ಬ್ರೇಕಿಂಗ್ ನ್ಯೂಸ್

ಸರ್ಕಾರದಿಂದಲೇ ಆ್ಯಂಬುಲೆನ್ಸ್‌ ಸೇವೆ : 3,691 ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ

(ನ್ಯೂಸ್‌ ಕಡಬ) newskadaba.com,  ಅ.11:  ರಾಜ್ಯದಲ್ಲಿ ಮೊದಲ ಬಾರಿಗೆ ‘108-ಆರೋಗ್ಯ ಕವಚ’ ಹಾಗೂ ‘104-ಆರೋಗ್ಯ ಸಹಾಯವಾಣಿ’ ಯೋಜನೆಯನ್ನು ಆರೋಗ್ಯ ಇಲಾಖೆ ವತಿಯಿಂದಲೇ ಜಾರಿಗೊಳಿಸುತ್ತಿದ್ದು, ಇದಕ್ಕೆ ಅಗತ್ಯವಿರುವ 3,691 ಸಿಬ್ಬಂದಿಯನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಅಡಿ ಪಡೆಯಲು ಮಂಜೂರಾತಿ ನೀಡಲಾಗಿದೆ. ಬೆಳಗ್ಗೆ ಹಾಗೂ ಮಧ್ಯಾಹ್ನದ ಅವಧಿ ಶಿಫ್ಟ್‌, ರಾತ್ರಿ ಪಾಳಿ ಶಿಫ್ಟ್‌ ಸೇರಿ 1,700 ಪೈಲಟ್‌ (ಚಾಲಕರು) 1,700 ಇಎಂಟಿ (ತುರ್ತು ಚಿಕಿತ್ಸಾ ತಂತ್ರಜ್ಞ), ಜಿಲ್ಲಾ ವ್ಯವಸ್ಥಾಪಕರು ಹಾಗೂ ಫ್ಲೀಟ್‌ ವ್ಯವಸ್ಥಾಪಕರು 62, ಎಸ್‌ಪಿಎಂ ಸಿಬ್ಬಂದಿ 5 ಮಂದಿ […]

ಸರ್ಕಾರದಿಂದಲೇ ಆ್ಯಂಬುಲೆನ್ಸ್‌ ಸೇವೆ : 3,691 ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರ್ಕಳದ ಯುವಕನ ಆತ್ಮಹತ್ಯೆ ಪ್ರಕರಣ; ತನಿಖೆಗಾಗಿ ನಾಲ್ವರು ಗೆಳೆಯರ ಮೊಬೈಲ್ ವಶಕ್ಕೆ

(ನ್ಯೂಸ್‌ ಕಡಬ) newskadaba.com,  ಅ.11 ಕಾರ್ಕಳ: ಸ್ನೇಹಿತರಿಂದ ಬ್ಲಾಕ್‌ಮೇಲ್‌ಗೆ ಒಳಗಾದ ಬಗ್ಗೆ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿರುವ ನಿಟ್ಟೆಯ ಯುವಕನ ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರಿದಿದ್ದು, ನಾಲ್ವರು ಗೆಳೆಯರ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅವುಗಳನ್ನು ವಿವಿಧ ತಾಂತ್ರಿಕ ಆಯಾಮದಲ್ಲಿ ಪರಿಶೀಲಿಸಲಾಗುತ್ತಿದೆ. ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ (23) ಮೃತ ಯುವಕ. ಅವರು ಗುರುವಾರ ಬೆಳ್ಮಣ್‌ನಲ್ಲಿರುವ ಖಾಸಗಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ

ಕಾರ್ಕಳದ ಯುವಕನ ಆತ್ಮಹತ್ಯೆ ಪ್ರಕರಣ; ತನಿಖೆಗಾಗಿ ನಾಲ್ವರು ಗೆಳೆಯರ ಮೊಬೈಲ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಮೆರಿಕ : ಯುದ್ಧ ಸಾಮಾಗ್ರಿ ಸ್ಥಾವರದಲ್ಲಿ ಸ್ಫೋಟ; 19 ಮಂದಿ ಮೃತಪಟ್ಟಿರುವ ಶಂಕೆ

(ನ್ಯೂಸ್‌ ಕಡಬ) newskadaba.com,  ಅ.11 ವಾಷಿಂಗ್ಟನ್ : ಅಮೆರಿಕದ ಟೆನ್ನೀಸೀಯಲ್ಲಿರುವ ಯುದ್ಧ ಸಾಮಾಗ್ರಿ ಸ್ಥಾವರದಲ್ಲಿ ಶುಕ್ರವಾರ(ಅ.10) ಭೀಕರ ಸ್ಫೋಟ ಸಂಭವಿಸಿದ್ದು, ಈ ಅವಘಡದಲ್ಲಿ 19 ಮಂದಿ ಮೃತಪಟ್ಟಿರುವ ಸಂಶಯ ವ್ಯಕ್ತವಾಗಿದೆ. 8 ಕಟ್ಟಡಗಳು ಹೊಂದಿರುವ ಅಕ್ಯುರೇಟ್ ಎನರ್ಜಿಟಿಕ್ ಸಿಸ್ಟಮ್ಸ್ ಕಂಪನಿಯ 1,300 ಎಕ್ರೆ ವಿಸ್ತಾರ ಕ್ಯಾಂಪಸ್‌ನಲ್ಲಿ ಸ್ಫೋಟವಾಗಿದೆ. ಸ್ಫೋಟದ ತೀವ್ರತೆಗೆ ಇಡೀ ಕಟ್ಟಡವೇ ಸುಟ್ಟು ಭಸ್ಮವಾಗಿದೆ. ಸ್ಫೋಟದ ಹಿನ್ನೆಲೆ ಕಿ.ಮೀ.ಗಟ್ಟಲೇ ದೂರಕ್ಕೆ ಕಂಪನದ ಅನುಭವವಾಗಿದೆ. ಇದು ಯುಎಸ್ ಮಿಲಿಟರಿ ಸ್ಫೋಟಕಗಳು ಹಾಗೂ ಮದ್ದು ಗುಂಡುಗಳನ್ನು ತಯಾರಿಸಿ, ಪರೀಕ್ಷೆ

ಅಮೆರಿಕ : ಯುದ್ಧ ಸಾಮಾಗ್ರಿ ಸ್ಥಾವರದಲ್ಲಿ ಸ್ಫೋಟ; 19 ಮಂದಿ ಮೃತಪಟ್ಟಿರುವ ಶಂಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ಅಂಬಾನಿ ಸಹಾಯಕ ಅಶೋಕ್ ಕುಮಾರ್ ಪಾಲ್ ಬಂಧನ

(ನ್ಯೂಸ್‌ ಕಡಬ) newskadaba.com,  ಅ.11 ನವದೆಹಲಿ : ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ರವರನ್ನು ಬಂಧನ ಮಾಡಲಾಗಿದೆ.ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಸಹಾಯಕ ಮತ್ತು ರಿಲಯನ್ಸ್ ಪವರ್ ಲಿಮಿಟೆಡ್‌ನ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಪಾಲ್ ಅವರನ್ನು 17,000 ಕೋಟಿ ರೂ. ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಕೆಲವು ಕಂಪನಿಗಳಿಂದ ಕೋಟ್ಯಂತರ ರೂಪಾಯಿಗಳ ಆರ್ಥಿಕ ಅಕ್ರಮಗಳ ಹಲವಾರು ಆರೋಪಗಳ ಹೊರತಾಗಿ, ಬ್ಯಾಂಕ್ ಸಾಲ ವಂಚನೆ-ಸಂಬಂಧಿತ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ಅಂಬಾನಿ ಸಹಾಯಕ ಅಶೋಕ್ ಕುಮಾರ್ ಪಾಲ್ ಬಂಧನ Read More »

ಬ್ರೇಕಿಂಗ್ ನ್ಯೂಸ್

ಅನಿಲ್ ಅಂಬಾನಿ ಆಪ್ತ ಸಹಾಯಕ ಅಶೋಕ್ ಕುಮಾರ್ ಅರೆಸ್ಟ್

(ನ್ಯೂಸ್‌ ಕಡಬ) newskadaba.com,  ಅ.11:  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ಸಹಾಯಕ ಅಶೋಕ್ ಕುಮಾರ್ ಪಾಲ್ ಅವರನ್ನು ಬಂಧಿಸಲಾಗಿದೆ. ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಸಹಾಯಕ ಮತ್ತು ರಿಲಯನ್ಸ್ ಪವರ್ ಲಿಮಿಟೆಡ್‌ನ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಪಾಲ್ ಅವರನ್ನು 17,000 ಕೋಟಿ ರೂ. ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಮಾಡಲಾಗಿದೆ. ಪಾಲ್ ಅವರು 25 ವರ್ಷಗಳಿಗೂ ಹೆಚ್ಚು ಚಾರ್ಟರ್ಡ್ ಅಕೌಂಟೆಂಟ್ ಆಗಿ ಅನುಭವ ಹೊಂದಿದ್ದಾರೆ.

ಅನಿಲ್ ಅಂಬಾನಿ ಆಪ್ತ ಸಹಾಯಕ ಅಶೋಕ್ ಕುಮಾರ್ ಅರೆಸ್ಟ್ Read More »

ಬ್ರೇಕಿಂಗ್ ನ್ಯೂಸ್

ಶಬರಿಮಲೆ ಚಿನ್ನಕ್ಕೆ ಕನ್ನ: ಕ್ರಿಮಿನಲ್ ಕೇಸಿಗೆ ಹೈಕೋರ್ಟ್‌ ಆದೇಶ

(ನ್ಯೂಸ್‌ ಕಡಬ) newskadaba.com,  ಅ.11 ಕೊಚ್ಚಿ : ಚಿನ್ನಲೇಪನದ ವೇಳೆ ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿ ಹಾಗೂ ಚೌಕಟ್ಟಿನ ಚಿನ್ನ ಕಳವಿಗೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಕೇರಳ ಹೈಕೋರ್ಟ್ ಶುಕ್ರವಾರ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದೆ. ‘ದೇಗುಲ ಚೌಕಟ್ಟಿನ ಚಿನ್ನ ದುರುಪಯೋಗ ಆಗಿದೆ ಎಂಬುದು ಇಲ್ಲಿಯವರೆಗೆ ನಡೆಸಿದ ತನಿಖೆಯಿಂದ ತಿಳಿದುಬರುತ್ತದೆ. ಹೀಗಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಪೀಠ ಸೂಚಿಸಿದೆ. ‘ಚಿನ್ನಲೇಪನ ನಡೆಸಿದ ಬೆಂಗಳೂರು ಮೂಲದ ಉನ್ನಿಕೃಷ್ಣನ್ ಪೊಟ್ಟಿಗೆ

ಶಬರಿಮಲೆ ಚಿನ್ನಕ್ಕೆ ಕನ್ನ: ಕ್ರಿಮಿನಲ್ ಕೇಸಿಗೆ ಹೈಕೋರ್ಟ್‌ ಆದೇಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಾತಿಗಣತಿ: ನಿನ್ನೆಗೆ ಶೇ.85.89 ಸಮೀಕ್ಷೆ ಪೂರ್ಣ

(ನ್ಯೂಸ್‌ ಕಡಬ) newskadaba.com,  ಅ.11:  ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ (ಬೆಂಗಳೂರು) ಹೊರತುಪಡಿಸಿ ರಾಜ್ಯಾದ್ಯಂತ ಶುಕ್ರವಾರ 2.09 ಲಕ್ಷ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ ನಡೆಸಿದ್ದು, ಶೇ.85.89ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ 1.47 ಕೋಟಿ ಕುಟುಂಬಗಳ ಸಮೀಕ್ಷೆ ಗುರಿ ನಿಗದಿಪಡಿಸಲಾಗಿತ್ತು. ಅ.7ಕ್ಕೆ ಅಂತಿಮ ಗಡುವು ವಿಧಿಸಿದ್ದರೂ ಶೇ.80ರಷ್ಟು ಕುಟುಂಬಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದ್ದರಿಂದ ಗಡುವನ್ನು ಅ.18ರವರೆಗೆ ವಿಸ್ತರಿಸಲಾಗಿದೆ. ಗುರುವಾರದವರೆಗೆ 1,25,14,685 ಕುಟುಂಬಗಳ ಸಮೀಕ್ಷೆ ಮುಗಿದಿದ್ದು, ಶುಕ್ರವಾರ 2,09,824 ಮನೆಗಳ ಸಮೀಕ್ಷೆ ನಡೆಸಲಾಗಿದೆ.

ಜಾತಿಗಣತಿ: ನಿನ್ನೆಗೆ ಶೇ.85.89 ಸಮೀಕ್ಷೆ ಪೂರ್ಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಟ್ರಂಪ್ ಕೈತಪ್ಪಿದ ನೊಬೆಲ್ ಶಾಂತಿ ಪ್ರಶಸ್ತಿ

(ನ್ಯೂಸ್‌ ಕಡಬ) newskadaba.com,  ಅ.11:  ನಾರ್ವೆಯ ನೊಬೆಲ್ ಸಮಿತಿಯು 2025ರ ನೊಬೆಲ್ ಶಾಂತಿ ಪ್ರಶಸ್ತಿಗೆ ವೆನೆಜುವೆಲಾದ ಧೈರ್ಯವಂತ ನಾಯಕಿ ಮರಿಯಾ ಕೊರಿನಾ ಮಚಾಡೊ ಅವರನ್ನು ಆಯ್ಕೆ ಮಾಡಿದೆ. ವೆನೆಜುವೆಲಾದ ಜನರ ಹಕ್ಕುಗಳಿಗಾಗಿ ಮತ್ತು ಸರ್ವಾಧಿಕಾರಶಾಹಿಯ ವಿರುದ್ಧ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ನಡೆಸಿದ ಅವರ ನಿರ್ಭೀತ ಹೋರಾಟ ಈ ಪ್ರಶಸ್ತಿಗೆ ಕಾರಣವಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ. ಈ ವರ್ಷದ ಪ್ರಶಸ್ತಿಗೆ ಸಂಬಂಧಿಸಿದಂತೆ ಎಲ್ಲೆಡೆ ಚರ್ಚೆಯಾಗುತ್ತಿದ್ದ ಹೆಸರುಗಳಲ್ಲಿ ಒಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇದ್ದರು. ತಮ್ಮ 20 ಅಂಶಗಳ

ಟ್ರಂಪ್ ಕೈತಪ್ಪಿದ ನೊಬೆಲ್ ಶಾಂತಿ ಪ್ರಶಸ್ತಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅ.17ಕ್ಕೆ ಭಾರತದ ಸ್ವದೇಶಿ ನಿರ್ಮಿತ ತೇಜಸ್ ಎಂಕೆ1ಎ ಫೈಟರ್ ಜೆಟ್ ಮೊದಲ ಹಾರಾಟ

(ನ್ಯೂಸ್‌ ಕಡಬ) newskadaba.com,  ಅ.11:  ಭಾರತದ ಸ್ವದೇಶಿ ನಿರ್ಮಿತ ತೇಜಸ್ ಎಂಕೆ1ಎ ಫೈಟರ್ ಜೆಟ್ ಅ.17 ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ತನ್ನ ಮೊದಲ ಹಾರಾಟ ನಡೆಸಲಿದೆ.‌ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ, ತೇಜಸ್ Mk1A ಗಾಗಿ ಮೂರನೇ ಉತ್ಪಾದನಾ ಮಾರ್ಗ ಮತ್ತು HTT-40 ವಿಮಾನಕ್ಕಾಗಿ ಎರಡನೇ ಉತ್ಪಾದನಾ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ಸಾಧನೆಯು ಭಾರತದ ರಕ್ಷಣಾ ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ. ‘ಮೇಕ್

ಅ.17ಕ್ಕೆ ಭಾರತದ ಸ್ವದೇಶಿ ನಿರ್ಮಿತ ತೇಜಸ್ ಎಂಕೆ1ಎ ಫೈಟರ್ ಜೆಟ್ ಮೊದಲ ಹಾರಾಟ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರಿನ ಹೋಲ್‌ಸೇಲ್ ಮಾರಾಟ ಮಳಿಗೆಯಲ್ಲಿ ಇಟ್ಟಿದ್ದ 3.5 ಲಕ್ಷ ರೂ. ನಗದು ಕಳ್ಳತನ

(ನ್ಯೂಸ್‌ ಕಡಬ) newskadaba.com,  ಅ.11 ಮಂಗಳೂರು : ಸುರತ್ಕಲ್ ಮಾರ್ಕೆಟ್ ಮುಂಭಾಗದ ಹೋಲ್‌ಸೇಲ್ ಮಾರಾಟ ಮಳಿಗೆಯೊಂದರಲ್ಲಿ ಇಟ್ಟಿದ್ದ ಬರೋಬ್ಬರಿ 3.5 ಲಕ್ಷ ರೂ. ನಗದು ಕಳ್ಳತನವಾಗಿರುವ ಘಟನೆ ಶುಕ್ರವಾರ(ಅ.10) ಬೆಳಕಿಗೆ ಬಂದಿದೆ.ಮಾಲೀಕರು ದಿನನಿತ್ಯದಂತೆ ಅಂಗಡಿ ತೆರೆಯಲು ಬಂದಾಗ ಅಂಗಡಿಯ ಬೀಗ ಮುರಿದು ಕಳ್ಳತನ ಮಾಡಿರುವುದು ತಿಳಿದುಬಂದಿದೆ. ರಾತ್ರಿಯ ಸಮಯದಲ್ಲಿ ಅಂಗಡಿಯ ಬೀಗವನ್ನು ಒಡೆಯಲಾಗಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಅಂಗಡಿ ಮಾಲೀಕರಾದ ಶಮೀರ್ ಅವರು ಸಾಮಾನ್ಯವಾಗಿ ವ್ಯಾಪಾರದ ನಂತರ ದಿನದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಮರುದಿನ

ಮಂಗಳೂರಿನ ಹೋಲ್‌ಸೇಲ್ ಮಾರಾಟ ಮಳಿಗೆಯಲ್ಲಿ ಇಟ್ಟಿದ್ದ 3.5 ಲಕ್ಷ ರೂ. ನಗದು ಕಳ್ಳತನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top