ಬ್ರೇಕಿಂಗ್ ನ್ಯೂಸ್

ಕಡಬ: ಮಸಾಜ್ ಪಾರ್ಲರ್ ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.24. ಇಲ್ಲಿನ ಮಸಾಜ್ ಪಾರ್ಲರ್ ವೊಂದರ ಮಾಲಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ನೊಂದ ಮಹಿಳೆ ಇದೀಗ ಕಡಬ ಠಾಣೆಗೆ ದೂರು ನೀಡಿದ್ದಾರೆ. ಇಲ್ಲಿನ ಕಳಾರ ಸಮೀಪ ಸ್ನೇಹಾ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನಲ್ಲಿ ಕೇರಳದ ವಯನಾಡ್ ನಿವಾಸಿ ಮಸಾಜ್ ಸೆಂಟರ್ ನಡೆಸುತ್ತಿದ್ದು, ಈ ನಡುವೆ ಅಲ್ಲಿಗೆ ಬರುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇಂದು ರಾತ್ರಿ ನೊಂದ ಮಹಿಳೆಯೋರ್ವರು ಕಡಬ ಠಾಣೆಗೆ ದೂರು ನೀಡಿದ್ದು, […]

ಕಡಬ: ಮಸಾಜ್ ಪಾರ್ಲರ್ ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ➤ ಆರೋಪಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಇಬ್ಬರು ಆಪ್ತ ಸ್ನೇಹಿತರು

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ.24. ನಿರ್ಜನ ಪ್ರದೇಶದ ಜಲಪಾತದಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ನೀರಿಗೆ ಬಿದ್ದು ಆಪ್ತ ಸ್ನೇಹಿತರಿಬ್ಬರು ಪ್ರಾಣ ಕಳೆದುಕೊಂಡ ಘಟನೆ ಮಂಡ್ಯದಿಂದ ವರದಿಯಾಗಿದೆ. ಮೃತ ಸ್ನೇಹಿತರನ್ನು ಬೆಂಗಳೂರು ನಿವಾಸಿಗಳಾದ ಶಾಮ್ವೆಲ್ ಜೇಕಬ್(21) ಹಾಗೂ ಸಿಬಲ್ ಥಾಮಸ್ (21) ಎಂದು ಗುರುತಿಸಲಾಗಿದೆ. ಆಪ್ತ ಸ್ನೇಹಿತರಾಗಿದ್ದ ಇವರು ದ್ವಿಚಕ್ರ ವಾಹನದಲ್ಲಿ ಮಂಡ್ಯ ಪ್ರವಾಸಕ್ಕೆ ತೆರಳಿದ್ದು, ಗಗನಚುಕ್ಕಿ ಜಲಪಾತ ವೀಕ್ಷಿಸಿ ಆ ಬಳಿಕ ಗಾಣಾಳು ಫಾಲ್ಸ್ ಗೆ ತೆರಳಿದ್ದಾರೆ. ನಿರ್ಜನ ಪ್ರದೇಶವಾಗಿರುವ ಗಾಣಾಳು ಫಾಲ್ಸ್ ನಲ್ಲಿ ಸೆಲ್ಫಿ

ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಇಬ್ಬರು ಆಪ್ತ ಸ್ನೇಹಿತರು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಪಲ್ಟಿ ➤ ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.23. ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಯ ಬದಿಗೆ ಉರುಳಿ ಬಿದ್ದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪದ ಊರ್ನಡ್ಕ ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಚಳ್ಳಕೆರೆಯಿಂದ ಧರ್ಮಸ್ಥಳ ಮಾರ್ಗವಾಗಿ ಗುಂಡ್ಯ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ಉದನೆ – ಎಂಜಿರ ಮಧ್ಯದ ಊರ್ನಡ್ಕ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ

ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಪಲ್ಟಿ ➤ ಹಲವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ನಾಪತ್ತೆಯಾಗಿದ್ದ ಮೆಕ್ಯಾನಿಕ್ ಗೆ ಉಗ್ರ ಪಟ್ಟ ➤ ಉಗ್ರರ ಜೊತೆ ಬಂಧನ ಸುದ್ದಿ ಸುಳ್ಳು: ದ.ಕ. ಎಸ್ಪಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.23. ಉತ್ತರ ಭಾರತದಲ್ಲಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಮೆಕ್ಯಾನಿಕ್ ಓರ್ವರನ್ನು ಬಂಧಿಸಲಾಗಿದೆ ಎಂದು ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಯು ಸುಳ್ಳು ಸುದ್ದಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ. ಕಳೆದೆರಡು ತಿಂಗಳ ಹಿಂದೆ ಉಪ್ಪಿನಂಗಡಿಯ ನೆಕ್ಕಿಲಾಡಿಯ ಮೆಕ್ಯಾನಿಕ್ ಮೊಹಮ್ಮದ್ ರಫೀಕ್ ಖಾನ್ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ಪತ್ನಿ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಮಹಮ್ಮದ್ ರಫೀಕ್ ಖಾನ್

ಉಪ್ಪಿನಂಗಡಿ: ನಾಪತ್ತೆಯಾಗಿದ್ದ ಮೆಕ್ಯಾನಿಕ್ ಗೆ ಉಗ್ರ ಪಟ್ಟ ➤ ಉಗ್ರರ ಜೊತೆ ಬಂಧನ ಸುದ್ದಿ ಸುಳ್ಳು: ದ.ಕ. ಎಸ್ಪಿ ಸ್ಪಷ್ಟನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಾಖಲೆಯತ್ತ ಮುಖ ಮಾಡಿದ ಅಡಿಕೆ ಧಾರಣೆ ➤ ಹೊಸ ಅಡಿಕೆಗೆ 520 ರೂ.!!

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 22. ಅಡಿಕೆ ಬೆಳಗಾರರಲ್ಲಿ ಸಂತಸ ಮನೆ ಮಾಡಿದ್ದು, ಹೊಸ ಅಡಿಕೆ ಧಾರಣೆಯು ದಾಖಲೆ ಹಂತಕ್ಕೆ ತಲುಪಿ ಇದೀಗ ಕ್ಯಾಂಪ್ಕೋ ಮತ್ತು ಹೊರ ಮಾರುಕಟ್ಟೆಯಲ್ಲಿ ದರ ಏರಿಕೆಗೆ ಪೈಪೋಟಿ ಏರ್ಪಟ್ಟಿದೆ. ಮಂಗಳವಾರದಂದು ಬೆಳ್ಳಾರೆಯ ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯು ಕೆ.ಜಿ. 515ರಿಂದ 520 ರೂ. ಇದ್ದರೆ ಕ್ಯಾಂಪ್ಕೋದಲ್ಲಿ ಕೆ.ಜಿ.ಗೆ 500 ರೂ.ಗೆ ಖರೀದಿಯಾಗಿದೆ. ಮಾಸ್‌ ಸಹಕಾರ ಸಂಸ್ಥೆಯಲ್ಲಿ 505 ರೂ. ಧಾರಣೆಯಲ್ಲಿ ಅಡಿಕೆ ಬೆಲೆ ನಿಂತಿದ್ದರೆ ಬೆಳೆಗಾರರು ಇನ್ನೂ ಏರಿಕೆಯಾಗುತ್ತದೆ

ದಾಖಲೆಯತ್ತ ಮುಖ ಮಾಡಿದ ಅಡಿಕೆ ಧಾರಣೆ ➤ ಹೊಸ ಅಡಿಕೆಗೆ 520 ರೂ.!! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಕಾಲೇಜು ವಿದ್ಯಾರ್ಥಿ ನಾಪತ್ತೆ ➤ ಅಪಹರಣ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.22. ಇಲ್ಲಿನ ರಾಮಕುಂಜೇಶ್ವರ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಯೋರ್ವ ಕಾಲೇಜಿಗೂ ಹೋಗದೆ, ಮನೆಗೂ ತೆರಳದೆ ನಾಪತ್ತೆಯಾಗಿರುವ ಘಟನೆ ಮಂಗಳವಾರದಂದು ನಡೆದಿದ್ದು, ಈ ಬಗ್ಗೆ ಬಾಲಕ ಅಪಹರಣ ಆಗಿರುವ ಸಾಧ್ಯತೆ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮಕುಂಜೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಚಿಕ್ಕಮಗಳೂರು ನಿವಾಸಿ ಅಂಜನ್ ಸಿ.ಎಂ. ಎಂಬಾತ ಮಂಗಳವಾರದಂದು ಕಾಲೇಜಿಗೆ ತೆರಳದೆ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ಮನೆಯಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಲಾಗಿ ಪತ್ತೆಯಾಗದ

ಕಡಬ: ಕಾಲೇಜು ವಿದ್ಯಾರ್ಥಿ ನಾಪತ್ತೆ ➤ ಅಪಹರಣ ಶಂಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗ್ಯಾಸ್ ಸೋರಿಕೆಯಿಂದ ಮನೆಯಿಡೀ ವ್ಯಾಪಿಸಿದ ಬೆಂಕಿ ➤ ಮಹಿಳೆಯರಿಬ್ಬರು ಸಜೀವ ದಹನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.21. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಪಾರ್ಟ್‌ಮೆಂಟ್ ನಲ್ಲಿನ ಎರಡು ಮನೆಗೆ ಬೆಂಕಿ ವ್ಯಾಪಿಸಿದ ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಇಬ್ಬರು ಸಜೀವ ದಹನವಾದ ಘಟನೆ ಬೆಂಗಳೂರಿನ ಹೊರವಲಯದ ದೇವರಚಿಕ್ಕನ ಹಳ್ಳಿಯಲ್ಲಿ ಮಂಗಳವಾರದಂದು ಸಂಭವಿಸಿದೆ. ದೇವರಚಿಕ್ಕನ ಹಳ್ಳಿಯಲ್ಲಿರುವ ನಾಲ್ಕು ಅಂತಸ್ತಿನ ಅಪಾರ್ಟ್​ಮೆಂಟ್​ನಲ್ಲಿ ಅವಘಡ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ನ ಪೈಪ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೆಂಕಿ ಪರಿಸರದಲ್ಲೆಲ್ಲಾ ವ್ಯಾಪಿಸಿದ್ದು, ಈ ವೇಳೆ ಮನೆಯೊಳಗಿದ್ದ ಮಹಿಳೆಯು ವರಾಂಡಕ್ಕೆ ಬಂದು ಸಹಾಯಕ್ಕಾಗಿ ಕೂಗಾಡುತ್ತಿದ್ದ ವೇಳೆ

ಗ್ಯಾಸ್ ಸೋರಿಕೆಯಿಂದ ಮನೆಯಿಡೀ ವ್ಯಾಪಿಸಿದ ಬೆಂಕಿ ➤ ಮಹಿಳೆಯರಿಬ್ಬರು ಸಜೀವ ದಹನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ಳಂಬೆಳಗ್ಗೆ ಕಡಬದಲ್ಲಿ ಸರಣಿ ಅಪಘಾತ ➤ ಸ್ವಿಫ್ಟ್ ಡಿಸೈರ್, ಎರ್ಟಿಗಾ, ಗೋಕರ್ಣ ಬಸ್ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ಸೆ.21. ಸ್ವಿಫ್ಟ್ ಡಿಸೈರ್, ಎರ್ಟಿಗಾ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬದ ಹಿಂದುಸ್ತಾನ್ ಪೆಟ್ರೋಲ್ ಬಂಕ್‌ ಮುಂಭಾಗದಲ್ಲಿ ಮಂಗಳವಾರದಂದು ಸಂಭವಿಸಿದೆ. ಮರ್ಧಾಳದಿಂದ ಕಡಬ ಕಡೆಗೆ ತೆರಳುತ್ತಿದ್ದ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯ ಸ್ವಿಫ್ಟ್ ಡಿಸೈರ್ ಕಾರನ್ನು ಅದರ ಚಾಲಕ ಡೀಸೆಲ್ ತುಂಬಿಸಲೆಂದು ಪೆಟ್ರೋಲ್ ಬಂಕ್ ಗೆ ಏಕಾಏಕಿ ತಿರುಗಿಸಿದ ವೇಳೆ ಹಿಂದಿನಿಂದ ಬರುತ್ತಿದ್ದ ಎರ್ಟಿಗಾ ನಡುವೆ

ಬೆಳ್ಳಂಬೆಳಗ್ಗೆ ಕಡಬದಲ್ಲಿ ಸರಣಿ ಅಪಘಾತ ➤ ಸ್ವಿಫ್ಟ್ ಡಿಸೈರ್, ಎರ್ಟಿಗಾ, ಗೋಕರ್ಣ ಬಸ್ ನಡುವೆ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕರಾವಳಿ ಭಾಗದ ಹಿರಿಯ ಬಿಜೆಪಿ ಮುಖಂಡನ ಸೆಕ್ಸ್ ವೀಡಿಯೋ ವೈರಲ್ ➤ ವೀಡಿಯೋ ಬಗ್ಗೆ ಸ್ಪಷ್ಟೀಕರಣ ನೀಡಿದ ಮಾಜಿ ಮುಖ್ಯಮಂತ್ರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19. ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಕರಾವಳಿ ಮೂಲದ ಡಿ.ವಿ. ಸದಾನಂದ ಗೌಡರದ್ದು ಎನ್ನಲಾದ ಸೆಕ್ಸ್ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾನುವಾರ ಮಧ್ಯಾಹ್ನದಿಂದ ವೀಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಸ್ವತಃ ಡಿವಿಎಸ್ ಸ್ಪಷ್ಟನೆ ನೀಡಿದ್ದಾರೆ. “ಆತ್ಮೀಯ ಹಿತೈಷಿಗಳೇ.. ನನ್ನ ಮಾರ್ಫ್ ಮಾಡಿದ (ನಕಲಿ) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಇರುವುದು ನಾನಲ್ಲ, ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಆ

ಕರಾವಳಿ ಭಾಗದ ಹಿರಿಯ ಬಿಜೆಪಿ ಮುಖಂಡನ ಸೆಕ್ಸ್ ವೀಡಿಯೋ ವೈರಲ್ ➤ ವೀಡಿಯೋ ಬಗ್ಗೆ ಸ್ಪಷ್ಟೀಕರಣ ನೀಡಿದ ಮಾಜಿ ಮುಖ್ಯಮಂತ್ರಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸುಳ್ಯ ಕೋರ್ಟ್‌ನಿಂದ ವಾರಂಟ್ ➤ ಏನಿದು ಪ್ರಕರಣ ಗೊತ್ತೇ..?

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.15. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸುಳ್ಯದ ನ್ಯಾಯಾಲಯವು ವಾರಂಟ್ ಜಾರಿ ಮಾಡಿದ್ದು, ಸೆಪ್ಟೆಂಬರ್ 29 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಇಂಧನ ಸಚಿವರಾಗಿದ್ದ ಡಿಕೆಶಿ, ಹಾಗೂ ಬೆಳ್ಳಾರೆಯ ವ್ಯಕ್ತಿಯೋರ್ವರ ನಡುವೆ ವಿದ್ಯುತ್ ಸಮಸ್ಯೆಯ ಬಗ್ಗೆ ದೂರವಾಣಿ ಮೂಲಕ ವಾಗ್ವಾದ ನಡೆದಿತ್ತು. ಈ ಬಗ್ಗೆ ಡಿಕೆಶಿ ನೀಡಿದ ದೂರಿನ ಮೇರೆಗೆ ಬೆಳ್ಳಾರೆಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ‌ ಹಾಜರಾಗುವಂತೆ ಡಿಕೆಶಿಗೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸುಳ್ಯ ಕೋರ್ಟ್‌ನಿಂದ ವಾರಂಟ್ ➤ ಏನಿದು ಪ್ರಕರಣ ಗೊತ್ತೇ..? Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top