ಬ್ರೇಕಿಂಗ್ ನ್ಯೂಸ್

ಲಂಚ ಬೇಡಿಕೆ ಆರೋಪ ➤ ಹೆಡ್ ಕಾನ್ಸ್‌ಟೇಬಲ್ ಸಸ್ಪೆಂಡ್

(ನ್ಯೂಸ್ ಕಡಬ) newskadaba.com ವಿಜಯನಗರ, ನ. 08. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿಯಲ್ಲಿ ಕೊಟ್ಟೂರು ಸಿಪಿಐ ಕಛೇರಿ ಹೆಡ್ ಕಾನ್ಸ್‌ಟೇಬಲ್ ಆರ್ ಬಸವರಾಜ್ ಎಂಬವರನ್ನು ಅಮಾನತು ಮಾಡಿದ ಘಟನೆ ವರದಿಯಾಗಿದೆ. ಕೊಟ್ಟೂರು ಪಟ್ಟಣದ ಸಿಪಿಐ ಕಛೇರಿಯಲ್ಲಿ ಜೆಲಸ ಮಾಡುತ್ತಿದ್ದ ಬಸವರಾಜ್ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆಡಿಯೋವನ್ನು ಆಧರಿಸಿ, ಅಮಾನತು ಮಾಡಲಾಗಿದೆ.

ಲಂಚ ಬೇಡಿಕೆ ಆರೋಪ ➤ ಹೆಡ್ ಕಾನ್ಸ್‌ಟೇಬಲ್ ಸಸ್ಪೆಂಡ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪೈಂಟಿಂಗ್ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ನ. 08. ಪೈಂಟಿಂಗ್ ಮಾಡುತ್ತಿದ್ದ ವೇಳೆ ಮೇಲಿನಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮೇಲ್ಪರಂಬ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಮೇಲ್ಪರಂಬ ಕೈನೋತ್ ನಿವಾಸಿ ಭಾಸ್ಕರ(56) ಎಂದು ಗುರುತಿಸಲಾಗಿದೆ. ಮೇಲ್ಪರಂಬ ಎಂಬಲ್ಲಿ ಮನೆಯೊಂದರ ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆಬಿದ್ದು, ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬೇಕಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೈಂಟಿಂಗ್ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಜನರಿಗೆ ಮತ್ತೊಂದು ಬಿಗ್ ಶಾಕ್..! ➤ ಟಿವಿ ಚಾನಲ್ ದರ ಶೆ. 50ರಷ್ಟು ಹೆಚ್ಚಳ?

(ನ್ಯೂಸ್ ಕಡಬ) newskadaba.com ನವದೆಹಲಿ, ನ. 08. ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ಟಿ.ವಿ. ಚಾನೆಲ್ ದರ ಶೇ.50 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗ್ರಾಹಕರಿಗೆ ಟಿವಿ ಚಾನೆಲ್ ಗಳ ಗರಿಷ್ಠ ದರಕ್ಕೆ ಮಿತಿ ವಿಧಿಸಿರುವ ದೂರಸಂಪರ್ಕ ನಿಯಂತ್ರಕ ಟ್ರಾಯ್ ವಿರುದ್ಧ ಟಿವಿ ಚಾನೆಲ್ ಪ್ರಸಾರ ಕಂಪನಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಟ್ರಾಯ್ ಡಿಸೆಂಬರ್ 1 ರಿಂದ ಟಿವಿ ಚಾನೆಲ್ ಗಳ ದರದಲ್ಲಿ 12 ರೂ.ಗಳ ಮಿತಿಯನ್ನು ಅಳವಡಿಸಲು ಪ್ರಸ್ತಾಪಿಸಿತ್ತು.

ಜನರಿಗೆ ಮತ್ತೊಂದು ಬಿಗ್ ಶಾಕ್..! ➤ ಟಿವಿ ಚಾನಲ್ ದರ ಶೆ. 50ರಷ್ಟು ಹೆಚ್ಚಳ? Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗೋಕಳ್ಳನೆಂಬ ಶಂಕೆಯಿಂದ ಯುವಕನನ್ನು ಥಳಿಸಿ ಹತ್ಯೆ

(ನ್ಯೂಸ್ ಕಡಬ) newskadaba.com ಅಗರ್ತಲಾ, ನ. 08. ಗೋಕಳ್ಳ ಎಂದು ಶಂಕಿಸಿ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿರುವ ಘಟನೆ ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ಸೋನಮುರಾ ಉಪವಿಭಾಗದ ಕಮಲ್ ನಗರ ಗ್ರಾಮದಲ್ಲಿ ನಡೆದಿದೆ. ತಡರಾತ್ರಿಯಲ್ಲಿ ಮೂವರು ಶಂಕಿತ ಜಾನುವಾರು ಕಳ್ಳ ಸಾಗಾಣಿಕೆದಾರರು ಹಸುಗಳನ್ನು ಕದಿಯಲು ಲಿಟನ್ ಪೌಲ್ ಎಂಬವರ ಮನೆಗೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ, ಜನರು ಮೂವರನ್ನು ಅಟ್ಟಾಡಿಸಿದ್ದಾರೆ. ಈ ಮೂವರ ಪೈಕಿ ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಓರ್ವನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆತನನ್ನು ಸ್ಥಳೀಯ ಗುಂಪೊಂದು ಹೊಡೆದು ಕೊಂದಿದೆ

ಗೋಕಳ್ಳನೆಂಬ ಶಂಕೆಯಿಂದ ಯುವಕನನ್ನು ಥಳಿಸಿ ಹತ್ಯೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಡ್ರಗ್ಸ್ ಅಮಲಿನಲ್ಲಿ ತಾಯಿಯ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ಪುತ್ರ..!

(ನ್ಯೂಸ್ ಕಡಬ) newskadaba.com ಘಾಜಿಯಾಬಾದ್, ನ. 08. ಡ್ರಗ್ಸ್ ಸೇವಿಸಿದ ಅಮಲಿನಲ್ಲಿ ಸ್ವತಃ ಪುತ್ರನೇ ತನ್ನ ತಾಯಿಯ ಮೇಲೆ ಅತ್ಯಾಚಾರವೆಸಗಿದ ಬೀಭತ್ಸ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ ನಲ್ಲಿ ನಡೆದಿದೆ . ದೀಪಾವಳಿಯ ಹಿಂದಿನ ರಾತ್ರಿ ಡ್ರಗ್ಸ್ ಅಮಲಿನಲ್ಲಿ ಮನೆಗೆ ಬಂದ ಕಾಮುಕ ಪುತ್ರ ತನ್ನ ತಾಯಿಯ ಕತ್ತಿನಲ್ಲಿ ಚಾಕು ಇಟ್ಟು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬಲವಂತ ಮಾಡಿದ್ದ. ಆಕೆ ವಿರೋಧಿಸಿದಷ್ಟೂ ಸಿಟ್ಟಿಗೆದ್ದ ಪಾಪಿ ಸಹಕರಿಸದೇ ಇದ್ದರೆ ಕತ್ತು ಸೀಳುವುದಾಗಿ ಬೆದರಿಕೆ ಹಾಕಿದ್ದಾನೆ.

ಡ್ರಗ್ಸ್ ಅಮಲಿನಲ್ಲಿ ತಾಯಿಯ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ಪುತ್ರ..! Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ “ಪದ್ಮಶ್ರೀ ” ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 08. ಭಾರತ ಸರ್ಕಾರವು ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮ ಶ್ರೀ’ ಪ್ರಶಸ್ತಿಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸೋಮವಾರದಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು. ಇದೇ ಸಂದರ್ಭ ಹಲವು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ದ.ಕನ್ನಡ್ ಸಾಂಪ್ರದಾಯಿಕ ವಸ್ತ್ರವಾದ ಬಿಳಿ ಪಂಚೆ ಹಾಗೂ ಬಿಳಿ ಅಂಗಿ ಧರಿಸಿದ್ದ ಹಾಜಬ್ಬ ಅವರು ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು.

ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ “ಪದ್ಮಶ್ರೀ ” ಪ್ರಶಸ್ತಿ ಪ್ರದಾನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೀಪಾವಳಿ ರಜೆ ವಿಚಾರವಾಗಿ ಯೋಧರ ನಡುವೆ ಮಾತಿನ ಚಕಮಕಿ- ಗುಂಡು ಹಾರಾಟ ➤ ನಾಲ್ವರು ಮೃತ್ಯು, ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಛತ್ತೀಸ್ಗಢ, ನ. 08. ದೀಪಾವಳಿ ರಜೆಯ ವಿಚಾರವಾಗಿ ಯೋಧರಿಬ್ಬರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಮೃತಪಟ್ಟು, ಮೂವರ ಗಾಯಗೊಂಡ ಘಟನೆ ತೆಲಂಗಾಣ-ಛತ್ತೀಸ್‌ಗಢ ಗಡಿ ಭಾಗದಲ್ಲಿ ಸೋಮವಾರದಂದು ನಡೆದಿದೆ. ಮೃತರನ್ನು ಬಿಹಾರದ ರಾಜಮಣಿ ಯಾದವ್, ದಾಂಜಿ ಮತ್ತು ಬಂಗಾಳದ ರಾಜುಮಂಡಲ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಮೂವರು ಗಾಯಾಳುಗಳನ್ನು ಭದ್ರಾಚಲಂ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಲಿಂಗಂಪಲ್ಲಿ ಬೇಸ್ ಕ್ಯಾಂಪ್‌ನಲ್ಲಿ ದೀಪಾವಳಿ ರಜೆ ವಿಚಾರವಾಗಿ ಯೋಧರ ನಡುವೆ ಮಾತಿನ ಚಕಮಕಿ

ದೀಪಾವಳಿ ರಜೆ ವಿಚಾರವಾಗಿ ಯೋಧರ ನಡುವೆ ಮಾತಿನ ಚಕಮಕಿ- ಗುಂಡು ಹಾರಾಟ ➤ ನಾಲ್ವರು ಮೃತ್ಯು, ಮೂವರು ಗಂಭೀರ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಊಟ ಖಾಲಿ ಆಗಿದೆ ಎಂದ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಚೂರಿ ಇರಿತ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 08. ಊಟ ಖಾಲಿ ಆಗಿದೆ ಎಂದು ಹೇಳಿದ್ದಿಕ್ಕೆ ಹೋಟೆಲ್ ಮಾಲೀಕನಿಗೆ ವ್ಯಕ್ರಿಯೋರ್ವ ಚಾಕುವಿನಿಂದ ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಆರೋಪಿಯನ್ನು ರೌಡಿಶೀಟರ್ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಹೋಟೆಲ್ ಮಾಲೀಕ ಚಂದ್ರಶೇಖರ್‌ ಚಾಕು ಇರಿತಕ್ಕೆ ಒಳಗಾಗಿದ್ದು, ಗಾಯಾಳು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರೌಡಿಶೀಟರ್ ಯಲ್ಲಪ್ಪ ರಾತ್ರಿ 10 ಗಂಟೆಯ ನಂತರ ಮದ್ಯದ ಬಾಟಲಿ ಹಿಡಿದು ಸಿಗರೇಟು ಸೇದುತ್ತಾ ಹೋಟೆಲ್ ಗೆ ಬಂದಿದ್ದು, ಈ

ಊಟ ಖಾಲಿ ಆಗಿದೆ ಎಂದ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಚೂರಿ ಇರಿತ..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ನಿದ್ದೆ ಮಾತ್ರೆ ಬೆರೆಸಿದ ಜ್ಯೂಸ್ ಕುಡಿಸಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ➤ ಆರೋಪಿ ರೌಡಿಶೀಟರ್ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ನ. 08. ಅಪ್ರಾಪ್ತ ಬಾಲಕಿಯ ಮೇಲೆ ರೌಡಿಶೀಟರ್‌ ಓರ್ವ ಅತ್ಯಾಚಾರ ನಡೆಸಿದ ಆರೋಪಿಯನ್ನು ಬಂಧಿಸಿದ ಘಟನೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕೈಕಂಬದ ಹೊಟೇಲ್ ಒಂದರಲ್ಲಿ ಬಾಣಸಿಗನಾಗಿ ಕಾರ್ಯ ನಿರ್ವಹಿಸುತ್ತಿದ್ದ ರೌಡಿಶೀಟರ್ ನವೀನ್ ಸಿಕ್ವೇರ ಎಂದು ಗುರುತಿಸಲಾಗಿದೆ. ಈತನಿಗೆ ಬಾಲಕಿಯ ಸಹೋದರನ ಪರಿಚಯವಿದ್ದು, ಇದನ್ನೇ ನೆಪವಾಗಿಸಿ ಆಕೆಯ ನಂಬರ್ ಪಡೆದಿದ್ದ ರೌಡಿಶೀಟರ್ ಆಕೆ ಒಬ್ಬಳೇ ಮನೆಯಲ್ಲಿ ಇರುವ ವೇಳೆ ಮನೆಗೆ ಬಂದು ಬಾಲಕಿಗೆ ಜ್ಯೂಸ್ ನಲ್ಲಿ ನಿದ್ದೆ

ಮಂಗಳೂರು: ನಿದ್ದೆ ಮಾತ್ರೆ ಬೆರೆಸಿದ ಜ್ಯೂಸ್ ಕುಡಿಸಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ➤ ಆರೋಪಿ ರೌಡಿಶೀಟರ್ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮೇಯಲು ಕಟ್ಟಿದ್ದ ದನ ಕಳವುಗೈದು ಮಾರಾಟಕ್ಕೆ ಯತ್ನ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ನ. 08. ಮನೆ ಸಮೀಪದ ತೋಟವೊಂದರಲ್ಲಿ ಮೇಯಲು ಕಟ್ಟಿ ಹಾಕಿದ್ದ ದನವನ್ನು ಕದ್ದೊಯ್ದು ಮಾರಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶಿರ್ತಾಡಿ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ವಾಲ್ಪಾಡಿ ಗ್ರಾಮದ ಪವನ್ ಕುಮಾರ್, ಪುರಸಭೆ ವ್ಯಾಪ್ತಿಯ ಮಾರೂರಿನ ಸತೀಶ್ ಹಾಗೂ ಜಯಾನಂದ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಗಿರೀಶ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.  ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣೇಶ ಎಂಬವರು ಮನೆ ಸಮೀಪದ ತೋಟದಲ್ಲಿ ಮೇಯಲು

ಮೇಯಲು ಕಟ್ಟಿದ್ದ ದನ ಕಳವುಗೈದು ಮಾರಾಟಕ್ಕೆ ಯತ್ನ ➤ ಮೂವರ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top