ಕ್ರೈಮ್ ನ್ಯೂಸ್

ಸಿಲಿಂಡರ್ ಸ್ಫೋಟ- 8 ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 8 ಮನೆಗಳು ಹಾನಿಯಾಗಿರುವ ಘಟನೆ ಚಾಮರಾಜಪೇಟೆಯ ಅನಂತಪುರದ ಬಳಿ ನಡೆದಿದೆ. ಸಿಲಿಂಡರ್‌ ಸ್ಫೋಟದ ತೀವ್ರತೆಗೆ 8 ಶೀಟ್ ಮನೆಗಳು ಹಾನಿಗೊಳಗಾಗಿದ್ದು, ಈ ವೇಳೆ ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಸಿಲಿಂಡರ್ ಸ್ಫೋಟ- 8 ಮನೆಗಳಿಗೆ ಹಾನಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ದಕ್ಷಿಣ ಕನ್ನಡ: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 18. ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಔಷಧಿಗೆಂದು ಆಸ್ಪತ್ರೆಗೆ ಬಂದಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಬಿಜೆಪಿ ಸಕ್ರಿಯ ಯುವ ಕಾರ್ಯಕರ್ತ ಪ್ರಕಾಶ್ ಬೆಳ್ಳೂರು (43) ಎಮದು ಗುರುತಿಸಲಾಗಿದೆ. ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್, ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಔಷಧಿಗೆಂದು‌ ಬೆಳಿಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಂದಿದ್ದು, ಈ ವೇಳೆ ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು

ದಕ್ಷಿಣ ಕನ್ನಡ: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿದ್ಯುತ್ ತಂತಿ ಸ್ಪರ್ಶ- 10ರ ಬಾಲಕನ ದುರಂತ ಅಂತ್ಯ..!

(ನ್ಯೂಸ್ ಕಡಬ) newskadaba.com ತುಮಕೂರು, ಸೆ. 18. ಆಟವಾಡುತ್ತಿದ್ದ ವೇಳೆ ವಿದ್ಯುತ್‌ ತಂತಿ ಸ್ಪರ್ಶಿಸಿ ಬಾಲಕನೋರ್ವ ಮೃತಪಟ್ಟ ಘಟನೆ ಕುಣಿಗಲ್ ಪಟ್ಟಣದಲ್ಲಿ ವರದಿಯಾಗಿದೆ. ಮೃತ ಬಾಲಕನನ್ನು ಋತ್ವಿಕ್‌ (10) ಎಂದು ಗುರುತಿಸಲಾಗಿದೆ.ರವಿವಾರದಂದು ಮನೆ ಸಮೀಪದ ನಿವೇಶನ ಒಂದರಲ್ಲಿ ಆಟವಾಡುತ್ತಿದ್ದ ಋತ್ವಿಕ್ ಸಮೀಪದಲ್ಲಿದ್ದ ವಿದ್ಯುತ್ ತಂತಿಯನ್ನು ಮೆಟ್ಟಿದ್ದ. ಆಗ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿದ್ಯುತ್ ತಂತಿ ಸ್ಪರ್ಶ- 10ರ ಬಾಲಕನ ದುರಂತ ಅಂತ್ಯ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಎಗ್ ರೈಸ್ ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಮುಗಿಸಿದ ಭೂಪ..!

(ನ್ಯೂಸ್ ಕಡಬ) newskadaba.com ಬಾಗಲಕೋಟೆ, ಸೆ. 18. ಎಗ್‌ರೈಸ್‌ ಹಾಗೂ ಚಿಕನ್ ಕಬಾಬ್ ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಯುವಕನೋರ್ವ ಚಾಕುವಿನಿಂದ ಇರಿದು ಹತ್ಯೆಗೈದಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ನಡೆದಿದೆ. ಹತ್ಯೆಯಾದವನನ್ನು ಗೈಬುಸಾಬ್ ಮುಲ್ಲಾ (34) ಎಂದು ಗುರುತಿಸಲಾಗಿದೆ. ಮುಸ್ತಾಕ್ ಜಂಗಿ  (20) ಕೊಲೆ ಆರೋಪಿ. ಕೃತ್ಯ ನಡೆಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಅಮೀನಗಡ ಬಸ್ ನಿಲ್ದಾಣದ ಬಳಿ ಎಗ್‌ರೈಸ್‌ ಅಂಗಡಿ ಇಟ್ಟುಕೊಂಡಿದ್ದ ಗೈಬುಸಾಬ್

ಎಗ್ ರೈಸ್ ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಮುಗಿಸಿದ ಭೂಪ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿದೇಶದಿಂದ ಅಕ್ರಮವಾಗಿ ಇ-ಸಿಗರೇಟ್ ಸಾಗಾಟ – ಇಬ್ಬರನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ದೇವನಹಳ್ಳಿ, ಸೆ. 18. ವಿದೇಶದಿಂದ ಅಕ್ರಮವಾಗಿ ಇ-ಸಿಗರೇಟ್​ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​ ಅಧಿಕಾರಿಗಳು, ಪ್ರಯಾಣಿಕರಿಂದ ಇ-ಸಿಗರೇಟ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ನಡೆಸಿದ ಏರ್​ಪೋರ್ಟ್​ನ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಲೇಶಿಯಾದ ಕೌಲಾಂಪುರದಿಂದ ಎಂಎಚ್ 192ನ ಮಲೇಶಿಯಾ ಏರ್​ಲೈನ್ಸ್​ನಲ್ಲಿ ಆಗಮಿಸಿದ್ದ ಇಬ್ಬರು ಪ್ರಯಾಣಿಕರಿಂದ ಬರೋಬ್ಬರಿ 15.9 ಲಕ್ಷ ರೂ. ಮೌಲ್ಯದ 1,590 ಸಿಗರೇಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿರುವ ಅಧಿಕಾರಿಗಳು, ಹೆಚ್ಚಿನ ತನಿಖೆ

ವಿದೇಶದಿಂದ ಅಕ್ರಮವಾಗಿ ಇ-ಸಿಗರೇಟ್ ಸಾಗಾಟ – ಇಬ್ಬರನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆರ್ಮಿ ಆಫೀಸರ್ ಹೆಸರಿನಲ್ಲಿ ಗ್ಯಾಸ್ ಏಜೆನ್ಸಿಗೆ ವಂಚನೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ಕಾರ್ಕಳ, ಸೆ. 18. ಆರ್ಮಿ ಕ್ಯಾಂಪಿಗೆ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವ ಹೆಸರಿನಲ್ಲಿ ಗ್ಯಾಸ್ ಏಜೆನ್ಸಿಗೆ ಸಾವಿರಾರು ರೂಪಾಯಿ ವಂಚನೆ ಎಸಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ತೆಳ್ಳಾರು ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಯದರ್ಶಿನಿ ಗ್ಯಾಸ್ ಏಜೆನ್ಸಿ ಮಾಲಕ ಕೃಷ್ಣಮೂರ್ತಿ ಎಂಬವರಿಗೆ ಸೆ. 9ರಂದು ಅಪರಿಚಿತನೋರ್ವ ಕರೆ ಮಾಡಿ, ನಾನು ಇಂಡಿಯರ್ ಆರ್ಮಿಯ ಆಫೀಸರ್. ನಾವು ಕಾರ್ಕಳದ ಶಾಲೆಯೊಂದರಲ್ಲಿ ಆರ್ಮಿ ಕ್ಯಾಂಪ್ ಮಾಡಿದ್ದು ಈ ಕ್ಯಾಂಪ್‌ಗೆ 4 ಗ್ಯಾಸ್

ಆರ್ಮಿ ಆಫೀಸರ್ ಹೆಸರಿನಲ್ಲಿ ಗ್ಯಾಸ್ ಏಜೆನ್ಸಿಗೆ ವಂಚನೆ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಮುಲ್ಕಿ, ಸೆ. 18. ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಚೂರಿ ತೋರಿಸಿ ಕರಿಮಣಿ ಸರ ಎಳೆದು ಪರಾರಿಯಾದ ಘಟನೆ ಕೊಲ್ನಾಡು ಎಂಬಲ್ಲಿ ರವಿವಾರದಂದು ನಡೆದಿದೆ.   ಕೊಲ್ನಾಡು ನಿವಾಸಿ ಸದಾಶಿವ ಶೆಟ್ಟಿ ಹಾಗೂ ಪತ್ನಿ ವಸಂತಿ ಶೆಟ್ಟಿ ಕೆಲಸದ ನಿಮಿತ್ತ ಹಳೆಯಂಗಡಿಗೆ ಹೋಗಿದ್ದವರು ವಾಪಸ್ ಬರುವಾಗ ಪತ್ನಿಯನ್ನು ಆಟೋದಲ್ಲಿ ಮನೆಗೆ ಕಳುಹಿಸಿದ್ದರು. ಅದರಂತೆ ವಸಂತಿ ಶೆಟ್ಟಿ ಮನೆಗೆ ಬಂದ ವೇಳೆ ಓರ್ವ ಬಂದು ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ, ಪೆಟ್ರೋಲ್ ತುಂಬಿಸಲು ಬಾಟಲಿ

ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾದ ದುಷ್ಕರ್ಮಿಗಳು Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಬೈಕ್ ಕಳ್ಳತನ- ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 18. ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತ ಆರೋಪಿಯನ್ನು ಕೊಡಗು ಸೋಮವಾರಪೇಟೆಯ ಬಸವನಹಳ್ಳಿಯ ಸುಬ್ರಮಣಿ (26) ಎಂದು ಗುರುತಿಸಲಾಗಿದೆ. ಸೆ. 16ರಂದು ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಿದ ಸುಳ್ಯ ಪೊಲೀಸರ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಸುಳ್ಯ ತಾಲೂಕು ಆಲಟ್ಟಿ ಗ್ರಾಮದ ಸರಳಿಕುಂಜ ಎಂಬಲ್ಲಿ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದು

ಸುಳ್ಯ: ಬೈಕ್ ಕಳ್ಳತನ- ಆರೋಪಿ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಏರ್ ಶೋ ನಲ್ಲಿ ವಿಮಾನಗಳ ನಡುವೆ ಢಿಕ್ಕಿ – ಪೈಲಟ್ ಗಳಿಬ್ಬರು ದುರಂತ ಅಂತ್ಯ..!

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್​, ಸೆ. 18. ಏರ್ ಶೋನಲ್ಲಿ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಪೈಲಟ್​ಗಳು ಮೃತಪಟ್ಟ ಘಟನೆ ಯುಎಸ್​​ನ ನೆವಡ ಪ್ರದೇಶದ ರೆನೊದಲ್ಲಿ ನಡೆದ ನ್ಯಾಷನಲ್​ ಚಾಂಪಿಯನ್​ಷಿಪ್​ ಏರ್​ ರೇಸಸ್ ಆಯಂಡ್​ ಏರ್​ ಶೋನಲ್ಲಿ ಸಂಭವಿಸಿದೆ. ಮೃತ ಪೈಲಟ್​ಗಳನ್ನು ಮ್ಯಾಸಿ ಹಾಗೂ ಕ್ರಿಶ್ ರಷಿಂಗ್ ಎಂದು ಗುರುತಿಸಲಾಗಿದೆ. ಭಾನುವಾರದಂದು ನಡೆದ ಟಿ-6 ಗೋಲ್ಡ್ ರೇಸ್​ನ ಅಂತಿಮ ಹಂತದಲ್ಲಿ ಲ್ಯಾಂಡ್ ಆಗುವ ಸಮಯದಲ್ಲಿ ಸುಮಾರು 2.15ರ ಹೊತ್ತಿಗೆ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ.

ಏರ್ ಶೋ ನಲ್ಲಿ ವಿಮಾನಗಳ ನಡುವೆ ಢಿಕ್ಕಿ – ಪೈಲಟ್ ಗಳಿಬ್ಬರು ದುರಂತ ಅಂತ್ಯ..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಭೀಕರ ರಸ್ತೆ ಅಪಘಾತ – ಡಿವೈಡರ್ ಗೆ ಕಾರು ಢಿಕ್ಕಿಯಾಗಿ ಮೂವರ ದುರ್ಮರಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 18. ಗಣೇಶ ಹಬ್ಬದ ದಿನವೇ ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯ ನಾಲ್ಕರಲ್ಲಿ ನಡೆದಿದೆ. ಸ್ವಿಫ್ಟ್ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರ ಪೈಕಿ ಮೂವರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೀಕರ ರಸ್ತೆ ಅಪಘಾತ – ಡಿವೈಡರ್ ಗೆ ಕಾರು ಢಿಕ್ಕಿಯಾಗಿ ಮೂವರ ದುರ್ಮರಣ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top