ಬ್ರೇಕಿಂಗ್ ನ್ಯೂಸ್

ಬ್ಯಾಂಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ದುರಂತ ಕಡತಗಳಿಗೆ ಹಾನಿ

(ನ್ಯೂಸ್ ಕಡಬ)newskadaba.com ಉಡುಪಿ: ಇಲ್ಲಿನ ಜಾಮೀಯ ಮಸೀದಿ ಬಳಿಯಿರುವ ಯೂನಿಯನ್ ಬ್ಯಾಂಕ್ ನಲ್ಲಿ ನಡೆದ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಮುಂಜಾನೆ ನಡೆದಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬ್ಯಾಂಕ್ ನ ಹವಾನಿಯಂತ್ರಕದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ನಾಲ್ಕು ಕಂಪ್ಯೂಟರ್ ಗಳು ಹಾಗೂ ಹಲವು ಕಡತಗಳಿಗೆ ಹಾನಿಯಾಗಿದೆ. ಉಡುಪಿಯ ಅಗ್ನಿ ಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ […]

ಬ್ಯಾಂಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ದುರಂತ ಕಡತಗಳಿಗೆ ಹಾನಿ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಾಜಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ)newskadaba.com ಪುತ್ತೂರು, ಜು.7, ಮಾಜಿ ಕ್ರಿಕೆಟ್‌ ಆಟಗಾರ ಪುತ್ತೂರು ಜೈನ ಬಸದಿ ಬಳಿಯ ನಿವಾಸಿ ವಾರಿಸೇನ ಶೆಟ್ಟಿ(90 ವ)ರವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ನೆಲ್ಲಿಕಟ್ಟೆ ಮಿತ್ರ ಮಂಡಳಿಯ ಅಸ್ತಿತ್ವದಲ್ಲಿ ಸಕ್ರೀಯ ಆಟಗಾರರಾಗಿದ್ದರು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಮೃತರು ಪುತ್ರಿಯರಾದ ಜ್ಯೋತಿ, ವಾಣಿಶ್ರೀ, ಮಾಲಿನಿ ಮತ್ತು ಪುತ್ರ ರಾಜೇಶ್ ಅವರನ್ನು ಅಗಲಿದ್ದಾರೆ.

ಮಾಜಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ ನಿಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

?? ?ig Breaking News ದಕ್ಷಿಣ ಕನ್ನಡದಲ್ಲಿ ಕೊರೋನಾ ರುದ್ರ ತಾಂಡವ ➤ ಇಂದೂ ಓರ್ವರನ್ನು ಬಲಿ ಪಡೆದ ಕೊರೋನಾ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.7, ಮಹಾಮಾರಿ ಕೊರೋನಾವು ದಿನದಿಂದ ದಿನಕ್ಕೆ ತನ್ನ ಉಗ್ರ ಸ್ವರೂಪವನ್ನು ಮುಂದುವರೆಸುತ್ತಿದ್ದು, ಇಂದು ಕೂಡಾ ಮಂಗಳೂರಿನಲ್ಲಿ ಓರ್ವ ವ್ಯಕ್ತಿಯನ್ನು ಬಲಿ ಪಡೆದುಕೊಂಡಿದೆ. ನಗರದ ಹೊರವಲಯದ ಮೂಡಬಿದ್ರೆ ನಿವಾಸಿ 53 ವರ್ಷ ಪ್ರಾಯದ ವ್ಯಕ್ತಿ. ಇವರು ಕೊರೋನಾ ಸೊಂಕಿನಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಮೃತರಾಗಿದ್ದಾರೆ. ಇದರೊಂದಿಗೆ ದಕ್ಷಿಣ ಕನ್ನಡದಲ್ಲಿ ಕೊರೋನಾ ಸಾವಿನ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

?? ?ig Breaking News ದಕ್ಷಿಣ ಕನ್ನಡದಲ್ಲಿ ಕೊರೋನಾ ರುದ್ರ ತಾಂಡವ ➤ ಇಂದೂ ಓರ್ವರನ್ನು ಬಲಿ ಪಡೆದ ಕೊರೋನಾ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಮನೆಯ ಕಾಂಪೌಂಡ್ ಕುಸಿತ ➤ ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ಪುತ್ತೂರು, ಜು.07, ಮನೆಯೊಂದರ ಆವರಣಗೋಡೆ ಕುಸಿತಗೊಂಡ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಜುಲೈ 7ರಂದು ಪರ್ಲಡ್ಕದ ಗೋಳಿಕಟ್ಟೆಯಲ್ಲಿ ನಡೆದಿದೆ. ಕಳೆದ ಮೂರು ದಿವಸಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಕಂಪೌಂಡ್ ಕುಸಿದಿದೆ ಎಂದು ತಿಳಿದು ಬಂದಿದೆ.

ಪುತ್ತೂರು: ಮನೆಯ ಕಾಂಪೌಂಡ್ ಕುಸಿತ ➤ ಮಹಿಳೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಳ್ಳಾಲದಲ್ಲಿ ಕೊರೋನಾ ತಾಂಡವ ➤ ಸಾವಿನ ಸಂಖ್ಯೆ 24 ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜು.06: ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಏರಿಕೆಯೊಂದಿಗೆ, ಕೊರೊನಾಗೆ ಬಲಿಯಾಗುತ್ತಿರವವ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಅಂಕೆ ಮೀರುತ್ತಿದೆ. ಇಂದು ಬೆಳಿಗ್ಗೆ ಇಬ್ಬರು ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ. ಮಂಗಳೂರು ಹೊರವಲಯದ ಸಂತೋಷ್ ನಗರ ನಿವಾಸಿ ಮತ್ತು ಉಳ್ಳಾಲ ನಿವಾಸಿ ಇಂದು ಕೋವಿಡ್ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಸಂತೋಷ್ ನಗರದ 52 ವರ್ಷದ ವ್ಯಕ್ತಿ ಹೃದಯರೋಗ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಉಳ್ಳಾಲದ ವ್ಯಕ್ತಿಯ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಇಂದಿನ

ಉಳ್ಳಾಲದಲ್ಲಿ ಕೊರೋನಾ ತಾಂಡವ ➤ ಸಾವಿನ ಸಂಖ್ಯೆ 24 ಕ್ಕೆ ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೊರೋನಾ ಸೋಂಕಿತ ಪುತ್ತೂರಿನ ಯುವಕ ಆಸ್ಪತ್ರೆಯಿಂದ ಪರಾರಿ ➤ ಜನತೆಯಲ್ಲಿ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.05. ಕೊರೋನಾ ಸೋಂಕಿತ ಯುವಕನೋರ್ವ ನಗರದ ಕೋವಿಡ್ ಆಸ್ಪತ್ರೆಯಿಂದ ಭಾನುವಾರದಂದು ಪರಾರಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಶುರುವಾಗಿದೆ. ತಪ್ಪಿಸಿಕೊಂಡಿರುವ ಯುವಕನನ್ನು ಪುತ್ತೂರು ನಿವಾಸಿ ದೇವರಾಜ್(18) ಎಂದು ಗುರುತಿಸಲಾಗಿದೆ. ಕೊರೋನ ಶಂಕೆಯಿಂದ ಜುಲೈ 01 ರಂದು ತಾನೇ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದ ದೇವರಾಜ್ ಗೆ ಭಾನುವಾರದಂದು ಕೊರೋನಾ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಜೆ ವೇಳೆಗೆ ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆ. ಈತನ ಪತ್ತೆಯಾದರೆ ಪಾಂಡೇಶ್ವರ ಪೊಲೀಸ್ ಠಾಣೆ 0824-2220518 ಅಥವಾ

ಕೊರೋನಾ ಸೋಂಕಿತ ಪುತ್ತೂರಿನ ಯುವಕ ಆಸ್ಪತ್ರೆಯಿಂದ ಪರಾರಿ ➤ ಜನತೆಯಲ್ಲಿ ಹೆಚ್ಚಿದ ಆತಂಕ Read More »

ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ: ರಸ್ತೆಗೆ ಬಿದ್ದ ಬೃಹತ್ ಬಿದಿರು ಹಿಂಡು ತಲೂರು ಸ್ನೇಹ ಯುವ ಬಳಗದ ಸದಸ್ಯರಿಂದ ತೆರವು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.04. ಸುಳ್ಯ – ಸುಬ್ರಹ್ಮಣ್ಯ ರಸ್ತೆಯ ಎಲಿಮಲೆ ಸಮೀಪದ ತಲೂರು ಎಂಬಲ್ಲಿ ರಸ್ತೆಗಡ್ಡವಾಗಿ ಬಿದ್ದ ಬೃಹತ್ ಬಿದಿರು ಹಿಂಡನ್ನು ತಲೂರು ಮೆತ್ತಡ್ಕದ ಸ್ನೇಹ ಯುವ ಬಳಗದ ಸದಸ್ಯರು ತೆರವುಗೊಳಿಸಿದರು. ಲಾರಿಯನ್ನು ನಿಲ್ಲಿಸಿ ಅದರ ಮೇಲೇರಿ ಬಿದಿರು ಹಿಂಡನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರಾದ ಜಯಂತ್ ತಲೂರ್, ದುರ್ಗಾದಾಸ್ ಮೆತ್ತಡ್ಕ, ವರ್ಷಿತ್ ಪಿ.ಪಿ., ಯತೀಶ್ ತಲೂರು, ಜೀವನ್ ಪಿ., ದಯಾನಂದ ಮೆತ್ತಡ್ಕ, ದಾಮೋದರ ಅಂಬೆಕಲ್ಲು, ಓಂ ಪ್ರಸಾದ್

ಸುಬ್ರಹ್ಮಣ್ಯ: ರಸ್ತೆಗೆ ಬಿದ್ದ ಬೃಹತ್ ಬಿದಿರು ಹಿಂಡು ತಲೂರು ಸ್ನೇಹ ಯುವ ಬಳಗದ ಸದಸ್ಯರಿಂದ ತೆರವು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಬಲಿ ➤ ಮೃತರ ಸಂಖ್ಯೆ 19 ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.03. ಕೊರೋನಾ ಸೋಂಕಿಗೆ ಮಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದ್ದು, ಈ ಮೂಲಕ ಕೋವಿಡ್ – 19 ಗೆ ಬಲಿಯಾದವರ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ. ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 49 ವರ್ಷ ವಯಸ್ಸಿನ ವ್ಯಕ್ತಿ ಕೊರೋನಾಗೆ ಬಲಿಯಾಗಿದ್ದಾರೆ. ಕೊರೋನಾ ಸೋಂಕು ದಕ್ಷಿಣ ಕನ್ನಡದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಜಿಲ್ಲೆಯ ಜನತೆಯನ್ನು ಆತಂಕಕ್ಕೆ ದೂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಬಲಿ ➤ ಮೃತರ ಸಂಖ್ಯೆ 19 ಕ್ಕೆ ಏರಿಕೆ Read More »

ಬ್ರೇಕಿಂಗ್ ನ್ಯೂಸ್

ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಮೃತ್ಯು ➤ ಮೀನು ಹಿಡಿಯಲು ತೆರಳಿದ್ದ ವೇಳೆ ಘಟನೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.03. ಮೀನು ಹಿಡಿಯಲೆಂದು ತೆರಳಿದ ವ್ಯಕ್ತಿ ನೀರಿ‌ನಲ್ಲಿ ಮುಳುಗಿ ಮೃತಪಟ್ಟ ಘಟನೆ ಎಡಮಂಗಲದಲ್ಲಿ ನಡದಿದೆ. ಮೃತ ಯುವಕನನ್ನು ಎಡಮಂಗಲದ ಪ್ರಕಾಶ್ (25) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಮೃತ್ಯು ➤ ಮೀನು ಹಿಡಿಯಲು ತೆರಳಿದ್ದ ವೇಳೆ ಘಟನೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ದ.ಕದಲ್ಲಿ ಸಾವಿನ ಸಂಖ್ಯೆ 18ಕ್ಕೇರಿಕೆ ➤ 49 ವರ್ಷದ ವ್ಯಕ್ತಿ ಕೊರೊನಾಗೆ ಬಲಿ

(ನ್ಯೂಸ್ ಕಡಬ) newskadaba.com ಮಂಗಳೂರು,ಜು.02: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಕ್ಕೆ ಜು.2 ರ ಗುರುವಾರ ಮತ್ತೊಂದು ಬಲಿಯಾಗಿದೆ. ಬಂಟ್ವಾಳ ತಾಲೂಕಿನ ಕಲ್ಕಡ್ಕ ನಿವಾಸಿಯಾಗಿರುವ 49 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೇರಿಕೆಯಾಗಿದೆ.   ಕಳೆದ 20 ದಿನಗಳಿಂದ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಶನಿವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ, ಟಿ.ಬಿ.ಹಾಗೂ ಲಿವರ್ ನ ಸಮಸ್ಯೆಯಿಂದ ಬಳಲುತ್ತಿದ್ದ ಇವರಲ್ಲಿ ಸೊಂಕು ಪತ್ತೆಯಾಗಿತ್ತು.ಇನ್ನು ಬುಧವಾರಷ್ಟೇ ಜಿಲ್ಲೆಯಲ್ಲಿ ಕೊರೋನಾ ಮೂರು

ದ.ಕದಲ್ಲಿ ಸಾವಿನ ಸಂಖ್ಯೆ 18ಕ್ಕೇರಿಕೆ ➤ 49 ವರ್ಷದ ವ್ಯಕ್ತಿ ಕೊರೊನಾಗೆ ಬಲಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top