ಕ್ರೈಮ್ ನ್ಯೂಸ್

crime, arrest, suspected

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಏ.10. ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಲ್ಪೆ ನಿವಾಸಿ ಸುಹಾನ್ ಎಸ್ ಪೂಜಾರಿ (23) ಎಂದು ಗುರುತಿಸಲಾಗಿದೆ. ಸುಹಾನ್ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ್ಡದ ಪಡುಶೆಡ್ಡೆ ಬಳಿ ರಸ್ತೆ ಬದಿಯಲ್ಲಿ ಸ್ಕೂಟರ್‌ನಲ್ಲಿ ಕುಳಿತು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಆತನಿಂದ 1.999 ಕೆಜಿ ಗಾಂಜಾ, ಮೊಬೈಲ್ ಮತ್ತು ಸ್ಕೂಟರ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.  

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಕಾಪು ನಿವಾಸಿ ಯುವಕ ಮೃತ್ಯು…!

(ನ್ಯೂಸ್ ಕಡಬ)newskadaba.com ಸೌದಿ ಅರೇಬಿಯಾ, ಏ.10. ಕಾರು ಅಪಘಾತದಲ್ಲಿ ಗಾಯಗೊಂಡು ಗಂಭೀರವಸ್ಥೆಯಲ್ಲಿದ್ದ ಉಡುಪಿ ಕಾಪು ನಿವಾಸಿ ಯುವಕ ಜುಬೈಲ್ ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಕೆಸಿಎಫ್ ಅಬುಹಾದ್ರಿಯ ಸೆಕ್ಟರ್, ಜುಬೈಲ್ ಇದರ ಈಸ್ಟ್ ಯುನಿಟ್ ನ ಪಬ್ಲಿಕೇಶನ್ ವಿಂಗ್ ನ ಕಾರ್ಯದರ್ಶಿ ಕೂಡ ಆಗಿದ್ದ ಎನ್ನಲಾಗಿದೆ.  

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಕಾಪು ನಿವಾಸಿ ಯುವಕ ಮೃತ್ಯು…! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕತ್ತಿಯಿಂದ ಯುವಕನ ಬರ್ಬರ ಹತ್ಯೆ…! ➤ ಅಪ್ರಾಪ್ತ ಬಾಲಕಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಹಾವೇರಿ, ಏ.10. ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ 17 ವರ್ಷದ ಅಪ್ರಾಪ್ತೆ ಕತ್ತಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ರಾಣೇಬೆನ್ನೂರು ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ನಡೆದ ಘಟನೆಯೊಂದು ಅಚ್ಚರಿಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಕತ್ತಿಯಿಂದ ಯುವಕನ ಬರ್ಬರ ಹತ್ಯೆ…! ➤ ಅಪ್ರಾಪ್ತ ಬಾಲಕಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

 ಬಾಲಕಿ ಮೇಲೆ ಅತ್ಯಾಚಾರ ಕೊಲೆ ಆರೋಪ ➤ ಪೋಷಕರಿಂದ ದೂರು ದಾಖಲು

(ನ್ಯೂಸ್ ಕಡಬ)newskadaba.com ಬಿಹಾರ, ಏ.08. ದುಷ್ಕರ್ಮಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಮನೆಯಲ್ಲೇ ಕೊಂದು ಹಾಕಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಅಷ್ಟೇ ಅಲ್ಲ ಆರೋಪಿಗಳು ಅತ್ಯಾಚಾರ ಬಳಿಕ ನೊಂದು ಬಾಲಕಿ ತನ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲು ಯತ್ನಿಸಿರುವುದೂ ಬೆಳಕಿಗೆ ಬಂದಿದೆ. ಮಗಳ ಸಾವಿನ ನಂತರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಆತಂಕ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ.    

 ಬಾಲಕಿ ಮೇಲೆ ಅತ್ಯಾಚಾರ ಕೊಲೆ ಆರೋಪ ➤ ಪೋಷಕರಿಂದ ದೂರು ದಾಖಲು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಾವಣಗೆರೆ ಆನೆ ದಾಳಿಗೆ ಯುವತಿ ಬಲಿ

(ನ್ಯೂಸ್ ಕಡಬ) newskadaba.com. ಕಡಬ,ಏ.08. ಆನೆಯೊಂದು  ದಾಳಿ ನಡೆಸಿದ ಪರಿಣಾಮ ಯುವತಿಯೋರ್ವಳು ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ನಡೆದಿದೆ.  ಮೃತ ಯುವತಿಯನ್ನು ಸೋಮ್ಲಾಪುರದ ಕವನ (17) ಎಂದು ಗುರುತಿಸಲಾಗಿದೆ. ಚನ್ನಗಿರಿ ತಾಲೂಕಿನ ಸೋಮ್ಲಾಪುರ ಹಾಗೂ ಕಾಶಿಪುರ ಸುತ್ತಮುತ್ತ ಆನೆ ಹಾವಳಿ ಜೋರಾಗಿದೆ. ಆನೆ ಓಡಾಟದ ಬಗ್ಗೆ ಅರಿವಿಗೆ ಬಾರದ ತಾಯಿ ಮಂಜುಳಾ (42) ಮತ್ತು ಮಗಳು ಕವನಾ (17) ಬೆಳಗ್ಗೆ ಜಮೀನಿನಲ್ಲಿ ಹೋಗಿ ಅವರೆಕಾಯಿ ಬಿಡಿಸುವಾಗ ಏಕಾಏಕಿ ಹಿಂದಿನಿಂದ ದಾಳಿ ಮಾಡಿದೆ.

ದಾವಣಗೆರೆ ಆನೆ ದಾಳಿಗೆ ಯುವತಿ ಬಲಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕೊಂದ ಪಾಪಿ ಮಗ…!

(ನ್ಯೂಸ್ ಕಡಬ)newskadaba.com ತ್ರಿಶೂರು, ಏ.08. ತ್ರಿಶೂರಿನ ಕೊಡನ್ನೂರಿನಲ್ಲಿ ತಂದೆ ಜಾಯ್ ಎಂಬಾತನನ್ನು ಕೊಲೆ ಮಾಡಿದ್ದ ರಿಜೋ ಎಂಬ 25 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ ರಿಜೋ ಮತ್ತು ಜಾಯ್ ನಡುವೆ ಗಲಾಟೆ ನಡೆದು ಕೊಲೆಗೆ ಕಾರಣವಾಯಿತು. ವೇಲ್ಡಿಂಗ್‌ ಕೆಲಸ ಮಾಡಿಕೊಂಡು ಜೀವನವನ್ನು ನಿಭಾಯಿಸುತ್ತಿದ್ದ ರಿಜೋ ಕುಡಿದು ಮನೆಗೆ ಬಂದಿದ್ದಾನೆ.  

ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕೊಂದ ಪಾಪಿ ಮಗ…! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ..! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಹಾಸನ, ಏ.08. 85 ವರ್ಷದ ವೃದ್ಧೆಯನ್ನು ಕೊಂದು ಅತ್ಯಾಚಾರ ಎಸಗಿದ್ದ ನೀಚ ಯುವಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಏಪ್ರಿಲ್ 1ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ವೃದ್ಧೆಯ ಕೊಲೆಯಾಗಿತ್ತು. ಅರಸೀಕೆರೆ ತಾಲೂಕಿನ ಯರೆಹಳ್ಳಿ ಗ್ರಾಮದ ನಿವಾಸಿ 32 ವರ್ಷದ ಮಿಥುನ್ ಬಂಧಿತ ಆರೋಪಿ. ವೃದ್ಧೆ ಜಮೀನಿನ ಬಳಿ ತೆರಳಿದ್ದರು. ಈ ವೇಳೆ ವೃದ್ಧೆ ಮೇಲೆ ಮಿಥುನ್ ಅತ್ಯಾಚಾರಕ್ಕೆ ಯತ್ನಿಸಿದ್ದನು. ವೃದ್ಧೆ ಪ್ರತಿರೋಧ ತೋರಿದ್ದಕ್ಕೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಬಳಿಕ

85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ..! ➤ ಆರೋಪಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ವಿಜಯಪುರ, ಏ.08. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ ನಡೆದಿದೆ. ಪವಾಡ ಬಸವೇಶ್ವರ ಜಾತ್ರೆ ಅಂಗವಾಗಿ ರಥೋತ್ಸವ ಹಮ್ಮಿಕೊಳ್ಳಲಾಗಿದ್ದು,ಈ ವೇಳೆ ರಥೋತ್ಸವ ನಡೆಯುತ್ತಿದ್ದ ವೇಳೆ ಚಕ್ರಕ್ಕೆ ಸಿಲುಕಿ ಯುವಕ ಬಸವರಾಜ್ ಸಾವಿಗೀಡಾಗಿದ್ದಾನೆ. ಬಸವರಾಜ್‍ಗೆ ಗಂಭೀರ ಗಾಯಗಳಾಗಿದ್ದು, ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಬಸವರಾಜ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದ್ದಾರೆ. ಬಸವರಾಜ್ ಎರಡೂ ಕಾಲುಗಳ ಮೇಲೆ ರಥದ ಕಲ್ಲಿನ ಚಕ್ರಗಳು ಹಾದಿದ್ದು,

ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಕಾಸರಗೋಡು: ಪತಿಯನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಪತ್ನಿ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.08. ಪತ್ನಿ ಯು ಪತಿಯನ್ನು ಕಡಿದು ಕೊಲೆಗೈದ ದಾರುಣ ಘಟನೆ ಪಾಣತ್ತೂರಿ ನಲ್ಲಿ ನಡೆದಿದೆ. ಪುತ್ತೂರಡ್ಕದ ಬಾಬು(54) ಮೃತ ಪಟ್ಟವರು ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಸಂಬಂಧ ಪಟ್ಟಂತೆ ಪತ್ನಿ ಸೀಮಂತಿನಿ ನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ದಿನಂಪ್ರತಿ ಪಾನ ಮತ್ತರಾಗಿ ಮನೆಗೆ ಬರುತ್ತಿದ್ದ ಬಾಬು ಮನೆಗೆ ಬಂದ ಬಳಿಕ ಇಬ್ಬರ ಜಗಳ ವಾಗಿದ್ದು, ಈ ಸಂದರ್ಭದಲ್ಲಿ ಕತ್ತಿ ಯಿಂದ ಬಾಬು

ಕಾಸರಗೋಡು: ಪತಿಯನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಪತ್ನಿ ➤ ಆರೋಪಿ ಪೊಲೀಸ್ ವಶಕ್ಕೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕುಂದಾಪುರ: ಫಾಲ್ಸ್ ನಲ್ಲಿ ನೀರಿಗಿಳಿದ ವಿದ್ಯಾರ್ಥಿ ನಾಪತ್ತೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಏ.08. ಸ್ನೇಹಿತರೊಂದಿಗೆ ಗುಡ್ ಪ್ರೈಡೇ ರಜೆಗೆ ಮಜಾ ಮಾಡಲು ಬಂದ ವಿದ್ಯಾರ್ಥಿಯೊಬ್ಬ ನೀರು ಪಾಲಾಗಿ ನಾಪತ್ತೆಯಾದ ಘಟನೆ ಬೈಂದೂರು ತಾಲೂಕಿನ ಕೊಸಳ್ಳಿ ಪಾಲ್ಸ್ ನಲ್ಲಿ ನಡೆದಿದೆ. ಘಟನೆಯಲ್ಲಿ ನಾಪತ್ತೆಯಾದ ವಿದ್ಯಾರ್ಥಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.ಐ ಕುಮಾರ ಶೆಟ್ಟಿ ಎಂಬುವರ ಮಗ ಚಿರಾಂತ್ ಶೆಟ್ಟಿ(20) ಎಂದು ತಿಳಿದುಬಂದಿದೆ.  

ಕುಂದಾಪುರ: ಫಾಲ್ಸ್ ನಲ್ಲಿ ನೀರಿಗಿಳಿದ ವಿದ್ಯಾರ್ಥಿ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top