ಕಡಬ: ಮೂರನೇ ದಿನದ ‘ಆಪರೇಷನ್ ಎಲಿಫೆಂಟ್’ ಯಶಸ್ವಿ ➤ ಕೊನೆಗೂ ಸೆರೆಸಿಕ್ಕ ಕಾಡಾನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.23. ಕಳೆದೆರಡು ದಿನಗಳಿಂದ ಅರಣ್ಯ ಅಧಿಕಾರಿಗಳಿಗೆ ತಲೆನೋವನ್ನು ತರಿಸಿರುವ ಕಾಡಾನೆಯು ಕೊನೆಗೂ ಸೆರೆಯಾಗಿದ್ದು, ಅಧಿಕಾರಿಗಳ ಶ್ರಮಕ್ಕೆ ಕೊನೆಗೂ ಫಲ‌ದೊರೆತಿದೆ.

ಕಡಬ ತಾಲೂಕಿನ ಕೊಂಬಾರು ಗ್ರಾಮದ ಮಂಡೆಕರ ಎಂಬಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆನೆಯನ್ನು ಕಂಡುಬಂದಿದೆ. ಬುಧವಾರದಂದು ಐತ್ತೂರು ಗ್ರಾಮದ ಸುಳ್ಯ ಸಮೀಪ ಕಂಡುಬಂದಿದ್ದ ಆನೆಯನ್ನು ಸೆರೆಹಿಡಿಯಲು ಹರಸಾಹಸ ನಡೆಸಿದ್ದ ಅಧಿಕಾರಿಗಳು, ಪೊದರುಗಳ ನಡುವೆ ಅವಿತಿದ್ದ ಆನೆಯ ಮೇಲೆ ಶೂಟ್ ಮಾಡಿದ್ದ ಅರಿವಳಿಕೆ ಚುಚ್ಚುಮದ್ದು ಗುರಿ ತಪ್ಪಿತ್ತು. ಸಂಜೆ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಇಂದು ಕೊಂಬಾರು ಗ್ರಾಮದ ಬಾರ್ಯ ಸಮೀಪ ಕಾಡಿನಲ್ಲಿ ಆನೆ ಕಂಡುಬಂದ ಹಿನ್ನೆಲೆಯಲ್ಲಿ ಮತ್ತೆ ಕಾರ್ಯಾಚರಣೆ ಮುಂದುವರಿಸಿದ್ದರು. ಅಪರಾಹ್ನ ಕೊಂಬಾರು ಮಂಡೆಕರ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಕೊನೆಗೂ ಸೆರೆಹಿಡಿದಿದ್ದಾರೆ.

 

Scroll to Top