ಬ್ರೇಕಿಂಗ್ ನ್ಯೂಸ್

ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಬಂದರೆ ಏನಾಗುತ್ತದೆ ಗೊತ್ತಾ..?➤ ಮಂಗಳೂರು ಪೊಲೀಸ್ ಕಮಿಷನರ್ ಮಾತಲ್ಲೇ ಕೇಳಿ..

*➤➤ ವೀಡಿಯೋ | Video* ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಬಂದರೆ ಏನಾಗುತ್ತದೆ ಗೊತ್ತಾ..? ➤ ಮಂಗಳೂರು ಪೊಲೀಸ್ ಕಮಿಷನರ್ ಮಾತಲ್ಲೇ ಕೇಳಿ.. ವೀಡಿಯೋಗಾಗಿ??ಕ್ಲಿಕ್ ಮಾಡಿ

ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಬಂದರೆ ಏನಾಗುತ್ತದೆ ಗೊತ್ತಾ..?➤ ಮಂಗಳೂರು ಪೊಲೀಸ್ ಕಮಿಷನರ್ ಮಾತಲ್ಲೇ ಕೇಳಿ.. Read More »

ಬ್ರೇಕಿಂಗ್ ನ್ಯೂಸ್

ಮಾ.25ರಿಂದ ದೇಶೀಯ ವಿಮಾನ ಹಾರಾಟ ಸ್ಥಗಿತ

ಹೊಸದಿಲ್ಲಿ, ಮಾ.24: ದೇಶದಲ್ಲಿ ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದು ಮಾಡಿದ ಬೆನ್ನಲ್ಲೇ ಇದೀಗ ಕೇಂದ್ರ ಮತ್ತೊಂದು ಮಹತ್ವದ ಹೆಜ್ಜೆಯನ್ನು ಕೈಗೊಂಡಿದ್ದು, ಮಾ.25ರಂದು ದೇಶೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿ, ಕೇಂದ್ರ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿದೆ. ಎಲ್ಲಾ ವಿಮಾನಗಳು ಮಾ.24ರ ರಾತ್ರಿ 11:59ರೊಳಗೆ ವಿಮಾನಯಾನಗಳನ್ನು ನಿಲ್ಲಿಸುವಂತೆ ಆದೇಶಿಸಿದೆ. ದೇಶದ ಒಳಗೆ ಸಂಪರ್ಕ ಕಲ್ಪಿಸುವಂತ ಹಾಗೂ ರಾಜ್ಯಗಳ ನಡುವೆ ಹಾರಾಡುವ ದೇಶೀಯ ವಿಮಾನ ಹಾರಾಟವನ್ನು ಇದೀಗ ಕೇಂದ್ರ ವಿಮಾನಯಾನ ಸಚಿವಾಲಯ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಮಾ.25ರಿಂದ ದೇಶೀಯ ವಿಮಾನ ಹಾರಾಟ ಸ್ಥಗಿತ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

‘ಲಾಕ್‌ಡೌನ್’ ಪಾಲಿಸದಿದ್ದಲ್ಲಿ ಬಂಧನ: ಪೊಲೀಸ್ ಆಯುಕ್ತ ಡಾ.ಹರ್ಷ

ಮಂಗಳೂರು, ಮಾ.23: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಲಾಕ್‌ಡೌನ್ ಘೋಷಿಸಿದೆ. ಅಲ್ಲದೆ ಜಿಲ್ಲಾಧಿಕಾರಿ ಸೆಕ್ಷನ್ 144ರಲ್ಲಿ ನಿರ್ಬಂಧಕಾಜ್ಞೆಯನ್ನು ಹೊರಡಿಸಿದ್ದಾರೆ. ಇದನ್ನು ಉಲ್ಲಂಘಿಸಿ ಜನರು ಹೊರಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿ ಅಗತ್ಯ ಬಿದ್ದಲ್ಲಿ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಎಚ್ಚರಿಕೆ ನೀಡಿದ್ದಾರೆ. ಯಾವುದಾದರೂ ವೈದ್ಯಕೀಯ ತುರ್ತು ಹೊರತು ಪಡಿಸಿ ಬೇರೆ ಯಾರೂ ಕೂಡಾ ಮನೆಯಿಂದ ಹೊರ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

‘ಲಾಕ್‌ಡೌನ್’ ಪಾಲಿಸದಿದ್ದಲ್ಲಿ ಬಂಧನ: ಪೊಲೀಸ್ ಆಯುಕ್ತ ಡಾ.ಹರ್ಷ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಹಾರಾಷ್ಟ್ರದಿಂದ ಬಂದಿದ್ದ ಸುಬ್ರಹ್ಮಣ್ಯದ ಯುವತಿಗೆ ಜ್ವರ ➤ ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿಗೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ.23. ದೇಶದಲ್ಲೆಡೆ ಕೊರೋನಾ ವೈರಸ್ ಹರಡುತ್ತಿರುವುದರ ನಡುವೆ ಮಹಾರಾಷ್ಟ್ರದಲ್ಲಿ ಕರ್ತವ್ಯದಲ್ಲಿದ್ದ ಯುವತಿಯೋರ್ವಳು ತನ್ನ ಹುಟ್ಟೂರು ಕುಕ್ಕೇ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಯುವತಿಗೆ ಜ್ವರ ಇದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ್ದು, ಕೆಮ್ಮು ಇದ್ದ ಕಾರಣ ಮಂಗಳೂರಿಗೆ ಕರೆದೊಯ್ಯಲಾಗಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದು, ಯುವತಿ ವಾಸವಿದ್ದ ಪರಿಸರದಲ್ಲಿ ಕೊರೋನಾ ಭೀತಿ ಇದ್ದುದರಿಂದ ಯುವತಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಾಧಿಕಾರಿ ‘ನ್ಯೂಸ್ ಕಡಬ’ಕ್ಕೆ

ಮಹಾರಾಷ್ಟ್ರದಿಂದ ಬಂದಿದ್ದ ಸುಬ್ರಹ್ಮಣ್ಯದ ಯುವತಿಗೆ ಜ್ವರ ➤ ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿಗೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಾಸರಗೋಡಿನಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ➤ ಆತಂಕದಲ್ಲಿ ಗಡಿ ಭಾಗವಾದ ಪುತ್ತೂರು, ಸುಳ್ಯದ ಜನತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.22. ನೆರೆ ರಾಜ್ಯವಾದ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದ್ದು, ಕಾಸರಗೋಡು ಜಿಲ್ಲೆಯೊಂದರಲ್ಲೇ ಭಾನುವಾರದಂದು ಐವರಲ್ಲಿ ಸೋಂಕು ದೃಢಪಟ್ಟಿದೆ. ಕಾಸರಗೋಡು ಜಿಲ್ಲೆಯು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವುದರಿಂದ ಗಡಿ ಭಾಗವಾದ ಪುತ್ತೂರು, ಸುಳ್ಯ ಭಾಗದ ನಿವಾಸಿಗಳಲ್ಲಿ ಕೊರೋನಾ ಭೀತಿ ಶುರುವಾಗಿದೆ. ಇದೀಗ ಮಂಗಳೂರಿನಲ್ಲೂ ಕೊರೋನಾ ಪತ್ತೆಯಾಗಿರುವುದರಿಂದ ಗಡಿ ಭಾಗದ ಜನತೆಯಲ್ಲಿ ಆತಂಕ ಮನೆಮಾಡಿದೆ. ಕಾಸರಗೋಡಿನಲ್ಲಿ ಕೊರೋನ ವೈರಸ್ ಪತ್ತೆಯಾಗಿರುವುದರಿಂದ ದಕ್ಷಿಣ ಕನ್ನಡಕ್ಕೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೇರಳದ ಗಡಿಭಾಗದಲ್ಲಿ

ಕಾಸರಗೋಡಿನಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ➤ ಆತಂಕದಲ್ಲಿ ಗಡಿ ಭಾಗವಾದ ಪುತ್ತೂರು, ಸುಳ್ಯದ ಜನತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

BIG BREAKING NEWS ಮಂಗಳೂರಿನಲ್ಲಿ ಪ್ರಥಮ ಕೊರೋನ ವೈರಸ್ ಧೃಢ

ಮಂಗಳೂರು, ಮಾ.22: ರಾಜ್ಯದ್ಯಾಂತ ಭೀತಿ ಸೃಷ್ಟಿಸಿರು ಕೊರೋನ ವೈರಸ್ ಮಂಗಳೂರಿಗೆ ಕಾಲಿಟ್ಟಿದೆ. ಭಟ್ಕಳ ಮೂಲದ 25ರ ಹರೆಯದ ಯುವಕ ಕೊರೋನ ಸೋಂಕು ಧೃಢಪಟ್ಟ ಬಗ್ಗೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ. ಈ ಯುವಕ ಮಾ.19ರಂದು ದುಬೈಯಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅವರನ್ನು ಪರೀಕ್ಷೆಗೊಳಪಡಿಸಿದಾಗ ಶಂಕಿತ ಕೊರೋನ ಪತ್ತೆಯಾಗಿತ್ತು. ಇಂದು ಅವರ ಪರೀಕ್ಷಾ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಮೊದಲ

BIG BREAKING NEWS ಮಂಗಳೂರಿನಲ್ಲಿ ಪ್ರಥಮ ಕೊರೋನ ವೈರಸ್ ಧೃಢ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಸೋಮವಾರ ನಡೆಯಬೇಕಿದ್ದ ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ

ಬೆಂಗಳೂರು, ಮಾ.22: ಸೋಮವಾರ ನಡೆಯಬೇಕಿದ್ದ ದ್ವಿತೀಯ ಪಿಯು ಪರೀಕ್ಷೆಯನ್ನು ರಾಜ್ಯ ಸರಕಾರ ಮುಂದೂಡಿದೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪಿಯು ವಿದ್ಯಾರ್ಥಿಗಳಿಗೆ ಈ ವರ್ಷದ ಅಂತಿಮ ವಿಷಯವಾಗಿ ಸೋಮವಾರ ಇಂಗ್ಲಿಷ್ ಭಾಷಾ ಪರೀಕ್ಷೆ ನಡೆಯಬೇಕಿತ್ತು. ಇದೀಗ ಅದನ್ನು ಮುಂದೂಡಲಾಗಿದೆ ಮುಂದಿನ ದಿನಾಂಕವನ್ನು ಮಾರ್ಚ್ 31ರ ನಂತರ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವರು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.  

ಸೋಮವಾರ ನಡೆಯಬೇಕಿದ್ದ ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಾ.31ರವರೆಗೆ ಅಂತರ್ ರಾಜ್ಯ ಸರಕಾರಿ ಬಸ್ ಸೇವೆ ಸ್ಥಗಿತ

ಬೆಂಗಳೂರು, ಮಾ.22: ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೋನ ವೈರಸ್ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದಿಂದ ಪ್ರಯಾಣಿಕ ರೈಲು ಸೇವೆ ಸ್ಥಗಿತ ಆದೇಶ ಹೊರಬಿದ್ದ ಬೆನ್ನಲ್ಲೇ ಇದೀಗ ಕರ್ನಾಟಕ ಸರಕಾರ ಎಲ್ಲ ಅಂತರರಾಜ್ಯ ಬಸ್ ಸೇವೆಯನ್ನು ಮಾರ್ಚ್ 31ರ ವರೆಗೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಮಾರ್ಚ್ 31ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಮೊದಲ ಕೊರೋನ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಹಾಗೂ ಕೊರೋನ ವೈರಸ್ ನಿಯಂತ್ರಣ ಮಾಡುವ ಸದುದ್ದೇಶದಿಂದ ಅವಳಿನಗರದಲ್ಲಿನ

ಮಾ.31ರವರೆಗೆ ಅಂತರ್ ರಾಜ್ಯ ಸರಕಾರಿ ಬಸ್ ಸೇವೆ ಸ್ಥಗಿತ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜನತಾ ಕರ್ಫ್ಯೂ: ಮಂಗಳೂರು ಸ್ತಬ್ಧ

ಮಂಗಳೂರು, ಮಾ.22: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಜನತಾ ಕರ್ಫ್ಯೂಗೆ ಮಂಗಳೂರಿನಲ್ಲಿ ಭಾರೀ ಬೆಂಬಲ ದೊರೆತಿದೆ. ಎಂದಿಗೂ ಜನರ ಓಡಾಟದಿಂದ ಕೂಡಿರುವ ಮಂಗಳೂರು ಇಂದು ಮುಂಜಾನೆಯೇ ಮೌನದಿಂದ ಕೂಡಿದೆ. ರವಿವಾರ ಮನೆಯಲ್ಲೇ ಉಳಿದುಕೊಳ್ಳಲು ತೀರ್ಮಾನ ಮಾಡಿರುವ ನಾಗರಿಕರು ಶನಿವಾರವೇ ಪೇಟೆಗೆ ತೆರಳಿ ಬೇಕಾಗಿರುವ ಅಗತ್ಯ ವಸ್ತುಗಳ ಖರೀದಿ ಮಾಡಿದ್ದಾರೆ. ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದು ಕೇವಲ ಬೆರಳೆಣಿಕೆಯ ಬೈಕ್‌ಗಳನ್ನು ಹೊರತುಪಡಿಸಿ ಬೇರಾವ ವಾಹನಗಳು ರಸ್ತೆಗೆ ಇಳಿದಿಲ್ಲ. ದೇವಾಲಯ, ಮಸೀದಿ,

ಜನತಾ ಕರ್ಫ್ಯೂ: ಮಂಗಳೂರು ಸ್ತಬ್ಧ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕೊರೋನ ವೈರಸ್‌ಗೆ ಮತ್ತೊಂದು ಬಲಿ ದೇಶದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆ

ಹೊಸದಿಲ್ಲಿ, ಮಾ.22: ಮಹಾಮಾರಿ ಕೊರೋನ ವೈರಸ್‌ಗೆ ಮುಂಬೈಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ದೇಶದಲ್ಲಿ ವೈರಸ್‌ನಿಂದ ಹಸುನೀಗಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಮಹಾರಾಷ್ಟ್ರ ಮೂಲದ 56 ವರ್ಷದ ವ್ಯಕ್ತಿಯೊಬ್ಬರು ವೈರಸ್’ಗೆ ಬಲಿಯಾಗಿದ್ದಾರೆಂದು ತಿಳಿದುಬಂದಿದೆ. ಇದರಂತೆ ದೇಶದಲ್ಲಿ ಮಾರಕ ಕೊರೋನ ವೈರಸ್’ಗೆ ಆರು ಮಂದಿ ಬಲಿಯಾದಂತಾಗಿದೆ.

ಕೊರೋನ ವೈರಸ್‌ಗೆ ಮತ್ತೊಂದು ಬಲಿ ದೇಶದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top