ಕ್ರೈಮ್ ನ್ಯೂಸ್

ಜಾನುವಾರುಗಳ ಮೇಲೆ ಹರಿದ ಕಾರು- ಮೂರು ಜಾನುವಾರು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 09. ರಸ್ತೆಬದಿ ಮಲಗಿದ್ದ ಜಾನುವಾರುಗಳ ಮೇಲೆ ಕಾರು ಚಲಿಸಿ ಮೂರು ಜಾನುವಾರುಗಳು ಮೃತಪಟ್ಟು, ವೈದ್ಯ ವಿದ್ಯಾರ್ಥಿ ಗಾಯಗೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಂಡಿತ್ ಹೌಸ್ ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಗಾಯಗೊಂಡವರನ್ನು ಮೈಸೂರು ಮೂಲದ ಡಾ.ವಿವೇಕ್ ಶಶಿಕುಮಾರ್ ಎಂದು ಗುರುತಿಸಲಾಗಿದೆ. ದೇರಳಕಟ್ಟೆ ಕಡೆಯಿಂದ ತೊಕ್ಕೊಟ್ಟಿನತ್ತ ತೆರಳುತ್ತಿದ್ದ ಕಾರು ನಸುಕಿನ 3.30 ರ ಸುಮಾರಿಗೆ ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳ ಮೇಲೆ ಹರಿದಿದ್ದು, ಪರಿಣಾಮ ಮೂರು ಜಾನುವಾರುಗಳು ಸಾವನ್ನಪ್ಪಿವೆ. […]

ಜಾನುವಾರುಗಳ ಮೇಲೆ ಹರಿದ ಕಾರು- ಮೂರು ಜಾನುವಾರು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಓಮ್ನಿ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಸ್ವಿಫ್ಟ್ ಕಾರು- ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 09. ಓಮ್ನಿ ಕಾರಿಗೆ ಹಿಂಬದಿಯಿಂದ ಬಂದ ಸ್ವಿಫ್ಟ್ ಕಾರೊಂದು ಢಿಕ್ಕಿಯಾಗಿ ಓಮ್ನಿ ಕಾರು ಪಲ್ಟಿಯಾಗಿ ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಬಿ.ಸಿ.ರೋಡು- ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಪರ್ಲ ಚರ್ಚ್ ಸಮೀಪ ನಡೆದಿದೆ. ಅಪಘಾತದಲ್ಲಿ ಓಮ್ನಿ ಕಾರು ಚಾಲಕ ರಾಯಿಸನ್ ಹಾಗೂ ಜೊತೆಯಲ್ಲಿ ಮಕ್ಕಳು ಸಹಿತ ಮೂರು ಜನ ಹಾಗೂ ಸ್ವಿಫ್ಟ್ ಕಾರು ಚಾಲಕ ಆದಿಲ್ ಎಂಬವರಿಗೆ ಗಾಯವಾಗಿದೆ. ಎರಡೂ ಕಾರುಗಳು ವಗ್ಗದಿಂದ ಬರುತ್ತಿದ್ದು, ಪರ್ಲ ಚರ್ಚ್ ಬಳಿಗೆ

ಬಂಟ್ವಾಳ: ಓಮ್ನಿ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಸ್ವಿಫ್ಟ್ ಕಾರು- ಹಲವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಮೂರು ವಾಹನಗಳ ನಡುವೆ ಸರಣಿ ಅಪಘಾತ- ರಿಕ್ಷಾ ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಜು. 08. ಮೂರು ವಾಹನಗಳ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿ ಓರ್ವ ಗಂಭೀರ ಗಾಯಗೊಂಡ ಘಟನೆ ಧರೆಗುಡ್ಡೆ ಎಂಬಲ್ಲಿ ನಡೆದಿದೆ. ನಾಟಿಗೆಂದು ನೇಜಿಯನ್ನು ಹೊತ್ತೊಯ್ಯುತ್ತಿದ್ದ ಮರೋಡಿ ಮೂಲದ ಪಿಕಪ್ ವಾಹನವು ಬೆಳುವಾಯಿಯಿಂದ ದರೆಗುಡ್ಡೆ ಮೂಲಕ ವೇಗವಾಗಿ ಸಾಗಿ ಹಂಗೊಟ್ಟು ಎಂಬಲ್ಲಿ ಬೊಲೇರೋ ಕಾರು ಹಾಗೂ ರಿಕ್ಷಾವೊಂದಕ್ಕೆ ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು ವಾಹನಗಳಲಿದ್ದ ಸವಾರರು ಅಪಾಯದಿಂದ ಪಾರಾಗಿದ್ದಾರೆ. ಚಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ವಾಹನಗಳ ನಡುವೆ ಸರಣಿ ಅಪಘಾತ- ರಿಕ್ಷಾ ಚಾಲಕನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು: ಬ್ಯಾಂಕ್ ಮ್ಯಾನೇಜರ್, ಪತಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 08. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಾಸರಗೋಡು ಶಾಖೆಯ ಮ್ಯಾನೇಜರ್‌, ಅವರ ಪತಿ ಮತ್ತು ಇಬ್ಬರು ಮಕ್ಕಳು ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಮೃತರನ್ನು ಮ್ಯಾನೇಜರ್‌ ಶೀನಾ (35), ಅವರ ಪತಿ ಸಬೀಶ್ (37), ಮಕ್ಕಳಾದ ಹರಿಗೋವಿಂದ್ (6) ಹಾಗೂ ಶ್ರೀವರ್ಧನ್ ಎಂದು ಗುರುತಿಸಲಾಗಿದೆ. ಶೀನಾ ಅವರ ಪತಿ ಮಲಪ್ಪುರಂನ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ಮಲಪ್ಪುರಂ ಮುಂಡುಪರಂಬ ಮೈತ್ರಿ ಕಾಲನಿಯ

ಕಾಸರಗೋಡು: ಬ್ಯಾಂಕ್ ಮ್ಯಾನೇಜರ್, ಪತಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ಜು. 08. ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಮೇಗಿನಪೇಟೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ವಿಟ್ಲ ಮೇಗಿನಪೇಟೆ ನಿವಾಸಿ ಗುರುವಪ್ಪರವರ ಪುತ್ರ, ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ (30) ಎಂದು ಗುರುತಿಸಲಾಗಿದೆ.ಪ್ರಶಾಂತ್‌ ರವರು ಶುಕ್ರವಾರದಂದು ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳೀಯರು ಬಂದು ನೋಡಿದಾಗ ಮನೆಯೊಳಗಡೆ ಪ್ರಶಾಂತ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ

ವಿಟ್ಲ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಗುಡ್ಡ ಕುಸಿದು ಮಹಿಳೆ ಮೃತ್ಯು – ಸ್ಥಳದಲ್ಲೇ 5 ಲಕ್ಷ ರೂ. ಪರಿಹಾರ ಘೋಷಿಸಿದ ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 07. ಮನೆಯೊಂದರ ಮೇಲೆ ಗುಡ್ಡ ಕುಸಿದ ಪರಿಣಾಮ ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆಯನ್ನು ರಕ್ಷಿಸಲಾಗಿದ್ದು, ಮತ್ತೋರ್ವ ಮಹಿಳೆ ಮೃತಪಟ್ಟ ಘಟನೆ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಗುಂಪು ಎಂಬಲ್ಲಿ ನಡೆದಿದೆ. ಮೃತರನ್ನು ನಂದಾವರ ನಿವಾಸಿ ಮಹಮ್ಮದ್ ಅವರ ಪತ್ನಿ ಝರೀನಾ(47) ಎಂದು ಗುರುತಿಸಲಾಗಿದೆ. ಇನ್ನೋರ್ವ ಮಹಿಳೆ ಶಫಾ(20) ಅವರನ್ನು ರಕ್ಷಣೆ ಮಾಡಲಾಗಿದೆ. ಗುಡ್ಡೆ ಕುಸಿದ ಬಳಿಕ ಕಾಲ ರಕ್ಷಣಾ ಕಾರ್ಯದಲ್ಲಿ ಸ್ಥಳೀಯರು ತೊಡಗಿದ್ದರು. ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ

ಬಂಟ್ವಾಳ: ಗುಡ್ಡ ಕುಸಿದು ಮಹಿಳೆ ಮೃತ್ಯು – ಸ್ಥಳದಲ್ಲೇ 5 ಲಕ್ಷ ರೂ. ಪರಿಹಾರ ಘೋಷಿಸಿದ ಜಿಲ್ಲಾಧಿಕಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಮಳೆಯ ಅಬ್ಬರ- ಓರ್ವ ನೀರು ಪಾಲು

(ನ್ಯೂಸ್ ಕಡಬ) newskadaba.com ಸುಳ್ಯ, ಜು. 07. ಕೆಲಸ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದ ವೇಳೆ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕಾಲು ಸಂಕದಿಂದ ಜಾರಿ ಬಿದ್ದು ನೀರುಪಾಲಾದ ಘಟನೆ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನಡೆದಿದೆ. ನೀರುಪಾಲಾದವರನ್ನು ನಾರಾಯಣ ಎಂದು ಗುರುತಿಸಲಾಗಿದೆ. ಕೊಡಗು ಕಡೆಯಿಂದ ರಬ್ಬರ್ ಟ್ಯಾಪಿಂಗ್ ಕೆಳಸಕ್ಕೆ ಬಂದಿದ್ದ ನಾಲ್ವರು ಕೂಲಿಕಾರ್ಮಿಕರ ತಂಡ ಮಾವಜಿ ಕಡೆಯಿಂದ ಬಡ್ಡಡ್ಕ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ನಾರಾಯಣ ಎಂಬವರು ಆಯ ತಪ್ಪಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರೆನ್ನಲಾಗಿದೆ. ಸ್ಥಳಕ್ಕೆ

ಸುಳ್ಯ: ಮಳೆಯ ಅಬ್ಬರ- ಓರ್ವ ನೀರು ಪಾಲು Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

ಟೆರೇಸ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕೊಲ್ಲೂರು, ಜು. 06. ಮನೆಯ ಟೆರೇಸ್ ನಿಂದ ಬಿದ್ದು ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಜಡ್ಕಲ್ ಗ್ರಾಮದ ಹಾಲ್ಕಲ್ ಎಂಬಲ್ಲಿ ನಡೆದಿದೆ. ಮೃತರನ್ನು ಶೇಖರ(32) ಎಂದು ಗುರುತಿಸಲಾಗಿದೆ. ಶೇಖರ್ ಅವರು ಜೂ. 30ರಂದು ಹಾಲ್ಕಲ್ ನಿವಾಸಿ ವಕ್ಕಚ್ಚನ್ ಎಂಬವರ ಮನೆಯ ಟೆರೇಸ್ ನಲ್ಲಿ ನೆಟ್ ಅಳವಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಆಯ ತಪ್ಪಿ ಕೆಳಗೆ ಬಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಜು. 4ರಂದು ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಟೆರೇಸ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು: ದಾಖಲೆಗಳಿಲ್ಲದೆ ಹಣ ಸಾಗಾಟ ➤ ಆರೋಪಿ ಸಹಿತ 41.78 ಲಕ್ಷ ರೂ ವಶಕ್ಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 05. ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ಸುಮಾರು 41,78,000 ರೂ. ವನ್ನು ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿ ಕೊಂಡ ಘಟನೆ ವರದಿಯಾಗಿದೆ. ಬಂಧಿತನನ್ನು ವಿನಾಯಕ ಶೆಟ್ಟಿ ಎಂದು ಗುರುತಿಸಲಾಗಿದೆ. ಈತನನ್ನು ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್ಆರ್.ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಶಕ್ಕೆ ತೆಗೆದು ಕೊಳ್ಳಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ನಗದು ಹಾಗೂ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಕಾಸರಗೋಡು: ದಾಖಲೆಗಳಿಲ್ಲದೆ ಹಣ ಸಾಗಾಟ ➤ ಆರೋಪಿ ಸಹಿತ 41.78 ಲಕ್ಷ ರೂ ವಶಕ್ಕೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಕಸ್ಮಿಕವಾಗಿ ವಿದ್ಯುತ್ ತಂತಿ ತುಳಿದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಸುರತ್ಕಲ್, ಜು. 05. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಕುಳಾಯಿಯಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಸ್ಥಳೀಯ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಮಂಗಳವಾರದಂದು ತಡರಾತ್ರಿ ಬೀಸಿದ ಭಾರೀ ಸುಂಟರಗಾಳಿಗೆ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಆದರೆ ಇದರ ಅರಿವಿಲ್ಲದೇ ಕೆಲಸಕ್ಕೆ ಹೋಗುತ್ತಿದ್ದ ಸಂತೋಷ್ ಆಕಸ್ಮಿಕವಾಗಿ ತಂತಿಯನ್ನು ತುಳಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಂಟರಗಾಳಿಗೆ ವಿವಿಧೆಡೆ ಮನೆಯ ಛಾವಣಿ ಶೀಟುಗಳು ಹಾರಿ ಹೋಗಿ ಹಾನಿ ಉಂಟಾಗಿದೆ.

ಆಕಸ್ಮಿಕವಾಗಿ ವಿದ್ಯುತ್ ತಂತಿ ತುಳಿದು ಯುವಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top