ಬ್ರೇಕಿಂಗ್ ನ್ಯೂಸ್

ಅಸಹಜ ಲೈಂಗಿಕ ಕ್ರಿಯೆಗೆ ಪತ್ನಿ ಒತ್ತಾಯ – ಕೋರ್ಟ್ ಮೊರೆ ಹೋದ ಪತಿ..!

(ನ್ಯೂಸ್ ಕಡಬ) newskadaba.com ಅ.24.  ಅಶ್ಲೀಲ ವೀಡಿಯೋ ನೋಡಿ ಅದೇ ರೀತಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯ ಮಾಡಿದ ಪತ್ನಿಗೆ ಪತಿಯೋರ್ವ ವಿಚ್ಛೇದನ ನೀಡಿರುವ ಕುರಿತು ಪಂಜಾಬ್ ನಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಸೆಕ್ಸಿ ವಿಡಿಯೋ ನೋಡುವ ಚಟಕ್ಕೆ ಬಿದ್ದಿರುವ ಪತ್ನಿಯ ಲೈಂಗಿಕ ಒತ್ತಾಯಕ್ಕೆ ಬೇಸತ್ತು ಕೌಟುಂಬಿಕ ನ್ಯಾಯಾಲಯದ ಮೊರೆ ಹೋದ ಪತಿಗೆ ಅಲ್ಲಿ ನ್ಯಾಯಾಲಯವು ವಿಚ್ಛೇದನ ತೀರ್ಪು ನೀಡಿದ್ದು, ಇದರ ವಿರುದ್ಧ ಪತ್ನಿ ಪಂಜಾಬ್‌-ಹರಿಯಾಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾಳೆ. ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಇದೀಗ […]

ಅಸಹಜ ಲೈಂಗಿಕ ಕ್ರಿಯೆಗೆ ಪತ್ನಿ ಒತ್ತಾಯ – ಕೋರ್ಟ್ ಮೊರೆ ಹೋದ ಪತಿ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗೃಹ ಆರೋಗ್ಯ ಯೋಜನೆ: ನಾಳೆ ರಾಜ್ಯ ಸರ್ಕಾರದಿಂದ ಚಾಲನೆ

(ನ್ಯೂಸ್ ಕಡಬ) newskadaba.com ಅ.24, ಬೆಂಗಳೂರು: ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಗೃಹ ಆರೋಗ್ಯ ಯೋಜನೆಯನ್ನು ನಾಳೆ ಶುಕ್ರವಾರ ಪ್ರಾರಂಭಿಸಲು ಸಿದ್ಧವಾಗಿದೆ, ಇದು ಗ್ರಾಮೀಣ ಜನರ ಆರೋಗ್ಯವನ್ನು ಹೆಚ್ಚಿಸುವ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಜಿಲ್ಲೆಯಲ್ಲಿ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದು, ಜನವರಿಯಲ್ಲಿ ರಾಜ್ಯಾದ್ಯಂತ ಜಾರಿಗೆ ತರಲು ಯೋಜಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಎನ್‌ಸಿಡಿಗಳ ಸಂಭವವನ್ನು ಪರಿಹರಿಸುವುದು ಯೋಜನೆಯ ಪ್ರಾಥಮಿಕ

ಗೃಹ ಆರೋಗ್ಯ ಯೋಜನೆ: ನಾಳೆ ರಾಜ್ಯ ಸರ್ಕಾರದಿಂದ ಚಾಲನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಪಘಾತದ ಗಾಯಾಳುವನ್ನು ತನ್ನ ಸ್ಕೂಟರ್ ನಲ್ಲೇ ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೇದೆ..! ಕಮಿಷನರ್ ಅನುಪಮ್ ಅಗರ್ವಾಲ್ ಶ್ಲಾಘನೆ

(ನ್ಯೂಸ್ ಕಡಬ) newskadaba.com ಅ.23. ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ ಕಾನ್ಸ್ ಟೇಬಲ್ ತನ್ನ ಸ್ಕೂಟಿಯಲ್ಲೇ ಆಸ್ಪತ್ರೆಗೆ ದಾಖಲಿಸಿ ಸಮಯಪ್ರಜ್ಞೆ ಮೆರೆದಿರುವ ಕುರಿತು ಮಂಗಳೂರಿನಿಂದ ವರದಿಯಾಗಿದೆ. ಬುಧವಾರದಂದು ಮುಂಜಾವ ಸುಮಾರು 3:40ರ ಸುಮಾರಿಗೆ ನಗರದ ಕೆಪಿಟಿ ಬಳಿ ಪಿಕ್ ಅಪ್ ವಾಹನ ಮತ್ತು ಕಂಟೈನರ್ ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಕ್ಲೀನರ್ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮಾಹಿತಿ ಪಡೆದ ಕದ್ರಿ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮನ್ಶಿದಾ ಬಾನು ತಕ್ಷಣ

ಅಪಘಾತದ ಗಾಯಾಳುವನ್ನು ತನ್ನ ಸ್ಕೂಟರ್ ನಲ್ಲೇ ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೇದೆ..! ಕಮಿಷನರ್ ಅನುಪಮ್ ಅಗರ್ವಾಲ್ ಶ್ಲಾಘನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

2025 ರಲ್ಲಿ ಭಾರತದ ಆರ್ಥಿಕತೆ ಶೇ 7 ರಿಂದ ಶೇ 7.2 ರಷ್ಟು ಬೆಳವಣಿಗೆ: ಡೆಲಾಯ್ಟ್ ವರದಿ

(ನ್ಯೂಸ್ ಕಡಬ) newskadaba.com ಅ.23,  ಪಣಜಿ. ನವದೆಹಲಿ: ಸರ್ಕಾರಿ ಹೂಡಿಕೆಗಳು ಮತ್ತು ಹೆಚ್ಚಿನ ಉತ್ಪಾದನೆಗಳ ಪ್ರಮಾಣ ಹೆಚ್ಚಳದಿಂದಾಗಿ ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7-7.2ರ ಬೆಳವಣಿಗೆ ಕಾಣಬಹುದು. ಆದರೆ, ಜಾಗತಿಕವಾಗಿ ಹಣಕಾಸು ವರ್ಷದ ಮುನ್ನೋಟದ ಪರಿಣಾಮವನ್ನೂ ಎದುರಿಸಲಿದೆ ಎಂದು ಹಣಕಾಸು ಆಡಿಟ್ ಸಂಸ್ಥೆ ಡೆಲಾಯ್ಟ್ ಇಂಡಿಯಾ ಮಂಗಳವಾರ ಹೇಳಿದೆ. ಉತ್ಪಾದನಾ ವಲಯದ ಅಭಿವೃದ್ಧಿ, ತೈಲ ಬೆಲೆಗಳಲ್ಲಿ ಸ್ಥಿರತೆ ಮತ್ತು ಚುನಾವಣೆಯ ನಂತರ ಅಮೆರಿಕದ ವಿತ್ತೀಯ ಸ್ಥಿರತೆ ಭಾರತದ ಬಂಡವಾಳ ಒಳಹರಿವು ಹೆಚ್ಚಿಸುತ್ತದೆ. ಉತ್ಪಾದನಾ ವೆಚ್ಚವನ್ನು ಕಡಿಮೆ

2025 ರಲ್ಲಿ ಭಾರತದ ಆರ್ಥಿಕತೆ ಶೇ 7 ರಿಂದ ಶೇ 7.2 ರಷ್ಟು ಬೆಳವಣಿಗೆ: ಡೆಲಾಯ್ಟ್ ವರದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪುತ್ತೂರು: ಹೊಸ ಶಿಕ್ಷಣ ಸೌಧ ಆರಂಭ

(ನ್ಯೂಸ್ ಕಡಬ) newskadaba.com ಅ.23,  ಪುತ್ತೂರು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಅದ್ವಿತೀಯ ಸಾಧನೆ ಮಾಡುತ್ತಾ ಬಂದಿರುವ ಪುತ್ತೂರು ತಾಲೂಕಿನ ಎಲ್ಲ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಸ್ಥಾನವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಹೊಸ ವರ್ಷದ ಆಗಮನದೊಂದಿಗೆ ಹೊಸ ಶಿಕ್ಷಣ ಸೌಧದಲ್ಲಿ ಕಾರ್ಯಾರಂಭ ಮಾಡುವ ಯೋಗ ಅಧಿಕಾರಿಗಳಿಗೆ ಸಿಗಲಿದೆ. ಪುತ್ತೂರು ತಾಲೂಕಿನಲ್ಲಿ ಹೊಸ ಬಿಇಒ ಕಚೇರಿ ನಿರ್ಮಾಣವಾಗುತ್ತಿದೆ. ನೆಲ್ಲಿಕಟ್ಟೆಯಲ್ಲಿರುವ ಸರ್ಕಾರಿ ಶಾಲೆಯ ಜಮೀನಿನ ಒಂದು ಪಾರ್ಶ್ವದಲ್ಲೇ ಈ

ಪುತ್ತೂರು: ಹೊಸ ಶಿಕ್ಷಣ ಸೌಧ ಆರಂಭ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಡಾನಾ ಚಂಡಮಾರುತ ಹಿನ್ನೆಲೆ; ಒಡಿಶಾ, ಪಶ್ಚಿಮ ಬಂಗಾಳಕ್ಕೆ ಹೋಗುವ ರೈಲು ಸೇವೆ ರದ್ದು

(ನ್ಯೂಸ್ ಕಡಬ) newskadaba.com ಅ.23.  ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಡಾನಾ ಚಂಡಮಾರುತ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಆಗ್ನೇಯ ರೈಲ್ವೆ ವ್ಯಾಪ್ತಿಯ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಭಾಗದಲ್ಲಿ ಸಂಚರಿಸುವ ೧೫೦ ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಭಾರತೀಯ ರೈಲ್ವೇ ರದ್ದುಗೊಳಿಸಿದೆ. ಹೌರಾ-ಸಿಕಂದರಾಬಾದ್ ಫಲಕ್ನುಮಾ ಎಕ್ಸ್‌ಪ್ರೆಸ್, ಕಾಮಖ್ಯ-ಯಶವಂತಪುರ ಎಸಿ ಎಕ್ಸ್‌ಪ್ರೆಸ್, ಹೌರಾ-ಪುರಿ ಶತಾಬ್ದಿ ಎಕ್ಸ್‌ಪ್ರೆಸ್, ಹೌರಾ-ಭುವನೇಶ್ವರ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಹೌರಾ-ಯಶವಂತಪುರ ಎಕ್ಸ್‌ಪ್ರೆಸ್ ರೈಲುಗಳನ್ನು ಸೇರಿ 150 ಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡಲಾಗಿದೆ. ಅಕ್ಟೋಬರ್

ಡಾನಾ ಚಂಡಮಾರುತ ಹಿನ್ನೆಲೆ; ಒಡಿಶಾ, ಪಶ್ಚಿಮ ಬಂಗಾಳಕ್ಕೆ ಹೋಗುವ ರೈಲು ಸೇವೆ ರದ್ದು Read More »

ಬ್ರೇಕಿಂಗ್ ನ್ಯೂಸ್

ಲಾರೆನ್ಸ್ ಬಿಷ್ಣೋಯ್ ಎನ್ಕೌಂಟರ್ಗೆ ರೂ. 1,11,11,111 ಬಹುಮಾನ ಘೋಷಿಸಿದ ಕರ್ಣಿ ಸೇನೆ!

(ನ್ಯೂಸ್ ಕಡಬ) newskadaba.com ಅ.22 ನವದೆಹಲಿ: ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ಎನ್‌ಕೌಂಟರ್ ಮಾಡಿದವರಿಗೆ ಕ್ಷತ್ರಿಯ ಕರ್ಣಿ ಸೇನೆ ಬಹುಮಾನ ಘೋಷಿಸಿದೆ. ಈ ನಿಟ್ಟಿನಲ್ಲಿ ಕ್ಷತ್ರಿಯ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್ ಶೇಖಾವತ್ ಅವರ ವಿಡಿಯೋವೊಂದು ಹೊರಬಿದ್ದಿದ್ದು, ಯಾವುದೇ ಪೊಲೀಸರಿಗೆ 1,11,11,111 (ಒಂದು ಕೋಟಿ ಹನ್ನೊಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು ರೂಪಾಯಿ) ಬಹುಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಂಬೈನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು.

ಲಾರೆನ್ಸ್ ಬಿಷ್ಣೋಯ್ ಎನ್ಕೌಂಟರ್ಗೆ ರೂ. 1,11,11,111 ಬಹುಮಾನ ಘೋಷಿಸಿದ ಕರ್ಣಿ ಸೇನೆ! Read More »

ಬ್ರೇಕಿಂಗ್ ನ್ಯೂಸ್

ಭಾರತದಲ್ಲಿ ಇದೇ ಮೊದಲು ಅನ್ನದಾತರಿಗಾಗಿ ರೈತರ ಶಾಲೆ ಆರಂಭ

(ನ್ಯೂಸ್ ಕಡಬ) newskadaba.com ಅ.22 ಮಂಡ್ಯ: ಯುವಜನತೆ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಮತ್ತು ವಿದ್ಯಾವಂತರನ್ನು ವ್ಯವಸಾಯದೆಡೆಗೆ ಆಕರ್ಷಿಸಲು, ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ರೈತರಿಗಾಗಿ ‘ರೈತರ ಶಾಲೆ’ ತೆರೆಯಲು ಶಿಕ್ಷಕರ ಗುಂಪೊಂದು ಮುಂದಾಗಿದೆ. ಕೃಷಿಯಲ್ಲಿ ತೊಡಗಿರುವವರನ್ನು ಮತ್ತು ಅದನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ತೆಗೆದುಕೊಳ್ಳಲು ಉತ್ಸುಕರಾಗಿರುವವರನ್ನು ಸಬಲೀಕರಣಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಮಂಡ್ಯದ ಉಪನ್ಯಾಸಕ ಸತ್ಯಮೂರ್ತಿ ಅವರ ನೇತೃತ್ವದಲ್ಲಿ ಏಳು ಸದಸ್ಯರ ಗುಂಪು, ರೈತ ಕುಟುಂಬದ ಎಲ್ಲ ಶಿಕ್ಷಕರು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಕಳೆದ ವರ್ಷದ

ಭಾರತದಲ್ಲಿ ಇದೇ ಮೊದಲು ಅನ್ನದಾತರಿಗಾಗಿ ರೈತರ ಶಾಲೆ ಆರಂಭ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆರೋಪಿ ರಾಣಾ ಬಾರತಕ್ಕೆ ಹಸ್ತಾಂತರ ಸಾಧ್ಯತೆ.!

(ನ್ಯೂಸ್ ಕಡಬ) newskadaba.com ಅ. 22. ಮುಂಬೈ ದಾಳಿ ಆರೋಪಿ, ಕೆನಡಾ-ಪಾಕಿಸ್ತಾನಿ ಪ್ರಜೆ ತಹವ್ವುರ್ ರಾಣಾ ಎಂಬಾತನನ್ನು ಈ ವರ್ಷದ ಕೊನೆಗೆ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದೆಹಲಿಯ ಯುಎಸ್ ರಾಯಭಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎರಡೂ ದೇಶಗಳ ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಕಾನೂನು ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಸುಮಾರು 3 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ರಾಣಾ ಹಸ್ತಾಂತರದ ಕುರಿತು ಚರ್ಚೆ ನಡೆಸಲಾಯಿತು ಎನ್ನಲಾಗಿದೆ. ಈ

ಆರೋಪಿ ರಾಣಾ ಬಾರತಕ್ಕೆ ಹಸ್ತಾಂತರ ಸಾಧ್ಯತೆ.! Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬುಲ್ಡೋಜರ್ ಕ್ರಮಕ್ಕೆ ಸುಪ್ರೀಂಕೋರ್ಟ್ ತಡೆ- ಅ.23ಕ್ಕೆ ವಿಚಾರಣೆ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಅ. 22. ಕೋಮು ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳ ಮನೆಗಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸುವ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದ್ದು, ವಿಚಾರಣೆಯನ್ನು ಅ.23ಕ್ಕೆ ಮುಂದೂಡಿರುವುದಾಗಿ ವರದಿಯಾಗಿದೆ. ಆರೋಪಿಗಳ ಮನೆಯನ್ನು ಒಡೆಯುವ ನೋಟಿಸ್ ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್, ಇದು ರಾಜ್ಯ ಸರ್ಕಾರದ ಆಯ್ಕೆಗೆ ಬಿಟ್ಟ ವಿಚಾರವಾಗಿದೆ. ಒಂದು ವೇಳೆ ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಲು ಬಯಸುವುದಾದರೆ ಆಯ್ಕೆ ನಿಮ್ಮದು ಎಂದು ಎಚ್ಚರಿಸಿದೆ. ಅರ್ಜಿ

ಬುಲ್ಡೋಜರ್ ಕ್ರಮಕ್ಕೆ ಸುಪ್ರೀಂಕೋರ್ಟ್ ತಡೆ- ಅ.23ಕ್ಕೆ ವಿಚಾರಣೆ ಮುಂದೂಡಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top