ಬ್ರೇಕಿಂಗ್ ನ್ಯೂಸ್

ಕಡಬ ಮೆಸ್ಕಾಂ ಎಇ ಮತ್ತು ಗುತ್ತಿಗೆದಾರರಿಗೆ ಅವಾಚ್ಯ ನಿಂದನೆ ಆರೋಪ ➤ ‘ಸೊಬಗು ನ್ಯೂಸ್‌’ ಬ್ಲಾಗ್‌ನ ಅನೀಶ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಮಾ.13. ಕೋಡಿಂಬಾಳ ಗ್ರಾಮದ ನಾಕೂರು ಎಂಬಲ್ಲಿನ ವಿದ್ಯುತ್ ಕಾಮಗಾರಿಯೊಂದರ ಕುರಿತಂತೆ ಕಡಬ ಮೆಸ್ಕಾಂ ಎ.ಇ ಹಾಗೂ ವಿದ್ಯುತ್ ಗುತ್ತಿಗೆದಾರರಿಗೆ ಕಡಬದ ಸೊಬಗು ನ್ಯೂಸ್ ಬ್ಲಾಗ್‌ನ ಅನಿಶ್ ಕೋಡಿಂಬಾಳ ಅವರು ಅವಾಚ್ಯ ಶಬ್ದ ಬಳಸಿ ನಿಂದನೆ ಹಾಗೂ ಬೆದರಿಕೆ ಒಡ್ಡಿದ ಹಿನ್ನಲೆಯಲ್ಲಿ ಅವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳುವಂತೆ ಪುತ್ತೂರು ಜೆ.ಎಮ್.ಎಫ್.ಸಿ ನ್ಯಾಯಾಲಯ ಕಡಬ ಪೋಲಿಸರಿಗೆ ಆದೇಶ ನೀಡಿದ್ದು, ಈ ಬಗ್ಗೆ ಅನಿಶ್ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಡಿಂಬಾಳ ಗ್ರಾಮದ ನಾಕೂರು […]

ಕಡಬ ಮೆಸ್ಕಾಂ ಎಇ ಮತ್ತು ಗುತ್ತಿಗೆದಾರರಿಗೆ ಅವಾಚ್ಯ ನಿಂದನೆ ಆರೋಪ ➤ ‘ಸೊಬಗು ನ್ಯೂಸ್‌’ ಬ್ಲಾಗ್‌ನ ಅನೀಶ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಣಿಪಾಲ ವಿವಿಯ ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು: ಕೊರೋನ ಶಂಕೆ

ಮಣಿಪಾಲ, ಮಾ.13: ಮಣಿಪಾಲ ವಿವಿಯ ಇಬ್ಬರು ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ಹರಡಿರುವ ಶಂಕೆಯ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳು ಇತ್ತೀಚೆಗೆ ಅಮೇರಿಕಾ ಮತ್ತು ಕುವೈಟ್ ನಿಂದ ಬಂದಿದ್ದು, ಕರೋನಾದ ಲಕ್ಷಣ ಕಂಡು ಬಂದ ಹಿನ್ನೆಲೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಐಸೋಲೇಟೆಡ್ ವಾರ್ಡ್ ನಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಸುಧೀರ್ ಚಂದ್ರ ಸೂಡಾ

ಮಣಿಪಾಲ ವಿವಿಯ ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು: ಕೊರೋನ ಶಂಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಒಂದು ವಾರಗಳ ಕಾಲ ಮಾಲ್, ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಸಿಎಂ ಆದೇಶ ➤ ಮದುವೆಗೂ ಇಲ್ಲ ಪರ್ಮಿಶನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.13. ಕೊರೊನಾ ವೈರಸ್ ಕರ್ನಾಟಕಕ್ಕೆ ಕಾಲಿಟ್ಟು ಒಂದು ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹತ್ತರ ನಿರ್ಧಾರವನ್ನು ತೆಗೆದುಕೊಂಡಿದ್ದು, ನಾಳೆಯಿಂದ ಥಿಯೇಟರ್, ಶಾಪಿಂಗ್ ಮಾಲ್, ಸಭೆ-ಸಮಾರಂಭಗಳನ್ನು ಒಂದು ವಾರಗಳ ಮಟ್ಟಿಗೆ ರದ್ದುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ಪಬ್, ಕ್ಲಬ್ ಮೇಳ, ಕ್ರೀಡಾ ಸಮಾರಂಭವನ್ನೂ ಮಾಡದಂತೆ ಆದೇಶ ಹೊರಡಿಸಿದ್ದಾರೆ. ಈಗಾಗ್ಲೇ ಕರ್ನಾಟಕದಲ್ಲಿ ಕೊರೊನಾಗೆ ಒಂದು ಬಲಿಯಾಗಿದ್ದು, ಇದಕ್ಕೆ ಮುಖ್ಯಮಂತ್ರಿ ವಿಷಾಧ ವ್ಯಕ್ತಪಡಿಸಿದ್ದಾರೆ. ಇನ್ನು ಮದುವೆ ನಿಗದಿಯಾಗಿದ್ದರೂ ಅದನ್ನು ಮುಂದೂಡುವಂತೆ

ಒಂದು ವಾರಗಳ ಕಾಲ ಮಾಲ್, ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಸಿಎಂ ಆದೇಶ ➤ ಮದುವೆಗೂ ಇಲ್ಲ ಪರ್ಮಿಶನ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಕಡವೆಗೆ ಢಿಕ್ಕಿ ಹೊಡೆದ ಅಪರಿಚಿತ ವಾಹನ ➤ ಗಾಯಗೊಂಡ ಕಡವೆ ಪಿಲಿಕುಳಕ್ಕೆ ವರ್ಗಾವಣೆ

(ನ್ಯೂಸ್ ಕಡಬ) newskadaba.com ಕಡಬ, ಮಾ.13. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕಡವೆಯೊಂದು ಗಾಯಗೊಂಡು ರಸ್ತೆ ಬದಿ ಬಿದ್ದ ಘಟನೆ ಉಪ್ಪಿನಂಗಡಿ – ಕಡಬ ರಾಜ್ಯ ಹೆದ್ದಾರಿಯ ಕುಂತೂರು ಪದವು – ಬಲ್ಯ ನಡುವಿನ ಕುಂಟಿಕಾನ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ರಸ್ತೆ ಬದಿ ಬಿದ್ದಿದ್ದ ಕಡವೆಯನ್ನು ಗಮನಿಸಿ ಸ್ಥಳೀಯರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ‌ ತೆರಳಿದ ಕಡಬ ಪೊಲೀಸರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಗಿರೀಶ್. ಆರ್.,

ಕಡಬ: ಕಡವೆಗೆ ಢಿಕ್ಕಿ ಹೊಡೆದ ಅಪರಿಚಿತ ವಾಹನ ➤ ಗಾಯಗೊಂಡ ಕಡವೆ ಪಿಲಿಕುಳಕ್ಕೆ ವರ್ಗಾವಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರ್ನಾಟಕದಲ್ಲಿ ಕೊರೋನಾ ಎಫೆಕ್ಟ್ ➤ ಇಂದಿನಿಂದ ರಾಜ್ಯದ ಕೆಲವೆಡೆ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.11. ಚೀನಾ ದೇಶದಿಂದ ಆರಂಭಗೊಂಡ ಕೊರೋನಾ ವೈರಸ್‌ ಜಗತ್ತಿನ ವಿವಿಧೆಡೆ ವ್ಯಾಪಿಸಿದ್ದು, ಕರ್ನಾಟಕದಲ್ಲೂ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಗುರುವಾರದಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಸಚಿವ

ಕರ್ನಾಟಕದಲ್ಲಿ ಕೊರೋನಾ ಎಫೆಕ್ಟ್ ➤ ಇಂದಿನಿಂದ ರಾಜ್ಯದ ಕೆಲವೆಡೆ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಕೊರೋನ ಪೀಡಿತರ ಸಂಖ್ಯೆ ಐದಕ್ಕೇರಿಕೆ

ಬೆಂಗಳೂರು, ಮಾ.13: ರಾಜ್ಯದಲ್ಲಿ ಮತ್ತೊಂದು ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ಐದಕ್ಕೇರಿದೆ. ಗ್ರೀಸ್‌ನಿಂದ ಬೆಂಗಳೂರಿಗೆ ಆಗಮಿಸಿದ 26 ವರ್ಷದ ಯುವಕನಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ. ಯುವಕನ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 1,220 ಮಂದಿಯನ್ನು ಇವತ್ತಿನವರೆಗೂ ನಿಗಾ ಇಡಲಾಗಿದ್ದು, ಈ ಪೈಕಿ 292 ಮಂದಿ ಕಳೆದ 28 ದಿನಗಳಿಂದ ನಿಗಾದಲ್ಲಿದ್ದಾರೆ. 906 ಮಂದಿ ಮನೆಯಲ್ಲಿದ್ದರೆ 18 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ

ರಾಜ್ಯದಲ್ಲಿ ಕೊರೋನ ಪೀಡಿತರ ಸಂಖ್ಯೆ ಐದಕ್ಕೇರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊರೋನ ಶಂಕಿತ ವ್ಯಕ್ತಿ ಮಣಿಪಾಲ ಆಸ್ಪತ್ರೆಗೆ ದಾಖಲು

ಉಡುಪಿ, ಮಾ.11: ಶಂಕಿತ ಕೊರೋನ ವೃದ್ದೆಯೋರ್ವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೃದ್ದೆಗೆ ಕೊರೋನ ವೈರಸ್ ಇರುವುದು ದೃಢಪಟ್ಟಿಲ್ಲ ಎಂದು ತಿಳಿದುಬಂದಿದೆ. ವೃದ್ದೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಆಚಾರಪುರದವರು ಎಂದು ತಿಳಿದು ಬಂದಿದೆ. ಕಳೆದ ವಾರ ಸೌದಿಯ ಮಕ್ಕಾಗೆ ತೆರಳಿದ್ದ ಮಹಿಳೆಗೆ ಜ್ವರ, ಕಫ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಗುಣಮುಖರಾದ ಬಳಿಕ ಬೆಂಗಳೂರಿಗೆ ವಾಪಾಸ್ ಆಗಿದ್ದರು. ಅಲ್ಲಿಂದ ಶಿವಮೊಗ್ಗಕ್ಕೆ ತೆರಳಿದ್ದು, ಜ್ವರದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬಳಿಕ ವೃದ್ದೆಗೆ

ಕೊರೋನ ಶಂಕಿತ ವ್ಯಕ್ತಿ ಮಣಿಪಾಲ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್

ಬೆಂಗಳೂರು, ಮಾ.11: ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದ ಆಯ್ಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದ್ದು, ರಾಜ್ಯದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿ ಇಂದು ಆದೇಶ ಹೊರಡಿಸಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಈ ಆದೇಶವನ್ನು ಹೊರಡಿಸಿದ್ದು, ಇದರ ಜೊತೆಗೆ ಕೆಪಿಸಿಸಿಗೆ ಇತರೇ ಪದಾಧಿಕಾರಿಗಳನ್ನೂ ನೇಮಿಸಿ ಆದೇಶ ಹೊರಡಿಸಲಾಗಿದೆ. ನೂತನ ಅಧ್ಯಕ್ಷ ಡಿಕೆಶಿ ಅವರ ಕೈ ಬಲಪಡಿಸಲು ಮೂವರು ಕಾರ್ಯಾಧ್ಯಕ್ಷರನ್ನು ನೇಮಿಸಲಾಗಿದೆ. ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವೆನ್ಲಾಕ್‌ನಿಂದ ಪರಾರಿಯಾದ ವ್ಯಕ್ತಿಯಲ್ಲಿ ಕೊರೋನ ಪತ್ತೆಯಾಗಿಲ್ಲ: ಜಿಲ್ಲಾಧಿಕಾರಿ ಸಿಂಧೂ

ಮಂಗಳೂರು, ಮಾ.11: ದುಬೈನಿಂದ ಬಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪರಾರಿಯಾಗಿದ್ದ ವ್ಯಕ್ತಿಯ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತನಲ್ಲಿ ಕೊರೋನ ವೈರಸ್ ದೃಢಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದ್ಧಾರೆ. ಆತ ಪರಾರಿಯಾದ ನಂತರ ಅವರ ಕುಟುಂಬದವರಿಗೆ ಸೂಕ್ತ ತಿಳುವಳಿಕೆ ನೀಡಿ ಚಿಕಿತ್ಸೆ ನೀಡಲಾಗಿತ್ತು ಎಂದು ಅವರು ಹೇಳಿದ್ಧಾರೆ. ದಕ್ಷಿಣ ಕನ್ನಡದಲ್ಲಿ ಯಾವುದೇ ಕೊರೋನ ಪಾಸಿಟಿವ್ ಕಂಡು ಬಂದಿಲ್ಲ. ವಿಮಾನ ನಿಲ್ದಾಣ, ಎನ್‌ಎಂಪಿಟಿಯಲ್ಲಿ ವಿದೇಶಿ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ವೆನ್ಲಾಕ್‌ನಿಂದ ಪರಾರಿಯಾದ ವ್ಯಕ್ತಿಯಲ್ಲಿ ಕೊರೋನ ಪತ್ತೆಯಾಗಿಲ್ಲ: ಜಿಲ್ಲಾಧಿಕಾರಿ ಸಿಂಧೂ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಧ್ಯೆಪ್ರದೇಶ ರಾಜಕೀಯ ಹೈಡ್ರಾಮಾ: ಸಿಂಧಿಯಾ ಗುಂಪಿನಲ್ಲಿ ಬಿರುಕು

ಭೋಪಾಲ್, ಮಾ.11: ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆಯಿಂದಾಗಿ ಕಮಲ್‌ನಾಥ್ ಸರಕಾರ ಅಲ್ಪಮತಕ್ಕೆ ಕುಸಿದಿದ್ದು ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ನಡೆದಿತ್ತು. ಆದರೆ ಸಿಂಧಿಯಾ ಬಿಜೆಪಿ ಸೇರ್ಪಡೆಗೆ ಅವರ ಗುಂಪಿನಲ್ಲೇ ಅಪಸ್ವರ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ನ 19ಕ್ಕೂ ಹೆಚ್ಚು ಶಾಸಕರು ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದಾರೆ. ನಿನ್ನೆ ಸಿಂಧಿಯಾ ಅವರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ವಿಚಾರ ಇದೀಗ ಸಿಂಧಿಯಾ ಕ್ಯಾಂಪ್ ನಲ್ಲಿ ಬಿರುಕಿಗೆ ಕಾರಣವಾಗಿದೆ ಎನ್ನಲಾಗಿದೆ. ಮಧ್ಯಪ್ರದೇಶ ಕಾಂಗ್ರೆಸ್‌ನ ಪ್ರಮುಖ ಮೂಲಗಳ ಪ್ರಕಾರ,

ಮಧ್ಯೆಪ್ರದೇಶ ರಾಜಕೀಯ ಹೈಡ್ರಾಮಾ: ಸಿಂಧಿಯಾ ಗುಂಪಿನಲ್ಲಿ ಬಿರುಕು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top