ಬ್ರೇಕಿಂಗ್ ನ್ಯೂಸ್

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಆ. 27. ನಟ ಮೋಹನ್ ಲಾಲ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರದಂದು ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದರು. ಲೈಂಗಿಕ ಕಿರುಕುಳದ ಆರೋಪದ ನಂತರ ನಟ ಸಿದ್ದೀಕ್ ಹುದ್ದೆ ತೊರೆದ ನಂತರ ಜಗದೀಶ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸುತ್ತಿರುವಾಗಲೇ ಈ ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಅಸೋಸಿಯೇಷನ್ ​​ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅದರ ಕೆಲವು ಸದಸ್ಯರು […]

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

Breaking News ಕಡಬ ಸರಕಾರಿ ಶಾಲೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿತ

(ನ್ಯೂಸ್ ಕಡಬ) newskadaba.com ಕಡಬ, ಆ.27. ಶಾಲಾ ಕೊಠಡಿಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಮಧ್ಯಾಹ್ನ ಕುಂತೂರಿನಲ್ಲಿ ನಡೆದಿದೆ. ಕುಂತೂರು‌ ಸರಕಾರಿ ಶಾಲೆಯ ಕೊಠಡಿಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದಿದ್ದು, ಲಕ್ಷಾಂತರ ರೂ.‌ ನಷ್ಟ ಸಂಭವಿಸಿದೆ. ಘಟನೆ ನಡೆಯುವ ವೇಳೆ ವಿದ್ಯಾರ್ಥಿಗಳು ಹೊರಗಡೆ ಇದ್ದುದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Breaking News ಕಡಬ ಸರಕಾರಿ ಶಾಲೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿತ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೆ. 01ರಿಂದ ಮೊಬೈಲ್ ಒಟಿಪಿ ವ್ಯವಸ್ಥೆ ಬಂದ್…?

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 27.  ದೇಶದಲ್ಲಿ ಸೆ. 01ರಿಂದ ಮೊಬೈಲ್‌ ನಂಬರ್‌ಗಳಿಗೆ ಬ್ಯಾಂಕ್‌ & ಇತರ ವೇದಿಕೆಗಳಿಂದ ಬರುವ OTP ವ್ಯವಸ್ಥೆ ಬಂದ್‌ ಆಗುವ ಸಾಧ್ಯತೆಯಿದ್ದು, ಹೀಗಾದರೆ ಸಾರ್ವಜನಿಕರು ಲಾಗ್‌ ಇನ್‌ ಮತ್ತು ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ.   ಸ್ಪ್ಯಾಮ್‌ ಮೆಸೇಜ್‌ ಗಳಿಗೆ ಕಡಿವಾಣ ಹಾಕಲು ಟ್ರಾಯ್‌ ಹೊರಡಿಸಿದ್ದ ಆದೇಶ ಸೆ. 01ರಿಂದ ಜಾರಿಯಾಗಲಿದೆ. ಮೊಬೈಲ್‌ ಕಂಪೆನಿಗಳ ಜತೆ ನೊಂದಣಿ ಮಾಡಿಕೊಳ್ಳದಿದ್ದರೆ ಅಂಥಹ ಕಂಪೆನಿ ಮೆಸೇಜ್‌ ನಿರ್ಬಂಧಿಸಲು ಸೂಚಿಸಿತ್ತು. ಕಂಪೆನಿಗಳು

ಸೆ. 01ರಿಂದ ಮೊಬೈಲ್ ಒಟಿಪಿ ವ್ಯವಸ್ಥೆ ಬಂದ್…? Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗಡಿಮೀರಿ ಮೀನುಗಾರಿಕೆ ನಡೆಸಿದ ಆರೋಪ – ತಮಿಳುನಾಡಿನ 8 ಮೀನುಗಾರನ್ನು ಬಂಧಿಸಿದ ಶ್ರೀಲಂಕಾ

(ನ್ಯೂಸ್ ಕಡಬ) newskadaba.com ರಾಮೇಶ್ವರಂ, ಆ. 27. ಡೆಲ್ಫ್ಟ್ ದ್ವೀಪದಲ್ಲಿ ಮೀನುಗಾರಿಕೆ ನಡೆಸಿದ ಆರೋಪದಡಿ ತಮಿಳುನಾಡಿನ 8 ಮಂದಿ ಮೀನುಗಾರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ ಘಟನೆ ವರದಿಯಾಗಿದೆ. ಮೀನುಗಾರರು ಧನುಷ್ಕೋಡಿ ಮತ್ತು ತಲೈಮನ್ನಾರ್ ಎಂಬಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಶ್ರೀಲಂಕಾ ನೌಕಾಪಡೆ ಗಡಿ ಮೀರಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನಾಡದೋಣಿ ಸಹಿತ 8 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದೆ. ಈ ಕುರಿತು ಹೇಳಿಕೆ ನೀಡಿರುವ ರಾಮೇಶ್ವರಂ ಮೀನುಗಾರಿಕೆ ಸಹಾಯಕ ನಿರ್ದೇಶಕ, ರಾಮೇಶ್ವರಂನಿಂದ 430 ಯಾಂತ್ರೀಕೃತ

ಗಡಿಮೀರಿ ಮೀನುಗಾರಿಕೆ ನಡೆಸಿದ ಆರೋಪ – ತಮಿಳುನಾಡಿನ 8 ಮೀನುಗಾರನ್ನು ಬಂಧಿಸಿದ ಶ್ರೀಲಂಕಾ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕುಸಿದುಬಿದ್ದ ಛತ್ರಪತಿ ಮಹಾರಾಜರ ಬೃಹತ್ ಪ್ರತಿಮೆ- ತನಿಖೆಗೆ ಆದೇಶ

(ನ್ಯೂಸ್ ಕಡಬ) newskadaba.com ಮುಂಬೈ, ಆ. 27. ಭಾರೀ ಗಾಳಿ, ಮಳೆಯ ನಡುವೆ ಸಿಂಧುದುರ್ಗ ಜಿಲ್ಲೆಯ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್‌ ಪ್ರತಿಮೆ ಕುಸಿದು ಬಿದ್ದಿದ್ದು, ಇದಾದ ಕೆಲವೇ ಗಂಟೆಗಳ ಬಳಿಕ ಭಾರತೀಯ ನೌಕಾಪಡೆಗೆ ತನಿಖೆಗೆ ಆದೇಶಿಸಲಾಗಿದೆ. ಈ ನಡುವೆ ಗುತ್ತಿಗೆದಾರ ಮತ್ತು ರಚನಾತ್ಮಕ ಸಲಹೆಗಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಏಕಾಏಕಿ ಸುಮಾರು 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪತನಗೊಂಡಿದ್ದು, ಭಾರೀ ಆತಂಕ ಮೂಡಿಸಿತ್ತು. ಇದೀಗ ಗುತ್ತಿಗೆದಾರ ಜಯದೀಪ್‌ ಆಪ್ಟೆ ಮತ್ತು

ಕುಸಿದುಬಿದ್ದ ಛತ್ರಪತಿ ಮಹಾರಾಜರ ಬೃಹತ್ ಪ್ರತಿಮೆ- ತನಿಖೆಗೆ ಆದೇಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದರ್ಶನ್ ಗೆ ರಾಜಾತಿಥ್ಯದ ಫೊಟೋ ವೈರಲ್- ಏಳು ಅಧಿಕಾರಿಗಳು ಸಸ್ಪೆಂಡ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 26. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಜೈಲಿನಲ್ಲಿ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಿರುವ ಫೋಟೋ ವೈರಲ್ ಆಗಿರುವುದರ ಜೊತೆಗೆ ದರ್ಶನ್ ಅವರು ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿರುವ ವಿಡಿಯೋ ತುಣುಕು ಕೂಡಾ ವೈರಲ್ ಆಗಿತ್ತು. ಈ ಬೆನ್ನಲ್ಲೇ ಜೈಲಿನ ಏಳು ಅಧಿಕಾರಿಗಳನ್ನು ಗೃಹಸಚಿವ ಜಿ. ಪರಮೇಶ್ವರ್ ಅವರು ಸಸ್ಪೆಂಡ್ ಮಾಡಿ ಆದೇಶಿಸಿರುವ ಕುರಿತು ವರದಿಯಾಗಿದೆ. ಈ ಕುರಿತು ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಏಳು

ದರ್ಶನ್ ಗೆ ರಾಜಾತಿಥ್ಯದ ಫೊಟೋ ವೈರಲ್- ಏಳು ಅಧಿಕಾರಿಗಳು ಸಸ್ಪೆಂಡ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆರ್.ಜಿಕರ್ ವೈದ್ಯೆಯ ಅತ್ಯಾಚಾರ, ಕೊಲೆ ಕೇಸ್ – ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಆ. 23. ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಂಜಯ್ ರಾಯ್‌ನನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಸಂಜಯ್‌ನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಸೀಲ್ದಾ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಕ್ಕೆ ಕರೆತರಲಾಗಿದ್ದು, ಆರೋಪಿ ಸಂಜಯ್ ರಾಯ್ ನ ಸಿಬಿಐ ಕಸ್ಟಡಿ ಇಂದು ಅಂತ್ಯಗೊಂಡ ಬೆನ್ನಲ್ಲೇ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಆರ್.ಜಿಕರ್ ವೈದ್ಯೆಯ ಅತ್ಯಾಚಾರ, ಕೊಲೆ ಕೇಸ್ – ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಯೂಟ್ಯೂಬ್ ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ ಗೋಲ್ಡನ್ ಬಟನ್ ಪಡೆದ “ರೋನಾಲ್ಡೋ”..!

(ನ್ಯೂಸ್ ಕಡಬ) newskadaba.com ಪೋರ್ಚುಗಲ್, ಆ. 23. ಯೂಟ್ಯೂಬ್ ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ ಕ್ರಿಸ್ತಿಯಾನೊ ರೊನಾಲ್ಡೊ ಎರಡು ಕೋಟಿಗೂ ಅಧಿಕ ಚಂದಾದಾರರನ್ನು ಪಡೆದಿದ್ದಾರೆ. ಅಲ್ಲದೇ ಸಿಲ್ವರ್ ಬಟನ್ ಹಾಗೂ ಡೈಮಂಡ್ ಬಟನ್ ಒಟ್ಟಿಗೆ ಸಿಕ್ಕಿದ್ದು, ಈ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ಯೂಟ್ಯೂಬ್ ನ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.   ರೊನಾಲ್ಡೊ ಅವರು ಇದೇ ಮೊದಲ ಬಾರಿಗೆ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಚಾನೆಲ್ ಆರಂಭಿಸಿದ ಕೇವಲ 90 ನಿಮಿಷದಲ್ಲೇ 10 ಲಕ್ಷ ಚಂದಾದಾರರನ್ನು ಹೊಂದುವ ಮೂಲಕ ಅಭಿಮಾನಿಗಳು

ಯೂಟ್ಯೂಬ್ ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ ಗೋಲ್ಡನ್ ಬಟನ್ ಪಡೆದ “ರೋನಾಲ್ಡೋ”..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾಡಾನೆ ದಾಳಿ- 150ಕ್ಕೂ ಹೆಚ್ಚು ಅಡಿಕೆ ಗಿಡ ನಾಶ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ. 21. ಕಾಡಾನೆ ದಾಳಿ ನಡೆಸಿದ ಪರಿಣಾಮ 150ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನಾಶಗೊಂಡಿರುವ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ನಡೆದಿದೆ. ಶಿರಾಡಿ ಗ್ರಾಮದ ತೆಕ್ಕನಾಟ್ ನಿವಾಸಿ ಟಿ.ಎ.ಥಾಮಸ್ ಎಂಬವರಿಗೆ ಸೇರಿದ ಕೃಷಿ ತೋಟಕ್ಕೆ ಕಾಡಾನೆ ನುಗ್ಗಿ 150ಕ್ಕೂ ಅಧಿಕ ಅಡಿಕೆ ಗಿಡಗಳನ್ನು ನಾಶಗೊಳಿಸಿದೆ ಎನ್ನಲಾಗಿದೆ. ಈ ಭಾಗದಲ್ಲಿ ಕಾಡಾನೆಗಳು ಪದೇ ಪದೇ ಕೃಷಿ ತೋಟಕ್ಕೆ ದಾಳಿ ನಡೆಸಿ ಹಾನಿಗೊಳಿಸುತ್ತಿರುವುದು ಕೃಷಿಕರು ಆತಂಕಗೊಳ್ಳುವಂತೆ ಮಾಡಿದೆ. ಶೀಘ್ರವೇ ಆನೆಗಳನ್ನು ಅರಣ್ಯದೊಳಗೆ ಸ್ಥಳಾಂತರಿಸುವ

ಕಾಡಾನೆ ದಾಳಿ- 150ಕ್ಕೂ ಹೆಚ್ಚು ಅಡಿಕೆ ಗಿಡ ನಾಶ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಾಸರಗೋಡು: 3 ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com  ಕಾಸರಗೋಡು, ಆ. 20. ಮೂರು ತಿಂಗಳ ಗರ್ಭಿಣಿಯೋರ್ವಳು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಯ್ಯಾರ್ ಕನ್ನಟಿಪಾರೆ ಶಾಂತಿಯೋಡು ಎಂಬಲ್ಲಿ ನಡೆದಿದೆ.   ಆತ್ಮಹತ್ಯೆ ಮಾಡಿಕೊಂಡವರನ್ನು ಶಾಂತಿಯೋಡಿನ ಜನಾರ್ಧನ ಅವರ ಪತ್ನಿ ವಿಜೇತ (32) ಎಂದು ಗುರುತಿಸಲಾಗಿದೆ. ಇವರ ಪತಿ ಜನಾರ್ಧನರವರು ರವಿವಾರದಂದು ಬೆಳಗ್ಗೆ ಉಳ್ಳಾಲದ ಸಂಬಂಧಿಕರ ಮನೆಗೆ ತೆರಳಿದ್ದು, ಈ ಸಂದರ್ಭ ವಿಜೇತಾ ಮಾತ್ರ ಮನೆಯಲ್ಲಿದ್ದರು. ಪತಿ ಸಂಜೆ ಮನೆಗೆ ಬಂದಾಗ ಕೋಣೆಯ ಬಾಗಿಲು ಒಳಗಿನಿಂದ ಚಿಲಕ ಹಾಕಿದ್ದು, ಬಾಗಿಲು

ಕಾಸರಗೋಡು: 3 ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top