ಬ್ರೇಕಿಂಗ್ ನ್ಯೂಸ್

ಮಲಗಿದ್ದ ಮಗುವನ್ನು ಅಪಹರಿಸಿ ಅತ್ಯಾಚಾರ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪಲ್ಗಾರ್, ಜ. 05. ತಾಯಿಯ ಜೊತೆ ಮಲಗಿದ್ದ ಮೂರು ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪದಡಿಯಲ್ಲಿ ಓರ್ವ ಆರೋಪಿಯನ್ನು ವಶಪಡಿಸಿಕೊಂಡ ಘಟನೆ ಮಹಾರಾಷ್ಟ್ರದ ಪಲ್ಗಾರ್ ಜಿಲ್ಲೆಯಲ್ಲಿ ನಡೆದಿದೆ. ಕಿರಾತಕನು ಮಗುವನ್ನು ಅಪಹರಿಸಿ ಹತ್ತಿರದ ಹೊಲಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಗೈದು ನಂತರ ಬಾಲಕಿಯನ್ನು ಸ್ಥಳದಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾನೆ. ತದನಂತರ ಆಕೆಯನ್ನು ಹೊಲದಲ್ಲಿ ಕಂಡ ಪೋಷಕರು ಗ್ರಾಮೀಣ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ  ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಮಲಗಿದ್ದ ಮಗುವನ್ನು ಅಪಹರಿಸಿ ಅತ್ಯಾಚಾರ ➤ ಆರೋಪಿಯ ಬಂಧನ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬ್ರಹ್ಮಾವರ: ವಿವಾಹಿತ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಬ್ರಹ್ಮಾವರ, ಜ. 05. ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾದ ಘಟನೆ ಹಾರಾಡಿಯ ಕುಕ್ಕುಡೆ ಎಂಬಲ್ಲಿ ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ಸೌಮ್ಯ (23) ಎಂದು ಗುರುತಿಸಲಾಗಿದೆ. ಇವರು ಒಂದು ತಿಂಗಳಿನಿಂದ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ಜನವರಿ ಒಂದರಂದು ಎಂದಿನಂತೆ ಕೋರ್ಸ್ ಗೆ ಹೋಗಿ ಬರುವಾಗ ತಡವಾಗುತ್ತದೆ ಎಂದು ಹೋದವರು ನಾಪತ್ತೆಯಾಗಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ವಿವಾಹಿತ ಮಹಿಳೆ ನಾಪತ್ತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೆಲ್ಮೆಟ್ ಹಾಕದವರ ಬೈಕ್ ಗಳನ್ನು ಜಫ್ತಿ ಮಾಡಲು ಮುಂದಾದ ಸಂಚಾರಿ ಪೊಲೀಸ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 05. ಹೆಲ್ಮೆಟ್ ಧರಿಸದೇ ಪ್ರಯಾಣಿಸುವವರ ಬೈಕ್ ಗಳನ್ನು ವಶಪಡಿಸಿಕೊಳ್ಳಲು ಸೈಬರಾಬಾದ್ ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಹೆಲ್ಮೆಟ್ ಇಲ್ಲದವರಿಗೆ ಭಾರೀ ದಂಡ ಹಾಕುವ ಬದಲು ಅವರ ಬೈಕ್‌ ಗಳನ್ನೇ ವಶಕ್ಕೆ ಪಡೆದು, ಹೆಲ್ಮೆಟ್ ‌ಅನ್ನು ತಂದ ಬಳಿಕವಷ್ಟೇ ಬೈಕ್‌ಗಳನ್ನು ಮರಳಿ ಕೊಡಲಿದ್ದಾರೆ. ಇದಕ್ಕೆಂದೇ ನಗರದ ಏಳು ಕಡೆಗಳಲ್ಲಿ ವಿಶೇಷ ಚೆಕ್‌ ಪೋಸ್ಟ್‌ಗಳನ್ನು ಅಳವಡಿಸಲಾಗಿದ್ದು, 24 ಗಂಟೆಗಳ ಕಾಲ ಪಹರೆ ಕಾಯುವ ವ್ಯವಸ್ಥೆ ಮಾಡಲಾಗಿದೆ.

ಹೆಲ್ಮೆಟ್ ಹಾಕದವರ ಬೈಕ್ ಗಳನ್ನು ಜಫ್ತಿ ಮಾಡಲು ಮುಂದಾದ ಸಂಚಾರಿ ಪೊಲೀಸ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಹಳೆಯಂಗಡಿ, ಜ. 05. ನದಿ ತೀರದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಘಟನೆ ರಾ.ಹೆದ್ದಾರಿ 66ರ ಪಾವಂಜೆ ಸೇತುವೆ ಬಳಿ ಇಂದು ಬೆಳಗ್ಗೆ ನಡೆದಿದೆ. ಕೃಷ್ಣಾಪುರ ಕಾಟಿಪಳ್ಳದ ನಿವಾಸಿ ಅಶ್ರಫ್ ಎಂಬವರು ತನ್ನ ಸ್ನೇಹಿತನೊಂದಿಗೆ ಪಾವಂಜೆ ಬಳಿಯ ಅರಾಂದ್ ಎಂಬ ಸ್ಥಳದಿಂದ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಈ ಸಂದರ್ಭ ಪ್ರಯಾಣಿಕರಿಬ್ಬರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರು ನದಿಯಲ್ಲಿ ಮುಳುಗುತ್ತಿದ್ದಂತೆಯೇ ಅಶ್ರಫ್ ಮತ್ತು

ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಹೊಸ ಸಂಸತ್ ನಿರ್ಮಾಣಕ್ಕೆ ಸಂಪುಟ ಅಸ್ತು

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ. 05. ಇಂಡಿಯಾ ಗೇಟ್ ಬಳಿ ಹೊಸ ಸಂಸತ್ ಸಂಕೀರ್ಣ ನಿರ್ಮಾಣ ಕಾರ್ಯ ನಡೆಸಬಹುದು ಎಂದು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ. ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಯೋಜನೆಗೆ ನೀಡಲಾದ ಪರಿಸರ ಅನುಮತಿ ಸೇರಿದಂತೆ ಹಲವಾರು ಅಂಶಗಳನ್ನು ಪ್ರಶ್ನಿಸಿರುವ ಒಂದು ಗುಂಪಿನ ಮನವಿಯನ್ನು ಆಲಿಸುವಾಗ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.

ಹೊಸ ಸಂಸತ್ ನಿರ್ಮಾಣಕ್ಕೆ ಸಂಪುಟ ಅಸ್ತು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜೇನುಹುಳಗಳ ದಾಳಿಗೆ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ವಿಜಯಪುರ, ಜ. 05. ಕ್ರಿಕೆಟ್ ಆಡುತ್ತಿದ್ದ ವೇಳೆ ಜೇನುಹುಳಗಳು ದಾಳಿ ನಡೆಸಿದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಭರತ್ (14) ಎಂದು ಗುರುತಿಸಲಾಗಿದೆ. ವಿಜಯನಗರದ ಸರಕಾರಿ ಕಾಲೇಜಿನ ಮೈದಾನದಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದ ವೇಳೆ ಜೇನುಹುಳಗಳು ದಾಳಿ ನಡೆಸಿದ್ದು, ವಿದ್ಯಾರ್ಥಿಗಳು ದಿಕ್ಕಾಪಾಲಗಿ ಓಡಿದರೂ ತಪ್ಪಿಸಲು ಸಾಧ್ಯವಾಗಿಲ್ಲ.

ಜೇನುಹುಳಗಳ ದಾಳಿಗೆ ಬಾಲಕ ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎಸ್ಡಿಪಿಐ ಕಛೇರಿಗೆ ಬೆಂಕಿ ಹಚ್ಚಿದ ಪ್ರಕರಣ ➤ಅಕ್ಷಯ್ ರಜಪೂತ್ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಜ‌. 05. ಇಲ್ಲಿನ ಎಸ್ಡಿಪಿಐ ಕಛೇರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಅಕ್ಷಯ ರಜಪೂತ್ ಕಲ್ಲಡ್ಕ ಎಂಬವರ ಮೇಲೆ ವಿಟ್ಲ ಠಾಣೆಯಲ್ಲಿ ಕೇಸು ದಾಖಲಾಗಿದೆ. ವಿಜಯೋತ್ಸವದ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ವಿರುದ್ದ ಬಂಟ್ವಾಳ ಹಾಗೂ ಉಜಿರೆ ಭಾಗದಲ್ಲಿರುವ ಎಸ್ಡಿಪಿಐ ಕಛೇರಿಗೆ ಬೆಂಕಿ ಯಾಕೆ ಕೊಡಬಾರದು ಎಂಬ ಸಂದೇಶವು ಸಾಮಾಜಿಕ ಜಾಲತಾಣದಲದಲಿ ಹರಿಯಬಿಟ್ಟಿದ್ದರಿಂ ಅಕ್ಷಯ ರಜಪೂತ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.

ಎಸ್ಡಿಪಿಐ ಕಛೇರಿಗೆ ಬೆಂಕಿ ಹಚ್ಚಿದ ಪ್ರಕರಣ ➤ಅಕ್ಷಯ್ ರಜಪೂತ್ ವಿರುದ್ದ ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಿಜೆಪಿ ಹಿರಿಯ ನಾಯಕ ಬಸವಂತರೆಡ್ಡಿ ಪಾಟೀಲ ವಿಧಿವಶ

(ನ್ಯೂಸ್ ಕಡಬ) newskadaba.com ಕಲಬುರ್ಗಿ, ಜ. 05. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಶಾಸಕ ಬಸವಂತರೆಡ್ಡಿ ಪಾಟೀಲ (88) ಅವರು ತಮ್ಮ ಸ್ವಗೃಹದಲ್ಲೇ ನಿಧನರಾಗಿದ್ದಾರೆ.

ಬಿಜೆಪಿ ಹಿರಿಯ ನಾಯಕ ಬಸವಂತರೆಡ್ಡಿ ಪಾಟೀಲ ವಿಧಿವಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೃಷಿ ಮಸೂದೆ ವಿರುದ್ದದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಕಾಂಗ್ರೆಸ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 05 ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆಯನ್ನು ವಿರುದ್ದ ಪ್ರತಿಭಟಿಸುತ್ತಿರುವ ರೈತರು 41 ದಿನಕ್ಕೆ ಕಾಲಿಟ್ಟಿದ್ದು, ಈ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ನೀಡುವುದಾಗಿ ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ತಿಳಿಸಿದ್ದಾರೆ.   ಈ ಕುರಿತು ಟ್ವೀಟ್ ಮೂಲಕ “ಕೇಂದ್ರ ಸರ್ಕಾರದ ಕೃಷಿ ಮಸೂದೆಯ ವಿರುದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ 50 ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದು, ಕಾಂಗ್ರೆಸ್‌ ನ ಎಲ್ಲ ಮುಖಂಡರು

ಕೃಷಿ ಮಸೂದೆ ವಿರುದ್ದದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಕಾಂಗ್ರೆಸ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗುರುವಾಯನೆಕೆರೆ: ಕೆರೆಯಲ್ಲಿ ಅಪರಿಚಿತ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಗುರುವಾಯನಕೆರೆ, ಜ. 05. ಇಂದು ಬೆಳಗ್ಗೆ ಗುರುವಾಯನಕೆರೆಯಲ್ಲಿ ಅಪರಿಚಿತ ಮೃತದೇಹವೊಂದು ತೇಲುತ್ತಿದ್ದುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಮೃತ ಯುವಕ ಧರಿಸಿದ್ದ ಬಟ್ಟೆಯಲ್ಲಿ ಚೀಟಿಯೊಂದು ದೊರೆತಿದ್ದು, ಉಡುಪಿ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಗುರುವಾಯನೆಕೆರೆ: ಕೆರೆಯಲ್ಲಿ ಅಪರಿಚಿತ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top