ಬ್ರೇಕಿಂಗ್ ನ್ಯೂಸ್

ಕೇರಳದಲ್ಲಿ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆ ➤ ಕಾಸರಗೋಡಿನಲ್ಲೂ ಹೈ ಅಲರ್ಟ್

(ನ್ಯೂಸ್ ಕಡಬ) newskadaba.com ಕೇರಳ, ಜ. 05. ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರವು ಆತಂಕ ಮೂಡಿಸಿದ್ದು, ಇದೀಗ ಕೇರಳವನ್ನೂ ಪ್ರವೇಶಿಸಿದ್ದು, ಕೊಟ್ಟಾಯಂ ಮತ್ತು ಅಳಪ್ಪುಝ ಜಿಲ್ಲೆಗಳ ಬಾತುಕೋಳಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಕೊಟ್ಟಾಯಂನ ನೀಂದೂರ್‌ ಎಂಬಲ್ಲಿರುವ ಬಾತುಕೋಳಿ ಫಾರಂ ಒಂದರಲ್ಲಿ ಎಚ್‌-5 ಎನ್‌-8 ವೈರಸ್‌ ಸೋಂಕಿನಿಂದ ಸುಮಾರು 1,500ರಷ್ಟು ಬಾತುಕೋಳಿಗಳು ಸತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಎಲ್ಲ ಬಾತುಕೋಳಿಗಳು, ಕೋಳಿಗಳು ಮತ್ತು ಇತರ ಸಾಕು ಹಕ್ಕಿಗಳನ್ನು ಕೊಲ್ಲಲು ಆಡಳಿತ ಮಂಡಲಿ ನಿರ್ಧರಿಸಿದೆ. ಅಳಪ್ಪುಳದಲ್ಲೂ ಪ್ರಕರಣಗಳು ಬೆಳಕಿಗೆ ಬಂದಿದ್ದು, […]

ಕೇರಳದಲ್ಲಿ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆ ➤ ಕಾಸರಗೋಡಿನಲ್ಲೂ ಹೈ ಅಲರ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಂಗಸ್ಥಳದಲ್ಲೇ ಪ್ರಾಣಬಿಟ್ಟ ಯಕ್ಷಗಾನ ಕಲಾವಿದ ➤ ಮಂದಾರ್ತಿ ಮೇಳದ ಸಾಧು ಕೊಠಾರಿ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬ್ರಹ್ಮಾವರ, ಜ.05. ಯಕ್ಷಗಾನ ಕಲಾವಿದರೋರ್ವರು ಹೃದಯಾಘಾತದಿಂದ ರಂಗಸ್ಥಳದಲ್ಲೇ ಪ್ರಾಣಬಿಟ್ಟ ಘಟನೆ ಬ್ರಹ್ಮಾವರದಲ್ಲಿ ಮಂಗಳವಾರದಂದು ನಡೆದಿದೆ. ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಯವರು ಮಂಗಳವಾರ ಬೆಳಗ್ಗಿನ ಜಾವ ಬ್ರಹ್ಮಾವರದ ಶಿರಿಯಾರ ಕಾಜ್ರಲ್ಲಿ ಸಮೀಪದ ಕಲ್ಬೆಟ್ಟು ಎಂಬಲ್ಲಿ ‘ಮಹಾಕಲಿ‌ ಮಗದೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ರಂಗಸ್ಥಳದಲ್ಲೇ ಹೃದಯ ನೋವಿನಿಂದ ತೀವ್ರ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು.

ರಂಗಸ್ಥಳದಲ್ಲೇ ಪ್ರಾಣಬಿಟ್ಟ ಯಕ್ಷಗಾನ ಕಲಾವಿದ ➤ ಮಂದಾರ್ತಿ ಮೇಳದ ಸಾಧು ಕೊಠಾರಿ ಇನ್ನಿಲ್ಲ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಆಟೋ ರಿಕ್ಷಾ ಮಗುಚಿ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 04. ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟ ಘಟನೆ ಇಂದು ಸಂಜೆ ಬಂದ್ಯೋಡು- ಪೆರ್ಮುದೆ ರಸ್ತೆಯ ಮೀಪಿರಿ ಎಂಬಲ್ಲಿ ನಡೆದಿದೆ.   ಮೃತಪಟ್ಟ ಮಗುವನ್ನು ಕಯ್ಯಾರ್ ಪಿಲಿಯಂದೂರಿನ ರಿಜ್ವಾನ್ ಎಂದು ಗುರುತಿಸಲಾಗಿದೆ. ತಾಯಿ ಹಾಗೂ ಮಗು ಬಂದ್ಯೋಡು ಕಡೆಗೆ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾದ ಟಯರ್ ಕಳಚಿದ ಪರಿಣಾಮ ಆಟೋ ಮಗುಚಿ ಬಿದ್ದಿದ್ದು ಗಂಭೀರ ಗಾಯಗೊಂಡ ಮಗು ಮೃತಪಟ್ಟಿದೆ. ತಾಯಿ ಫಾಯಿಸಾ ಮತ್ತು

ಕಾಸರಗೋಡು: ಆಟೋ ರಿಕ್ಷಾ ಮಗುಚಿ ಮಗು ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರಿನ ಉದ್ಯಮಿ ಮೈಸೂರಲ್ಲಿ ಆತ್ಮಹತ್ಯೆ ➤ ಜೊತೆಗಿದ್ದ ಪತ್ನಿ ನಾಪತ್ತೆ…!

(ನ್ಯೂಸ್ ಕಡಬ) newskadaba.com ಮೈಸೂರು, ಜ. 04. ಉದ್ಯಪಿಯೋರ್ವರ ಮೃತದೇಹವು ಮೈಸೂರಿನ ಲಾಡ್ಜ್ ಒಂದರಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಉಮಾಶಂಕರ್ (45) ಎಂದು ಗುರುತಿಸಲಾಗಿದೆ. ಇವರ ಜೊತೆ ಬಂದಿದ್ದ ಪತ್ನಿ ಕವಿತಾ ನಾಪತ್ತೆಯಾಗಿದ್ದು, ಮೃತದೇಹದ ಬಳಿಯಲ್ಲಿ ಇನ್ಸುಲಿನ್ ಹಾಗೂ ಔಷಧಿಗಳ ಬಾಟಲ್ ಹಾಗೂ ಡೆತ್ ನೋಟ್ ಲಭ್ಯವಾಗಿದೆ. ಸಾಲ ಹಿಂತಿರುಗಿಸುವಂತೆ ಸಾಲಗಾರರು ಪೀಡಿಸುತ್ತಿರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿದ್ದಾರೆ. ಕಾಣೆಯಾಗಿರುವ ಇವರ ಪತ್ನಿಯ ಹುಡುಕಾಟ ಮುಂದುವರೆದಿದ್ದು, ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರಿನ ಉದ್ಯಮಿ ಮೈಸೂರಲ್ಲಿ ಆತ್ಮಹತ್ಯೆ ➤ ಜೊತೆಗಿದ್ದ ಪತ್ನಿ ನಾಪತ್ತೆ…! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನಾದಿನಿಯನ್ನೇ ಅತ್ಯಾಚಾರಗೈದ ಪ್ರಕರಣ ➤ ಆರೋಪಿ ಬಶೀರ್ ಅರೆಸ್ಟ್

(ನ್ಯೂಸ್ ಕಡಬ) newskadaba.com ವಿಟ್ಲ, ಜ. 04. ನಾದಿನಿಯ ಮೇಲೆ ಬಲವಂತವಾಗಿ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಶೀರ್ ಎಂದು ಗುರುತಿಸಲಾಗಿದೆ. ಈತನ ವಿಚಾರಣೆಯ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ಆಕೆಯನ್ನು ಬಾವನೇ ಅತ್ಯಾಚಾರಗೈದಿದ್ದಲ್ಲದೇ ಆಕೆಯ ನಗ್ನ ಫೋಟೊಗಳನ್ನು ಸೆರೆಹಿಡಿದು ಬೆದರಿಕೆ ಒಡ್ಡುತ್ತಿದ್ದ ಎಂದು ಆರೋಪಿಯ ವಿರುದ್ದ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾದಿನಿಯನ್ನೇ ಅತ್ಯಾಚಾರಗೈದ ಪ್ರಕರಣ ➤ ಆರೋಪಿ ಬಶೀರ್ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ತಯಾರಿಸುತ್ತಿದ್ದ ತಂಡ ಸಿಸಿಬಿ ಬಲೆಗೆ ➤ 10 ಆರೋಪಿಗಳು ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 04. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೊನೋಗ್ರಾಮ್ ಬಳಸಿ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಾಹನದ ಆರ್.ಸಿ. ಕಾರ್ಡ್ ಗಳನ್ನು ತಯಾರಿಸುತ್ತಿದ್ದ ಖದೀಮರ ಗುಂಪೊಂದು ಸಿಸಿಬಿ ಪೊಲೀಸರು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳನ್ನು ಕಮಲೇಶ್ ಕುಮಾರ್, ಎಸ್.ಲೋಕೇಶ್, ಸುದರ್ಶನ್, ನಿರ್ಮಲ್ ಕುಮಾರ್, ದರ್ಶನ್, ಶ್ರೀಧರ, ಚಂದ್ರಪ್ಪ, ಅಭಿಲಾಶ್, ತೇಜಸ್ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾವಿರಾರು ನಕಲಿ ಕಾರ್ಡುಗಳು, ಲ್ಯಾಪ್ ಟಾಪ್ ಮತ್ತು

ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ತಯಾರಿಸುತ್ತಿದ್ದ ತಂಡ ಸಿಸಿಬಿ ಬಲೆಗೆ ➤ 10 ಆರೋಪಿಗಳು ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಕ್ರಮ 1.47 ಕೋಟಿ ನೇಪಾಳ ಕರೆನ್ಸಿ ಹೊಂದಿದ್ದ ಆರೋಪ ➤ ಭಾರತದ ನಾಗರಿಕ ನೇಪಾಳದಲ್ಲಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಠ್ಮಂಡು, ಜ. 04. ಅಕ್ರಮವಾಗಿ ನೇಪಾಳದ ಕರೆನ್ಸಿ ಆರೋಪದಡಿಯಲ್ಲಿ ಭಾರತೀಯ ನಾಗರಿಕ ಸೇರಿದಂತೆ ಇಬ್ಬರು ಆರೋಪಿಗಳನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಭಾರತದ ಗೋರಖ್ ಪುರದ ನಿವಾಸಿ ಅಮಿತ್ ಕುಮಾರ್ ಗುಪ್ತಾ (30) ಹಾಗೂ ಕಪಿಲವಸ್ತು ಜಿಲ್ಲೆಯ ಸಂಗಮ್ ತರು (22) ಎಂದು ಗುರುತಿಸಲಾಗಿದೆ. ಪ್ರತಿನಿತ್ಯದಂತೆ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಇಬ್ಬರು ಪ್ರಯಾಣಿಕರಿದ್ದ ಕಾರಿನಲ್ಲಿ ಸುಮಾರು 1.47 ಕೋಟಿ ನೇಪಾಳ ಕರೆನ್ಸಿ ಪತ್ತೆಯಾಗಿದ್ದು, ಇದನ್ನು ಮೂರು ಚೀಲದಲ್ಲಿ ತುಂಬಿ ಕಾರಿನಲ್ಲಿ

ಅಕ್ರಮ 1.47 ಕೋಟಿ ನೇಪಾಳ ಕರೆನ್ಸಿ ಹೊಂದಿದ್ದ ಆರೋಪ ➤ ಭಾರತದ ನಾಗರಿಕ ನೇಪಾಳದಲ್ಲಿ ಅರೆಸ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಂಗ್ರೆಸ್ ನಾಯಕ ವಿಲಾಸ್ ರಾವ್ ಪಾಟೀಲ್ ನಿಧನ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ,ಜ. 04. ರಾಜ್ಯದ ಮಾಜಿ ಸಹಕಾರಿ ಸಚಿವ ವಿಲಾಸ್ ರಾವ್ ಪಾಟೀಲ್ ಉಂಡಾಲ್ಕರ್ ಇಂದು ಬೆಳಗ್ಗೆ ಸತಾರ ಜಿಲ್ಲೆಯ ಕರಾಡ್ ತಾಲೂಕಿನಲ್ಲಿ ನಿಧನರಾದರು.   ಇವರಿಗೆ 84 ವರ್ಷ ವಯಸ್ಸಾಗಿತ್ತು. ವಿಲಾಸ್ ರಾವ್ ಗೆ ಕಳೆದ 15 ದಿನಗಳಿಂದ ಅನಾರೋಗ್ಯ ಕಾಡುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಗ್ಗೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕಾಂಗ್ರೆಸ್ ನಾಯಕ ವಿಲಾಸ್ ರಾವ್ ಪಾಟೀಲ್ ನಿಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಲ್ಯ: ತೀವ್ರ ಅಸೌಖ್ಯದಿಂದ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜ.04. ಅಲ್ಪ ಕಾಲದ ಅಸೌಖ್ಯದಿಂದಾಗಿ ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರದಂದು ಬಲ್ಯದಿಂದ ವರದಿಯಾಗಿದೆ. ಮೃತ ಯುವಕನನ್ನು ಕಡಬ ತಾಲೂಕು ಬಲ್ಯ ಗ್ರಾಮದ ಮಂಜಯ್ಯ ಗೌಡ ಎಂಬವರ ಪುತ್ರ ಮೋಹನ್ ನೆಲ್ಲ(29) ಎಂದು ಗುರುತಿಸಲಾಗಿದೆ. ತೀವ್ರ ಅಸೌಖ್ಯದಿಂದ ಬಳಲುತ್ತಿದ್ದ ಇವರು ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

ಬಲ್ಯ: ತೀವ್ರ ಅಸೌಖ್ಯದಿಂದ ಯುವಕ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮೊಬೈಲ್ ಕೊಡಿಸಲಿಲ್ಲವೆಂದು ಆತ್ಮಹತ್ಯೆಗೈದ ಬಾಲಕ

(ನ್ಯೂಸ್ ಕಡಬ) newskadaba.com ಕಾನ್ಪುರ, ಜ. 04. ಹೊಸ ಮೊಬೈಲ್ ಕೊಡಿಸಲಿಲ್ಲವೆಂಬ ಬೇಸರದಲ್ಲಿ ಅಪ್ರಾಪ್ತ ಬಾಲಕನೋರ್ವ ನೇಣಿಗೆ ಶರಣಾದ ಘಟನೆ ಕಾನ್ಪುರದಲ್ಲಿ ನಡೆದಿದೆ. ಮೃತ ಬಾಲಕನು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದು, ಹಣಕಾಸಿನ ಸಮಸ್ಯೆಯಿರುವುದರಿಂದ ಕೆಲವು ದಿನಗಳ ಬಳಿಕ ಹೊಸ ಫೋನ್ ಕೊಡಿಸುವುದಾಗಿ ತಂದೆ ಹೇಳಿದ್ದರು. ಆದರೆ ಇದಕ್ಕೆ ಒಪ್ಪದ ಮಗ ಆಕ್ರೋಶದಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೊಬೈಲ್ ಕೊಡಿಸಲಿಲ್ಲವೆಂದು ಆತ್ಮಹತ್ಯೆಗೈದ ಬಾಲಕ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top