ಬ್ರೇಕಿಂಗ್ ನ್ಯೂಸ್

‘ನೀರು, ಬೆಳಕು, ಗಾಳಿಯಂತೆ ದೇವರಿಗೂ ಸಹ ಧರ್ಮವಿಲ್ಲ’ ಡಿ.ಕೆ. ಶಿವಕುಮಾರ್

(ನ್ಯೂಸ್‌ ಕಡಬ) newskadaba.com, ಆ.28 ಬೆಂಗಳೂರು :  ಬೆಳಕಿಗೆ, ಗಾಳಿಗೆ,  ನೀರಿಗೆ ಹೇಗೆ ಯಾವುದೇ ಜಾತಿ ಧರ್ಮ ಇಲ್ಲವೋ, ಅದೇ ರೀತಿ ದೇವರಿಗೂ ಸಹ ಧರ್ಮವಿಲ್ಲ. ಪ್ರಾರ್ಥನೆಯು ಯಾರೊಬ್ಬರ ಸ್ವತ್ತಲ್ಲ. ನಾನು ನಂಬಿರುವ ಗುರುಗಳು ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದಿದ್ದಾರೆ ಎಂದು ಡಿಸಿಎಂ ಡಿಕೆಶಿ ತಿಳಿಸಿದ್ದಾರೆ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು, “ಚಾಮುಂಡೇಶ್ವರಿ ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡುವಂತಹ ದೇವರು. ರಾಜವಂಶಸ್ಥರು ಹಾಗೂ ನಂತರ ಬಂದ ಸರ್ಕಾರಗಳು ಚಾಮುಂಡಿ ತಾಯಿಯನ್ನು ನಾಡದೇವಿ ಎಂದು […]

‘ನೀರು, ಬೆಳಕು, ಗಾಳಿಯಂತೆ ದೇವರಿಗೂ ಸಹ ಧರ್ಮವಿಲ್ಲ’ ಡಿ.ಕೆ. ಶಿವಕುಮಾರ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಮಲ್ಪೆ ಬೀಚ್‌ನಲ್ಲಿ ಕಡಲತೀರಕ್ಕೆ ತೇಲಿ ಬಂದ ಕಸ ರಾಶಿ – ಶೀಘ್ರ ತೆರವಿಗೆ ಜನರ ಒತ್ತಾಯ

(ನ್ಯೂಸ್‌ ಕಡಬ) newskadaba.com, ಆ.28 ಉಡುಪಿ :  ಮಳೆಗಾಲದಲ್ಲಿ ಸಮುದ್ರ ಅಲೆಗಳೊಂದಿಗೆ ಬಂದ ಕಸಕಡ್ಡಿಗಳು ಮಲ್ಪೆ ಕಡಲತೀರಕ್ಕೆ ಬಂದು ಬಿದ್ದಿದ್ದು, ತ್ಯಾಜ್ಯದ ದೊಡ್ಡ ರಾಶಿಗಳು ಇನ್ನೂ ತೆರವುಗೊಳಿಸದೆ ಉಳಿದಿದ್ದು, ಪ್ರವಾಸಿಗರು ಮತ್ತು ನಿವಾಸಿಗಳು ಕಸದ ರಾಶಿ ಕರಾವಳಿಯ ಸೌಂದರ್ಯವನ್ನು ಹಾಳು ಮಾಡುತ್ತಿದೆ ಎಂದು ಟೀಕಿಸುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು, ಡೈಪರ್‌ಗಳು, ಪಾದರಕ್ಷೆಗಳು, ತ್ಯಜಿಸಿದ ಆಟಿಕೆಗಳು ಮತ್ತು ಆಹಾರ ಹೊದಿಕೆಗಳು ಕಡಲತೀರದ ಸುಮಾರು ಎರಡು ಕಿಲೋಮೀಟರ್‌ಗಳಷ್ಟು ಹರಡಿಕೊಂಡಿವೆ. ಕಳೆದ ವರ್ಷ ಕಡಲತೀರದ ನಿರ್ವಹಣೆಯ ಜವಾಬ್ದಾರಿಯನ್ನು ಕಡಲತೀರ ಅಭಿವೃದ್ಧಿ ಸಮಿತಿಯಿಂದ

ಉಡುಪಿ: ಮಲ್ಪೆ ಬೀಚ್‌ನಲ್ಲಿ ಕಡಲತೀರಕ್ಕೆ ತೇಲಿ ಬಂದ ಕಸ ರಾಶಿ – ಶೀಘ್ರ ತೆರವಿಗೆ ಜನರ ಒತ್ತಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಏಳು ವರ್ಷ ಬಳಿಕ ಚೀನಾಗೆ ಮೋದಿ ಭೇಟಿ

(ನ್ಯೂಸ್‌ ಕಡಬ) newskadaba.com, ಆ.28 ನವದೆಹಲಿ : ಪ್ರಧಾನಿ ನರೇಂದ್ರ ಮೋದಿ  ಚೀನಾದ ಟಿಯಾಂಜಿನ್​ನಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮುಂದಿನ ವಾರ ನಡೆಯುವ ಈ ಸಮಿಟ್​ನಲ್ಲಿ 20ಕ್ಕೂ ಹೆಚ್ಚು ದೇಶಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ. ನರೇಂದ್ರ ಮೋದಿ ಅವರು ಇದರಲ್ಲಿ ಪಾಲ್ಗೊಳ್ಳಲಿರುವುದು ಗಮನಾರ್ಹ ಸಂಗತಿ.  ಏಳು ವರ್ಷದ ಬಳಿಕ ನರೇಂದ್ರ ಮೋದಿ ಅವರು ಚೀನಾಗೆ ಮೊದಲ ಬಾರಿ ಕಾಲಿಡುತ್ತಿದ್ದಾರೆ. ಹೀಗಾಗಿ, ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿವೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ಎರಡು ದಿನಗಳ ಕಾಲ ನಡೆಯುವ

ಏಳು ವರ್ಷ ಬಳಿಕ ಚೀನಾಗೆ ಮೋದಿ ಭೇಟಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬ : ಭಾರೀ ಮಳೆ – ಇಂದು ಶಾಲೆಗಳಿಗೆ ರಜೆ ಘೋಷಣೆ

(ನ್ಯೂಸ್‌ ಕಡಬ) newskadaba.com, ಆ.28 ಕಡಬ : ತಾಲೂಕಿನಲ್ಲಿ ನಿನ್ನೆ ಸಂಜೆ ಮೊದಲು ಆರಂಭವಾದ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕಡಬ ತಾಲೂಕಿನ ಎಲ್ಲ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ, ಜೊತೆಗೆ ಅಂಗನವಾಡಿ ಕೇಂದ್ರಗಳಿಗೆ ಮಳೆಯ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಇಂದು (ಆ. 28) ರಜೆ ಘೋಷಿಸಲಾಗಿದೆ. ಜಿಲ್ಲಾ ಆಡಳಿತ ಈ ನಿರ್ಧಾರವನ್ನು ಮಳೆಗಾಲದ ಹಿನ್ನಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತೆಗೆದುಕೊಂಡಿದೆ.

ಕಡಬ : ಭಾರೀ ಮಳೆ – ಇಂದು ಶಾಲೆಗಳಿಗೆ ರಜೆ ಘೋಷಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎರಡೇ ನಿಮಿಷದಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಹೈಟೆಕ್ ತಂತ್ರಜ್ಞಾನ ಅಳವಡಿಕೆ : ಡಿಕೆಶಿ

(ನ್ಯೂಸ್‌ ಕಡಬ) newskadaba.com, ಆ.26 : ರಸ್ತೆ ಗುಂಡಿಗಳನ್ನು ಒಂದೆರಡು ನಿಮಿಷಗಳಲ್ಲಿ ಮುಚ್ಚಬಹುದಾದ ಅತ್ಯಾಧುನಿಕ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಅಳವಡಿಸಿತ್ತಿರುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ನಿನ್ನೆ ರಾತ್ರಿ 12.30ರ ಸುಮಾರಿಗೆ ಬಾಗಲೂರು ಬಸ್‌‍ ನಿಲ್ದಾಣ ಹಾಗೂ ಇತರ ಮೂರು ಕಡೆ ರಸ್ತೆ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದ ಬಳಿಕ ಡಿ.ಕೆ .ಶಿವಕುಮಾರ್‌ ಸುದ್ದಿಗಾರರ ಜೊತೆ ಮಾತನಾಡಿದರು. ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ನಗರದ ಶಾಸಕರೆಲ್ಲರೂ ತಮ ಗಮನಕ್ಕೆ ತಂದಿದ್ದರು. ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ

ಎರಡೇ ನಿಮಿಷದಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಹೈಟೆಕ್ ತಂತ್ರಜ್ಞಾನ ಅಳವಡಿಕೆ : ಡಿಕೆಶಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಹೇಶ್‌ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ; ಚಿನ್ನಯ್ಯನ ಮೊಬೈಲ್‌ ವಶಕ್ಕೆ

(ನ್ಯೂಸ್‌ ಕಡಬ) newskadaba.com, ಆ.26 : ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಸೌಜನ್ಯಾಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ವಿಶೇಷ ತನಿಖಾ ತಂಡ ಮಂಗಳವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ. ಸಾಕ್ಷಿಯಾಗಿ ಬಂದು, ಈಗ ಆರೋಪಿಯಾಗಿರುವ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನ ಹೇಳಿಕೆಯಂತೆ ಪೊಲೀಸರು ಕೋರ್ಟ್‌ ಸರ್ಚ್‌ ವಾರಂಟ್‌ ಪಡೆದು ತಿಮರೋಡಿ ನಿವಾಸಕ್ಕೆ ತೆರಳಿದ್ದಾರೆ. ಪರಿಶೀಲನೆ ವೇಳೆ ಚಿನ್ನಯ್ಯನ ಮೊಬೈಲ್‌ ಸೇರಿ ಇನ್ನಿತರ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ನಾನು ತಿಮರೋಡಿಯ ನಿವಾಸಕ್ಕೆ ಹೋಗುತ್ತಿದ್ದೆ.

ಮಹೇಶ್‌ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ; ಚಿನ್ನಯ್ಯನ ಮೊಬೈಲ್‌ ವಶಕ್ಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

“ಅಂಗಡಿಗಳ ಹೊರಗೆ ‘ಸ್ವದೇಶಿ’ ಬೋರ್ಡ್‌ಗಳನ್ನು ಇರಿ”- ಮೋದಿ

(ನ್ಯೂಸ್‌ ಕಡಬ) newskadaba.com, ಆ.26 ನವದೆಹಲಿ: ಅಮೆರಿಕ ವಿಧಿಸಿರುವ ಸುಂಕದ ವಿರುದ್ಧ ಭಾರತ ಸಮರ ಸಾರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸ್ವದೇಶಿ ಅಥವಾ ದೇಶೀಯ ಸರಕುಗಳ ಬಳಕೆಗೆ ಒತ್ತು ನೀಡಿದ್ದಾರೆ. ಭಾರತೀಯ ಸರಕುಗಳ ಮೇಲೆ ಶೇಕಡಾ 50 ರಷ್ಟು ಯುಎಸ್ ಸುಂಕ ಪ್ರಾರಂಭವಾಗುವ ಎರಡು ದಿನಗಳ ಮೊದಲು ಪ್ರಧಾನಿಯವರ ಹೇಳಿಕೆ ಬಂದಿದೆ. ಭಾರತದಿಂದ ತನ್ನ ಪ್ರಮುಖ ರಫ್ತು ಮಾರುಕಟ್ಟೆಗೆ ಸರಕುಗಳ ಮೇಲೆ ಶೇಕಡಾ 50 ರಷ್ಟು ಅಮೆರಿಕನ್ ಸುಂಕವನ್ನು ವಿಧಿಸಲು ಟ್ರಂಪ್ ಆಡಳಿತವು ನಿಗದಿಪಡಿಸಿದ ಗಡುವು ಆಗಸ್ಟ್

“ಅಂಗಡಿಗಳ ಹೊರಗೆ ‘ಸ್ವದೇಶಿ’ ಬೋರ್ಡ್‌ಗಳನ್ನು ಇರಿ”- ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಮೇಘಸ್ಪೋಟ; ಪ್ರವಾಹಕ್ಕೆ ಸಿಲುಕಿ ನಾಲ್ವರು ಸಾವು, ಮನೆಗಳಿಗೆ ಹಾನಿ

(ನ್ಯೂಸ್‌ ಕಡಬ) newskadaba.com, ಆ.26 ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮಂಗಳವಾರ ಭಾರೀ ಮೇಘಸ್ಪೋಟ ಸಂಭವಿಸಿದೆ. ಮೇಘಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಕಥುವಾ ಮತ್ತು ಕಿಶ್ತ್ವಾರ್‌ನಲ್ಲಿ ಈ ಹಿಂದೆ ಸಂಭವಿಸಿದ್ದ ರೀತಿಯಲ್ಲಿಯೇ ದೋಡಾ ಜಿಲ್ಲೆಯಲ್ಲಿ ಮೇಘಸ್ಪೋಟ ಸಂಭವಿಸಿದೆ. ಹಠಾತ್, ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿ 10 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಥುವಾ, ಸಾಂಬಾ, ದೋಡಾ, ಜಮ್ಮು, ರಾಂಬನ್ ಮತ್ತು ಕಿಶ್ತ್ವಾರ್ ಜಿಲ್ಲೆಗಳು ಸೇರಿದಂತೆ ಜಮ್ಮು ಪ್ರದೇಶದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು

ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಮೇಘಸ್ಪೋಟ; ಪ್ರವಾಹಕ್ಕೆ ಸಿಲುಕಿ ನಾಲ್ವರು ಸಾವು, ಮನೆಗಳಿಗೆ ಹಾನಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಧಾನಪರಿಷತ್’ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥಗೆ ಸ್ಥಾನ

(ನ್ಯೂಸ್‌ ಕಡಬ) newskadaba.com, ಆ.26 ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಧಾನಪರಿಷತ್ ನಾಮನಿರ್ದೇಶಿತ ಸ್ಥಾನಗಳ ನೇಮಕಾತಿಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮತ್ತು ದಲಿತ ಸಂಘರ್ಷ ಸಮಿತಿ ನಾಯಕ ಡಿಜಿ ಸಾಗರ್ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಬದಲಾಗಿ ಹೊಸ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದೆ. ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ಅನಿವಾಸಿ ಭಾರತೀಯ ಕೋಶದ (ಎನ್‌ಆರ್‌ಐ) ಉಪಾಧ್ಯಕ್ಷೆ ಆರತಿ ಕೃಷ್ಣ; ಹಿರಿಯ

ವಿಧಾನಪರಿಷತ್’ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥಗೆ ಸ್ಥಾನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಳ್ಳಾಲ : ಪೊಲೀಸ್ ಹೆಡ್ ಕಾನ್ಸ್ಟೇಬಲ್ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್‌ ಕಡಬ) newskadaba.com, ಆ.26 ಉಳ್ಳಾಲ : ಅಸೈಗೋಳಿ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್ಸ್ಟೇಬಲ್ ಪೊಲೀಸ್ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಆಗಸ್ಟ್ 25ರಂದು ರಾತ್ರಿ ಸಂಭವಿಸಿದೆ. ಬಾಗಲಕೋಟೆಯ ಸಂಜೀವ ರಾಥೋಡ್ (38) ಮೃತರು. ಅವರ ಪತ್ನಿ ಮತ್ತು 3 ಮಕ್ಕಳು ರವಿವಾರ ಉತ್ತರ ಕರ್ನಾಟಕಕ್ಕೆ ತೆರಳಿದ್ದರು. ಕುಟುಂಬ ಸದಸ್ಯರೊಂದಿಗೆ ಊರಿಗೆ ಹೋಗಲು ರಜೆ ಸಿಗದೆ ನೊಂದು ಆತ್ಮಹತ್ಯೆಗೈದಿರುವ ಸಾಧ್ಯತೆ ಇದೆ ಎಂದು ಅವರ ನಿಕಟವರ್ತಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಣಾಜೆ ಪೊಲೀಸರು ತನಿಖೆ

ಉಳ್ಳಾಲ : ಪೊಲೀಸ್ ಹೆಡ್ ಕಾನ್ಸ್ಟೇಬಲ್ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top