ಬ್ರೇಕಿಂಗ್ ನ್ಯೂಸ್

ಶಾಸಕ ಎಸ್.ಅಂಗಾರರು ಸಚಿವರಾಗಿ ಪ್ರಮಾಣ ಸ್ವೀಕರಿಸುವ ಹಿನ್ನೆಲೆ ➤ ಇಂದು ಸಂಜೆ ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಕಡಬದಲ್ಲಿ ಸಂಭ್ರಮಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜ.13. ಸುಳ್ಯ ಶಾಸಕ ಎಸ್.ಅಂಗಾರರವರು ಇಂದು ಸಂಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಕಡಬದಲ್ಲಿ ಹರ್ಷಾಚರಣೆ ನಡೆಯಲಿದೆ. ಸುಳ್ಯದ ಇತಿಹಾಸದಲ್ಲಿ ಕ್ಷೇತ್ರದ ಶಾಸಕರಿಗೆ ಪ್ರಥಮ ಬಾರಿಗೆ ಸಚಿವ ಸ್ಥಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಡಬ ಮಹಾಶಕ್ತಿ ಕೇಂದ್ರದ ವತಿಯಿಂದ ಕಡಬ ಪೇಟೆಯ ಪಂಚಾಯತ್ ವಾಣಿಜ್ಯ ಸಂಕೀರ್ಣದ ಬಳಿ ಸಂಭ್ರಮಾಚರಣೆ ಆಯೋಜಿಸಲಾಗಿದೆ‌.

ಶಾಸಕ ಎಸ್.ಅಂಗಾರರು ಸಚಿವರಾಗಿ ಪ್ರಮಾಣ ಸ್ವೀಕರಿಸುವ ಹಿನ್ನೆಲೆ ➤ ಇಂದು ಸಂಜೆ ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಕಡಬದಲ್ಲಿ ಸಂಭ್ರಮಾಚರಣೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಡುಪಿ: ರಾಡ್ ಹಿಡಿದು ಬಸ್ ಸಿಬ್ಬಂದಿಗಳ ನಡುವೆ ಹೊಡೆದಾಟ

(ನ್ಯೂಸ್ ಕಡಬ) newskadaba.com ಉಡುಪಿ, ಜ. 13. ಪ್ರಯಾಣಿಕರನ್ನು ಬಸ್ ಗೆ ಹತ್ತಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ರಾಡ್ ಹಿಡಿದು ಖಾಸಗಿ ಬಸ್ ಸಿಬ್ಬಂದಿಗಳು ಜಗಳವಾಡಿರುವ ಘಟನೆ ಉಡುಪಿಯ ಕಾಪುವಿನಲ್ಲಿ ನಡೆದಿದೆ. ಕೊಹಿನೂರ್ ಬಸ್ ಚಾಲಕ ಸಫಿಯುಲ್ಲಾ ಹಾಗೂ ಎ.ಕೆ.ಎಂ.ಎಸ್.ಎಸ್ ಚಾಲಕ ಇರ್ಷಾದ್ ಹಾಗೂ ನಿರ್ವಾಹಕ ಪವನ್ ಶೆಟ್ಟಿ ನಡುವೆ ಗಲಾಟೆ ನಡೆದಿದೆ. ಎರಡೂ ಬಸ್ ಸಿಬ್ಬಂದಿಗಳು ಅಜಾಗರೂಕತೆ ಹಾಗೂ ಅತೀ ವೇಗದಿಂದ ಚಾಲನೆ ನಡೆಸುತ್ತಿದ್ದು, ಪ್ರಯಾಣಿಕರನ್ನು ಹತ್ತಿಸುವ ವಿಚಾರದಲ್ಲಿ ಪರಸ್ಪರ ರಾಡ್ ಹಿಡಿದು ಜಗಳವಾಡಿದ್ದಾರೆ. ಇದೀಗ ಜಗಳದ

ಉಡುಪಿ: ರಾಡ್ ಹಿಡಿದು ಬಸ್ ಸಿಬ್ಬಂದಿಗಳ ನಡುವೆ ಹೊಡೆದಾಟ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯ ನೂತನ ಸಚಿವರ ಪಟ್ಟಿ ಪ್ರಕಟ ➤ ಎಂಟಿಬಿ, ಅಂಗಾರ ಸೇರಿದಂತೆ ಏಳು ಶಾಸಕರಿಗೆ ಮಂತ್ರಿ ಸ್ಥಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 13. ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಏಳು ಶಾಸಕರ ಪಟ್ಟಿಯು ಇದೀಗ ಹೊರಬಿದ್ದಿದೆ. ನೂತನ ಸಚಿವರಾಗಿ ಆರ್.ಶಂಕರ್, ಎಂ.ಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಎಸ್. ಅಂಗಾರ, ಸಿ.ಪಿ ಯೋಗೇಶ್ವರ್ ಹಾಗೂ ಉಮೇಶ್ ಕತ್ತಿ ಮೊದಲಾದವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ‌. ಇನ್ನು ಹೆಚ್.ನಾಗೇಶ್ ಅವರನ್ನು ಕೈಬಿಟ್ಟಿದ್ದು, ರಾಜೀನಾಮೆ ನೀಡುವಂತೆ ಮನವಿ ಮಾಡಿದ್ದಾರೆ‌. ನೂತನ ಸಚಿವರೆಲ್ಲ ಇಂದು ಮಧ್ಯಾಹ್ನ 3:30ರ ನಂತರ

ರಾಜ್ಯ ನೂತನ ಸಚಿವರ ಪಟ್ಟಿ ಪ್ರಕಟ ➤ ಎಂಟಿಬಿ, ಅಂಗಾರ ಸೇರಿದಂತೆ ಏಳು ಶಾಸಕರಿಗೆ ಮಂತ್ರಿ ಸ್ಥಾನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಫ್.ಐ.ಆರ್ ದಾಖಲಿಸಲು ಒಂದು ಲಕ್ಷ ರೂ. ಬೇಡಿಕೆ ➤ ಎಸ್.ಐ ಹಾಗೂ ಹೆಡ್ ಕಾನ್ಸ್‌ಟೇಬಲ್ ಎಸಿಬಿ ಬಲೆಗೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು,ಜ. 13. ಎಫ್.ಐ. ಆರ್ ದಾಖಲಿಸಲು 1 ಲಕ್ಷ ರೂ. ಲಂಚದ ಬೇಡಿಕೆಯಿಟ್ಟಿದ್ದ ಬೈಯ್ಯಪ್ಪನಹಳ್ಳಿ ಠಾಣೆ ಸಬ್ ಇನ್ಸ್ ಪೆಕ್ಟರ್ ಸೌಮ್ಯ ಹಾಗೂ ಹೆಡ್ ಕಾನ್ ಸ್ಟೇಬಲ್ ಜೆ.ಪಿ.ರೆಡ್ಡಿಯವರನ್ನು ಎಸಿಬಿ ಅಧಿಕಾರಿಗಳು  ಬಂಧಿಸಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ದೂರುದಾರರಿಂದ ಎಫ್.ಐ.ಆರ್ ದಾಖಲಿಸಲು 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಎಸಿಬಿಗೆ ದೂರುದಾರರು ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಲಂಚದ ಹಣವನ್ನು ಪಡೆಯುತ್ತಿದ್ದಾಗ  ಎಸಿಬಿ ಅಧಿಕಾರಿಗಳು ದಾಳಿ ನಡೆಸಿ,

ಎಫ್.ಐ.ಆರ್ ದಾಖಲಿಸಲು ಒಂದು ಲಕ್ಷ ರೂ. ಬೇಡಿಕೆ ➤ ಎಸ್.ಐ ಹಾಗೂ ಹೆಡ್ ಕಾನ್ಸ್‌ಟೇಬಲ್ ಎಸಿಬಿ ಬಲೆಗೆ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ➤ ಪಲ್ಟಿ ಹೊಡೆದು ನೆಲಕ್ಕೆ ಅಪ್ಪಳಿಸಿದ ಬೈಕ್ ಸವಾರ…!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 13. ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಪಲ್ಟಿ ಹೊಡೆದು ನೆಲಕ್ಕೆ ಅಪ್ಪಳಿಸಿ, ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಕಾರಾಜೆ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಪಣೋಲಿಬೈಲು ನಿವಾಸಿ ದಯಾನಂದ ಎಂದು ಗುರುತಿಸಲಾಗಿದೆ. ಬೈಕ್ ಸವಾರ ಅತಿ ವೇಗದಿಂದ ಚಲಿಸುತ್ತಿದ್ದು ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸವಾರ ಗಾಳಿಯಲ್ಲಿ ಪಲ್ಟಿ ಹೊಡೆದು ನೆಲಕ್ಕೆ ಅಪ್ಪಳಿಸಿದ್ದು, ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಗೆ

ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ➤ ಪಲ್ಟಿ ಹೊಡೆದು ನೆಲಕ್ಕೆ ಅಪ್ಪಳಿಸಿದ ಬೈಕ್ ಸವಾರ…! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಳ್ಳಾಲ: ಅಕ್ರಮ ಗೋಸಾಗಾಟ ➤ ತಡೆಹಿಡಿದ ಹಿಂದೂ ಸಂಘಟನೆ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 13. ಹಿಂದೂಪರ ಸಂಘಟನೆ ಕಾರ್ಯಕರ್ತರು ಅಕ್ರಮ ಜಾನುವಾರ ಸಾಗಾಟವನ್ನು ತಡೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.   6 ಹಸುಗಳು ಹಾಗೂ ಒಂದು ಕರುವನ್ನು ಕೋಟೆಕಾರು ಡೈರಿಯಿಂದ ಬಾಕ್ರಬೈಲು ಡೈರಿಗೆ ಅಕ್ರಮವಾಗಿ ಗೋಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಗೋವು ಸಾಗಾಟಗಾರರು ಗೋವುಗಳನ್ನು ಸಾಕುವ ಉದ್ದೇಶದಿಂದ ಕೊಂಡೊಯ್ಯುತ್ತಿದ್ದೇವೆ ಎಂದು ಹೇಳಿದ್ದು, ಇನ್ನು ಗೋಸಾಗಾಟಕ್ಕೆ ಸೂಕ್ತ ದಾಖಲೆಗಳಿಲ್ಲದ ಹಿನ್ನೆಲೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಉಳ್ಳಾಲ: ಅಕ್ರಮ ಗೋಸಾಗಾಟ ➤ ತಡೆಹಿಡಿದ ಹಿಂದೂ ಸಂಘಟನೆ ಕಾರ್ಯಕರ್ತರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ➤ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿಯನ್ನು ಪಡೆದ ಪೊಲೀಸರು ದಾಳಿ ನಡೆಸಿ ನಾಲ್ಕು ಯುವತಿಯರನ್ನು ರಕ್ಷಣೆ ಮಾಡಿ ಆರೋಪಿಗಳನ್ನು ಬಂಧಿಸಿದ ಘಟನೆ ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಹಿಂದುಸ್ತಾನ್ ಲಾಡ್ಜ್ ನಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಲಾಡ್ಜ್ ಮಾಲಿಕ ಮೋಹನ್, ಮ್ಯಾನೇಜರ್ ಅಬ್ದುಲ್ ರಶೀದ್, ರೂಂ ಬಾಯ್ ಉದಯ ಶೆಟ್ಟಿ, ಗಿರಾಕಿಗಳಾದ ಭರತ್ ಮತ್ತು ಬಾಲಕೃಷ್ಣ ಎಂದು ಗುರತಿಸಲಾಗಿದೆ. ವೇಶ್ಯಾವಾಟಿಕೆಗೆಂದು ಮಹಿಳೆಯರನ್ನು ಕರೆತಂದಿದ್ದ ಆರೋಪಿ ಸುನಿಲ್ ಎಂಬಾತ ಪರಾರಿಯಾಗಿದ್ದಾನೆ.

ಮಂಗಳೂರು: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ➤ ಆರೋಪಿಗಳ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಾಸಕ ಎಸ್.ಅಂಗಾರರು ಸಚಿವರಾಗಿ ಪ್ರಮಾಣ ಸ್ವೀಕರಿಸುವ ಹಿನ್ನೆಲೆ ➤ ಬೆಂಗಳೂರಿಗೆ ತೆರಳಿದ ಕಡಬದ ಪ್ರಮುಖರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.13. ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸುಳ್ಯ ಶಾಸಕ ಎಸ್.ಅಂಗಾರರವರು ಬುಧವಾರ ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಅವರನ್ನು ಭೇಟಿ ಮಾಡಿದ ಶಾಸಕ ಎಸ್.ಅಂಗಾರರವರು ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ನಾರಾಯಣ ಕೇಕಡ್ಕ, ಕಾಂಟ್ರಾಕ್ಟರ್ ಎನ್.ಕೆ.ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

ಶಾಸಕ ಎಸ್.ಅಂಗಾರರು ಸಚಿವರಾಗಿ ಪ್ರಮಾಣ ಸ್ವೀಕರಿಸುವ ಹಿನ್ನೆಲೆ ➤ ಬೆಂಗಳೂರಿಗೆ ತೆರಳಿದ ಕಡಬದ ಪ್ರಮುಖರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 13. ತಾಲೂಕಿನ ಮಾರ್ನಬೈಲು ಸಮೀಪ ಪೆಲತ್ತಕಟ್ಟೆ ಎಂಬಲ್ಲಿ ಸೋಮವಾರದಂದು ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಬೊಳ್ಳಾಯಿ ನಿವಾಸಿ ಇಮ್ರಾನ್(22) ಹಾಗೂ ಮುಬಶ್ಶಿರ್ (12) ಎಂದು ಗುರುತಿಸಲಾಗಿದೆ. ಮೂಲತಃ ಕಾಸರಗೋಡು ನಿವಾಸಿಯಾಗಿರುವ ಇಮ್ರಾನ್ ತನ್ನ ಸಂಬಂಧಿ ಹುಡುಗ ಮುಬಶ್ಶಿರ್ ಜೊತೆ ಡಿಯೋ ವಾಹನದಲ್ಲಿ ತೆರಳುತ್ತಿದ್ದ ವೇಳೆ ಪೆಲತ್ತಕಟ್ಟೆ ಎಂಬಲ್ಲಿ ಎರಡು ಆಕ್ಟಿವಾ ವಾಹನಗಳ ನಡುವೆ ಸರಣ ಅಪಘಾತ ಸಂಭವಿಸಿದ್ದು,

ಬಂಟ್ವಾಳ: ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕುಣಿಗಲ್ ಸಮೀಪ ರಸ್ತೆ ಅಪಘಾತ ➤ ಪುತ್ತೂರಿನ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜ.13. ರಸ್ತೆ ಅಪಘಾತದಲ್ಲಿ ಪುತ್ತೂರಿನ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಣಿಗಲ್ ಸಮೀಪ ಬುಧವಾರ ಬೆಳಗಿನ ಜಾವ ನಡೆದಿದೆ. ಮೃತ ಯುವಕನನ್ನು ಪುತ್ತೂರಿನ ಗಟ್ಟ ನಿವಾಸಿ ಬಿಲಾಲ್(20) ಎಂದು ಗುರುತಿಸಲಾಗಿದೆ. ಕುಣಿಗಲ್ ಸಮೀಪ ಈತ ಸಂಚರಿಸುತ್ತಿದ್ದ ಬೈಕ್ ಅಪಘಾತವಾಗಿದ್ದು, ಗಂಭೀರ ಗಾಯಗೊಂಡ ಯುವಕ ಮೃತಪಟ್ಟಿದ್ದಾರೆ. ಮೃತದೇಹವನ್ನು ನೆಲಮಂಗಲ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಕುಣಿಗಲ್ ಸಮೀಪ ರಸ್ತೆ ಅಪಘಾತ ➤ ಪುತ್ತೂರಿನ ಯುವಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top