ದ ಕ್ಷೌರಿಕ ಮಾಡಿದ

ತಲೆಗೂದಲು ಚಿಕ್ಕದಾಗಿ ಕತ್ತರಿಸಿದ್ದಕ್ಕೆ ಮನನೊಂದ ಬಾಲಕ ಆತ್ಮಹತ್ಯೆ! Read More »

ಕ್ರೈಮ್ ನ್ಯೂಸ್
Death, deadbody, Waterfall

ಕುಂದಾಪುರ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಢಿಕ್ಕಿ ➤ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ)newskadaba.com ಕುಂದಾಪುರ, ಏ.06. ರಸ್ತೆ ದಾಟುತಿದ್ದ ಪಾದಚಾರಿಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ವಡೇರಹೋಬಲಿ ಗ್ರಾಮದ ನೆಹರೂ ಮೈದಾನದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ದಾಟುತಿದ್ದ ಅವರಿಗೆ ಕುಂದಾಪುರದಿಂದ ಉಡುಪಿಯತ್ತ ವೇಗವಾಗಿ ಸಾಗುತಿದ್ದ ಬೈಕ್ ಡಿಕ್ಕಿ ಹೊಡೆದಿತ್ತು. ಇದರಿಂದ ರಸ್ತೆಗೆ ಎಸೆಯಲ್ಪಟ್ಟು ತಲೆ, ಹೊಟ್ಟೆಗೆ ಗಂಭೀರವಾಗಿ ಗಾಯಗೊಂಡ ಹೊನ್ನೂರು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು ಎನ್ನಲಾಗಿದೆ.

ಕುಂದಾಪುರ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಢಿಕ್ಕಿ ➤ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.06. ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ ನಡೆದ ಘಟನೆ ನಾಟೆಕಲ್ ಕಣಚೂರು ಆಸ್ಪತ್ರೆ ಮುಂಭಾಗದಲ್ಲಿ ನಡೆದಿದೆ ಎನ್ನಲಾಗಿದೆ. ಗುತ್ತಿಗೆದಾರ ನಾಸಿರ್ ಎಂಬವರ ಇನ್ನೋವಾ ಕಾರು ಮಂಗಳೂರಿನಿಂದ ಕೊಣಾಜೆ ಕಡೆಗೆ ತೆರಳುವ ಸಂದರ್ಭ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಹಣ್ಣು ಹಂಪಲು ಮಾರುತ್ತಿದ್ದ ಅಂಗಡಿಗೆ ನುಗ್ಗಿದೆ ಎಂದು ವರದಿ ತಿಳಿಸಿದೆ.

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top