ಬ್ರೇಕಿಂಗ್ ನ್ಯೂಸ್

ಜ. 13ರಂದು ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್…! ➤ ಶಾಸಕರಿಗೆ ಒಲಿಯಲಿದೆ ಮಂತ್ರಿಭಾಗ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 11. ಹಲವು ತಿಂಗಳುಗಳಿಂದ ಕುತೂಹಲ ಮೂಡಿಸಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, ಅದರಂತೆ ಜ. 13ರಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಬಿಜೆಪಿ ವರಿಷ್ಠರ ಸೂಚನೆಯಂತೆ ಭಾನುವಾರ ಮುಖ್ಯಮಂತ್ರಿಯವರು ದೆಹಲಿಗೆ ಹೋಗಿ ಬಂದಿದ್ದು, ಏಳು ಸಚಿವ ಸ್ಥಾನಗಳ ಭರ್ತಿಗೆ ಗ್ರೀನ ಸಿಗ್ನಲ್ ದೊರೆತಿದೆ. ಆದರೆ ಯಾರಿಗೆ ಶಾಸಕರಾಗುವ ಅದೃಷ್ಟ ದೊರೆಯಲಿದೆ ಎನ್ನುವುದು ಇಂದು ತಿಳಿಯಲಿದೆ. ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಸೂಚಿಸಿದ್ದು, […]

ಜ. 13ರಂದು ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್…! ➤ ಶಾಸಕರಿಗೆ ಒಲಿಯಲಿದೆ ಮಂತ್ರಿಭಾಗ್ಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಟ್ಲ: ಕಾಲು ಜಾರಿಗೆ ಕೆರೆಗೆ ಬಿದ್ದು ಮಗು ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ಜ. 11. ತೋಟದಲ್ಲಿ ಇತರ ಮಕ್ಕಳ ಜೊತೆ ಆಟ ಆಡುತ್ತಿದ್ದ ವೇಳೆ ತೋಟದ ಮಧ್ಯದಲ್ಲಿರುವ ಕೆರೆಗೆ ಬಿದ್ದು ಬಾಲಕಿಯೋರ್ವಳು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಸೆರ್ಕಳ ಎಂಬಲ್ಲಿ ನಡೆದಿದೆ.   ಮೃತ ಬಾಲಕಿಯನ್ನು ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಹಂಝ ಎ ಅವರ ಪುತ್ರಿ ಸರಪುನ್ನಿಸಾ (೪) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳ ಜೊತೆ ಈಕೆ ಅಬ್ಬಾಸ್‌ ಬಾಕಿಮಾರು ಎಂಬವರ ತೋಟಕ್ಕೆ ಆಟ ಆಡಲು ತೆರಳಿದ್ದು, ಈ ವೇಳೆ

ವಿಟ್ಲ: ಕಾಲು ಜಾರಿಗೆ ಕೆರೆಗೆ ಬಿದ್ದು ಮಗು ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಲೇಜು ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ಪ್ರಕಟಿಸಿದ ಸರಕಾರ ➤ ಪ್ರತಿದಿನ 2 GB ಡಾಟಾ ಫ್ರೀ..‼️

(ನ್ಯೂಸ್ ಕಡಬ) newskadaba.com ತಮಿಳುನಾಡು, ಜ.10. ಇನ್ಮುಂದೆ ರಾಜ್ಯದ ಸರಕಾರಿ ಕಾಲೇಜು ಹಾಗೂ ಸರಕಾರಿ ಅನುದಾನಿತ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರತಿದಿನ ಎರಡು ಜಿಬಿ ಉಚಿತ ಡೇಟಾ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಿಸಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಶಿಕ್ಷಣ ಪಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಕೊಡುಗೆ ಪ್ರಕಟಿಸಿರುವುದಾಗಿ ಹೇಳಿದ್ದಾರೆ. ಇನ್ನು ತಮಿಳುನಾಡು ವಿಧಾನಸಭಾ ಚುನಾವಣೆಯು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸಲು ಈ ಹೊಸ ಕೊಡುಗೆಯನ್ನು ಘೋಷಿಸಿದೆ ಎಂದು ರಾಜಕೀಯ

ಕಾಲೇಜು ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ಪ್ರಕಟಿಸಿದ ಸರಕಾರ ➤ ಪ್ರತಿದಿನ 2 GB ಡಾಟಾ ಫ್ರೀ..‼️ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಟ್ಟಂಪಾಡಿ: ಭಾರೀ ಮಳೆಗೆ ಮನೆ ಮೇಲೆ ಬಿದ್ದ ಮರ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 10. ಕಳೆದ ಎರಡು ಮೂರು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು ಪರಿಣಾಮ ಬೆಟ್ಟಂಪಾಡಿಯ ಮಿತ್ತಡ್ಕ ಎಂಬಲ್ಲಿ ಕುಸುಮಾ ಎಂಬವರ ಮನೆ ಮೇಲೆ ಮರವೊಂದು ಬಿದ್ದ ಘಟನೆ ನಡೆದಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಬೆಟ್ಟಂಪಾಡಿ: ಭಾರೀ ಮಳೆಗೆ ಮನೆ ಮೇಲೆ ಬಿದ್ದ ಮರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಮೂವರ ದುರ್ಮರಣ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ. 10. ಹುಂಡೈ ಕಾರು ಮತ್ತು ಇಕೋ ಸ್ಪೋರ್ಟ್ಸ್ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ರಂಗೇನಹಳ್ಳಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಅನಿಲ್ (35), ಸುಜಿತಾ (30) ಹಾಗೂ ನಾಗೇಂದ್ರ (26) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ಬೆಂಗಳೂರಿನ ಕಡೆ ಬರುತ್ತಿದ್ದ ಹುಂಡೈ ಕಾರು ಹಾಗೂ ಬೆಂಗಳೂರಿನಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದ ಇಕೋ ಸ್ಪೋರ್ಟ್ಸ್ ಕಾರು ರಂಗೇನಹಳ್ಳಿ ಬಳಿ ಮುಖಾಮುಖಿ ಡಿಕ್ಕಿಯಾಗಿವೆ. ಈ ಕುರಿತು ಲಕ್ಕವಳ್ಳಿ ಪೊಲೀಸ್

ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಮೂವರ ದುರ್ಮರಣ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಕಿರುಕುಳ ➤ ಫೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 10. ಅಪ್ರಾಪ್ತೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಯನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ತಿರುವನಂತಪುರ ಮೂಲದ ಗೋಡ್ವಿನ್ ಎಂದು ಗುರುತಿಸಲಾಗಿದೆ. ಬಾಲಕಿಯ ಕುಟುಂಬಿಕರು ನೀಡಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.

ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಕಿರುಕುಳ ➤ ಫೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅತ್ಯಾಚಾರಿಗಳಿಗೆ ಸೌದಿ ಅರೇಬಿಯಾ ಮಾದರಿಯ ಶಿಕ್ಷೆಯಾಗಬೇಕು ➤ ಕಂಗನಾ ರಣಾವತ್ ಆಗ್ರಹ

(ನ್ಯೂಸ್ ಕಡಬ) newskadaba.com ಮುಂಬೈ, ಜ. 10. ಮಹಿಳೆಯರಿಗೆ ಅತ್ಯಾಚಾರ ಹಾಗೂ ಕಿರುಕುಳ ಎಸ್ಗುವವರಿಗೆ ಸೌದಿ ಅರೇಬಿಯಾ ಮಾದರಿಯಲ್ಲಿ ಶಿಕ್ಷೆ ನೀಡಬೇಕು ಎಂದು ನಟಿ ಕಂಗನಾ ರಣಾವತ್‌ ಆಗ್ರಹಿಸಿದ್ದಾರೆ. ಭೋಪಾಲ್‌‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಿಳೆಯರಿಗೆ ಕಿರುಕುಳ ನೀಡುವವರನ್ನು ಸಾರ್ವಜನಿಕರ ಸ್ಥಳದಲ್ಲಿಯೇ ಗಲ್ಲಿಗೇರಿಸಬೇಕು, ಅನೇಕ ಮಹಿಳೆಯರು ತಮಗಾಗಿರುವ ಕಿರುಕುಳದ ಅನುಭವವನ್ನು ಹೇಳುವಷ್ಟು ಧೈರ್ಯವಿರುವುದಿಲ್ಲ. ಇದನ್ನು ಹೇಳಿಕೊಳ್ಳದೇ ಇರಲು ನಮ್ಮ ಸಂಪ್ರದಾಯವಾದಿ ಕಾನೂನುಗಳೇ ಕಾರಣ ಎಂದಿದ್ದಾರೆ. ಇದಕ್ಕೆಲ್ಲ ಸೌದಿ ಅರೇಬಿಯಾದಂತಹ ಉದಾಹರಣೆಗಳನ್ನು ತೆಗೆದುಕೊಂಡರೆ ಈ ರೀತಿಯಾದ ಕಿರುಕುಳಗಳು ಮತ್ತೆ

ಅತ್ಯಾಚಾರಿಗಳಿಗೆ ಸೌದಿ ಅರೇಬಿಯಾ ಮಾದರಿಯ ಶಿಕ್ಷೆಯಾಗಬೇಕು ➤ ಕಂಗನಾ ರಣಾವತ್ ಆಗ್ರಹ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯ ಯುವ ಕಾಂಗ್ರೆಸ್ ಚುನಾವಣಾ ಕಣದಿಂದ ಹಿಂದೆ ಸರಿದ ಮಿಥುನ್ ರೈ…!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 10. ರಾಜ್ಯ ಯುವ ಕಾಂಗ್ರೆಸ್ ಸಮಿತಿಗೆ ನಡೆಯಲಿರುವ ಚುನಾವಣಾ ಕಣದಿಂದ ಮಿಥುನ್ ರೈ ಹಿಂದೆ ಸರಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದಂತೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಉಮೇದುವಾರಿಕೆಯಿಂದ ಹಿಂದೆ ಸರಿದಿದ್ದೇನೆ. ಚುನಾವಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ.

ರಾಜ್ಯ ಯುವ ಕಾಂಗ್ರೆಸ್ ಚುನಾವಣಾ ಕಣದಿಂದ ಹಿಂದೆ ಸರಿದ ಮಿಥುನ್ ರೈ…! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಕ್ರಮ ಜಾನುವಾರು ಸಾಗಾಟ ➤ ವಾಹನವನ್ನು ತಡೆದು ಬಜರಂಗದಳ ಕಾರ್ಯಕರ್ತರಿಂದ ಚಾಲಕನಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ. 10. ಕ್ಯಾಂಟರ್ ವೊಂದರಲ್ಲಿಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬಜರಂಗದಳದ ಕಾರ್ಯಕರ್ತರು ಕ್ಯಾಂಟರ್ ತಡೆದು ಚಾಲಕನಿಗೆ ಹಲ್ಲೆ ಮಾಡಿದ ಘಟನೆ ಆಗುಂಬೆ ರಸ್ತೆಯ ಕೈಮನೆ ಗ್ರಾಮದ ಬಳಿ ನಡೆದಿದೆ. ಕ್ಯಾಂಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದರೆನ್ನಲಾದ ಜಾನುವಾರುಗಳನ್ನು ಬಜರಂಗದಳದ ಕಾರ್ಯಕರ್ತರು ತಡೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ತನಿಕೋಡು ಚೆಕ್‍ಪೋಸ್ಟ್ ಬಳಿ ಕಾರ್ಯಕರ್ತರು ಕ್ಯಾಂಟರ್ ನ್ನು ಅಡ್ಡಗಟ್ಟಿದಾಗ ಕ್ಯಾಂಟರ್ ಚಾಲಕ ಹಾಗೂ ಮತ್ತೋರ್ವ ವಾಹನವನ್ನೇ ಬಿಟ್ಟು ಪರಾರಿಯಾಗಿದ್ದಾರೆ. ಆದರೆ ಆಗುಂಬೆ ರಸ್ತೆಯ ಕೈಮನೆ

ಅಕ್ರಮ ಜಾನುವಾರು ಸಾಗಾಟ ➤ ವಾಹನವನ್ನು ತಡೆದು ಬಜರಂಗದಳ ಕಾರ್ಯಕರ್ತರಿಂದ ಚಾಲಕನಿಗೆ ಹಲ್ಲೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಅಕ್ರಮ ಗಣಿಗಾರಿಕೆಗೆ ಜಿಲ್ಲಾಧಿಕಾರಿಗಳ ದಿಢೀರ್ ದಾಳಿ ➤ ಯಂತ್ರಗಳ ವಶ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 09. ಬೆಂಜನಪದವು ಎಂಬಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡವು ಯಂತ್ರಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಈ ಮೊದಲು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಾದರೂ ಗಣಿಗಾರಿಕೆ ಮುಂದುವರಿಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರಿಂದ ದೂರು ದಾಖಲಿಸಿದ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ಹಾಗೂ ತಾಲೂಕು ತಹಶೀಲ್ದಾರ್ ರಶ್ಮಿಎಸ್. ಆರ್

ಬಂಟ್ವಾಳ: ಅಕ್ರಮ ಗಣಿಗಾರಿಕೆಗೆ ಜಿಲ್ಲಾಧಿಕಾರಿಗಳ ದಿಢೀರ್ ದಾಳಿ ➤ ಯಂತ್ರಗಳ ವಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top