ಕ್ರೈಮ್ ನ್ಯೂಸ್

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಾರುಗಳ ನಡುವೆ ಢಿಕ್ಕಿ; ಮಾಜಿ ಯೋಧ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 17. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ’ನಲ್ಲಿ ಭೀಕರ ಅಪಘಾತ ಸಂಭವಿಸಿ ಮಾಜಿ ಸೈನಿಕ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಬಳಿಯ ಎಕ್ಸ್ ಪ್ರೆಸ್ ವೇಯಲ್ಲಿ ಭಾನುವಾರ ಮುಂಜಾವ ಸಂಭವಿಸಿದೆ. ಮೃತರನ್ನು ಆನೇಕಲ್ ಮೂಲದ ಮಾಜಿ ಸೈನಿಕ ಕಿಶೋರ್ ಬಾಬು (45) ಎಂದು ಗುರುತಿಸಲಾಗಿದೆ. ಆನೇಕಲ್‌ನಿಂದ ತಮಿಳುನಾಡಿಗೆ ಎಕ್ಸ್‌ಯುವಿ ಮಹೇಂದ್ರ ಕಾರಿನಲ್ಲಿ ಕಿಶೋರ್ ಹಾಗೂ ನಾಲ್ವರು ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ. […]

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಾರುಗಳ ನಡುವೆ ಢಿಕ್ಕಿ; ಮಾಜಿ ಯೋಧ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಗಾಂಜಾ ಸೇವನೆ- ಓರ್ವ ಅರೆಸ್ಟ್..!

(ನ್ಯೂಸ್ ಕಡಬ) newsmadaba.com ಉಪ್ಪಿನಂಗಡಿ, ಸೆ. 17. ಮಾದಕ ದ್ರವ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ 34ನೇ ನೆಕ್ಕಿಲಾಡಿಯ ಬಸ್‌ ತಂಗುದಾಣದ ಬಳಿ ನಡೆದಿದೆ. ಬಂಧಿತನನ್ನು ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ನಿವಾಸಿ ವೆಂಕಟೇಶ್‌ (32) ಎಂದು ಗುರುತಿಸಲಾಗಿದೆ. ಈತನ ಅನುಚಿತ ವರ್ತನೆಯ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ ಗಾಂಜಾ ಸೇವಿಸಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದ

ಉಪ್ಪಿನಂಗಡಿ: ಗಾಂಜಾ ಸೇವನೆ- ಓರ್ವ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಗಾಂಜಾ ಸಾಗಾಟ- ಆಟೋ ರಿಕ್ಷಾ ಸಹಿತ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ) newskadaba.com ವಿಟ್ಲ, ಸೆ. 17. ಆಟೋ ರಿಕ್ಷಾವೊಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ವಿಟ್ಲ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡ ಘಟನೆ ವರದಿಯಾಗಿದೆ. ಬಂಧಿತನನ್ನು ಸುಳ್ಯ ನಿವಾಸಿ ಕಲಂದರ್ ಶಾ (36) ಎಂದು ಗುರುತಿಸಲಾಗಿದೆ. ಕಲ್ಲಡ್ಕ- ಸಾರಡ್ಕ ರಸ್ತೆಯ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ಅಟೋರಿಕ್ಷಾದಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಯಿಂದ ಆಟೋ ರಿಕ್ಷಾ, ಸಾಗಿಸುತ್ತಿದ್ದ  6.110 ಕೆ.ಜಿ ತೂಕದ ಗಾಂಜಾ, ಎರಡು ಮೊಬೈಲ್

ಗಾಂಜಾ ಸಾಗಾಟ- ಆಟೋ ರಿಕ್ಷಾ ಸಹಿತ ಆರೋಪಿ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಮುಖ್ಯಶಿಕ್ಷಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ. 17. ಶಾಲೆಯ ಮುಖ್ಯ ಶಿಕ್ಷಕನೋರ್ವ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ನಡೆದಿದೆ. ಬಂಧಿತನನ್ನು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವರಾಂ ಎಂದು ಗುರುತಿಸಲಾಗಿದೆ.  ಈತ ಶಾಲೆಯಲ್ಲಿ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸುತ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ವಿದ್ಯಾರ್ಥಿನಿಯರು ಪೋಷಕರ ಬಳಿ ಹೇಳಿಕೊಂಡಿದ್ದರು. ವಿಷಯ ತಿಳಿದ ಪೋಷಕರು ಸಂಘಟನೆಗಳ ಸಹಕಾರದೊಂದಿಗೆ ಮದ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಮುಖ್ಯಶಿಕ್ಷಕ ಶಿವರಾಂನನ್ನು

ಮುಖ್ಯಶಿಕ್ಷಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೆದ್ದಾರಿ ಮಧ್ಯೆ ಉರುಳಿಬಿದ್ದ ಫ್ಲೈವುಡ್ ಸಾಗಾಟದ ಲಾರಿ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಸೆ. 17. ಪ್ಲೈವುಡ್ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಉರುಳಿಬಿದ್ದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹೊರಟ್ಟಿಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಇಂದು ಮುಂಜಾನೆ ನಡೆದಿರುವ ಕುರಿತು ವರದಿಯಾಗಿದೆ.   ಘಟನೆಯಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆಯಿಂದ ಪ್ಲೈವುಡ್ ಹೇರಿಕೊಂಡು ಮಹಾರಾಷ್ಟ್ರದ ಕಡೆಗೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯದಲ್ಲೇ ಉರುಳಿಬಿದ್ದಿದೆ. ಘಟನಾ

ಹೆದ್ದಾರಿ ಮಧ್ಯೆ ಉರುಳಿಬಿದ್ದ ಫ್ಲೈವುಡ್ ಸಾಗಾಟದ ಲಾರಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿಮಾನ ಪತನ- ಪ್ರವಾಣಿ ತಾಣಕ್ಕೆ ತೆರಳಿದ್ದ 14 ಮಂದಿ ದುರ್ಮರಣ

(ನ್ಯೂಸ್ ಕಡಬ) newskadaba.com ಬ್ರೆಜಿಲ್, ಸೆ. 17. ವಿಮಾನ ಪತನವಾಗಿ ಇಬ್ಬರು ಸಿಬ್ಬಂದಿಗಳು ಸೇರಿದಂತೆ ಒಟ್ಟು 14 ಮಂದಿ ಮೃತಪಟ್ಟಿರುವ ಘಟನೆ ಬ್ರೆಜಿಲ್‌ನ ಉತ್ತರ ಅಮೆಜಾನ್ ರಾಜ್ಯದ ರಾಜಧಾನಿ ಮನೌಸ್‌ನಿಂದ ಸುಮಾರು 400 ಕಿ.ಮೀ (248 ಮೈಲುಗಳು) ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ಸಂಭವಿಸಿದ ಕುರಿತು ಪತ್ರಿಕೆಯೊಂದು ವರದಿ ಮಾಡಿದೆ. ರನ್‌ ವೇಯಿಂದ ಹೊರಟ ವಿಮಾನ ಮಳೆಯ ಕಾರಣದಿಂದ ಮಾರ್ಗ ಸರಿಯಾಗಿ ಗೋಚರಿಸದೇ ಇದ್ದಾಗ ಲ್ಯಾಂಡ್‌ ಆಗಲು ಪ್ರಯತ್ನಿಸಿದೆ. ಆದರೆ ಈ ವೇಳೆ ನಿಯಂತ್ರಣ ಕಳೆದುಕೊಂಡ ವಿಮಾನ ಅರಣ್ಯ

ವಿಮಾನ ಪತನ- ಪ್ರವಾಣಿ ತಾಣಕ್ಕೆ ತೆರಳಿದ್ದ 14 ಮಂದಿ ದುರ್ಮರಣ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ನಿಷೇಧಿತ ಎಂಡಿಎಂಎ ಮಾರಾಟಕ್ಕೆ ಯತ್ನ- ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಉಳ್ಳಾಲ, ಸೆ. 17. ನಿಷೇಧಿತ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ತಲಪಾಡಿ ತಚ್ಚಾಣಿ ಬಳಿ ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಗಳನ್ನು ತ್ರಿಶ್ಶೂರ್‌ನ ವಡಕಂಚೇರಿ ಗ್ರಾಮದ ಶೇಕ್‌ ತನ್ವೀರ್‌ (20) ಹಾಗೂ ಕೋಝಿಕ್ಕೋಡ್‌ ಅಂಜೇರಿ ವಡಗೆರೆ ನಿವಾಸಿ ಸಾಯಿಕೃಷ್ಣ (19) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎಂಡಿಎಂಎ ಹಾಗೂ ಸಾಗಾಟಕ್ಕೆ ಬಳಸಿದ್ದ ಬೈಕ್‌ ಮತ್ತು ಮೊಬೈಲ್‌ಗ‌ಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಎನ್‌ಡಿಪಿಎಸ್‌

ನಿಷೇಧಿತ ಎಂಡಿಎಂಎ ಮಾರಾಟಕ್ಕೆ ಯತ್ನ- ಇಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕರ್ತವ್ಯದ ವೇಳೆ ಹೃದಯಾಘಾತ – ಮಂಗಳೂರು ಗುಪ್ತಚರ ಇಲಾಖಾ ಸಿಬ್ಬಂದಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 16. ಕರ್ತವ್ಯದಲ್ಲಿರುವಾಗಲೇ ಗುಪ್ತಚರ ಇಲಾಖಾ ಸಿಬ್ಬಂದಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉರ್ವ ಗುಪ್ತಚರ ಇಲಾಖಾ ಕಚೇರಿಯಲ್ಲಿ ಶನಿವಾರದಂದು ನಡೆದಿದೆ. ಮೃತರನ್ನು ಉರ್ವ ಮಾರಿಗುಡಿ ನಿವಾಸಿ ರಾಜೇಶ್ ಬಿ.ಯು(45) ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನದ ವೇಳೆ ಗುಪ್ತಚರ ಇಲಾಖಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ರೆಸ್ಟ್ ರೂಮಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಂತೆ ಕುಸಿದುಬಿದ್ದಿದ್ದಾರೆ ಎನ್ನಲಾಗಿದೆ. 1993 ನೇ ಬ್ಯಾಚ್ ನವರಾಗಿರುವ ರಾಜೇಶ್, ಸುರತ್ಕಲ್ ಹಾಗೂ ಪಣಂಬೂರು

ಕರ್ತವ್ಯದ ವೇಳೆ ಹೃದಯಾಘಾತ – ಮಂಗಳೂರು ಗುಪ್ತಚರ ಇಲಾಖಾ ಸಿಬ್ಬಂದಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಭೀಕರ ಅಪಘಾತ- ತಾಯಿ ಮಗ ಮೃತ್ಯು..! ತಂದೆ- ಮಗಳು ಗಂಭೀರ

(ನ್ಯೂಸ್ ಕಡಬ) newskadaba.com ಕುಣಿಗಲ್, ಸೆ. 16. ಲಾರಿಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75 ತಾಲೂಕಿನ ಹೇರೂರು ಸೇತುವೆ ಬಳಿ ಶುಕ್ರವಾರದಂದು ರಾತ್ರಿ ನಡೆದಿದೆ. ಮೃತಪಟ್ಟವರನ್ನು ನಾಗಮಂಗಲ ತಾಲೂಕು ಸೀಗೇಹಳ್ಳಿ ಗ್ರಾಮ ಹಾಲಿ ಬೆಂಗಳೂರು ಮಾದನಾಯಕಹಳ್ಳಿ ನಿವಾಸಿ ಶೋಭಾ ಮತ್ತು ಮಗ ನಿಖಿಲ್ ಗೌಡ(12) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಪತಿ ಗಂಗೇಶ್ ಹಾಗೂ ಮಗಳು ಭುವನ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭೀಕರ ಅಪಘಾತ- ತಾಯಿ ಮಗ ಮೃತ್ಯು..! ತಂದೆ- ಮಗಳು ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪೂಜೆಗೆ ತೆರಳಿದ್ದ ವೈದ್ಯ ನದಿಯಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ) newskadaba.com ಹಾಸನ, ಸೆ. 16. ಪೂಜೆಗೆ ತೆರಳಿದ್ದ ವೈದ್ಯರೊಬ್ಬರು ಹೇಮಾವತಿ ನದಿಯ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಖೋನಾಪುರದಲ್ಲಿ ನಡೆದಿದೆ. ಮೃತರನ್ನು ಡಾ.ಚಂದ್ರಶೇಖರ್ (31) ಎಂದು ಗುರುತಿಸಲಾಗಿದೆ. ಹೊಳೆನರಸೀಪುರದ ಕೆರಗೋಡಿನಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ಅವರು ಕರ್ತವ್ಯಕ್ಕೆ ತೆರಳುವ ಮುನ್ನ ಖೋನಾಪುರದ ಐಲ್ಯಾಂಡ್‍ನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದು, ಈ ವೇಳೆ  ದುರ್ಘಟನೆ ಸಂಭವಿಸಿದೆ.

ಪೂಜೆಗೆ ತೆರಳಿದ್ದ ವೈದ್ಯ ನದಿಯಲ್ಲಿ ಮುಳುಗಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top