ಬ್ರೇಕಿಂಗ್ ನ್ಯೂಸ್

ಕಾರವಾರ ನದಿ ದುರಂತ -ಸಾವಿನ ಸಂಖ್ಯೆ 11ಕ್ಕೆ ಏರಿಕೆ

(ನ್ಯೂಸ್‌ ಕಡಬ) newskadaba.com,  ಮೇ.25: ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಭಾನುವಾರ 10 ಜನರ ಮೃತದೇಹ ಪತ್ತೆಯಾಗಿದ್ದವು, ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನ ಮಾದೇವ್ ನಾಯ್ಕ್ ಎಂದು ಗುರುತಿಸಲಾಗಿದೆ. ನದಿಯಲ್ಲಿ ನಾಪತ್ತೆಯಾಗಿದ್ದವರಿಗಾಗಿ ಇಂದು ಬೆಳಿಗ್ಗೆ 8 ಗಂಟೆಯಿಂದ ಎನ್‌ಡಿಆರ್‌ಎಫ್ ತಂಡ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕಾಣೆಯಾಗಿದ್ದ ಮಾದೇವ್ ನಾಯ್ಕ್ ಅವರ ಮೃತದೇಹ ತಟ್ಟೆಹಕ್ಕಲು ನದಿಯ ಅಳವೆಯಲ್ಲಿ ಪತ್ತೆಯಾಗಿದೆ. ನದಿಯ ನೀರಿನಲ್ಲಿ ಕಾಣೆಯಾಗಿದ್ದ ಶವಗಳನ್ನು […]

ಕಾರವಾರ ನದಿ ದುರಂತ -ಸಾವಿನ ಸಂಖ್ಯೆ 11ಕ್ಕೆ ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಾಫರ್ ಎಕ್ಸ್‌ ಪ್ರೆಸ್ ರೈಲು ಗುರಿಯಾಗಿಸಿ ಆತ್ಮಾಹುತಿ ಬಾಂಬ್ ದಾಳಿ; ಪಾಕ್‌ ಸೈನಿಕರು ಸೇರಿ 24 ಮಂದಿ ಮೃತ್ಯು

(ನ್ಯೂಸ್‌ ಕಡಬ) newskadaba.com,  ಮೇ.24 ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿದ್ದು, ಮಿಲಿಟರಿ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ಬಾಂಬ್‌ ಸ್ಫೋಟ ನಡೆಸಲಾಗಿದೆ. ಘಟನೆಯಲ್ಲಿ 24 ಜನರು ಸಾವನ್ನಪ್ಪಿದ್ದು, ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಬಲೂಚ್ ಲಿಬರೇಶನ್ ಆರ್ಮಿ (BLA) ಗೆ ಸೇರಿದ ‘ಮಜೀದ್ ಬ್ರಿಗೇಡ್’ನ ಆತ್ಮಹತ್ಯಾ ಬಾಂಬರ್ ಈ ಸ್ಫೋಟವನ್ನು ನಡೆಸಿದ್ದಾನೆ. ಅತ್ಯಂತ ಶಕ್ತಿಶಾಲಿಯಾಗಿದ್ದ ಈ ಬಾಂಬ್ ಸ್ಫೋಟದ ತೀವ್ರತೆಗೆ ರೈಲಿನ ಒಂದು ಬೋಗಿ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಸೇನಾ

ಜಾಫರ್ ಎಕ್ಸ್‌ ಪ್ರೆಸ್ ರೈಲು ಗುರಿಯಾಗಿಸಿ ಆತ್ಮಾಹುತಿ ಬಾಂಬ್ ದಾಳಿ; ಪಾಕ್‌ ಸೈನಿಕರು ಸೇರಿ 24 ಮಂದಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕರಾವಳಿಯ ಕನಸಿನ ರೈಲು ವಂದೇ ಭಾರತ್ ಸಂಚಾರ ಜೂನ್‌ನಿಂದ ಅಧಿಕೃತ ಆರಂಭ: ಸಚಿವ ವಿ ಸೋಮಣ್ಣ

(ನ್ಯೂಸ್‌ ಕಡಬ) newskadaba.com,  ಮೇ.24: ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಿವಾಸಿಗಳ ಬಹುದಿನಗಳ ಕನಸಾಗಿದ್ದ ಮಂಗಳೂರು-ಬೆಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವು ಮುಂಬರುವ ಜೂನ್‌ ತಿಂಗಳಿನಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಹೊಸ ರೈಲು ಸಂಚಾರಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಹೇಳಿದರು. ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಬೆಂಗಳೂರು-ಕಾರವಾರ ವಂದೇ ಭಾರತ್‌

ಕರಾವಳಿಯ ಕನಸಿನ ರೈಲು ವಂದೇ ಭಾರತ್ ಸಂಚಾರ ಜೂನ್‌ನಿಂದ ಅಧಿಕೃತ ಆರಂಭ: ಸಚಿವ ವಿ ಸೋಮಣ್ಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊಂಕಣಿ ನಾಟಕ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ಚಿಕ್ಕಮಗಳೂರಿನಲ್ಲಿ ‘ಮ್ಹಾತಾರೊ ಚರ್ಬೆಲಾ’ 100ನೇ ಪ್ರದರ್ಶನ

(ನ್ಯೂಸ್‌ ಕಡಬ) newskadaba.com,  ಮೇ.24:  ನಾಟಕಗಳು ಜೀವನಕ್ಕೆ ಪಾಠವಾಗಿದೆ. ಆದ್ದರಿಂದ ರಂಗಾಸಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಈ ನೂರರ ಸಂಭ್ರಮ ಒಂದು ದಾಖಲೆಯಾಗಿದ್ದು ಇದು ಇತಿಹಾಸದ ಪುಟ ಸೇರಲಿ. ಇಂತಹ ಮಹಾನ್ ಕಲಾವಿದರಿಗೆ ಹೆಚ್ಚಿನ ಆಯುಷ್ಯ ಪ್ರಾಪ್ತಿಯಾಗಬೇಕು. ಕಲಾವಿದರ ಮುನ್ನಡೆಗೆ ಸಾಂಘಿಕವಾಗಿ ಬಲ ತುಂಬುವ ಕೆಲಸ ಕಲಾಭಿಮಾನಿಗಳಿಂದ ಆಗಬೇಕು. ಈ ಮೂಲಕ ನಾಟಕಗಳ ಒಲವು ಹೆಚ್ಚುವುದು ಮತ್ತು ಕಲಾವಿದರ ಬಲವರ್ಧನೆ ಸಾಧ್ಯವಾಗುವುದು ಎಂದು ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾಲ್ವರ್ ನಂದಳಿಕೆ ತಿಳಿಸಿದರು. ಕಾಥೋಲಿಕ್

ಕೊಂಕಣಿ ನಾಟಕ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ಚಿಕ್ಕಮಗಳೂರಿನಲ್ಲಿ ‘ಮ್ಹಾತಾರೊ ಚರ್ಬೆಲಾ’ 100ನೇ ಪ್ರದರ್ಶನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೆಬ್ರಿ: ರಸ್ತೆಗೆ ಉರುಳಿದ ಮರ; ಆಗುಂಬೆ ಘಾಟಿಯಲ್ಲಿ ಸಂಚಾರ ಸ್ಥಗಿತ

(ನ್ಯೂಸ್‌ ಕಡಬ) newskadaba.com,  ಮೇ.24: ಕರಾವಳಿ ಮತ್ತು ಮಲೆನಾಡು ಭಾಗವನ್ನು ಸಂಪರ್ಕಿಸುವ ಆಗುಂಬೆ ಘಾಟಿಯ ಉಡುಪಿ ಜಿಲ್ಲಾ ವ್ಯಾಪ್ತಿಯ ಎರಡನೇ ತಿರುವಿನ ಬಳಿ ಶನಿವಾರ ಸಂಜೆ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ಘಟನೆಯಿಂದಾಗಿ ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ತತ್ತರಿಸಿದ್ದ ಘಾಟಿ ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತಷ್ಟು ತೀವ್ರಗೊಂಡಿತು. ಇತ್ತೀಚಿನ ದಿನಗಳಲ್ಲಿ ಈ ಭಾಗಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು,

ಹೆಬ್ರಿ: ರಸ್ತೆಗೆ ಉರುಳಿದ ಮರ; ಆಗುಂಬೆ ಘಾಟಿಯಲ್ಲಿ ಸಂಚಾರ ಸ್ಥಗಿತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಬಸ್ ನಿರ್ವಹಣಾ ವೆಚ್ಚ ಭಾರಿ ಏರಿಕೆ ಒಂದು ತಿಂಗಳ ಬಳಿಕ ದರ ಪರಿಷ್ಕರಣೆಗೆ ದ.ಕ. ಖಾಸಗಿ ಬಸ್ ಮಾಲೀಕರ ಸಂಘ ಚಿಂತನೆ

(ನ್ಯೂಸ್‌ ಕಡಬ) newskadaba.com,  ಮೇ.24: ಡೀಸೆಲ್ ಬೆಲೆ ಏರಿಕೆ, ಬಿಡಿಭಾಗಗಳ ಹೆಚ್ಚಿದ ವೆಚ್ಚ, ತೆರಿಗೆ ಮತ್ತು ವಿಮಾ ಪ್ರೀಮಿಯಂ ಹೆಚ್ಚಾಗಿರುವುದರಿಂದ ಖಾಸಗಿ ಬಸ್ ಸೇವೆಗಳ ದರ ಪರಿಷ್ಕರಣೆ ಅನಿವಾರ್ಯವಾಗಿದೆ. ಆದರೆ, ತಕ್ಷಣವೇ ದರ ಏರಿಕೆ ಮಾಡದೆ, ಮುಂದಿನ ಒಂದು ತಿಂಗಳ ಕಾಲ ವೆಚ್ಚಗಳ ಏರಿಳಿತವನ್ನು ಸೂಕ್ಷ್ಮವಾಗಿ ಗಮನಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘ ತಿಳಿಸಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ, ಕಳೆದ ಐದು ವರ್ಷಗಳಿಂದ

ಮಂಗಳೂರು: ಬಸ್ ನಿರ್ವಹಣಾ ವೆಚ್ಚ ಭಾರಿ ಏರಿಕೆ ಒಂದು ತಿಂಗಳ ಬಳಿಕ ದರ ಪರಿಷ್ಕರಣೆಗೆ ದ.ಕ. ಖಾಸಗಿ ಬಸ್ ಮಾಲೀಕರ ಸಂಘ ಚಿಂತನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿಗೆ ಡಿಜಿಟಲ್ ಪರಿಶೀಲನೆ ವ್ಯವಸ್ಥೆ

(ನ್ಯೂಸ್‌ ಕಡಬ) newskadaba.com,  ಮೇ.23”   ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಅಂಕಪಟ್ಟಿ ಹಾಗೂ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಇಲಾಖೆ ಡಿಜಿಟಲ್ ಮಾರ್ಕ್ಸ್‌ವಣ್ ಪತ್ರ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಸೇರಿದಂತೆ ವಿವಿಧ ತರಗತಿಗಳ ಅಂಕಪಟ್ಟಿಗಳಿಗೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತಿದ್ದು, ಇದರಿಂದ ದಾಖಲೆಗಳ ಅಸಲಿತನವನ್ನು ತಕ್ಷಣವೇ ಪರಿಶೀಲಿಸಬಹುದಾಗಿದೆ. ನಕಲಿ ಅಂಕಪಟ್ಟಿ ತಡೆಗಟ್ಟುವ ಜೊತೆಗೆ ವಿದ್ಯಾರ್ಥಿಗಳಿಗೆ ಸುರಕ್ಷಿತ ಡಿಜಿಟಲ್ ದಾಖಲೆ ವ್ಯವಸ್ಥೆ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.. ಇದೇ ವೇಳೆ, ವಿದ್ಯಾರ್ಥಿಗಳ ದಾಖಲೆಗಳನ್ನು

ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿಗೆ ಡಿಜಿಟಲ್ ಪರಿಶೀಲನೆ ವ್ಯವಸ್ಥೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಕ್ರೋಚ್ ಜನತಾ ಪಾರ್ಟಿಯ ನಿಷೇಧದ ಹಿಂದಿನ ಅಸಲಿ ಕಾರಣ ಬಯಲು : ಐಬಿ ಕೊಟ್ಟ ಎಚ್ಚರಿಕೆ ಏನು| ಕೇಂದ್ರ ಸರ್ಕಾರಕ್ಕೆ ಜಿರಳೆಗಳದ್ದೇ ಚಿಂತೆ : ಗುಪ್ತಚರ ಇಲಾಖೆಯ ರಹಸ್ಯ ರಿಪೋರ್ಟ್’ನಲ್ಲಿ ಏನೇನು ಅಂಶವಿದೆ?

(ನ್ಯೂಸ್‌ ಕಡಬ) newskadaba.com,  ಮೇ.23”   ಕಾಕ್ರೋಚ್ ಜನತಾ ಪಾರ್ಟಿ, ಸಾಮಾಜಿಕ ಜಾಲತಾಣದಲ್ಲಿನ ತನ್ನ ಓಟವನ್ನು ಮುಂದುವರಿಸಿದೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನ್ಯಾ. ಸೂರ್ಯಕಾಂತ್, ’ವ್ಯವಸ್ಥೆಯ ಮೇಲೆ ದಾಳಿ ಮಾಡುವವರನ್ನು ಉದ್ದೇಶಿಸಿ ಆಡಿದ್ದ ಜಿರಳೆಗಳು ಎಂಬ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ, ಸಿಜೆಪಿಯ ಸಾಮಾಜಿಕ ಅಭಿಯಾನ ಆರಂಭವಾಗಿತ್ತು. ವ್ಯಂಗ್ಯಾತ್ಮಕ ಎಕ್ಸ್ (ಟ್ವಿಟ್ಟರ್) ಖಾತೆಯನ್ನು ತಕ್ಷಣದಿಂದಲೇ ನಿರ್ಬಂಧಿಸುವಂತೆ, ಕೇಂದ್ರ ಸರ್ಕಾರ ಮೆಟಾ ಸಂಸ್ಥೆಗೆ ಸೂಚಿಸಿತ್ತು. ಇದರ ಬೆನ್ನಲ್ಲೇ, ಗುಪ್ತಚರ ಇಲಾಖೆಯು ಕೆಲವೊಂದು ಎಚ್ಚರಿಕೆಯನ್ನು ನೀಡಿದೆ ಎಂದು ವರದಿಯಾಗಿದೆ. ಐಬಿ ನೀಡಿದ ಎಚ್ಚರಿಕೆಯ ಹಿನ್ನಲೆಯಲ್ಲಿ

ಕಾಕ್ರೋಚ್ ಜನತಾ ಪಾರ್ಟಿಯ ನಿಷೇಧದ ಹಿಂದಿನ ಅಸಲಿ ಕಾರಣ ಬಯಲು : ಐಬಿ ಕೊಟ್ಟ ಎಚ್ಚರಿಕೆ ಏನು| ಕೇಂದ್ರ ಸರ್ಕಾರಕ್ಕೆ ಜಿರಳೆಗಳದ್ದೇ ಚಿಂತೆ : ಗುಪ್ತಚರ ಇಲಾಖೆಯ ರಹಸ್ಯ ರಿಪೋರ್ಟ್’ನಲ್ಲಿ ಏನೇನು ಅಂಶವಿದೆ? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

‘ನೀತಿ ಸಂಹಿತೆ’ ಉಲ್ಲಂಘನೆ – ಹಾರ್ದಿಕ್ ಪಾಂಡ್ಯಗೆ ಕಠಿಣ ಶಿಕ್ಷೆ ವಿಧಿಸಿದ ಬಿಸಿಸಿಐ

(ನ್ಯೂಸ್‌ ಕಡಬ) newskadaba.com,  ಮೇ.23: ಐಪಿಎಲ್ 2026ರಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಬಿಸಿಸಿಐ ಕಠಿಣ ಶಿಕ್ಷೆ ವಿಧಿಸಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪಂದ್ಯ ಶುಲ್ಕದ 10 ಶತಮಾನ ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಬುಧವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಇನ್ನಿಂಗ್ಸ್‌ನ 10ನೇ ಓವರ್ ವೇಳೆ ಈ ಘಟನೆ ನಡೆದಿದೆ. ಹಾರ್ದಿಕ್ ಪಾಂಡ್ಯ

‘ನೀತಿ ಸಂಹಿತೆ’ ಉಲ್ಲಂಘನೆ – ಹಾರ್ದಿಕ್ ಪಾಂಡ್ಯಗೆ ಕಠಿಣ ಶಿಕ್ಷೆ ವಿಧಿಸಿದ ಬಿಸಿಸಿಐ Read More »

ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಗ್ಲೋಬಲ್ ವಾಟರ್ ಸಮಿಟ್‌ನಲ್ಲಿ ವಿಶ್ವದ ಗಮನ ಸೆಳೆದ ಬೆಂಗಳೂರಿನ ಜಲಮಂಡಳಿಯ ಪಂಚಸೂತ್ರ

(ನ್ಯೂಸ್‌ ಕಡಬ) newskadaba.com,  ಮೇ.23: ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿಗೆ ಅತ್ಯುತ್ತಮ ಗುಣಮಟ್ಟದ ಕುಡಿಯುವ ನೀರು ಹಾಗೂ ನೈರ್ಮಲ್ಯವನ್ನು ಒದಗಿಸುವಲ್ಲಿ ಯಶಸ್ವಿಯಾಗಿರುವ ಬೆಂಗಳೂರು ಜಲಮಂಡಳಿಯ ಸಾಧನೆಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ವಿಶ್ವದ 5 ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ಈ ಮೂಲಕ 3 ಪ್ರಮುಖ ವಿಭಾಗಗಳಲ್ಲಿ ಟಾಪ್ 5 ಸ್ಥಾನ ಪಡೆದ ಭಾರತದ ಏಕೈಕ ನೀರು ಸರಬರಾಜು ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಲಮಂಡಳಿ ಪಾತ್ರವಾಗಿದೆ. ಸ್ಪೇನ್ ದೇಶದ ಮ್ಯಾಡ್ರಿಡ್‌ನಲ್ಲಿ ಇತ್ತೀಚೆಗೆ

ಗ್ಲೋಬಲ್ ವಾಟರ್ ಸಮಿಟ್‌ನಲ್ಲಿ ವಿಶ್ವದ ಗಮನ ಸೆಳೆದ ಬೆಂಗಳೂರಿನ ಜಲಮಂಡಳಿಯ ಪಂಚಸೂತ್ರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top