ಬ್ರೇಕಿಂಗ್ ನ್ಯೂಸ್

ಕರ್ನಾಟಕ ಮಹಿಳಾ ಲೀಗ್ 2025-26 ರ ಶೀರ್ಷಿಕೆ ಪ್ರಾಯೋಜಕರಾಗಿ ಬಿ.ಎಲ್.ಕೆ

(ನ್ಯೂಸ್‌ ಕಡಬ) newskadaba.com, ಆ.28: ಬೆಂಗಳೂರು: ಕೌಶಲ್ಯ ಮತ್ತು ಚಾಂಪಿಯನ್‌ಗಳ ಚೈತನ್ಯದ ಪ್ರದರ್ಶನದೊಂದಿಗೆ ಕರ್ನಾಟಕ ಮಹಿಳಾ ಲೀಗ್ (KWL) 2025–26 ಮುಕ್ತಾಯವಾಯಿತು. ಬಿ ಎಲ್ ಕಶ್ಯಪ್ & ಸನ್ಸ್ ಲಿಮಿಟೆಡ್ (BLK) ಶೀರ್ಷಿಕೆ ಪ್ರಾಯೋಜಕ ರಾಗಿದ್ದರು. ಪ್ರಸಕ್ತ ವರ್ಷವು ಕರ್ನಾಟಕದಲ್ಲಿ ಮಹಿಳಾ ಫುಟ್‌ಬಾಲ್‌ನ ಆರಂಭಕ್ಕೆ ನಾಂದಿ ಹಾಡಿದ್ದಲ್ಲದೇ ಹೊಸ ಪೀಳಿಗೆಯ ಕ್ರೀಡಾಪಟುಗಳು ತಮ್ಮ ಕ್ರೀಡಾ ಕನಸು ಗಳನ್ನು ಮುಂದುವರಿಸಲು ಸ್ಫೂರ್ತಿ ನೀಡಿತು. ಈ ಹಿಂದೆ IWL ವಿಜೇತರಾಗಿದ್ದ ಕಿಕ್‌ಸ್ಟಾರ್ಟ್ FC 7 ನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು, […]

ಕರ್ನಾಟಕ ಮಹಿಳಾ ಲೀಗ್ 2025-26 ರ ಶೀರ್ಷಿಕೆ ಪ್ರಾಯೋಜಕರಾಗಿ ಬಿ.ಎಲ್.ಕೆ Read More »

ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು : ‘ತೆನೆ ಹಬ್ಬ ಸಾಮರಸ್ಯದ ಪ್ರತೀಕ’ – ತಾರಾನಾಥ್ ಗಟ್ಟಿ ಕಾಪಿಕಾಡ್

(ನ್ಯೂಸ್‌ ಕಡಬ) newskadaba.com, ಆಗಸ್ಟ್ 28  ಮಂಗಳೂರು : ತುಳುನಾಡಿನ ಕೃಷಿ ಪರಂಪರೆ ಪ್ರಕೃತಿ ಆರಾಧನೆ, ಸೌಹಾರ್ದ ಹಾಗೂ ಸಮೃದ್ಧ ಬದುಕಿನ ಆಶಯವನ್ನು ಪೋಷಿಸಿಕೊಂಡಿದೆ. ಮನೆ ತುಂಬಿಸುವ ಹಿನ್ನೆಲೆಯಲ್ಲಿ ಭತ್ತದ ತೆನೆಯನ್ನು ಕಟ್ಟುವ ಸಂಪ್ರದಾಯ ಪರಸ್ಪರ ವಿಶ್ವಾಸ ಮತ್ತು ಪ್ರೀತಿ ಬೆಳೆಸುವ ಆಚರಣೆಯಾಗಿ ಮುಂದುವರಿದಿದೆ ಎಂಬುದನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದರು. ಕುಲಶೇಖರದ ಕನ್ನಗುಡ್ಡೆಯ ಕೊರಗತನಿಯ ಕ್ಷೇತ್ರದಲ್ಲಿ ನಡೆದ  ಕಬ್ಬು ಹಾಗೂ ತೆನೆ ಹಂಚುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ

ಮಂಗಳೂರು : ‘ತೆನೆ ಹಬ್ಬ ಸಾಮರಸ್ಯದ ಪ್ರತೀಕ’ – ತಾರಾನಾಥ್ ಗಟ್ಟಿ ಕಾಪಿಕಾಡ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸ್ವಿಟ್ಜರ್ಲೆಂಡ್‌‌ ಪ್ರಜೆಯಿಂದ ಗಣೇಶೋತ್ಸವ – ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಆಚರಣೆ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 28 ಕೊಪ್ಪಳ: ಭಾರತದ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಧರ್ಮಗಳೇ ಭಿನ್ನವಾದರೂ, ಹಬ್ಬಗಳ ಆಚರಣೆ ಮಾತ್ರ ಒಂದು ಸಾಮರಸ್ಯದ ಸೇತುವೆಯಾಗಿದೆ. ಈ ಸತ್ಯಕ್ಕೆ ಜೀವಂತ ಸಾಕ್ಷಿಯಾಗಿರುವುದು ಸ್ವಿಟ್ಜರ್ಲೆಂಡ್‌ನ ಕ್ರೈಸ್ತ ಪ್ರಜೆ ಮಾರ್ಟಿನ್ ಅವರ ಗಣೇಶ ಹಬ್ಬದ ಆಚರಣೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ, ಮಾರ್ಟಿನ್ ಅವರು ಭಕ್ತಿ ಮತ್ತು ಶ್ರದ್ಧೆಯೊಂದಿಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ವಿಶೇಷತೆಯೆಂದರೆ, ಅವರು ಬಾಡಿಗೆಗೆ ವಾಸಿಸುತ್ತಿರುವ ಮನೆ ಒಬ್ಬ ಮುಸ್ಲಿಂ ವ್ಯಕ್ತಿಯಾದ ಮೆಹಬೂಬ್

ಸ್ವಿಟ್ಜರ್ಲೆಂಡ್‌‌ ಪ್ರಜೆಯಿಂದ ಗಣೇಶೋತ್ಸವ – ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಆಚರಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೆ. 22ಕ್ಕೆ ಕುದ್ರೋಳಿ ದೇವಸ್ಥಾನದಲ್ಲಿ ಮಂಗಳೂರು ದಸರಾ ಆರಂಭ

(ನ್ಯೂಸ್‌ ಕಡಬ) newskadaba.com ಆ. 28. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಅದ್ಧೂರಿ ಮಂಗಳೂರು ದಸರಾ ಆಚರಣೆ ನಡೆಯಲಿದೆ ಎಂದು ದೇವಸ್ಥಾನದ ಖಜಾಂಚಿ ಪದ್ಮರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ವರ್ಷದ ದಸರಾದಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ನವದುರ್ಗಾ ಮತ್ತು ಶಾರದಾ ದೇವಿಯ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಗುವುದು, ದೇವಾಲಯದ ಆವರಣದೊಳಗೆ ಶಾರದಾ ದೇವಿಯ ವಿಗ್ರಹವನ್ನು ಸಾಧಾರಣ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುವುದು ಎಂದೂ ತಿಳಿಸಿದರು. ಈ ವರ್ಷ

ಸೆ. 22ಕ್ಕೆ ಕುದ್ರೋಳಿ ದೇವಸ್ಥಾನದಲ್ಲಿ ಮಂಗಳೂರು ದಸರಾ ಆರಂಭ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಹಾರಾಷ್ಟ್ರದಲ್ಲಿ ಅನಧಿಕೃತ ಕಟ್ಟಡ ಕುಸಿತ; 15 ಮಂದಿ ಸಾವು, ಹಲವರಿಗೆ ಗಾಯ

(ನ್ಯೂಸ್‌ ಕಡಬ) newskadaba.com, ಆ.28: ಮುಂಬೈ: ಮಹಾರಾಷ್ಟ್ರದ ವಿರಾರ್‌ನಲ್ಲಿ ಬುಧವಾರ ಮುಂಜಾನೆ  ಅನಧಿಕೃತವಾಗಿ ನಿರ್ಮಿಸಿದ್ದ ನಾಲ್ಕು ಅಂತಸ್ತಿನ ಕಟ್ಟಡದ ಹಿಂಭಾಗದ ಭಾಗ ಪಕ್ಕದ ಖಾಲಿ ಚಾಲ್ ಮೇಲೆ ಕುಸಿದು ಬಿದ್ದದೆ. ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದು, ಹಲವರು ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬ ಮಹಿಳೆ ಮತ್ತು ಆಕೆಯ ಒಂದು ವರ್ಷದ ಮಗಳು ಸೇರಿದ್ದಾರೆ ಮತ್ತು ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ 20 ಗಂಟೆಗಳಿಗೂ ಹೆಚ್ಚು ಕಾಲ ಮುಂದುವರೆದಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ

ಮಹಾರಾಷ್ಟ್ರದಲ್ಲಿ ಅನಧಿಕೃತ ಕಟ್ಟಡ ಕುಸಿತ; 15 ಮಂದಿ ಸಾವು, ಹಲವರಿಗೆ ಗಾಯ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ ಜಾರಿ

(ನ್ಯೂಸ್‌ ಕಡಬ) newskadaba.com, ಆ.28: ಚಿಕ್ಕಮಗಳೂರು: ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಿಕ್ಕಮಗಳೂರಿನ ಕೊಟ್ಟಿಗೆಹಾರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಾಡಿ ಘಾಟ್​  ರಸ್ತೆಯಲ್ಲಿ ಅಪರಾಧ ಕೃತ್ಯಗಳನ್ನು ತಡೆಯಲು ಚಿಕ್ಕಮಗಳೂರು ಪೊಲೀಸ್ ಇಲಾಖೆ ಹೊಸ ಪ್ಲಾನ್ ರೂಪಿಸಿದೆ. ಕೊಟ್ಟಿಗೆಹಾರ ಚೆಕ್ ​​ಪೋಸ್ಟ್​ನಲ್ಲಿ ಪ್ರತಿ ವಾಹನಗಳ ತಪಾಸಣೆ ಮಾಡುವುದರ ಜೊತೆಗೆ ಚಾರ್ಮಾಡಿ ಘಾಟ್​​ನಲ್ಲಿ ರಾತ್ರಿ ವೇಳೆ ಐದು ವಾಹನಗಳನ್ನು ಒಟ್ಟಿಗೆ ಕಳುಹಿಸಲಾಗುತ್ತಿದೆ. ಈ ಹೊಸ ನಿಯಮ ಚಾರ್ಮಾಡಿ ಘಾಟ್​ನಲ್ಲಿ ರಾತ್ರಿ ಸಂಚಾರ ಮಾಡುವ ವಾಹನಗಳಿಗೆ ಅನ್ವಯವಾಗಲಿದೆ.

ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ ಜಾರಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಮ್ಮು ಕಾಶ್ಮೀರ: ಭೀಕರ ಮಳೆಯ ಪರಿಣಾಮ ಸಾವಿನ ಸಂಖ್ಯೆ 41 ಕ್ಕೆ ಏರಿಕೆ-ಕೇಂದ್ರದಿಂದ ನೆರವಿನ ಭರವಸೆ

(ನ್ಯೂಸ್‌ ಕಡಬ) newskadaba.com, ಆ.28: ಶ್ರೀನಗರ: ಭೀಕರ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ತತ್ತರಿಸಿ ಹೋಗಿದ್ದು, ಭೂ ಕುಸಿತ, ಪ್ರವಾಹ ಹಾಗೂ ಮಳೆಯಿಂದಾಗಿ ಸಂಭವಿಸಿದ ಅನಾಹುತದಿಂದ ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಮಳೆಯಿಂದಾಗಿ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 36ಕ್ಕೆ ಏರಿದೆ. ಇದರ ಜೊತೆಗೆ ಮಳೆ ಸಂಬಂಧಿತ ಅವಘಡದಲ್ಲಿ ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ರೆಸಾಯಿಯ ಅರ್ಧ್ ಕುವರಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಅತಿಹೆಚ್ಚಿನ ಸಾವು ನೋವು ಇಲ್ಲಿ ಸಂಭವಿಸಿದೆ.

ಜಮ್ಮು ಕಾಶ್ಮೀರ: ಭೀಕರ ಮಳೆಯ ಪರಿಣಾಮ ಸಾವಿನ ಸಂಖ್ಯೆ 41 ಕ್ಕೆ ಏರಿಕೆ-ಕೇಂದ್ರದಿಂದ ನೆರವಿನ ಭರವಸೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವರದಕ್ಷಿಣೆ ಕಿರುಕುಳ: ಪತ್ನಿಗೆ ಬೆಂಕಿ ಹಚ್ಚಿದ ಪೊಲೀಸ್ ಕಾನ್‌ಸ್ಟೇಬಲ್

(ನ್ಯೂಸ್‌ ಕಡಬ) newskadaba.com, ಆ.28 ಲಕ್ನೋ : ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರು ತಮ್ಮ ಪತ್ನಿಗೆ ಬೆಂಕಿ ಹಚ್ಚಿರುವ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ನರ್ಸ್ ಆಗಿರುವ ಪಾರುಲ್ (32) ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅಮ್ರೋಹಾ ಜಿಲ್ಲೆಯ ಪೊಲೀಸ್ ಕಾನ್‌ಸ್ಟೇಬಲ್ ತಮ್ಮ ಪತ್ನಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿರುವ

ವರದಕ್ಷಿಣೆ ಕಿರುಕುಳ: ಪತ್ನಿಗೆ ಬೆಂಕಿ ಹಚ್ಚಿದ ಪೊಲೀಸ್ ಕಾನ್‌ಸ್ಟೇಬಲ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಂಟ್ವಾಳ : ಕೊಲೆಗೆ ಯತ್ನಿಸಿದ್ದಾರೆಂದು ಸುಳ್ಳು ದೂರು – ಆರೋಪಿ ಸೆರೆ

(ನ್ಯೂಸ್‌ ಕಡಬ) newskadaba.com, ಆ.28  ಬಂಟ್ವಾಳ : ಸಜಿಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಜೂನ್ 11 ರಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಸಜಿಪಮುನ್ನೂರು ನಿವಾಸಿ ಉಮರ್ ಫಾರೂಕ್ ಎಂಬಾತ ನೀಡಿದ ದೂರು ಸುಳ್ಳು ಪ್ರಕರಣವೆಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಜಿಪಮುನ್ನೂರು ಗ್ರಾಮದ ನಿವಾಸಿ ಉಮರ್ ಪಾರೂಕ್ (48) ಜೂನ್ 11 ರಂದು ಮುಂಜಾನೆ ಜೀಪಿನಲ್ಲಿ ನಂದಾವರದಿಂದ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದಾಗ ಸಜಿಪನಡು ಗ್ರಾಮದ ದೇರಾಜೆ ಬಸ್

ಬಂಟ್ವಾಳ : ಕೊಲೆಗೆ ಯತ್ನಿಸಿದ್ದಾರೆಂದು ಸುಳ್ಳು ದೂರು – ಆರೋಪಿ ಸೆರೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಾಲ ಬಾಧೆಯಿಂದ ಮಗುವಿಗೆ ವಿಷಪ್ರಾಶನ ಮಾಡಿ ದಂಪತಿ ಆತ್ಮಹತ್ಯೆ

(ನ್ಯೂಸ್‌ ಕಡಬ) newskadaba.com, ಆ.28 ಲಕ್ನೋ : ಸಾಲ ಬಾಧೆಯಿಂದ ಬಳಲುತ್ತಿದ್ದ ದಂಪತಿಯು ತಮ್ಮ 4 ತಿಂಗಳ ಮಗುವಿಗೆ ವಿಷಪ್ರಾಶನ ಮಾಡಿ ಕೊನೆಗೆ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ವರದಿಯಾಗಿದೆ. ಆ.27ರಂದು ಬೆಳಗ್ಗೆ ಮೂವರ ಶವಗಳು ಪ್ರತ್ಯೇಕ ಕೋಣೆಗಳಲ್ಲಿ ಕಂಡುಬಂದಿವೆ. ಕೈಮಗ್ಗ ಉದ್ಯಮಿ ಸಚಿನ್ ಗ್ರೋವರ್ (30) ಮತ್ತು ಅವರ ಪತ್ನಿ ಶಿವಾನಿ (28) ಸಾಲದ ಸುಳಿಯಲ್ಲಿ ಸಿಲುಕಿದ್ದರು. ಈ ದಂಪತಿಗೆ ನಾಲ್ಕು ತಿಂಗಳ ಗಂಡು ಮಗು ಕೂಡ ಇತ್ತು. ಘಟನಾ ಸ್ಥಳದಲ್ಲಿ

ಸಾಲ ಬಾಧೆಯಿಂದ ಮಗುವಿಗೆ ವಿಷಪ್ರಾಶನ ಮಾಡಿ ದಂಪತಿ ಆತ್ಮಹತ್ಯೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top