ಬ್ರೇಕಿಂಗ್ ನ್ಯೂಸ್

ಪುತ್ತೂರು: ಬೈಕ್ ಹಾಗೂ ಓಮ್ನಿ ಕಾರಿನ ನಡುವೆ ಭೀಕರ ಅಪಘಾತ ➤ ತಂದೆ ಮೃತ್ಯು, ಮಗ ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 04. ಓಮ್ನಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ತಂದೆ ಮೃತಪಟ್ಟು, ಮಗ ಗಂಭೀರ ಗಾಯಗೊಂಡ ಘಟನೆ ಪುತ್ತೂರು ಸಮೀಪದ ಕುಂಬ್ರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತಪಟ್ಟವರನ್ನು ಪಂಜಿಗುಡ್ಡೆ ನಿವಾಸಿ ರಘುರಾಮ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ತನ್ನ ಮಗನನ್ನು ಬೆಂಗಳೂರು ಬಸ್ ಗೆ ಬಿಡಲೆಂದು ಮನೆಯಿಂದ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಪುತ್ತೂರು ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿ ಶೀನಪ್ಪರವರು […]

ಪುತ್ತೂರು: ಬೈಕ್ ಹಾಗೂ ಓಮ್ನಿ ಕಾರಿನ ನಡುವೆ ಭೀಕರ ಅಪಘಾತ ➤ ತಂದೆ ಮೃತ್ಯು, ಮಗ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೊಲ್ಲಮೊಗ್ರು: ವ್ಯಕ್ತಿಗೆ ಚೂರಿ ಇರಿತ..!!

(ನ್ಯೂಸ್ ಕಡಬ) newskadaba.com ಜು. 03. ವ್ಯಕ್ತಿಯೋರ್ವರಿಗೆ ಅಪರಿಚಿತ ವ್ಯಕ್ತಿ ಚೂರಿಯಿಂದ ಇರಿದ ಘಟನೆ ಕೊಲ್ಲಮೊಗ್ರ ಗ್ರಾಮದ ತೋಟದಮಜಲು ಎಂಬಲ್ಲಿ ನಡೆದಿದೆ. ಚೂರಿ ಇರಿತಕ್ಕೊಳಗಾದವರನ್ನು ತೋಟದಮಜಲು ನಿವಾಸಿ ಲೂಕೋಸ್ ಎಂದು ಗುರುತಿಸಲಾಗಿದೆ. ಇವರ ದೇಹದ 5 ಭಾಗದಲ್ಲಿ ಚೂರಿ ಇರಿತದಿಂದ ಗಾಯಗಳಾಗಿದ್ದು, ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸ್ಥಳೀಯರ ದೂರಿನಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲಮೊಗ್ರು: ವ್ಯಕ್ತಿಗೆ ಚೂರಿ ಇರಿತ..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ➤ ಮಾದಕ ವಸ್ತುಗಳ ಸಹಿತ ಮೂವರು ಅರೆಸ್ಟ್

(ನ್ಯೂಸ್ ಕಡಬ) newskadaba.com ವಿಟ್ಲ, ಜು. 02. ಅಕ್ರಮ ಗಾಂಜಾ ಸಾಗಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಗಳನ್ನು ಡ್ರಗ್ ಪೆಡ್ಲರ್ ರಹಿಮಾನ್, ಜಲಾಲುದ್ದೀನ್ ಹಾಗೂ ಪೈಝಲ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಸಾವಿರಾರು ರೂ ಮೌಲ್ಯದ ಎಂಡಿಎಮ್ಎ, ಗಾಂಜಾ, ಒಂದು ಆಟೋ ರಿಕ್ಷಾ ಹಾಗೂ ಒಂದು ತಲವಾರನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಬಂಧಿತ ಆರೋಪಿಗಳ ವಿರುದ್ಧ ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದು, ಕೇರಳದಿಂದ ಕರ್ನಾಟಕ ಭಾಗಗಳಿಗೆ

ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ➤ ಮಾದಕ ವಸ್ತುಗಳ ಸಹಿತ ಮೂವರು ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿದ್ಯುತ್ ಶಾಕ್ ಹೊಡೆದು ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಜು. 02. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ನಾಲ್ಕು ವರ್ಷದ ಮಗು ಮೃತಪಟ್ಟ ಘಟನೆ ಐವರ್ನಾಡಿನಲ್ಲಿ ಸಂಭವಿಸಿದೆ.   ಮೃತ ಬಾಲಕನನ್ನು ಐವರ್ನಾಡಿನ ಆದಂ ಎಂಬವರ ಪುತ್ರ ಹೈದರ್ ಅಲಿ ಎಂದು ಗುರುತಿಸಲಾಗಿದೆ. ಈತ ಪ್ರಿಡ್ಜ್ ನ್ನು ಮುಟ್ಟಿದಾಗ ವಿದ್ಯುತ್ ಶಾಕ್ ಹೊಡೆದಿದೆ ಎನ್ನಲಾಗಿದೆ.

ವಿದ್ಯುತ್ ಶಾಕ್ ಹೊಡೆದು ಮಗು ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯದಲ್ಲಿ ಮತ್ತೆ ಭೂಕಂಪನ ➤ ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 02. ಸುಳ್ಯ ನಗರದ ಹೊರವಲಯದಲ್ಲಿ ಇಂದು ಮತ್ತೆ ಭೂಕಂಪನವಾಗಿದ್ದು, ಮನೆ ಗೋಡೆಗಳು ನೆಲಸಮವಾದ ಘಟನೆಗಳು ವರದಿಯಾಗಿವೆ. ಒಂದೇ ದಿನ ಎರಡನೇ ಬಾರೀ ಭೂಮಿ ಕಂಪಿಸಿದ್ದು ಕೆಲದಿನಗಳಿಂದ ಗಡಿ ಪ್ರದೇಶದಲ್ಲಿ ಹಲವೆಡೆ ಇಂತಹ ದುರ್ಘಟನೆಗಳು ನಡೆಯುತ್ತಿದ್ದು, ಇದರಿಂದ ಆತಂಕಿತರಾದ ಸಾರ್ವಜನಿಕರು, ಬೇರೆ ಕಡೆಗೆ ವಲಸೆ ಹೋಗುತ್ತಿದ್ದಾರೆ. ಈ ಕುರಿತು ಆತಂಕಕ್ಕೊಳಗಾದ ಜನರಿಗೆ ಜಿಲ್ಲಾಧಿಕಾರಿ ಯಾವುದೇ ಸಮಸ್ಯೆಯಿದ್ದರೂ ನಾವು ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕಳೆದ ಭಾರಿ ಕೊಡಗಿನಲ್ಲಿ ಭೂಕುಸಿತಕ್ಕೂ ಮುಂಚೆ ಭೂಕಂಪನವಾಗಿದ್ದು,

ಸುಳ್ಯದಲ್ಲಿ ಮತ್ತೆ ಭೂಕಂಪನ ➤ ಮನೆಗಳಿಗೆ ಹಾನಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 02. ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಬಿಸಿರೋಡು ಪೂಂಜಾಲಕಟ್ಟೆ ರಾ.ಹೆ. ಬಡಗುಂಡಿ ಎಂಬಲ್ಲಿ ನಡೆದಿದೆ. ಗಂಭೀರ ಗಾಯಗೊಂಡವರನ್ನು ನಯನಾಡು ನಿವಾಸಿ ಬಾಪ್ಟಿಸ್ ಲೋಬೋ ಅವರ ಮಗ ರಾಕ್ ಲಿನ್ ಲೋಬೋ ಎಂದು ಗುರುತಿಸಲಾಗಿದೆ. ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಂಜೇಶ್ವರ ಕಡೆಗೆ ತೆರಳುತ್ತಿದ್ದ ಎರ್ಟಿಗಾ ಕಾರು ಹಾಗೂ ರಿಟ್ಝ್ ಕಾರು ನಡುವೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ

ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ➤ ಓರ್ವ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸರಣಿ ಭೂಕಂಪನದ ಕೆಂದ್ರ ಬಿಂದು ‘ಚೆಂಬು’ನಲ್ಲಿ ಭೂಕುಸಿತ ➤ ಆತಂಕದಲ್ಲಿ ಸ್ಥಳೀಯರು

(ನ್ಯೂಸ್ ಕಡಬ) newskadaba.com ಚೆಂಬು, ಜು. 02. ಗ್ರಾಮದ ಪೂಜಾರಿಗದ್ದೆ ನಿವಾಸಿ ಗಿರಿಧರ ಎಂಬವರ ಮನೆಯೊಂದರ ಮೇಲೆ ಮಣ್ಣು ಕುಸಿದು ಹಾನಿಯಾದ ಘಟನೆ ವರದಿಯಾಗಿದೆ. ತಡರಾತ್ರಿ ಸುಮಾರು 3 ಗಂಟೆಯ ವೇಳೆಗೆ ಭಾರೀ ಶಬ್ಧದೊಂದಿಗೆ ಮಣ್ಣು ಕುಸಿದಿದ್ದು, ರಾತ್ರಿಯಿಡೀ‌ ನಿರಂತರ ಮಳೆ ಸುರಿದ‌ ಹಿನ್ನೆಲೆ ಭೂಕುಸಿತವಾಗಿರಬಹುದು ಎಂದೆನ್ನಲಾಗಿದೆ. ಸರಣಿ ಭೂಕಂಪನ ಕೇಂದ್ರ ಸ್ಥಳವಾದ ಚೆಂಬು ನಲ್ಲಿ ಭೂಕುಸಿತ ಉಂಟಾಗಿರುವುದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸರಣಿ ಭೂಕಂಪನದ ಕೆಂದ್ರ ಬಿಂದು ‘ಚೆಂಬು’ನಲ್ಲಿ ಭೂಕುಸಿತ ➤ ಆತಂಕದಲ್ಲಿ ಸ್ಥಳೀಯರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿದ್ದರಾಮಯ್ಯ, ಡಿಕೆಶಿಗೆ ಬಹಿರಂಗ ಕೊಲೆ ಬೆದರಿಕೆ ➤ ಪಬ್ಲಿಕ್ ಟಿವಿ ಅರುಣ್ ಬಡಿಗೇರ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 01. ಉದಯಪುರದ ಟೈಲರ್ ಹತ್ಯೆ ವಿಚಾರವಾಗಿ ಪಬ್ಲಿಕ್ ಟಿವಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲುವಂತೆ ಕರೆಕೊಟ್ಟ ದಾವಣಗೆರೆಯ ವೀರಣ್ಣ ಹಾಗೂ ಅವರ ಹೇಳಿಕೆಗೆ ಪ್ರೋತ್ಸಾಹಿಸಿದ ಪಬ್ಲಿಕ್ ಟಿವಿ ಅರುಣ್ ಬಡಿಗೇರ ವಿರುದ್ದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ದೂರು

ಸಿದ್ದರಾಮಯ್ಯ, ಡಿಕೆಶಿಗೆ ಬಹಿರಂಗ ಕೊಲೆ ಬೆದರಿಕೆ ➤ ಪಬ್ಲಿಕ್ ಟಿವಿ ಅರುಣ್ ಬಡಿಗೇರ ವಿರುದ್ದ ದೂರು ದಾಖಲು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಚೇಳು ಕಚ್ಚಿ ಬಾಲಕಿ ಮೃತ್ಯು..!

(ನ್ಯೂಸ್ ಕಡಬ) newskadaba.com ಛತ್ತೀಸ್ಗಢ, ಜು. 01. ಎಂಟು ವರ್ಷದ ಬಾಲಕಿಯೋರ್ವಳಿಗೆ ಚೇಳು ಕಚ್ಚಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ಛತ್ತೀಸ್ಗಢದ ಬೆಮೆತಾರಾ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ನಡೆದಿದೆ. ಮೃತಪಟ್ಟ ಬಾಲಕಿಯನ್ನು 2ನೇ ತರಗತಿ ವಿದ್ಯಾರ್ಥಿನಿಯನ್ನು ದಿವ್ಯಾ ಮಾಂಡವಿ ಎಂದು ಗುರುತಿಸಲಾಗಿದೆ. ಈಕೆ ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಚೇಳು ಕಚ್ಚಿದ್ದು, ತಕ್ಷಣವೇ ಸಮೀಪದ ದಾಧಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಬಳಿಕ ಬೆಮೆತಾರಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಚೇಳು ಕಚ್ಚಿ ಬಾಲಕಿ ಮೃತ್ಯು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಗಲ್ಫ್ ಉದ್ಯೋಗಿ ಸಿದ್ದೀಕ್ ಕೊಲೆ ಪ್ರಕರಣ ➤ ಮತ್ತೆ ಮೂವರ ಬಂಧನ- ಬಂಧಿತರ ಸಂಖ್ಯೆ ಐದಕ್ಕೇರಿಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 01. ಗಲ್ಫ್ ಉದ್ಯೋಗಿ ಸೀತಾಂಗೋಳಿ ನಿವಾಸಿ ಅಬೂಬಕ್ಕರ್ ಸಿದ್ದಿಕ್ ರವರ ಕೊಲೆಗೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡವು ಮೂವರನ್ನು ಬಂಧಿಸಿದ್ದು, ಇದೀಗ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ. ಬಂಧಿತರನ್ನು ಮಂಜೇಶ್ವರ ಉದ್ಯಾವರದ ರಿಯಾಜ್ ಹಸನ್ ( 33), ಉಪ್ಪಳ ಬಿ.ಟಿ ರಸ್ತೆಯ ಅಬ್ದುಲ್ ರಜಾಕ್( 46) ಮತ್ತು ಕುಂಜತ್ತೂರಿನ ಅಬೂಬಕ್ಕರ್ ಸಿದ್ದಿಕ್( 33) ಎಂದು ಗುರುತಿಸಲಾಗಿದೆ. ಜೂನ್ 29 ರಂದು ಅಬೂಬಕ್ಕರ್ ಸಿದ್ದೀಕ್ ನನ್ನು ತಂಡವು ಅಪಹರಿಸಿ ಕೊಲೆಗೈಯ್ದು ಬಳಿಕ

ಗಲ್ಫ್ ಉದ್ಯೋಗಿ ಸಿದ್ದೀಕ್ ಕೊಲೆ ಪ್ರಕರಣ ➤ ಮತ್ತೆ ಮೂವರ ಬಂಧನ- ಬಂಧಿತರ ಸಂಖ್ಯೆ ಐದಕ್ಕೇರಿಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top