ಬ್ರೇಕಿಂಗ್ ನ್ಯೂಸ್

2025ರ ಕೇಂದ್ರ ಬಜೆಟ್: ನಿರ್ಮಲಾ ಸೀತಾರಾಮನ್‌ ಅವರಿಗೆ ಸಲಹೆ ನೀಡಲು ಜನಸಾಮಾನ್ಯರಿಗೆ ಅವಕಾಶ

(ನ್ಯೂಸ್ ಕಡಬ) newskadaba.com ಜ.07: ಭಾರತದಾದ್ಯಂತದ ನಾಗರಿಕರು 2025-26ರ ಕೇಂದ್ರ ಬಜೆಟ್‌ಗಾಗಿ ತಮ್ಮ ಸಲಹೆಗಳು ಮತ್ತು ವಿಚಾರಗಳನ್ನು MyGov ವೇದಿಕೆಯ ಮೂಲಕ ನೀಡಬಹುದು. ‘ಜನ ಭಾಗಿಧಾರಿ’ಯ ಮೂಲಕ ಬಜೆಟ್ ರಚನೆಯನ್ನು ಹೆಚ್ಚು ಒಳಗೊಳ್ಳುವಂತೆ ಮಾಡುವ ಉದ್ದೇಶ ಹೊಂದಿದೆ ಎಂದು ಹಣಕಾಸು ಸಚಿವಾಲಯವು ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದೆ. ಸಚಿವಾಲಯವು, MyGov ಜೊತೆಗೆ ಸಹಯೋಗದೊಂದಿಗೆ, ನಾಗರಿಕರಿಂದ ನವೀನ ಮತ್ತು ರಚನಾತ್ಮಕ ಒಳಹರಿವುಗಳನ್ನು ಕಾತರದಿಂದ ನಿರೀಕ್ಷಿಸುತ್ತಿದೆ. www.mygov.in ನಲ್ಲಿ MyGov ವೇದಿಕೆಯ ಮೂಲಕ ಸಲಹೆಗಳನ್ನು ಸಲ್ಲಿಸಬಹುದು, “ವಿಕಸಿತ ಭಾರತ”ದ ದೃಷ್ಟಿಕೋನಕ್ಕೆ ಕೊಡುಗೆ […]

2025ರ ಕೇಂದ್ರ ಬಜೆಟ್: ನಿರ್ಮಲಾ ಸೀತಾರಾಮನ್‌ ಅವರಿಗೆ ಸಲಹೆ ನೀಡಲು ಜನಸಾಮಾನ್ಯರಿಗೆ ಅವಕಾಶ Read More »

ಬ್ರೇಕಿಂಗ್ ನ್ಯೂಸ್

ದೆಹಲಿಯಲ್ಲಿ ದಟ್ಟ ಮಂಜು: 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com ಜ.07 ಬೆಂಗಳೂರು: ದೆಹಲಿಯಲ್ಲಿ ದಟ್ಟ ಮಂಜಿನ ವಾತಾವರಣ ಹಿನ್ನೆಲೆ 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.ದಟ್ಟವಾದ ಮಂಜು ಆವರಿಸಿದ್ದ ಹಿನ್ನೆಲೆ ಸ್ಪಷ್ಟ ಗೋಚರತೆ ಕಡಿಮೆಯಾಗಿ 25 ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. ನಗರದಲ್ಲಿ ಕನಿಷ್ಠ ತಾಪಮಾನ 10.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗ್ಗೆ 5 ರಿಂದ 5.30ರ ನಡುವೆ ಪಾಲಂನಲ್ಲಿ 11-13 ಕಿ.ಮೀ ವೇಗದಲ್ಲಿ ವಾಯುವ್ಯ ಗಾಳಿ ಹಾಗೂ ದಟ್ಟವಾದ ಮಂಜಿನಲ್ಲಿ ಕನಿಷ್ಠ 150 ಮೀ. ಗೋಚರತೆ ಕಂಡುಬಂದಿದೆ. ಬೆಳಿಗ್ಗೆ 8.30ರ ಹೊತ್ತಿಗೆ 13

ದೆಹಲಿಯಲ್ಲಿ ದಟ್ಟ ಮಂಜು: 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ Read More »

ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ರಾಜ್ಯದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್ ಅಳವಡಿಕೆ

(ನ್ಯೂಸ್ ಕಡಬ) newskadaba.com ಜ.07 ಬೆಂಗಳೂರು: ನಗರದಲ್ಲಿ ಕರ್ನಾಟಕದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್(DWR) ಅಳವಡಿಕೆ ಕಾರ್ಯ ಕೆಲವೇ ದಿನಗಳಲ್ಲಿ ಸಂಪೂರ್ಣಗೊಳ್ಳಲಿದೆ. ತಾಂತ್ರಿಕ ತೊಂದರೆಗಳಿಂದ ಸ್ವಲ್ಪ ವಿಳಂಬವಾದರೂ ಜನವರಿ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರದ ಮುಖ್ಯಸ್ಥ ಎನ್ ಪುವಿಯರಸನ್ ತಿಳಿಸಿದ್ದಾರೆ. ಇಲಾಖೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ TMD ಬೆಂಗಳೂರು ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಪುವಿಯರಸನ್ ಅವರು, ಆರಂಭದಲ್ಲಿ ಜನವರಿ 15 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದ್ದ

ಮಂಗಳೂರಿನಲ್ಲಿ ರಾಜ್ಯದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್ ಅಳವಡಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೇರಳ: ಪಾಳು ಬಿದ್ದ ಮನೆಯ ಫ್ರಿಡ್ಜ್‌ನಲ್ಲಿ ಮಾನವ ಅವಶೇಷಗಳು ಪತ್ತೆ

(ನ್ಯೂಸ್ ಕಡಬ) newskadaba.com ಜ.07 ಕೇರಳ: ಸೋಮವಾರ ಎರ್ನಾಕುಲಂ ಜಿಲ್ಲೆಯ ಚೊಟ್ಟನಿಕ್ಕಾರಾ ಬಳಿಯ ಪರಿತ್ಯಕ್ತ ಮನೆಯೊಳಗೆ ತಲೆಬುರುಡೆ ಮತ್ತು ಮೂಳೆಗಳು ಸೇರಿದಂತೆ ಮಾನವ ಅವಶೇಷಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳವನ್ನು ಶೋಧಿಸಿದ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶಿಸಿದಾಗ, ಸುಮ್ಮನೆ ಕುತೂಹಲಕ್ಕೆಂದು ಫ್ರಿಡ್ಜ್​ ಬಾಗಿಲು ತೆರೆದಾಗ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿವೆ. ಅವಶೇಷಗಳು ಫ್ರಿಡ್ಜ್‌ನಲ್ಲಿ ಶೇಖರಿಸಲ್ಪಟ್ಟಿರುವುದು ಕಂಡುಬಂದಿದೆ. 30 ವರ್ಷಗಳಿಂದ ಜನವಸತಿ ಇಲ್ಲದ ಈ ಮನೆ ಸಮಾಜ ವಿರೋಧಿಗಳ ತಾಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸಿದ್ಧ ಚೊಟ್ಟಣಿಕ್ಕರ ಭಗವತಿ

ಕೇರಳ: ಪಾಳು ಬಿದ್ದ ಮನೆಯ ಫ್ರಿಡ್ಜ್‌ನಲ್ಲಿ ಮಾನವ ಅವಶೇಷಗಳು ಪತ್ತೆ Read More »

ಬ್ರೇಕಿಂಗ್ ನ್ಯೂಸ್

ನಾಗ್ಪುರದಲ್ಲಿ ಇಬ್ಬರು ಮಕ್ಕಳಲ್ಲಿ ಹೆಚ್‌ಎಂಪಿವಿ ವೈರಸ್‌ ಪತ್ತೆ

(ನ್ಯೂಸ್ ಕಡಬ) newskadaba.com ಜ.07 ನಾಗ್ಪುರ: ಭಾರತದಲ್ಲಿ ಎಚ್‌ಎಂಪಿವಿ ಪ್ರಕರಣಗಳ ಸಂಖ್ಯೆ ಏಳಕ್ಕೆ ತಲುಪಿದೆ, ನಾಗ್ಪುರದಲ್ಲಿ ಎರಡು ಹೊಸ ಪ್ರಕರಣಗಳು ವರದಿಯಾಗಿವೆ. 7 ಹಾಗೂ 14 ವರ್ಷ ವಯಸ್ಸಿನ ಇಬ್ಬರು ಮಕ್ಕಳಿಗೆ ಸೋಂಕು ತಗುಲಿದೆ. ಇಬ್ಬರು ಮಕ್ಕಳು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಜನವರಿ 3 ರಂದು ಜ್ವರ ಮತ್ತು ಕೆಮ್ಮು ಚಿಕಿತ್ಸೆಗಾಗಿ ಮಕ್ಕಳನ್ನು ನಗರದ ರಾಮದಾಸ್‌ಪೇಟ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷೆಯ ನಂತರ, ಆಸ್ಪತ್ರೆಯ ಅಧಿಕಾರಿಗಳು ಇಬ್ಬರೂ ಹೆಚ್‌ಎಮ್‌ಪಿವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ

ನಾಗ್ಪುರದಲ್ಲಿ ಇಬ್ಬರು ಮಕ್ಕಳಲ್ಲಿ ಹೆಚ್‌ಎಂಪಿವಿ ವೈರಸ್‌ ಪತ್ತೆ Read More »

ಬ್ರೇಕಿಂಗ್ ನ್ಯೂಸ್

ನೇಪಾಳ: 7.1 ತೀವ್ರತೆಯ ಪ್ರಬಲ ಭೂಕಂಪ; ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವ

(ನ್ಯೂಸ್ ಕಡಬ) newskadaba.com ಜ.07 ಕಠ್ಮಂಡು: ನೆರೆಯ ರಾಷ್ಟ್ರ ನೇಪಾಳದಲ್ಲಿ ಇಂದು ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪಶಾಸ್ತ್ರಜ್ಞರ ಪ್ರಕಾರ 7.1 ತೀವ್ರತೆಯ ಪ್ರಬಲ ಭೂಕಂಪವು ದಕ್ಷಿಣ ಚೀನಾದ ಟಿಬೆಟ್‌ಗೆ ಅಪ್ಪಳಿಸಿದೆ. ನೇಪಾಳ, ಭಾರತ, ಭೂತಾನ್ ಮತ್ತು ಬಾಂಗ್ಲಾದೇಶದಲ್ಲೂ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರವು ಲೋಬುಚೆಯಿಂದ ಈಶಾನ್ಯಕ್ಕೆ 93 ಕಿ.ಮೀ. ದೂರದಲ್ಲಿತ್ತು. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಇಂದು ಬೆಳಗ್ಗೆ 6:30ಕ್ಕೆ ಭೂಕಂಪನ ಸಂಭವಿಸಿದೆ. ಮಂಗಳವಾರ, ನೇಪಾಳದಲ್ಲಿ ಸಂಭವಿಸಿದ

ನೇಪಾಳ: 7.1 ತೀವ್ರತೆಯ ಪ್ರಬಲ ಭೂಕಂಪ; ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವ Read More »

ಬ್ರೇಕಿಂಗ್ ನ್ಯೂಸ್

ದೇಶದಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದ ಕಡು ಬಡತನ..!

(ನ್ಯೂಸ್ ಕಡಬ) newskadaba.com ಜ.03  ನವದೆಹಲಿ: ದೇಶದಲ್ಲಿ ಕಡು ಬಡತನ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಸಂಶೋಧನಾ ಅಧ್ಯಯನದ ಪ್ರಕಾರ 2024 ರಲ್ಲಿ ದೇಶದಲ್ಲಿ ಬಡತನದ ಪ್ರಮಾಣ ಶೇ. 5 ಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಕಡು ಬಡತನ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿದಿರುವುದಾಗಿ ಅಧ್ಯಯನದಲ್ಲಿ ಹೇಳಲಾಗಿದೆ. ಒಟ್ಟಾರೇ, ಭಾರತದಲ್ಲಿ ಕಡು ಬಡತನ ಅತ್ಯಂಕ ಕನಿಷ್ಠ ಮಟ್ಟದಲ್ಲಿರುವುದರೊಂದಿಗೆ ಬಡತನ ಪ್ರಮಾಣ ಈಗ ಶೇ. 4 ರಿಂದ ಶೇ. 4.5 ರಷ್ಟಿದೆ. ಇತ್ತೀಚಿನ ವರ್ಷಗಳಲ್ಲಿ

ದೇಶದಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದ ಕಡು ಬಡತನ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಿಲ್ಲಿಯಲ್ಲಿ ಪ್ರತಿಕೂಲ ಹವಾಮಾನ; 100ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬ

(ನ್ಯೂಸ್ ಕಡಬ) newskadaba.com ಜ.03  ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ಇಂದು (ಜ .3) ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟವಾದ ಮಂಜಿನಿಂದಾಗಿ ಕಡಿಮೆ ಗೋಚರತೆ ಕಂಡುಬಂದಿದೆ. ಪರಿಣಾಮ 100ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದ್ದು, ಇಂಡಿಗೋ, ಸ್ಪೈಸ್ ಜೆಟ್ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ CAT III ತರಬೇತಿ ಪಡೆದ ಪೈಲಟ್‌ಗಳ ವಿಮಾನಗಳ ಲ್ಯಾಂಡಿಂಗ್ ಮುಂದುವರಿಯಲಿದೆ.

ದಿಲ್ಲಿಯಲ್ಲಿ ಪ್ರತಿಕೂಲ ಹವಾಮಾನ; 100ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬ Read More »

ಬ್ರೇಕಿಂಗ್ ನ್ಯೂಸ್

ನಿಮ್ಹಾನ್ಸ್ ಸಂಸ್ಥೆ ದೇಶಕ್ಕೆ ಮಾದರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

(ನ್ಯೂಸ್ ಕಡಬ) newskadaba.com ಜ.03  ಬೆಂಗಳೂರು: ಸಮಗ್ರ ಔಷಧ ಸೇವೆ ಒದಗಿಸುತ್ತಿರುವ ನಿಮ್ಹಾನ್ಸ್ ಸಂಸ್ಥೆ ಮಾದರಿಯಾಗಿದೆ. ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಪ್ರಚಾರದಲ್ಲಿ ಯೋಗ ಮತ್ತು ಆಯುರ್ವೇದದ ಅಪ್ಲಿಕೇಶನ್ ಅನುಕರಣೆ ಯೋಗ್ಯವಾಗಿದೆ ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಹೇಳಿದ್ದಾರೆ. ನಿಮ್ಹಾನ್ಸ್ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸ್) ನ ಇಂಟಿಗ್ರೇಟಿವ್ ಮೆಡಿಸಿನ್ ಸೇವೆಗಳು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಪ್ರಚಾರದಲ್ಲಿ ಯೋಗ ಮತ್ತು ಆಯುರ್ವೇದದ ಅನ್ವಯಗಳನ್ನು ಪರೀಕ್ಷಿಸಲು ಮತ್ತು ಮನೋವೈದ್ಯಕೀಯ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ

ನಿಮ್ಹಾನ್ಸ್ ಸಂಸ್ಥೆ ದೇಶಕ್ಕೆ ಮಾದರಿ: ರಾಷ್ಟ್ರಪತಿ ದ್ರೌಪದಿ ಮುರ್ಮು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಶ್ವದ ಅತಿ ಹಿರಿಯ ಒಲಿಂಪಿಯನ್‌ ನಿಧನ

(ನ್ಯೂಸ್ ಕಡಬ) newskadaba.com ಜ.03 ಬುಡಾಪೆಸ್ಟ್‌: ಐದು ಬಾರಿಯ ಒಲಿಂಪಿಕ್ ಚಾಂಪಿಯನ್, ವಿಶ್ವದ ಹಿರಿಯ ಒಲಿಂಪಿಕ್ ಚಾಂಪಿಯನ್‌ ಎನಿಸಿದ್ದ ಹಂಗೆರಿಯ ಜಿಮ್ನಾಸ್ಟ್‌ ಆ್ಯಗ್ನೆಸ್‌ ಕೆಲೆಟಿ ಅವರು ಗುರುವಾರ ರಾತ್ರಿ ನಿಧನ ಹೊಂದಿದರು. ಅವರಿಗೆ 103 ವರ್ಷ ವಯಸ್ಸಾಗಿತ್ತು. ಅವರ ನಿಧನವನ್ನು ಹಂಗೇರಿಯನ್ ಒಲಿಂಪಿಕ್ ಸಮಿತಿ ತಿಳಿಸಿದೆ. ‘ಆ್ಯಗ್ನೆಸ್‌ ಕೆಲೆಟಿ ಹಂಗೆರಿ ಕಂಡ ಮಹಾನ್ ಜಿಮ್ನಾಸ್ಟ್‌’ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ವೆಬ್‌ಸೈಟ್‌ನಲ್ಲಿ ತಿಳಿಸಿದೆ. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ತಮ್ಮ ಮೊದಲ ಚಿನ್ನದ ಪದಕ ಗೆದದ್ದು 31ನೇ ವಯಸ್ಸಿನಲ್ಲಿ. ಆಗ ಅವರ

ವಿಶ್ವದ ಅತಿ ಹಿರಿಯ ಒಲಿಂಪಿಯನ್‌ ನಿಧನ Read More »

ಬ್ರೇಕಿಂಗ್ ನ್ಯೂಸ್
Scroll to Top