ಬ್ರೇಕಿಂಗ್ ನ್ಯೂಸ್

ಕಡಬ ತಾಲೂಕಿನ ವಿವಿಧೆಡೆ ಅತಂತ್ರರಾಗಿದ್ದ ಕಾರ್ಮಿಕರು ಮರಳಿ ಹುಟ್ಟೂರಿಗೆ ➤ 7 ಬಸ್ ಗಳಲ್ಲಿ ಊರಿಗೆ ಮರಳಿದ 196 ವಲಸೆ ಕಾರ್ಮಿಕರು

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಅತಂತ್ರ ವಲಸೆ ಕಾರ್ಮಿಕರಿಗೆ ರಾಜ್ಯದ ಒಳಗಡೆ ಊರಿಗೆ ತೆರಳಲು ಸರಕಾರವು ಉಚಿತ ಅವಕಾಶ ಕಲ್ಪಿಸಿರುವುದರಿಂದ ಸೋಮವಾರ ರಾತ್ರಿ ಕಡಬದಿಂದ 7 ಬಸ್‌ಗಳಲ್ಲಿ ಸುಮಾರು 196 ಮಂದಿ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿ ಕೊಡಲಾಯಿತು. ಕಡಬ ತಾಲೂಕು ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಅವರು ಪಿಡಿಒಗಳ ಮೂಲಕ, ಊರಿಗೆ ತೆರಳಲಿರುವ ವಲಸೆ ಕಾರ್ಮಿಕರ ಪಟ್ಟಿಯನ್ನು ಪಡೆದು ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ಬೆಳಗಾವಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, […]

ಕಡಬ ತಾಲೂಕಿನ ವಿವಿಧೆಡೆ ಅತಂತ್ರರಾಗಿದ್ದ ಕಾರ್ಮಿಕರು ಮರಳಿ ಹುಟ್ಟೂರಿಗೆ ➤ 7 ಬಸ್ ಗಳಲ್ಲಿ ಊರಿಗೆ ಮರಳಿದ 196 ವಲಸೆ ಕಾರ್ಮಿಕರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ, ಬೆಳ್ಳಾರೆ ಪರಿಸರದಲ್ಲೂ ಗುಡುಗು ಮಿಶ್ರಿತ ಭಾರೀ ಗಾಳಿ ಮಳೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.05. ಮಂಗಳವಾರ ಸಂಜೆ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧೆಡೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆಯಾಗಿದೆ.   ಸುಳ್ಯ, ಬೆಳ್ಳಾರೆ, ಸವಣೂರು, ಕಡಬ, ಮರ್ಧಾಳ, ಬಿಳಿನೆಲೆ, ಪಂಜ, ನೆಲ್ಯಾಡಿ, ಇಚಿಲಂಪಾಡಿ, ‌ಆಲಂಕಾರು, ಆತೂರು ಪರಿಸರದಲ್ಲಿ ಭಾರೀ ಗಾಳಿ ಬೀಸಿದ್ದು, ಹಲವೆಡೆ ಹಾನಿಯಾಗಿರುವ ಸಂಭವವಿದೆ. ಸುಬ್ರಹ್ಮಣ್ಯದಲ್ಲಿ ಗುಡುಗು ಮಿಶ್ರಿತ ಮಳೆಯಾಗಿದ್ದು ಗಾಳಿಯ ರಭಸವು ಕಡಿಮೆಯಾಗಿತ್ತು.

ಸುಳ್ಯ, ಬೆಳ್ಳಾರೆ ಪರಿಸರದಲ್ಲೂ ಗುಡುಗು ಮಿಶ್ರಿತ ಭಾರೀ ಗಾಳಿ ಮಳೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ, ನೆಲ್ಯಾಡಿ ಪರಿಸರದಲ್ಲಿ ಗುಡುಗು ಮಿಶ್ರಿತ ಭಾರೀ ಗಾಳಿ ಮಳೆ ➤ ಸುಬ್ರಹ್ಮಣ್ಯದಲ್ಲಿ ಸಾಧಾರಣ ಮಳೆ

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಮಂಗಳವಾರ ಸಂಜೆ ಕಡಬ ತಾಲೂಕಿನ ವಿವಿಧೆಡೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆಯಾಗಿದೆ. ಕಡಬ, ಮರ್ಧಾಳ, ಬಿಳಿನೆಲೆ, ಪಂಜ, ನೆಲ್ಯಾಡಿ, ಇಚಿಲಂಪಾಡಿ, ‌ಆಲಂಕಾರು, ಆತೂರು ಪರಿಸರದಲ್ಲಿ ಭಾರೀ ಗಾಳಿ ಬೀಸಿದ್ದು, ಹಲವೆಡೆ ಹಾನಿಯಾಗಿರುವ ಸಂಭವವಿದೆ. ಹಾನಿಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಸುಬ್ರಹ್ಮಣ್ಯದಲ್ಲಿ ಗುಡುಗು ಮಿಶ್ರಿತ ಮಳೆಯಾಗಿದ್ದು ಗಾಳಿಯ ರಭಸವು ಕಡಿಮೆಯಾಗಿತ್ತು.

ಕಡಬ, ನೆಲ್ಯಾಡಿ ಪರಿಸರದಲ್ಲಿ ಗುಡುಗು ಮಿಶ್ರಿತ ಭಾರೀ ಗಾಳಿ ಮಳೆ ➤ ಸುಬ್ರಹ್ಮಣ್ಯದಲ್ಲಿ ಸಾಧಾರಣ ಮಳೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಪ್ರಥಮ ಪಿಯು ಫಲಿತಾಂಶ ಪ್ರಕಟ ➤ ಫಲಿತಾಂಶ ತಿಳಿಯಲು ಕ್ಲಿಕ್??ಮಾಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.05. ಪ್ರಥಮ ಪಿಯು ಫಲಿತಾಂಶ ಮಂಗಳವಾರದಂದು ಪ್ರಕಟವಾಗಿದ್ದು, ವಿದ್ಯಾರ್ಥಿಗಳ ಮೊಬೈಲ್‌ಗೆ ಅಥವಾ ಇಮೇಲ್‌ಗೆ ಫಲಿತಾಂಶದ ವಿವರ ತಲುಪಲಿದೆ. ಕೊರೊನಾ ವೈರಸ್‌ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅಥವಾ ಪೋಷಕರು ಫಲಿತಾಂಶ ತಿಳಿಯಲು ಕಾಲೇಜುಗಳಿಗೆ ತೆರಳುವುದನ್ನು ನಿಷೇಧಿಸಲಾಗಿದೆ. ಕಾಲೇಜುಗಳ ಸೂಚನಾ ಫಲಕಗಳಲ್ಲಿ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ಶಿಕ್ಷಣ ಇಲಾಖೆಯು ಈಗಾಗಲೇ ಸ್ಪಷ್ಟಪಡಿಸಿದೆ. ಫಲಿತಾಂಶವನ್ನು ತಿಳಿಯಲು ಕೆಳಗಿನ ಲಿಂಕನ್ನು ಕ್ಲಿಕ್??ಮಾಡಿ. https://result.dkpucpa.com/

ಪ್ರಥಮ ಪಿಯು ಫಲಿತಾಂಶ ಪ್ರಕಟ ➤ ಫಲಿತಾಂಶ ತಿಳಿಯಲು ಕ್ಲಿಕ್??ಮಾಡಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ನಾಳೆಯಿಂದ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ

ಉಡುಪಿ, ಮೇ 4: ಜಿಲ್ಲೆಯಲ್ಲಿ ಮಂಗಳವಾರದಿಂದ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆಯಾಗಲಿದ್ದು, ಖರೀದಿಗೆ ಹೆಚ್ಚಿನ ಸಮಯ ಸಿಗಲಿದ್ದು, ಬೆಳಗ್ಗೆ 7ರಿಂದ ಸಂಜೆ 7ರ ತನಕ ಅಂಗಡಿಗಳು ಕಾರ್ಯಾಚರಿಸಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಐದು ಶಾಸಕರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರದಂದು ಜನರ ಪ್ರತಿಕ್ರಿಯೆಗಳನ್ನು ಗಮನಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮಂಗಳವಾರದಂದು ವೈನ್‌ಶಾಪ್ ಮಾತ್ರ ಕಾರ್ಯಾಚರಣೆ ನಡೆಸಲಿದ್ದು, ಬಾರ್ ಓಪನ್ ಇಡಲು ಅವಕಾಶಗಳಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಉಡುಪಿ: ನಾಳೆಯಿಂದ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮದ್ಯ ಸಿಕ್ಕಿದ ಕೆಲವೇ ಕ್ಷಣದಲ್ಲಿ ಒಂದು ವಿಕೆಟ್ ಪತನ…!! ➤ ಕಂಠಪೂರ್ತಿ ಮದ್ಯ ಕುಡಿದು ರಸ್ತೆಯಲ್ಲಿ ಬಿದ್ದ ಮದ್ಯಪಾನಿ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಮೇ.04. ಕಳೆದ ಒಂದೂವರೆ ತಿಂಗಳಿನಿಂದ ಮುಚ್ಚಲಾಗಿದ್ದ ಮದ್ಯದಂಗಡಿಯನ್ನು ತೆರೆಯಲು ಸರಕಾರವು ಆದೇಶ ಹೊರಡಿಸಿದ್ದೇ ತಡ ಮದ್ಯ ಪ್ರಿಯರು ಸರತಿ ಸಾಲಿನಲ್ಲಿ ನಿಂತು ಮದ್ಯಕ್ಕಾಗಿ ಕಾಯುತ್ತಿದ್ದ ದೃಶ್ಯ ದೇಶದಾದ್ಯಂತ ಕಂಡುಬಂತು‌. ಅದರಲ್ಲೂ ಮದ್ಯ ಪ್ರಿಯನೊಬ್ಬ 40 ದಿನದ ಮದ್ಯದ ಆಸೆಯನ್ನು ಒಂದೇ ಗಂಟೆಯಲ್ಲಿ ಈಡೇರಿಸಿಕೊಂಡು ರಸ್ತೆ ಮಧ್ಯೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ. ಬೆಳಗ್ಗೆ 6 ಗಂಟೆಯಿಂದ ಮದ್ಯದಂಗಡಿಯ ಮುಂದೆ ಕ್ಯೂನಲ್ಲಿ ನಿಂತು ಕಾಯುತ್ತಿದ್ದ ಅಸಾಮಿ ಮದ್ಯ ದೊರೆತ ಕೂಡಲೇ

ಮದ್ಯ ಸಿಕ್ಕಿದ ಕೆಲವೇ ಕ್ಷಣದಲ್ಲಿ ಒಂದು ವಿಕೆಟ್ ಪತನ…!! ➤ ಕಂಠಪೂರ್ತಿ ಮದ್ಯ ಕುಡಿದು ರಸ್ತೆಯಲ್ಲಿ ಬಿದ್ದ ಮದ್ಯಪಾನಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳಿಗ್ಗೆಯಿಂದಲೇ ಮದ್ಯದಂಗಡಿಯ‌ ಮುಂದೆ ಗ್ರಾಹಕರ ಸರತಿ ಸಾಲು ➤ ನೂಕುನುಗ್ಗಲು ನಿಯಂತ್ರಿಸುವುದು ಪೊಲೀಸರಿಗೆ ಸವಾಲು

(ನ್ಯೂಸ್ ಕಡಬ) newskadaba.com ಕಡಬ, ಮೇ.04. ಕಳೆದ ಒಂದೂವರೆ ತಿಂಗಳಿನಿಂದ ಮುಚ್ಚಲಾಗಿದ್ದ ಮದ್ಯದಂಗಡಿಯನ್ನು ತೆರೆಯಲು ಸರಕಾರವು ಆದೇಶ ಹೊರಡಿಸಿದ್ದೇ ತಡ ಮದ್ಯ ಪ್ರಿಯರು ಸರತಿ ಸಾಲಿನಲ್ಲಿ ನಿಂತು ಮದ್ಯಕ್ಕಾಗಿ ಕಾಯುತ್ತಿದ್ದ ದೃಶ್ಯ ಸೋಮವಾರದಂದು ಕಡಬದಲ್ಲಿ ಕಂಡುಬಂತು‌. ಕಡಬದ ಪಂಜ ರಸ್ತೆಯಲ್ಲಿರುವ ಎಂಎಸ್ಐಎಲ್ ಮತ್ತು ಕೊರುಂದೂರು ಎಂಬಲ್ಲಿರುವ ಪ್ರಶಾಂತ್ ವೈನ್ ಶಾಪ್ ಮುಂದೆ ಮದ್ಯ ಪ್ರಿಯರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ. ಗ್ರಾಹಕರು ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಮದ್ಯ ಮಾರಾಟಗಾರರು ಪೈಪ್ ಗಳನ್ನು ಕಟ್ಟಿ ವ್ಯವಸ್ಥೆ

ಬೆಳಿಗ್ಗೆಯಿಂದಲೇ ಮದ್ಯದಂಗಡಿಯ‌ ಮುಂದೆ ಗ್ರಾಹಕರ ಸರತಿ ಸಾಲು ➤ ನೂಕುನುಗ್ಗಲು ನಿಯಂತ್ರಿಸುವುದು ಪೊಲೀಸರಿಗೆ ಸವಾಲು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ ಪರಿಸರದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆ *➤ ಹಲವು ಮನೆಗಳಿಗೆ ಹಾನಿ, ಮುರಿದು ಬಿದ್ದ ವಿದ್ಯುತ್ ಕಂಬಗಳು ➤ ಅಪಾರ ಕೃಷಿ ನಾಶ, ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಮೇ.03. ಭಾನುವಾರ ಸಂಜೆ ಸುರಿದ‌ ಗುಡುಗು ಸಹಿತ ಭಾರೀ ಮಳೆಗೆ ಕಡಬ ತಾಲೂಕಿನ ವಿವಿಧೆಡೆ ಹಲವು ಮನೆಗಳಿಗೆ, ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಪಟ್ರೋಡಿ‌ ಎಂಬಲ್ಲಿ ಬೀಸಿದ ಭಾರೀ ಮಳೆಗೆ ಹಲವು ಮರಗಳು ಧರಾಶಾಯಿಯಾಗಿದ್ದು, ತಂಗಪ್ಪ ಮೇಸ್ತ್ರಿ ಎಂಬವರ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಮೇಲ್ಛಾವಣಿಗೆ ಹಾನಿಯಾಗಿದೆ. ಪಕ್ಕದಲ್ಲೇ ಇದ್ದ ವಿಕ್ರಂ ಎಂಬವರ ಮನೆಗೂ ಹಾನಿಯಾಗಿದ್ದು, ಹುಕ್ರ‌

ಕಡಬ ಪರಿಸರದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆ *➤ ಹಲವು ಮನೆಗಳಿಗೆ ಹಾನಿ, ಮುರಿದು ಬಿದ್ದ ವಿದ್ಯುತ್ ಕಂಬಗಳು ➤ ಅಪಾರ ಕೃಷಿ ನಾಶ, ಲಕ್ಷಾಂತರ ರೂ. ನಷ್ಟ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ನಿಸಾರ್ ಅಹಮದ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.03. ಕನ್ನಡದ ಹಿರಿಯ ಸಾಹಿತಿ, ಕವಿ ಕೆ.ಎಸ್. ನಿಸಾರ್ ಅಹ್ಮದ್ ಅವರು ಭಾನುವಾರದಂದು ನಿಧನರಾದರು. ನಿತ್ಯೋತ್ಸವ ಕವಿ ಎಂದೇ ಪ್ರಖ್ಯಾತಿ ಪಡೆದು ಕನ್ನಡಿಗರ ಮನೆ ಮಾತಾಗಿದ್ದ ಅವರು ಅತ್ಯುತ್ತಮ ಸಾಹಿತ್ಯ ಸಂಕಲನಗಳನ್ನು ಕನ್ನಡಕ್ಕೆ ನೀಡಿದ್ದರು. 2007 ರಲ್ಲಿ ಶಿವಮೊಗ್ಗದಲ್ಲಿ ನಡೆದ 73 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರ ನಿಧನಕ್ಕೆ

ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ನಿಸಾರ್ ಅಹಮದ್ ವಿಧಿವಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದ.ಕ.ದಲ್ಲಿ ನಾಳೆಯಿಂದ ಬೆಳಿಗ್ಗೆ 7 ರಿಂದ ರಾತ್ರಿ 7ರ ವರೆಗೆ ಲಾಕ್‌ಡೌನ್ ಸಡಿಲಿಕೆ ➤ ಏನೆಲ್ಲಾ ಇರುತ್ತೆ ಎಂದು ತಿಳಿಯಬೇಕೇ..?

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.03. ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ನ್ನು ಬೆಳಿಗ್ಗೆ 7 ರಿಂದ ರಾತ್ರಿ 7ರವರೆಗೆ ಸಡಿಲಿಸಿ ಜಿಲ್ಲಾಧಿಕಾರಿ ಸಿಂಧೂ.ಬಿ‌.ರೂಪೇಶ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಆಟೋ ರಿಕ್ಷಾ, ಕ್ಯಾಬ್ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಆಟೋ ಮತ್ತು ಕ್ಯಾಬ್ ಗಳಲ್ಲಿ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ವಾಹನಗಳಾದ ಬೈಕ್ ಮತ್ತು ಕಾರುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬೈಕಿನಲ್ಲಿ ಒಬ್ಬರಿಗಷ್ಟೇ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಸ್ಥಳೀಯ ಅಂಗಡಿಗಳು,

ದ.ಕ.ದಲ್ಲಿ ನಾಳೆಯಿಂದ ಬೆಳಿಗ್ಗೆ 7 ರಿಂದ ರಾತ್ರಿ 7ರ ವರೆಗೆ ಲಾಕ್‌ಡೌನ್ ಸಡಿಲಿಕೆ ➤ ಏನೆಲ್ಲಾ ಇರುತ್ತೆ ಎಂದು ತಿಳಿಯಬೇಕೇ..? Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top