ಬ್ರೇಕಿಂಗ್ ನ್ಯೂಸ್

ದೇಶದಲ್ಲಿ ಒಂದೇ ದಿನ ಕೊರೋನ ಸೋಂಕಿಗೆ 48 ಮಂದಿ ಸಾವು: 1,396 ಹೊಸ ಪ್ರಕರಣ ಪತ್ತೆ

ಹೊಸದಿಲ್ಲಿ, ಎ.27: ಭಾರತದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,396 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. 48 ಮಂದಿ ಕೊರೋನಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 27,892 ಕ್ಕೆ ಏರಿಕೆಯಾಗಿದ್ದು, ಈವರೆಗೆ 872 ಮಂದಿ ಸಾವನ್ನಪ್ಪಿದ್ದಾರೆ. 6,185 ಜನರು ಗುಣಮುಖರಾಗಿದ್ದು, 20,835 ಜನರು ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ 8,068 ಜನರಿಗೆ ಸೋಂಕು ತಗುಲಿದ್ದು, 342 ಜನರು ಮೃತಪಟ್ಟಿದ್ದಾರೆ. ಗುಜರಾತ್ ನಲ್ಲಿ […]

ದೇಶದಲ್ಲಿ ಒಂದೇ ದಿನ ಕೊರೋನ ಸೋಂಕಿಗೆ 48 ಮಂದಿ ಸಾವು: 1,396 ಹೊಸ ಪ್ರಕರಣ ಪತ್ತೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಕ್ರಿಯವಾಗಿದೆ ಒಟಿಪಿ ಮೂಲಕ ಬ್ಯಾಂಕಿನಿಂದ ಹಣ ದೋಚುವ ಜಾಲ ➤ ಅಪರಿಚಿತ ಕರೆಗೆ ಉತ್ತರಿಸುವ ಮುನ್ನ ಏನು ಮಾಡಬೇಕು..?

(ನ್ಯೂಸ್ ಕಡಬ) newskadaba.com ಕಡಬ, ಎ.27. ಇತ್ತೀಚಿನ ದಿನಗಳಲ್ಲಿ ಕೊರೋನಾ (ಕೋವಿಡ್ -19) ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ಬಗ್ಗೆ ಮಾನ್ಯ ಪ್ರಧಾನ ಮಂತ್ರಿಗಳ, ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ಖಾತೆಗೆ ಹಣ ಕಳುಹಿಸುವರೇ ಹಾಗೂ ಸಾರ್ವಜನಿಕವಾಗಿ ಖಾಸಗಿ ಸಂಸ್ಥೆಗಳು ಪರಿಹಾರಕ್ಕಾಗಿ ಅಥವಾ ದೇಣಿಗೆ ನೀಡಬೇಕೆಂದು ನಕಲಿ ಸಂಸ್ಥೆಗಳು ಕರೆ ಅಥವಾ ಸಾಮಾಜಿಕ ಜಾಲತಾಣಗಳ ಮುಖಾಂತರ ಕಾರ್ಯಾಚರಿಸುತ್ತಿವೆ. ಈ ಮೂಲಕ ಎಲ್ಲಾ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನ ಗೊಂಡಿದ್ದು, ಈ ವಿಷಯವನ್ನು ಮುಂದಿಟ್ಟುಕೊಂಡು

ಸಕ್ರಿಯವಾಗಿದೆ ಒಟಿಪಿ ಮೂಲಕ ಬ್ಯಾಂಕಿನಿಂದ ಹಣ ದೋಚುವ ಜಾಲ ➤ ಅಪರಿಚಿತ ಕರೆಗೆ ಉತ್ತರಿಸುವ ಮುನ್ನ ಏನು ಮಾಡಬೇಕು..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆ ➤ ಮೀನಾಡಿಯಲ್ಲಿ ಮನೆಗೆ ಸಿಡಿಲು ಬಡಿತ, ಇಚಿಲಂಪಾಡಿಯಲ್ಲಿ ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಎ.26. ಭಾನುವಾರ ಸಂಜೆ ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ಕೆಲವೆಡೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿವೆ. ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ನಿವಾಸಿ ಬಾಳಪ್ಪ ಗೌಡ ಎಂಬವರ ಮನೆಗೆ ಸಿಡಿಲು ಬಡಿದಿದೆ. ಬೆಂಕಿಯ ಉಂಡೆಯೊಂದು‌ ಮನೆಗೆ ಅಪ್ಪಳಿಸಿದ್ದು, ಮನೆಯ ಒಂದು ಪಾರ್ಶ್ವ ಹಾನಿಗೀಡಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇನ್ನೊಂದೆಡೆ ಭಾನುವಾರ ಸಂಜೆ‌ ಸುರಿದ ಮಳೆಗೆ ಇಚಿಲಂಪಾಡಿಯ ಪಾದೆ‌ ನಿವಾಸಿ ಸಾಂತಪ್ಪ ಗೌಡ ಎಂಬವರ ಮನೆಗೆ ಹಾನಿಯಾಗಿದೆ.

ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆ ➤ ಮೀನಾಡಿಯಲ್ಲಿ ಮನೆಗೆ ಸಿಡಿಲು ಬಡಿತ, ಇಚಿಲಂಪಾಡಿಯಲ್ಲಿ ಮನೆಗೆ ಹಾನಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

Breaking news ಬಂಟ್ವಾಳದಲ್ಲಿ ಮತ್ತೊಂದು ಕೊರೋನ ದೃಢ: 47  ವರ್ಷದ ಮಹಿಳೆಗೆ ತಗುಲಿದ ಸೋಂಕು

ಮಂಗಳೂರು, ಎ.26: ಕೊರೋನ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಯ 47 ವರ್ಷದ ಸಿಬ್ಬಂದಿ ಮಹಿಳೆಗೆ ಕೊರೋನ ದೃಢಪಟ್ಟಿದೆ. ರಾಜ್ಯದಲ್ಲಿ ಏಕೈಕ ಪ್ರಕರಣ ಇದಾಗಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ವೃದ್ಧೆ ಎ.21ರಂದು ಕೊರೋನ ಸೋಂಕಿನಿಂದ ಮೃತಪಟ್ಟಿದ್ದು ವೃದ್ದೆಯ ಸಂಪರ್ಕದಿಂದ ಸ್ವೀಪರ್ ಕೆಲಸ ಮಾಡುತ್ತಿದ್ದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲದ ಮಹಿಳೆಗೆ ಸೋಂಕು ದೃಢಪಟ್ಟಿದ್ದು ನಾಯಿಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ವೃದ್ಧೆ ಮೃತಪಟ್ಟ ತಕ್ಷಣ ಆಸ್ಪತ್ರೆ ಸಿಬ್ಬಂದಿಯನ್ನು

Breaking news ಬಂಟ್ವಾಳದಲ್ಲಿ ಮತ್ತೊಂದು ಕೊರೋನ ದೃಢ: 47  ವರ್ಷದ ಮಹಿಳೆಗೆ ತಗುಲಿದ ಸೋಂಕು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದೇಶದಲ್ಲಿ 26 ಸಾವಿರ ದಾಟಿದ ಕೊರೋನ ಸೋಂಕಿತರು: 824 ಮಂದಿ ಸಾವು

ಹೊಸದಿಲ್ಲಿ, ಎ.26: ಭಾರತದಲ್ಲಿ ಕೋವಿಡ್-19 ಆರ್ಭಟ ಮುಂದುವರಿದಿದ್ದು ಸೋಂಕಿತರ ಸಂಖ್ಯೆ 26 ಸಾವಿರದ ಗಡಿ ದಾಟಿದೆ. ಮಹಾರಾಷ್ಟ್ರ, ಗುಜರಾತ್ ನಲ್ಲಿ ಸೋಂಕು ಪೀಡಿತರ ಸಂಖ್ಯೆ ದ್ವಿಗುಣಗೊಂಡಿರುವುದು ಕಳವಳವನ್ನು ಹೆಚ್ಚಿಸಿದೆ. ಕೋವಿಡ್ -19 ಹೊಸ 5,000 ಪ್ರಕರಣಗಳು ಕೇವಲ 4 ದಿನಗಳಲ್ಲಿ ದಾಖಲಾಗಿರುವುದು ಆತಂಕವನ್ನು ಹೆಚ್ಚಿಸಿದೆ. ಶನಿವಾರ ಭಾರತದಾದ್ಯಂತ 1,834 ಹೊಸ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಮಹಾರಾಷ್ಟ್ರದಲ್ಲೇ 811 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದ ರಾಜಧಾನಿ ಮುಂಬೈ ವೈರಸ್ ಅಟ್ಟಹಾಸಕ್ಕೆ ನಲುಗಿ ಹೋಗಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 602

ದೇಶದಲ್ಲಿ 26 ಸಾವಿರ ದಾಟಿದ ಕೊರೋನ ಸೋಂಕಿತರು: 824 ಮಂದಿ ಸಾವು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸೀಲ್ ಡೌನ್ ಆದ ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿ ಕಡಬಕ್ಕೆ ಆಗಮನ ➤ ಆತಂಕದಲ್ಲಿ ಗ್ರಾಮಸ್ಥರು..!! ಯುವಕನಿಗೆ ಹೋಂ ಕ್ವಾರಂಟೈನ್

(ನ್ಯೂಸ್ ಕಡಬ) newskadaba.com ಕಡಬ, ಎ.25. ಕಡ್ಯ ಕೊಣಾಜೆ ಗ್ರಾಮದ ಯುವಕನೋರ್ವ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿದ್ದು ಆಸ್ಪತ್ರೆ ಕಂಟೈನ್ಮೆಂಟ್ ಝೋನ್ ಆಗಿರುವ ಬೆನ್ನಲ್ಲೇ ಯುವಕ ತನ್ನ ಮನೆಗೆ ಬಂದಿದ್ದು ಇದು ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿತ್ತು. ಈ ಬಗ್ಗೆ ಆರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆಯವರು ಅವರ ಮನೆಗೆ ಭೇಟಿ ನೀಡಿ ಹೋಂ ಕ್ವಾರಂಟೈನ್ನಲ್ಲಿರುವಂತೆ ಎಚ್ಚರಿಕೆ ನೀಡಿದ ಘಟನೆ ಏ.24ರಂದು ನಡೆದಿದೆ. ಕಡ್ಯ ಕೊಣಾಜೆ ಗ್ರಾಮದ ಕಲ್ಲೂರು ನಿವಾಸಿಯಾಗಿರುವ ಯುವಕನೋರ್ವ ಮಂಗಳೂರಿನ ಫಸ್ಟ್ ನ್ಯೂರೋ

ಸೀಲ್ ಡೌನ್ ಆದ ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿ ಕಡಬಕ್ಕೆ ಆಗಮನ ➤ ಆತಂಕದಲ್ಲಿ ಗ್ರಾಮಸ್ಥರು..!! ಯುವಕನಿಗೆ ಹೋಂ ಕ್ವಾರಂಟೈನ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

Breaking news ದ.ಕ. ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಸೋಂಕು ದೃಢ: ಬಂಟ್ವಾಳದ 33  ವರ್ಷದ ಮಹಿಳೆಗೆ ಪಾಸಿಟಿವ್

ಮಂಗಳೂರು, ಎ.25: ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಸೋಂಕು ದೃಢಪಟ್ಟಿದೆ. ಬಂಟ್ವಾಳದ 65ಹರೆಯದ ಮಹಿಳೆಯ ಸಂಪರ್ಕಕ್ಕೆ ಬಂದಿದ್ದ ಬಂಟ್ವಾಳದ 33 ವರ್ಷದ ಮಹಿಳೆಗೂ ಸೋಂಕು ದೃಢವಾಗಿದ್ದು, ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.   ಜಿಲ್ಲೆಯಲ್ಲಿ ಈವರೆಗೆ ಕೊರೋನ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಕೊರೋನ ಬಲಿಯಾದ ವೃದ್ದ ಮಹಿಳೆಯ ನೆರೆಮನೆಯ ಮಹಿಳೆಗೂ ಕೊರೋನ ತಗುಲಿದ್ದು, ಈಕೆಯ ಮಗಳಿಗೂ ಇದೀಗ ಕೋವಿಡ್ ಸೋಂಕು ಇರುವುದು ದೃಡವಾಗಿದೆ. ಈ ಹಿನ್ನಲೆಯಲ್ಲಿ ತಾಯಿ, ಮಗಳು ಇಬ್ಬರಿಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.  

Breaking news ದ.ಕ. ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಸೋಂಕು ದೃಢ: ಬಂಟ್ವಾಳದ 33  ವರ್ಷದ ಮಹಿಳೆಗೆ ಪಾಸಿಟಿವ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಖ್ಯಾತ ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.25. ಬಜರಂಗದಳದ ಮಾಜಿ ರಾಜ್ಯ ಸಂಚಾಲಕ, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್ ಕೊಪ್ಪ ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂಲತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದ ಅವರಿಗೆ 47 ವರ್ಷ ವಯಸ್ಸಾಗಿತ್ತು. ಬಜರಂಗದಳದಲ್ಲಿ ಗುರುತಿಸಿಕೊಂಡು ರಾಜ್ಯ ಸಂಚಾಲಕ ಹುದ್ದೆಯವರೆಗೆ ಏರಿದ್ದ ಅವರು ಆ ಬಳಿಕದ ದಿನಗಳಲ್ಲಿ ಸಂಘ ಪರಿವಾರದ ವಿರುದ್ದ ಧ್ವನಿಯೆತ್ತತೊಡಗಿದ್ದರು.

ಖ್ಯಾತ ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್ ಇನ್ನಿಲ್ಲ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬದಲ್ಲಿ ಮತ್ತೊಂದು ಒಟಿಪಿ ವಂಚನೆ ಬೆಳಕಿಗೆ..!! ➤ ಕ್ಷಣಮಾತ್ರದಲ್ಲಿ 50 ಸಾವಿರ ರೂ. ಗುಳುಂ

(ನ್ಯೂಸ್ ಕಡಬ) newskadaba.com ಕಡಬ, ಎ.24. ಕಡಬದಲ್ಲಿ ಮತ್ತೊಂದು ಒಟಿಪಿ ವಂಚನೆ‌ ನಡೆದಿದ್ದು, ನೆಟ್ಟಣ ನಿವಾಸಿಯೋರ್ವರ ಬ್ಯಾಂಕ್ ಅಕೌಂಟ್ ನಿಂದ ಐವತ್ತು ಸಾವಿರ ರೂ.ಗಳನ್ನು ಎಗರಿಸಲಾಗಿದೆ. ಕಡಬ ತಾಲೂಕಿನ ಬಿಳಿನೆಲೆ ನಿವಾಸಿ ಧರ್ಮಪಾಲ ಎಂಬವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಎಪ್ರಿಲ್ 21 ರಂದು ತೆಗೆದಿರುವ ಬಗ್ಗೆ ಮೊಬೈಲ್‌ ಗೆ ಮೆಸೇಜ್‌ ಬಂದಿದ್ದು, ಅದರಂತೆ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ‌ 20 ಸಾವಿರ ಮತ್ತು 30 ಸಾವಿರ‌ ರೂ. ಗಳನ್ನು ತೆಗೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಧರ್ಮಪಾಲ

ಕಡಬದಲ್ಲಿ ಮತ್ತೊಂದು ಒಟಿಪಿ ವಂಚನೆ ಬೆಳಕಿಗೆ..!! ➤ ಕ್ಷಣಮಾತ್ರದಲ್ಲಿ 50 ಸಾವಿರ ರೂ. ಗುಳುಂ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ಳಂಬೆಳಗ್ಗೆ ಕಡಬದ ಯುವಕನಿಗೆ ಸೈಬರ್ ವಂಚಕನಿಂದ ಕರೆ..! ➤ ಯುವಕನ ಜಾಣತನಕ್ಕೆ ಇಂಗು ತಿಂದ ಮಂಗನಂತಾದ ವಂಚಕ

(ನ್ಯೂಸ್ ಕಡಬ) newskadaba.com ಕಡಬ, ಎ.24. ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 2000 ರೂಪಾಯಿಯನ್ನು ನಿಮ್ಮ ಖಾತೆಗೆ ಜಮಾ‌ ಮಾಡಲಿದ್ದು, ಅದಕ್ಕಾಗಿ ಒಟಿಪಿ ನಂಬರ್ ನೀಡುವಂತೆ ವಂಚಕರ ತಂಡವೊಂದು ಕಡಬದ ಯುವಕನಿಗೆ ಕರೆ ಮಾಡಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರಿನ ಬ್ಯಾಂಕೊಂದರ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯು ನಿಮ್ಮ ವಿಜಯಾ ಬ್ಯಾಂಕ್ ಅಕೌಂಟ್ ಗೆ ಪ್ರಧಾನಿ ಮೋದಿಯವರ ವತಿಯಿಂದ ನೀಡಲ್ಪಡುವ 2000 ರೂ. ಗಳನ್ನು ಕಳುಹಿಸಿಕೊಡಲಾಗುತ್ತಿದ್ದು,ಅದಕ್ಕಾಗಿ ಈಗ ಬಂದಿರುವ ಒಟಿಪಿ‌ ಸಂಖ್ಯೆಯನ್ನು

ಬೆಳ್ಳಂಬೆಳಗ್ಗೆ ಕಡಬದ ಯುವಕನಿಗೆ ಸೈಬರ್ ವಂಚಕನಿಂದ ಕರೆ..! ➤ ಯುವಕನ ಜಾಣತನಕ್ಕೆ ಇಂಗು ತಿಂದ ಮಂಗನಂತಾದ ವಂಚಕ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top