ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಗದ್ದೆಗೆ ಉರುಳಿದ ಆಟೋ ರಿಕ್ಷಾ ➤ ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.26. ಆಟೋರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಭಾನುವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿ – ಕಡಬ ರಾಜ್ಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ಪುಳಿತ್ತಡಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿದ ಆಪೆ ಆಟೋರಿಕ್ಷಾ ಹೆದ್ದಾರಿ ಪಕ್ಕದ ಗದ್ದೆಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಪ್ಪಿನಂಗಡಿ: ಗದ್ದೆಗೆ ಉರುಳಿದ ಆಟೋ ರಿಕ್ಷಾ ➤ ಮೂವರು ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಭಾರತದಲ್ಲೂ ಕೊರೋನಾ ವೈರಸ್ ಆತಂಕ: ಕೇರಳ 7 ಮಂದಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕೊಚ್ಚಿ, ಜ.25: ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಆತಂಕವನ್ನು ಸೃಷ್ಟಿಸಿದ್ದು, ಚೀನಾದಿಂದ ಬಂದಿರುವ 11 ಮಂದಿಯ ಪೈಕಿ 7 ಮಂದಿಯಲ್ಲಿ ಕೊರೋನಾ ವೈರಸ್’ನ ಗುಣಲಕ್ಷಣಗಳು ಕಂಡು ಬಂದಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಕೆಲ ದಿನಗಳಿಂದ ಚೀನಾ ರಾಷ್ಟ್ರದಿಂದ ಭಾರತಕ್ಕೆ ಆಗಮಿಸಿರುವವರ ಪೈಕಿ ಹಲವು ಜನರಲ್ಲಿ ಸೋಂಕು ತಗುಲಿರುವ ಶಂಕೆಗಳು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ವಿವಿಧ ಆಸ್ಪತ್ರೆಗಳಲ್ಲಿ 7, ಮುಂಬೈನಲ್ಲಿ ಇಬ್ಬರು, ಬೆಂಗಳೂರು ಮತ್ತು ಹೈದ್ರಾಬಾದ್ ನಲ್ಲಿ

ಭಾರತದಲ್ಲೂ ಕೊರೋನಾ ವೈರಸ್ ಆತಂಕ: ಕೇರಳ 7 ಮಂದಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕುಂದಾಪುರ: ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತ್ಯು

ಕುಂದಾಪುರ, ಜ.25: ಪಾದಚಾರಿ ಮಹಿಳೆಯೊಬ್ಬಳಿಗೆ ಬೈಕ್ಕೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಾದ್ವಾರದ ಎದುರು ನಡೆದಿದೆ.         ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ವಿನಯ ಕಾಮತ್‌(62) ಎಂದು ಗುರುತಿಸಲಾಗಿದೆ. ಸವಾರ ಹಳವಳ್ಳಿ ನಿವಾಸಿ ಕೀರ್ತಿರಾಜ್ ಕೊಟೇಶ್ವರದಿಂದ ಕುಂಭಾಶಿ ಕಡೆಗೆ ಅತೀ ವೇಗದಿಂದ ಬಂದಿದ್ದು ಪಾದಚಾರಿ ವೃದ್ಧೆಗೆ ಢಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಬೈಕ್‌ ಸವಾರ ಕೀರ್ತಿರಾಜ್‌ ತಲೆಗೂ

ಕುಂದಾಪುರ: ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಪತಿಯ ಕೊಲೆಗೆ ಸುಪಾರಿ ನೀಡಿದ ಪತಿ; ಇಬ್ಬರ ಬಂಧನ

ಕಾಸರಗೋಡು, ಜ 24: ಮಂಜೇಶ್ವರ ಪಾವೂರು ಕೆದಂಬಾಡಿಯ ಇಸ್ಮಾಯಿಲ್ (50) ನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಸ್ಮಾಯಿಲ್ ಪತ್ನಿ ಹಾಗೂ ಈಕೆಯ ನೆರೆಮನೆಯ ಯುವಕನೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಇಸ್ಮಾಯಿಲ್ ನ ಪತ್ನಿ ಆಯಿಷಾ (30) ಮತ್ತು ಮುಹಮ್ಮದ್ ಹನೀಫ್ (35) ಎಂದು ಗುರುತಿಸಲಾಗಿದೆ. ಜನವರಿ 20ರಂದು ಇಸ್ಮಾಯಿಲ್ ಮನೆಯಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹವನ್ನು ಗಮನಿಸಿದ್ದ ಸಂಬಂಧಿಕರು ಇಸ್ಮಾಯಿಲ್ ನ ಕುತ್ತಿಗೆಯಲ್ಲಿ ಹಗ್ಗ ಬಿಗಿದ ಗುರುತು ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ

ಕಾಸರಗೋಡು: ಪತಿಯ ಕೊಲೆಗೆ ಸುಪಾರಿ ನೀಡಿದ ಪತಿ; ಇಬ್ಬರ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಸಹ ಶಿಕ್ಷಕನಿಂದಲೇ ಶಿಕ್ಷಕಿಯ ಕೊಲೆ; ಕ್ರೈಂ ಬ್ರಾಂಚ್ ತನಿಖೆಯಿಂದ ಬಹಿರಂಗ

ಇಬ್ಬರ ಬಂಧನ ಕಾಸರಗೋಡು, ಜ.24: ಮೀಯಪದವು ವಿದ್ಯಾವಿರ್ಧಕ ಹಯರ್ ಸೆಕಂಡರಿ ಶಾಲೆಯ ಶಿಕ್ಷಕಿ ರೂಪಶ್ರೀ (44) ರವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹ ಶಿಕ್ಷಕ ಸೇರಿದಂತೆ ಇಬ್ಬರನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಾಲೆಯ ಡ್ರಾಯಿಂಗ್ ಶಿಕ್ಷಕ ವೆಂಕಟರಮಣ ಕಾರಂತ (50) ಮತ್ತು ಕಾರು ಚಾಲಕ ನಿರಂಜನ ಎಂದು ಗುರುತಿಸಲಾಗಿದೆ. ಜನವರಿ 14ರ ಸಂಜೆಯಿಂದ ಶಿಕ್ಷಕಿ ರೂಪಶ್ರೀ ನಾಪತ್ತೆಯಾಗಿದ್ದಳು. 16 ರಂದು ಕುಂಬಳೆ ಸಮೀಪದ ಪೆರುವಾಡು ಕಡಲ ತೀರದಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಿದ

ಕಾಸರಗೋಡು: ಸಹ ಶಿಕ್ಷಕನಿಂದಲೇ ಶಿಕ್ಷಕಿಯ ಕೊಲೆ; ಕ್ರೈಂ ಬ್ರಾಂಚ್ ತನಿಖೆಯಿಂದ ಬಹಿರಂಗ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮರ್ಧಾಳ: ‘ಹೊಟೇಲ್ ಸಾಂತಪ್ಪ’ ವಿಷ ಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಜ.25. ಕಳೆದ ಕೆಲವು ದಶಕಗಳಿಂದ ಕಡಬ ತಾಲೂಕಿನ ಮರ್ಧಾಳದಲ್ಲಿ ಹೊಟೇಲ್ ಉದ್ಯಮವನ್ನು ನಡೆಸುತ್ತಿದ್ದ ಸಾಂತಪ್ಪ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದೆ. ಹೊಟೇಲ್ ಸಾಂತಪ್ಪ ಎಂದೇ ಚಿರಪರಿಚಿತರಾಗಿದ್ದ ಸಾಂತಪ್ಪರವರು ಶುಕ್ರವಾರ ಸಂಜೆ ವೇಳೆಗೆ ಐತ್ತೂರು ಗ್ರಾಮದ ಭ್ರಾಂತಿಕಟ್ಟೆ ಎಂಬಲ್ಲಿ ಅರಣ್ಯ ಇಲಾಖೆಯ ಜಮೀನಿನಲ್ಲಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ತಡರಾತ್ರಿ ವೇಳೆ ಮೃತದೇಹವು ಕಂಡುಬಂದಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಆತ್ಮಹತ್ಯೆಗೆ ನಿಖರ

ಮರ್ಧಾಳ: ‘ಹೊಟೇಲ್ ಸಾಂತಪ್ಪ’ ವಿಷ ಸೇವಿಸಿ ಆತ್ಮಹತ್ಯೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ಮೈದುನನಿಂದ ಆ್ಯಸಿಡ್ ದಾಳಿ ➤ ಮಹಿಳೆ ಮತ್ತು ಮಗು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜ.24. ಹಣಕಾಸು ಹಾಗೂ ಭೂ ವಿವಾದಕ್ಕೆ ಸಂಬಂಧಿಸಿ ಮಹಿಳೆಯೋರ್ವರ ಮುಖಕ್ಕೆ ಆಕೆಯ ಬಾವ ಆ್ಯಸಿಡ್ ಎರಚಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಆಸಿಡ್ ಎರಚಿದ ಆರೋಪಿಯನ್ನು ಕೋಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಜಯಾನಂದ ಕೊಠಾರಿ(55) ಎಂದು ಗುರುತಿಸಲಾಗಿದೆ. ಕೃಷಿಕರಾಗಿರುವ ಜಯಾನಂದ ತನ್ನ ತಮ್ಮನ ಪತ್ನಿ ವಿಧವೆ ಸ್ವಪ್ನಾ(35) ಹಾಗೂ ಆಕೆಯ ಹೆಣ್ಣುಮಗಳ ಮುಖಕ್ಕೆ ರಬ್ಬರ್ ಶೀಟ್ ಗೆ ಬಳಸುವ ಆ್ಯಸಿಡ್ ಎರಚಿದ್ದಾರೆ‌. ಗಾಯಗೊಂಡಿರುವ ತಾಯಿ

ಕಡಬ: ಮೈದುನನಿಂದ ಆ್ಯಸಿಡ್ ದಾಳಿ ➤ ಮಹಿಳೆ ಮತ್ತು ಮಗು ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕರೋನಾ ವೈರಸ್‌ಗೆ ಚೀನಾ ತತ್ತರ: ಸಾವಿನ ಸಂಖ್ಯೆ 25 ಕ್ಕೇರಿಕೆ

ಬೀಜಿಂಗ್, ಜ.24: ಮಾರಕ ಕರೋನಾ ವೈರಸ್ ಗೆ ಚೀನಾ ತತ್ತರಿಸಿದ್ದು ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿದೆ. ಅಂದಾಜು 830 ಜನರು ಈ ಭೀಕರ ವೈರಸ್ ಗೆ ತುತ್ತಾಗಿದ್ದಾರೆ ಎಂದು ಚೀನಾ ಸರಕಾರ ತಿಳಿಸಿದೆ. ಮೊದಲ ಬಾರಿಗೆ ವೈರಸ್ ಪತ್ತೆಯಾದ ವುಹಾನ್ ನಗರದಲ್ಲೇ 1,072 ಜನರು  ಈ ಮಾರಾಣಾಂತಿಕ ವೈರಾಣು ವಿಗೆ  ತುತ್ತಾಗಿದ್ದಾರೆ ಎನ್ನುವ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ತುರ್ತು ಕ್ರಮಗಳನ್ನು ಘೋಷಣೆ

ಕರೋನಾ ವೈರಸ್‌ಗೆ ಚೀನಾ ತತ್ತರ: ಸಾವಿನ ಸಂಖ್ಯೆ 25 ಕ್ಕೇರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ದೆಹಲಿ ಚುನಾವಣಾ ಪ್ರಚಾರಕ್ಕೆ ಆಯ್ಕೆಯಾದ ಕಡಬದ ಯುವಕ ➤ ರಾಜ್ಯದ ಹತ್ತು ಜನರಲ್ಲಿ ಸ್ಥಾನ ಪಡೆದ ಅಬ್ದುಲ್ ರಝಾಕ್ ಮರ್ಧಾಳ

(ನ್ಯೂಸ್ ಕಡಬ) Newskadaba.com ಕಡಬ. ಜ.24. ಫೆಬ್ರವರಿ 08ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಕರ್ನಾಟಕದಿಂದ ಆಯ್ಕೆಯಾದ ಹತ್ತು ಜನರ ಪೈಕಿ ಮರ್ಧಾಳದ ಅಬ್ದುಲ್ ರಝಾಕ್ ಸೇರಿದ್ದಾರೆ. ಜನವರಿ 24ರಿಂದ ಫೆಬ್ರವರಿ 04ರ ವರೆಗೆ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಇವರು ಈ ಬಾರಿಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದಕ್ಷಿಣ ಕನ್ನಡ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತೂರಿನ ಸಂತ ಫಿಲೋಮಿನಾ

ದೆಹಲಿ ಚುನಾವಣಾ ಪ್ರಚಾರಕ್ಕೆ ಆಯ್ಕೆಯಾದ ಕಡಬದ ಯುವಕ ➤ ರಾಜ್ಯದ ಹತ್ತು ಜನರಲ್ಲಿ ಸ್ಥಾನ ಪಡೆದ ಅಬ್ದುಲ್ ರಝಾಕ್ ಮರ್ಧಾಳ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ಳಾರೆ: ಬೈಕ್ ಹಿಟ್ ಆ್ಯಂಡ್ ರನ್ ➤ ಜಾತ್ರೆಗೆ ತೆರಳಿ ಹಿಂತಿರುಗುತ್ತಿದ್ದ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜ.22. ಬೈಕೊಂದು ಢಿಕ್ಕಿ ಹೊಡೆದು ಪರಾರಿಯಾಗಿದ್ದರಿಂದ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಪೆರ್ಲಂಪಾಡಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಮೃತ ಬಾಲಕನನ್ನು ಕೊಳ್ತಿಗೆ ಗ್ರಾಮದ ಎಕ್ಕಡ್ಕ‌ ನಿವಾಸಿ ಮೋಹನ್ ಎಂಬವರ ಪುತ್ರ ಅವಿನಾಶ್ (10) ಎಂದು ಗುರುತಿಸಲಾಗಿದೆ. ಅವಿನಾಶ್ ತನ್ನ ಮನೆಯವರೊಂದಿಗೆ ಜಾತ್ರೆಗೆಂದು ತೆರಳಿ ಹಿಂತಿರುಗುತ್ತಿದ್ದ ವೇಳೆ ವೇಗವಾಗಿ ಬಂದ ಬೈಕೊಂದು ಢಿಕ್ಕಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಬಾಲಕನನ್ನು ಬೆಳ್ಳಾರೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ

ಬೆಳ್ಳಾರೆ: ಬೈಕ್ ಹಿಟ್ ಆ್ಯಂಡ್ ರನ್ ➤ ಜಾತ್ರೆಗೆ ತೆರಳಿ ಹಿಂತಿರುಗುತ್ತಿದ್ದ ಬಾಲಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top