ಕ್ರೈಮ್ ನ್ಯೂಸ್

ಮತಾಂತರಕ್ಕಾಗಿ ಬಲವಂತದ ಮದುವೆಗೆ ಒತ್ತಡ  ➤ ರೂಪದರ್ಶಿ ಗಂಭೀರ ಆರೋಪ

(ನ್ಯೂಸ್ ಕಡಬ)newskadaba.com  ಜಾರ್ಖಂಡ್, ಮೇ.31.ವ್ಯಕ್ತಿಯೊಬ್ಬ ಮತಾಂತರಗೊಳಿಸುವ ನಿಟ್ಟಿನಲ್ಲಿ ತನ್ನನ್ನು ಒತ್ತಾಯಪೂರ್ವವಾಗಿ ಮದುವೆಯಾಗಲು ಪ್ರಯತ್ನಿಸಿದ್ದಾನೆ ಎಂದು ಮಹಾರಾಷ್ಟ್ರದ ಮುಂಬೈನ ಮೂಲದ ರೂಪದರ್ಶಿ ಆರೋಪಿಸಿದ್ದಾರೆ. ಈ ಸಂಬಂಧ ರಾಂಚಿಯ ಯಶ್ ಮಾಡೆಲ್ಸ್ ಸಂಸ್ಥೆಯ ನಿರ್ದೇಶಕ ತನ್ವೀರ್ ಅಖ್ತರ್ ಖಾನ್ ಎಂಬವರ ವಿರುದ್ಧ ಮುಂಬೈನಲ್ಲಿ ಪೊಲೀಸ್​ ಕೇಸ್​ ಸಹ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.    

ಮತಾಂತರಕ್ಕಾಗಿ ಬಲವಂತದ ಮದುವೆಗೆ ಒತ್ತಡ  ➤ ರೂಪದರ್ಶಿ ಗಂಭೀರ ಆರೋಪ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಟ್ಲ: ಕೇರಳಕ್ಕೆ ಅಕ್ರಮ ಗೋಸಾಗಾಟ..! ➤ ಪಿಕಪ್‌ ತಡೆದು ಪೊಲೀಸರಿಗೊಪ್ಪಿಸಿದ ಹಿಂ.ಜಾ.ವೇ. ಕಾರ್ಯಕರ್ತರು

(ನ್ಯೂಸ್ ಕಡಬ)newskadaba.com ವಿಟ್ಲ, ಮೇ.31. ಕೇರಳಕ್ಕೆ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಪಿಕಪ್‌ ಅನ್ನು ಹಿಂ.ಜಾ.ವೇ. ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆಯಲ್ಲಿ ವಿಟ್ಲ ಸಮೀಪದ ಪುಣಚ ದೇವಿ ನಗರ ಬಳಿ ಅಕ್ರಮ ಗೋ ಸಾಗಾಟ ಪತ್ತೆಯಾಗಿದೆ. ನಿರಂತರ ಗೋಸಾಗಾಟ ಮಾಡುವ ಮಹೇಶ್ವರ ಪಿಕಪ್ ಹಾಗೂ ಸುಂದರ ಎಂಬಾತ ಪೊಲೀಸ್ ವಶಕ್ಕೆ ನೀಡಲಾಗಿದೆ. ಗೋಸಾಗಾಟಕ್ಕೆ ಪರವಾನಿಗೆ ಮಾಡಿ ಸಾಗಾಟ ಮಾಡುವುದರಲ್ಲಿ ನಿಪುಣನಾಗಿರುವ ಈತ ಒಂದು ವಾರದ

ವಿಟ್ಲ: ಕೇರಳಕ್ಕೆ ಅಕ್ರಮ ಗೋಸಾಗಾಟ..! ➤ ಪಿಕಪ್‌ ತಡೆದು ಪೊಲೀಸರಿಗೊಪ್ಪಿಸಿದ ಹಿಂ.ಜಾ.ವೇ. ಕಾರ್ಯಕರ್ತರು Read More »

ಕರಾವಳಿ, ಕ್ರೈಮ್ ನ್ಯೂಸ್

KSRTC ಬಸ್ ಡ್ರೈವಿಂಗ್ ಮಾಡುತ್ತಿದ್ದಾಗಲೇ ಡ್ರೈವರ್ ಗೆ ಹೃದಯಾಘಾತ

(ನ್ಯೂಸ್ ಕಡಬ)newskadaba.com ವಿಜಯಪುರ, ಮೇ.31. KSRTC ಬಸ್‌ ಡ್ರೈವಿಂಗ್ ಮಾಡುವಾಗಲೇ ಚಾಲಕನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದು, ನಿಯಂತ್ರಣ ತಪ್ಪಿದ ಸಾರಿಗೆ ಬಸ್‌ ರಸ್ತೆ ಪಕ್ಕದಲ್ಲಿಯೇ ಇದ್ದ ಪೆಟ್ರೋಲ್‌ ಬಂಕ್‌ಗೆ ನುಗ್ಗಿದ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ. ಬಸ್ ಓಡಿಸುವಾಗಲೇ ಡ್ರೈವರ್‌ ಮುರಿಗೆಪ್ಪ ಎಂಬವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದರಿಂದ ಬಸ್‌ ಚಾಲಕನಿಲ್ಲದೇ ನಿಯಂತ್ರಣ ತಪ್ಪಿದ ಬಸ್‌ ಪೆಟ್ರೋಲ್‌ ಬಂಕ್‌ಗೆ ನುಗ್ಗಿದೆ. ಈ ವೇಳೆ ಬಸ್‌ ಕಂಡೆಕ್ಟರ್ ಸಮಯಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ ಎನ್ನಲಾಗಿದೆ.  

KSRTC ಬಸ್ ಡ್ರೈವಿಂಗ್ ಮಾಡುತ್ತಿದ್ದಾಗಲೇ ಡ್ರೈವರ್ ಗೆ ಹೃದಯಾಘಾತ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಅಕ್ರಮ ಗಾಂಜಾ ಸಾಗಾಟ ➤ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.30. ಮಂಗಳೂರು ಮತ್ತು ಕೇರಳಕ್ಕೆ ಆಂಧ್ರ ಪ್ರದೇಶದಿಂದ ನಿಷೇಧಿತ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಸುಮಾರು 23 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಮೊಯಿದ್ದೀನ್ ಶಬೀರ್ (35) ಎಂದು ಗುರುತಿಸಲಾಗಿದೆ. ಇನ್ನು ಆರೋಪಿ ಶಬೀರ್ ವಿಶಾಖಪಟ್ಟಣದಿಂದ ಕಾರಿನ ಮೂಲಕ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದಾಗ ಉಳ್ಳಾಲ ಮುಡಿಪು ಕಾಯಿರಗೋಳಿ ಎಂಬಲ್ಲಿ ಸಿಸಿಬಿ ಪೊಲೀಸರ ತಂಡ ಸೆರೆ

ಮಂಗಳೂರು: ಅಕ್ರಮ ಗಾಂಜಾ ಸಾಗಾಟ ➤ ಆರೋಪಿ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್
Theft, crime, Robbery

ಪುತ್ತೂರು: ಹಾಡಹಗಲೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ➤ ದೂರು ದಾಖಲು

(ನ್ಯೂಸ್ ಕಡಬ)newskadaba.com ಪುತ್ತೂರು, ಮೇ.30. ಪುತ್ತೂರು ತಾಲೂಕಿನ ಬನ್ನೂರು ಎಂಬಲ್ಲಿ ಹಾಡಹಗಲೇ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ನಡೆಸಿರುವ ಘಟನೆ ನಡೆದಿದೆ. ಬನ್ನೂರು ಕುಂಟ್ಯಾನ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮೌನಿಶ್‌ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.  

ಪುತ್ತೂರು: ಹಾಡಹಗಲೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಈಜಲು ತೆರಳಿದ್ದ ಉಪನ್ಯಾಸಕ ಸೇರಿ ಇಬ್ಬರು ನೀರುಪಾಲು

(ನ್ಯೂಸ್ ಕಡಬ)newskadaba.com ಕುಂದಾಪುರ, ಮೇ.30. ಕಂದಾವರ ಗ್ರಾಮದ ಉಳ್ಳೂರು – ಕಾಡಿನಕೊಂಡ ಎಂಬಲ್ಲಿ ಕಂದಾವರ ಡಂಪಿಂಗ್ ಯಾರ್ಡ್‌ ಹತ್ತಿರದ ಮದಗಗಕ್ಕೆ ಈಜಲು ತೆರಳಿದ್ದ ಶಂಕರನಾರಾಯಣ ಮದರ್ ಥೇರಸಾ ಕಾಲೇಜಿನ ಉಪನ್ಯಾಸಕ ಸೇರಿ ಇಬ್ಬರು ನೀರು ಪಾಲಾಗಿದ್ದಾರೆ ಎಂದು ವರದಿ ತಿಳಿಸಿದೆ. ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ (28) ಶಂಕರನಾರಾಯಣ ಹೈಸ್ಕೂಲ್ ವಿದ್ಯಾರ್ಥಿ ಭರತ್ ಶೆಟ್ಟಿಗಾರ (15) ನೀರಲ್ಲಿ ಮುಳುಗಿ ಮೃತರಾಗಿದ್ದಾರೆ ಎನ್ನಲಾಗಿದೆ.

ಈಜಲು ತೆರಳಿದ್ದ ಉಪನ್ಯಾಸಕ ಸೇರಿ ಇಬ್ಬರು ನೀರುಪಾಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗೇರುಬೀಜ ಹೇರಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ ! ➤ ಚಾಲಕನಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com ಉಡುಪಿ, ಮೇ, 30. ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 66ರ ಬಲಾಯಿಪಾದೆ ಜಂಕ್ಷನ್ ನಲ್ಲಿ ಮಗುಚಿ ಬಿದ್ದ ಘಟನೆ ಉಡುಪಿಯಲ್ಲಿ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ಲಾರಿ ಎಂದು ತಿಳಿದುಬಂದಿದೆ. ಲಾರಿಯಲ್ಲಿ ಗೇರುಬೀಜ ತುಂಬಿ ಕೊಂಡು ಹೋಗುತಿದ್ದು, ಬಲಾಯಿಪದೆ ಜಂಕ್ಷನ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ನಡುವೆಯೆ ಮಗುಚಿ ಬಿದ್ದಿದೆ ಎಂದು ವರದಿ ತಿಳಿಸಿದೆ.

ಗೇರುಬೀಜ ಹೇರಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ ! ➤ ಚಾಲಕನಿಗೆ ಗಂಭೀರ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ ➤ ತಪ್ಪಿದ ಭಾರಿ ಅನಾಹುತ

(ನ್ಯೂಸ್ ಕಡಬ)newskadaba.com  ಬೆಳಗಾವಿ, ಮೇ.30. ಹೊನ್ನಿಹಾಳ ಹಾಗೂ ಬಾಗೇವಾಡಿ ಮಾರ್ಗದ ಮಧ್ಯೆ ಇರುವ ಹೊಲದಲ್ಲಿ ತರಬೇತಿ ವಿಮಾನವೊಂದು ಭೂಸ್ಪರ್ಶವಾಗಿದೆ ಎಂದು ವರದಿ ತಿಳಿಸಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ತರಬೇತಿ ನಡೆಸುತ್ತಿದ್ದ ಪುಟ್ಟ ವಿಮಾನ ಒಂದು ತಾಲೂಕಿನ ಹೊನ್ನಿಹಾಳ ಹೊರವಲಯದ ಮೋದಗಾ- ಬಾಗೇವಾಡಿ ರಸ್ತೆ ಮಧ್ಯದಲ್ಲಿ ತುರ್ತು ಭೂಸ್ಪರ್ಶವಾಗಿದೆ ಎನ್ನಲಾಗಿದೆ. ಇನ್ನು ಘಟನೆಯಲ್ಲಿ ತರಬೇತುದಾರನ ಕಾಲಿಗೆ ಗಾಯವಾಗಿದೆ.

ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ ➤ ತಪ್ಪಿದ ಭಾರಿ ಅನಾಹುತ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚಾಲಕನ ನಿಯಂತ್ರನ ತಪ್ಪಿ ಸೇತುವೆಯಿಂದ ಕಣಿವೆಗೆ ಬಿದ್ದ ಬಸ್

(ನ್ಯೂಸ್ ಕಡಬ)newskadaba.com ಶ್ರೀನಗರ, ಮೇ ,30. ಸಾರಿಗೆ ಬಸ್​ ಒಂದು ಸೇತುವೆಯಿಂದ ಕಣಿವೆಗೆ ಬಿದ್ದ ಪರಿಣಾಮ 10 ಮಂದಿ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದ ಸಮಯದಲ್ಲಿ 75 ಪ್ರಯಾಣಿಕರನ್ನು ಹೊತ್ತ ಬಸ್ ಅಮೃತಸರದಿಂದ ಕತ್ರಾಕ್ಕೆ ತೆರಳುತ್ತಿದ್ದರು. ಈ ಅವಘಡದಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನ ನಿಯಂತ್ರನ ತಪ್ಪಿ ಸೇತುವೆಯಿಂದ ಕಣಿವೆಗೆ ಬಿದ್ದ ಬಸ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದ ಯುವಕ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.29 ,ದೆಹಲಿಯ ರೋಹಿಣಿಯಲ್ಲಿ ಜನ ಸಂದಣಿ ಪ್ರದೇಶದಲ್ಲಿ 16 ವರ್ಷದ ಬಾಲಕಿಯನ್ನು ಆಕೆಯ ಪ್ರಿಯಕರ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ರೋಹಿಣಿಯ ಶಹಬಾದ್ ಡೈರಿ ಪ್ರದೇಶದಲ್ಲಿ ಇಬ್ಬರ ನಡುವೆ ನಡೆದ ಜಗಳದ ನಂತರ ಯುವಕ, ಯುವತಿಗೆ ಹಲವು ಬಾರಿ ಇರಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.    

ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದ ಯುವಕ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top