ಬ್ರೇಕಿಂಗ್ ನ್ಯೂಸ್

ಲಾಕಪ್ ಡೆತ್: ಪಿಎಸ್ಐ, ಹೆಡ್ ಕಾನ್ ಸ್ಟೇಬಲ್ ಅಮಾನತು

(ನ್ಯೂಸ್ ಕಡಬ) newskadaba.com ನ. 13. ಬ್ರಹ್ಮಾವರ ಠಾಣೆಯಲ್ಲಿ ನವೆಂಬರ್ 10ರಂದು ನಡೆದ ಲಾಕಪ್ ಡೆತ್ ಘಟನೆಯ ಹಿನ್ನೆಲೆ ಬ್ರಹ್ಮಾವರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಮಧು ಬಿ.ಇ ಮತ್ತು ಹೆಡ್ ಕಾನ್‌ಸ್ಟೇಬಲ್ ಸುಜಾತಾ ಅವರನ್ನು ಅಮಾನತುಗೊಳಿಸಲಾಗಿದೆ. ಮೃತ ಬಿಜು ಮೋಹನ್ ಎಂಬಾತನನ್ನು, ಬ್ರಹ್ಮಾವರ ಠಾಣಾ ವ್ಯಾಪ್ತಿಯ ಚೇರ್ಕಾಡಿ ಗ್ರಾಮದಲ್ಲಿ ನಡೆದ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 9 ರಂದು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಅವರು ಮೃತಪಟ್ಟಿದ್ದರು. ಘಟನೆ ಸಂಬಂಧ ಬಿಜು ಮೋಹನ್ ಅವರ ಕುಟುಂಬಸ್ಥರು ಬ್ರಹ್ಮಾವರ […]

ಲಾಕಪ್ ಡೆತ್: ಪಿಎಸ್ಐ, ಹೆಡ್ ಕಾನ್ ಸ್ಟೇಬಲ್ ಅಮಾನತು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ತೀವ್ರ ವಾಯುಮಾಲಿನ್ಯ- ಜನರು ಓಡಾಟಕ್ಕೆ ಬ್ರೇಕ್ ಹಾಕಿದ ಪಾಕ್..!

(ನ್ಯೂಸ್ ಕಡಬ) newskadaba.com ನ. 13. ದಿನದಿಂದ ದಿನಕ್ಕೆ ಪಾಕಿಸ್ತಾನದಲ್ಲಿ ವಾಯುಮಾಲಿನ್ಯ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆ ಜನರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಸರ್ಕಾರ ಜನರ ಓಡಾಟಕ್ಕೆ ಬ್ರೇಕ್ ಹಾಕಿದೆ. ತೀವ್ರ ವಾಯುಮಾಲಿನ್ಯದಿಂದಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವು ಹೆಚ್ಚಿನ ಹೊರಾಂಗಣ ಚಟುವಟಿಕೆಗಳನ್ನು ನಿಷೇಧಿಸಿದೆ. ವಾಯುಮಾಲಿನ್ಯದಿಂದ ಉಂಟಾಗುವ ಕಾಯಿಲೆಗಳನ್ನು ನಿಗ್ರಹಿಸಲು ಕೆಲವು ಪ್ರದೇಶಗಳಲ್ಲಿ ಅಂಗಡಿಗಳು, ಮಾರುಕಟ್ಟೆಗಳು ಮತ್ತು ಮಾಲ್‌ ಗಳನ್ನು ಮುಚ್ಚಲು ಸರ್ಕಾರ ಆದೇಶ ಹೊರಡಿಸಿದೆ. ವಾಯುಗುಣಮಟ್ಟದಲ್ಲಿ ವಿಶ್ವದ ಅತ್ಯಂತ ಕಲುಷಿತ ನಗರವಾದ ಲಾಹೋರ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ

ತೀವ್ರ ವಾಯುಮಾಲಿನ್ಯ- ಜನರು ಓಡಾಟಕ್ಕೆ ಬ್ರೇಕ್ ಹಾಕಿದ ಪಾಕ್..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ಬ್ರೇಕ್..!

(ನ್ಯೂಸ್ ಕಡಬ) newskadaba.com ನ. 13. ಸಂವಿಧಾನದ 300 ಎ ವಿಧಿಯು ಕಾನೂನಿನ ಅಧಿಕಾರದಿಂದ ಹೊರತುಪಡಿಸಿ ಯಾವುದೇ ವ್ಯಕ್ತಿಯು ತನ್ನ ಆಸ್ತಿಯಿಂದ ವಂಚಿತನಾಗಬಾರದು ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್​,​ ದೇಶದಲ್ಲಿ ಬುಲ್ಡೋಜರ್​ ಕಾರ್ಯಾಚರಣೆಗೆ ತಡೆ ನೀಡಿ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಕಾರ್ಯಾಂಗ, ಏಕಪಕ್ಷೀಯ ನಿರ್ಧಾರವು ತಪ್ಪು ಎಂದಿರುವ ಸರ್ವೋಚ್ಛ ನ್ಯಾಯಾಲಯವು, ಆರೋಪಿಗಳ ಮನೆಗಳನ್ನು ನೆಲಸಮ ಮಾಡುವಂತಿಲ್ಲ ಎಂದಿದೆ. ಬುಲ್ಡೋಜರ್ ಕ್ರಮ ಅಧಿಕಾರದ ಹಂಚಿಕೆಗೆ ವಿರುದ್ಧವಾಗಿದೆ. ದೇಶದ ಕಾನೂನನ್ನು ಗೌರವಿಸಬೇಕು ಎಂದಿರುವ ಸುಪ್ರೀಂ ಕೋರ್ಟ್​​​​ ನ ದ್ವಿಸದಸ್ಯ

ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ಬ್ರೇಕ್..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರಿನಲ್ಲಿ ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣ- ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ನ. 13. ನಗರದ ಪಕ್ಷಿಕೆರೆ ಎಂಬಲ್ಲಿ ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹತ್ಯೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಮೃತ ಕಾರ್ತಿಕ್ ತಾಯಿ ಶ್ಯಾಮಲಾ ಭಟ್ ಹಾಗೂ ಸಹೋದರಿ ಕಣ್ಮಣಿಯವರನ್ನು ಬಂಧಿಸಲಾಗಿದೆ. ಬಂಧಿತ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲೇ ಇಬ್ಬರು ಆರೋಪಿಗಳು ತಲೆ‌ತಿರುಗಿ ಬಿದ್ದಿದ್ದು, ಈ ಹಿನ್ನಲೆ ಇಬ್ಬರನ್ನೂ ಮೂಡಬಿದ್ರೆಯ ಖಾಸಗಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಕೌಟುಂಬಿಕ

ಮಂಗಳೂರಿನಲ್ಲಿ ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣ- ಇಬ್ಬರ ಬಂಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಕ್ಕಳ ಕೈಗೆ ಪೆನ್ನು ಬದಲಾಗಿ ತಲ್ವಾರ್ ಕೊಡಿ ಹೇಳಿಕೆ; ಮರುಳಾರಾಧ್ಯ ವಿರುದ್ಧ ಎಫ್‌ಐಆರ್

(ನ್ಯೂಸ್ ಕಡಬ) newskadaba.com ನ. 09.ಕಲಬುರ್ಗಿ: ಪ್ರಚೋದನಕಾರಿ ಹೇಳಿಕೆ ನೀಡಿದ ಮೇರೆಗೆ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೈತರಿಗೆ ವಕ್ಫ್ ಬೋರ್ಡ್‌ ನೋಟಿಸ್ ನೀಡಿರುವುದನ್ನು ಖಂಡಿಸಿ ಕಲಬುರಗಿ ಜಿಲ್ಲೆಯಲ್ಲಿ ಭಾನುವಾರ ನಡೆದಿದ್ದ ವಕ್ಫ್ ಹಠಾವೋ, ದೇಶ ಬಚಾವೋ ಪ್ರತಿಭಟನೆಯ ವೇಳೆ ಮರುಳಾರಾಧ್ಯ ಸ್ವಾಮೀಜಿ ಅವರು, ಮಕ್ಕಳ ಕೈಗೆ ಪೆನ್ನು ಬದಲಾಗಿ ತಲ್ವಾರ್ ಕೊಡಿ, ವಕ್ಫ್ ತೆಗೆಯದಿದ್ದರೆ ಜೀವ ತೆಗೆಯೋಕೆ ನಾವು ರೆಡಿ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರತಿಭಟನಾ

ಮಕ್ಕಳ ಕೈಗೆ ಪೆನ್ನು ಬದಲಾಗಿ ತಲ್ವಾರ್ ಕೊಡಿ ಹೇಳಿಕೆ; ಮರುಳಾರಾಧ್ಯ ವಿರುದ್ಧ ಎಫ್‌ಐಆರ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ- ಆರೋಪಿಗಳ ನ್ಯಾಯಾಂಗ ಬಂಧನ 14 ದಿನಗಳ ಕಾಲ ವಿಸ್ತರಣೆ

(ನ್ಯೂಸ್ ಕಡಬ) newskadaba.com ನ. 09. ಸ್ಲೋಪಾಯಿಸನ್ ನೀಡಿ ಪತಿಯ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್‌ ಹೆಗ್ಡೆ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ಕಾರ್ಕಳ ನ್ಯಾಯಾಲಯವು ಶುಕ್ರವಾರದಂದು ಆದೇಶ ಹೊರಡಿಸಿದೆ. ಆರೋಪಿ ಪ್ರತಿಮಾಳನ್ನು ವಶಕ್ಕೆ ಪಡೆದ ಪೊಲೀಸರು ಅ.25ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ನ.07ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವೇಳೆ ಮೂರು ದಿನಗಳ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದ ಆರೋಪಿ ದಿಲೀಪ್‌

ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ- ಆರೋಪಿಗಳ ನ್ಯಾಯಾಂಗ ಬಂಧನ 14 ದಿನಗಳ ಕಾಲ ವಿಸ್ತರಣೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ- ಸಿಜೆಐ ಚಂದ್ರಚೂಡ್

(ನ್ಯೂಸ್ ಕಡಬ) newskadaba.com ನ. 09. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತರಾದ ಸಿಜೆಐ ಚಂದ್ರಚೂಡ್ ಅವರು, ‘ನನ್ನಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಇರಲಿ’ ಎಂದು ಕೇಳಿಕೊಂಡಿದ್ದಾರೆ. ಈ ಕುರಿತು ಶುಕ್ರವಾರದಂದು ಕೋರ್ಟ್ ಹಾಲ್‌ ನಲ್ಲಿ ಮಾತನಾಡಿದ ಅವರು, ನ್ಯಾಯಾಲಯವೇ ನನ್ನನ್ನು ಮುಂದುವರೆಸುತ್ತದೆ. ನಮ್ಮ ಅರಿವಿಗೆ ಬಾರದಂತೆ ಎಷ್ಟೋ ಜನರನ್ನು ಭೇಟಿಯಾಗಿರುತ್ತೇವೆ. ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನಿಂದ ತಪ್ಪಾಗಿದ್ದರೆ ಅಥವಾ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ತಿಳಿಸಿದ್ದಾರೆ.

ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ- ಸಿಜೆಐ ಚಂದ್ರಚೂಡ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಶ್ವದ ಯಾವ ಶಕ್ತಿಯೂ ಜಮ್ಮು ಕಾಶ್ಮೀರದ 370ನೇ ವಿಧಿ ವಾಪಾಸ್ ತರಲಾಗದು: ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com , ಸಾಂಗ್ಲಿ, ನ. 09.: ಜಗತ್ತಿನ ಯಾವ ಶಕ್ತಿಯೂ ಸಹ  ಜಮ್ಮು ಮತ್ತು ಕಾಶ್ಮೀರಕ್ಕೆ ಪುನಃ ಸಂವಿಧಾನದ 370ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನು ಮರಳಿ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇರಲಿ, ಅವರ ಮುಂದಿನ 4 ತಲೆಮಾರಿಗೂ 370ನೇ ವಿಧಿ ಮರು ಜಾರಿ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಅಬ್ಬರಿಸಿದ್ದಾರೆ. ವಿಶೇಷ ಸ್ಥಾನಮಾನದ ಕುರಿತು ಅಧಿವೇಶನದಲ್ಲಿ ತೀವ್ರ

ವಿಶ್ವದ ಯಾವ ಶಕ್ತಿಯೂ ಜಮ್ಮು ಕಾಶ್ಮೀರದ 370ನೇ ವಿಧಿ ವಾಪಾಸ್ ತರಲಾಗದು: ಪ್ರಧಾನಿ ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಕ್ಕಳ ಮಾರಾಟ, ಖರೀದಿ: 5 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ನ. 08. ಮಕ್ಕಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಮಕ್ಕಳನ್ನು ಮಾರುವ ಹಾಗೂ ಕೊಳ್ಳುವವರಿಗೆ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 80 ಮತ್ತು 81 ರನ್ವಯ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ಗಳ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಎಚ್ಚರಿಕೆ ನೀಡಿದೆ. ಇಂತಹ ಅಪರಾಧಗಳಲ್ಲಿ ಆಸ್ಪತ್ರೆಯವರು ಶಾಮೀಲಾದರೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಸಂಬಂಧ ದಕ್ಷಿಣ ಕನ್ನಡ ಮಕ್ಕಳ

ಮಕ್ಕಳ ಮಾರಾಟ, ಖರೀದಿ: 5 ವರ್ಷ ಜೈಲು ಶಿಕ್ಷೆ Read More »

ಬ್ರೇಕಿಂಗ್ ನ್ಯೂಸ್

ಮಹಿಳಾ ಆಯೋಗ: ಪುರುಷ ಟೈಲರ್ ಗಳು ಮಹಿಳೆಯರ ವಸ್ತ್ರದ ಅಳತೆ ಪಡೆಯುವಂತಿಲ್ಲ

(ನ್ಯೂಸ್ ಕಡಬ) newskadaba.com ಲಕ್ನೋ ನ. 07: ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗ ಕೆಲವು ಕ್ರಾಂತಿಕಾರಕ ಪ್ರಸ್ತಾವನೆ ಸಲ್ಲಿಸಿದೆ. ಇನ್ನು ಇನ್ನು ಮುಂದೆ ಪುರುಷ ಟೈಲರ್ ಗಳು ಮಹಿಳೆಯರ ಉಡುಪಿನ ಅಳತೆಯನ್ನು ಪಡೆಯುವಂತಿಲ್ಲ ಎನ್ನುವುದು ಇವುಗಳ ಪೈಕಿ ಒಂದಾದರೆ, ಪುರುಷ ತರಬೇತುದಾರರು ಮಹಿಳೆಯರಿಗೆ ಜಿಮ್ ಅಥವಾ ಯೋಗ ತರಭೇತಿ ನಡೆಸುವಂತಿಲ್ಲ ಎನ್ನುವುದು ಈ ಪ್ರಸ್ತಾವನೆಯಲ್ಲಿದೆ. “ಸಾರ್ವಜನಿಕ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಮಹಿಳೆಯರ ಭದ್ರತೆಯನ್ನು ಸುಧಾರಿಸುವ” ಉದ್ದೇಶದ ಸುರಕ್ಷಾ ಮಾರ್ಗಸೂಚಿಗಳ ಕುರಿತಂತೆ

ಮಹಿಳಾ ಆಯೋಗ: ಪುರುಷ ಟೈಲರ್ ಗಳು ಮಹಿಳೆಯರ ವಸ್ತ್ರದ ಅಳತೆ ಪಡೆಯುವಂತಿಲ್ಲ Read More »

ಬ್ರೇಕಿಂಗ್ ನ್ಯೂಸ್
Scroll to Top