ಬ್ರೇಕಿಂಗ್ ನ್ಯೂಸ್

ಅಂಬ್ಯುಲೆನ್ಸಿಗೆ ದಾರಿ ಬಿಡದೆ ಅಡಚಣೆ: ಬಂಟ್ವಾಳದಲ್ಲಿ ಬೈಕ್ ಸವಾರನ ವಿರುದ್ಧ ಬಂಧನ

(ನ್ಯೂಸ್‌ ಕಡಬ) newskadaba.com,  ಅ. 31 ಬಂಟ್ವಾಳ: ಅಪಘಾತದ ಗಾಯಾಳುಗಳನ್ನು ಮಂಗಳೂರಿಗೆ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್ಗೆ ದಾರಿ ಬಿಡದೆ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಘಟನೆ ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಎನ್.ಜಿ. ಸರ್ಕಲ್ ಬಳಿ ನಡೆದಿದೆ. ಮಾಹಿತಿಯ ಪ್ರಕಾರ, ಅಕ್ಟೋಬರ್ 30, 2025 ರಂದು ಬಿಸಿಲೆ ಘಾಟ್ನಲ್ಲಿ ಸಂಭವಿಸಿದ ಅಪಘಾತದ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು, ತುರ್ತು ಚಿಕಿತ್ಸೆಯ ನಂತರ ಗಂಭೀರ ಸ್ಥಿತಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಲಾಗುತ್ತಿತ್ತು. KA-22-C-1382 ನಂಬರಿನ ಅಂಬ್ಯುಲೆನ್ಸ್ ಪುತ್ತೂರಿನಿಂದ ಮಂಗಳೂರಿನತ್ತ ಸಾಗುತ್ತಿದ್ದಾಗ ಮಧ್ಯಾಹ್ನ ಸುಮಾರು […]

ಅಂಬ್ಯುಲೆನ್ಸಿಗೆ ದಾರಿ ಬಿಡದೆ ಅಡಚಣೆ: ಬಂಟ್ವಾಳದಲ್ಲಿ ಬೈಕ್ ಸವಾರನ ವಿರುದ್ಧ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದ ಇಂಧನ ಅಗತ್ಯಗಳಿಗೆ ಶರಾವತಿ ಯೋಜನೆ ನಿರ್ಣಾಯಕ: ಸಚಿವ ಕೆ.ಜೆ. ಜಾರ್ಜ್

(ನ್ಯೂಸ್‌ ಕಡಬ) newskadaba.com,  ಅ. 31 ಬೆಂಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮ ಲಿಮಿಟೆಡ್ (ಕೆಪಿಸಿಎಲ್) ಪ್ರಸ್ತಾಪಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ರಾಜ್ಯದ ಭವಿಷ್ಯದ ಇಂಧನ ಅಗತ್ಯಗಳನ್ನು ಭದ್ರಪಡಿಸಿಕೊಳ್ಳಲು ನಿರ್ಣಾಯಕವಾಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಅವರು ಗುರುವಾರ ಹೇಳಿದ್ದಾರೆ.ಯಲಚಹಳ್ಳಿ ಕೆರೆ ಅಂಗಳದಲ್ಲಿ ಸೌರ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಜನರು ವದಂತಿಗಳನ್ನು ನಂಬಬಾರದು ಮತ್ತು ಯೋಜನೆಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ಈ ಯೋಜನೆಯು ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಯೋಜನೆಯು ಅಸ್ತಿತ್ವದಲ್ಲಿರುವ ಎರಡು

ರಾಜ್ಯದ ಇಂಧನ ಅಗತ್ಯಗಳಿಗೆ ಶರಾವತಿ ಯೋಜನೆ ನಿರ್ಣಾಯಕ: ಸಚಿವ ಕೆ.ಜೆ. ಜಾರ್ಜ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

5 ಮಕ್ಕಳ ನಂತರ ನಾಲ್ವರು ರಕ್ತದಾನಿಗಳಿಗೆ HIV ಪಾಸಿಟಿವ್‌!

(ನ್ಯೂಸ್‌ ಕಡಬ) newskadaba.com,  ಅ. 31 ರಾಂಚಿ: ಜಾರ್ಖಂಡ್‌ನ ಚೈಬಾಸಾ ಪಟ್ಟಣದಲ್ಲಿ ವೈದ್ಯರ ಎಡವಟ್ಟಿನಿಂದ ಘೋರ ದುರಂತವೊಂದು ನಡೆದಿತ್ತು. ಥಲಸೇಮಿಯಾ ಪೀಡಿತ ಮಕ್ಕಳಿಗೆ ಸ್ಥಳೀಯ ರಕ್ತ ನಿಧಿಯಿಂದ ರಕ್ತ ಪಡೆದು ವರ್ಗಾವಣೆ ನಂತರ ಎಚ್‌ಐವಿ ಸೋಂಕು ತಗುಲಿದೆ. ಏಳು ವರ್ಷದ ಮಗುವಿಗೆ ಸೋಂಕಿತ ರಕ್ತ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ಇದೀಗ ಮಕ್ಕಳ ಬಳಿಕ ನಾಲ್ವರು ರಕ್ತದಾನಿಗಳಿಗೆ ಹೆಚ್‌ಐವಿ ಸೋಂಕು ತಲುಲಿದೆ ಎಂದು ತಿಳಿದು ಬಂದಿದೆ.. ಒಟ್ಟು ಮಾದರಿಗಳಲ್ಲಿ

5 ಮಕ್ಕಳ ನಂತರ ನಾಲ್ವರು ರಕ್ತದಾನಿಗಳಿಗೆ HIV ಪಾಸಿಟಿವ್‌! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

‘ಚೀನಾ ಮೇಲೆ ವಿಧಿಸುತ್ತಿರುವ ಟ್ಯಾರಿಫ್ ಶೇ. 47ಕ್ಕೆ ಇಳಿಸಲಾಗುವುದು’ – ಡೊನಾಲ್ಡ್ ಟ್ರಂಪ್

(ನ್ಯೂಸ್‌ ಕಡಬ) newskadaba.com,  ಅ..30: ಚೀನಾ ಮೇಲಿನ ಟ್ಯಾರಿಫ್ ದರವನ್ನು ಶೇ. 57ರಿಂದ ಶೇ. 47ಕ್ಕೆ ಇಳಿಸಲು ಅಮೆರಿಕಾ ನಿರ್ಧರಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಸೌತ್ ಕೊರಿಯಾದ ಬುಸನ್ ನಗರದಲ್ಲಿ ನಡೆಯುತ್ತಿರುವ ಎಪಿಇಸಿ ಶೃಂಗಸಭೆಗೆ ಮುನ್ನ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ನಡುವೆ ನಡೆದ ವ್ಯಾಪಾರ ಮಾತುಕತೆಯ ನಂತರ ಈ ತೀರ್ಮಾನ ಪ್ರಕಟವಾಗಿದೆ. ಟ್ರಂಪ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಚೀನಾ ಮೇಲಿನ ಟ್ಯಾರಿಫ್ ದರವನ್ನು ಶೇ. 10ರಷ್ಟು ಇಳಿಸುತ್ತಿದ್ದೇವೆ. ಇದು ಎರಡೂ

‘ಚೀನಾ ಮೇಲೆ ವಿಧಿಸುತ್ತಿರುವ ಟ್ಯಾರಿಫ್ ಶೇ. 47ಕ್ಕೆ ಇಳಿಸಲಾಗುವುದು’ – ಡೊನಾಲ್ಡ್ ಟ್ರಂಪ್ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

“ಹೊಸ ಪಾಲಿಟೆಕ್ನಿಕ್ ತೆರೆಯಲು ಕನಿಷ್ಠ ₹22 ಕೋಟಿ ಬೇಕು” – ಸಚಿವ ಡಾ. ಎಂ.ಸಿ. ಸುಧಾಕರ್

(ನ್ಯೂಸ್‌ ಕಡಬ) newskadaba.com,  ಅ. 31 ಕಡೂರು :ರಾಜ್ಯದಲ್ಲಿ ಹೊಸ ಪಾಲಿಟೆಕ್ನಿಕ್ ಕಾಲೇಜು ತೆರೆಯಲು ಜನಪ್ರತಿನಿಧಿಗಳಿಂದ ಒತ್ತಡ ಇದೆ. ಅವಶ್ಯಕತೆಗೆ ಅನುಗುಣವಾಗಿ ನೀಡಲಾಗುತ್ತದೆ. ಒಂದು ಪಾಲಿಟೆಕ್ನಿಕ್ ತೆರೆಯಲು ಕನಿಷ್ಠ ₹22 ಕೋಟಿ ಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು. ಪಟ್ಟಣದಲ್ಲಿ ನಿರ್ಮಾಣವಾಗಿರುವ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ರಾಜ್ಯದಲ್ಲಿ ಈಗಾಗಲೆ 107 ಪಾಲಿಟೆಕ್ನಿಕ್ ಕಾಲೇಜು ಗಳು ಕಾರ್ಯ ನಿರ್ವಹಿಸುತ್ತಿವೆ. ಗರಿಷ್ಠ 16 ಕೋರ್ಸ್ ಗಳು

“ಹೊಸ ಪಾಲಿಟೆಕ್ನಿಕ್ ತೆರೆಯಲು ಕನಿಷ್ಠ ₹22 ಕೋಟಿ ಬೇಕು” – ಸಚಿವ ಡಾ. ಎಂ.ಸಿ. ಸುಧಾಕರ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

2026ರ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ದಿನಾಂಕ ಪಟ್ಟಿಯನ್ನು ಬಿಡುಗಡೆ

(ನ್ಯೂಸ್‌ ಕಡಬ) newskadaba.com,  ಅ. 31 ನವದೆಹಲಿ:ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 2026 ರ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ದಿನಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗಳು 2026ರ ಫೆಬ್ರವರಿ 17 ರಂದು ಪ್ರಾರಂಭವಾಗಲಿವೆ. 2025ರ ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸುವಾಗ 2026 ರಲ್ಲಿ 10 ಮತ್ತು 12 ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 17 ರಿಂದ ಆರಂಭವಾಗಲಿವೆ ಎಂದು CBSE ಮೊದಲು ಘೋಷಿಸಿತ್ತು. 2026 ರ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು

2026ರ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ದಿನಾಂಕ ಪಟ್ಟಿಯನ್ನು ಬಿಡುಗಡೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಲ್ಮಾನ್ ಖಾನ್ ವಿರುದ್ಧದ ‘ಭಯೋತ್ಪಾದಕ’ ವದಂತಿ ಸುಳ್ಳು – ಪಾಕಿಸ್ತಾನ ಸರ್ಕಾರದ ಅಧಿಕೃತ ಸ್ಪಷ್ಟನೆ!

(ನ್ಯೂಸ್‌ ಕಡಬ) newskadaba.com,  ಅ..30: ಕೆಲವೇ ದಿನಗಳ ಹಿಂದೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ಆತಂಕ ಉಂಟಾಗುವಂತಹ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪಾಕಿಸ್ತಾನದ ಬಲೂಚಿಸ್ತಾನ್ ಸರ್ಕಾರವು ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ ಎಂಬ ವದಂತಿ ಹರಡಿತ್ತು. ಈ ಸುದ್ದಿ ವೇಗವಾಗಿ ಹರಡಿ, ಅಭಿಮಾನಿಗಳಲ್ಲಿ ಗೊಂದಲ ಮತ್ತು ಅಸಮಾಧಾನ ಉಂಟುಮಾಡಿತು. ಆದರೆ ಇದೀಗ ಪಾಕಿಸ್ತಾನದ ಸರ್ಕಾರವೇ ಈ ವದಂತಿಗೆ ತೆರೆ ಎಳೆದಿದೆ. ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ

ಸಲ್ಮಾನ್ ಖಾನ್ ವಿರುದ್ಧದ ‘ಭಯೋತ್ಪಾದಕ’ ವದಂತಿ ಸುಳ್ಳು – ಪಾಕಿಸ್ತಾನ ಸರ್ಕಾರದ ಅಧಿಕೃತ ಸ್ಪಷ್ಟನೆ! Read More »

ಬ್ರೇಕಿಂಗ್ ನ್ಯೂಸ್, ಸಿನಿಮಾ

ಸೇತುವೆ ನಿರ್ಮಾಣ ಸ್ಥಳದಲ್ಲಿ ಕ್ರೇನ್ ಉರುಳಿ ಇಬ್ಬರು ದುರ್ಮರಣ

(ನ್ಯೂಸ್‌ ಕಡಬ) newskadaba.com,  ಅ..30: ಭೀಕರ ಅಪಘಾತ ಸಂಭವಿಸಿದ್ದು, ರೈಲ್ವೆ ಸೇತುವೆ ನಿರ್ಮಾಣ ಕಾರ್ಯದಲ್ಲಿ ಬಳಸುತ್ತಿದ್ದ ಕ್ರೇನ್ ಇದ್ದಕ್ಕಿದ್ದಂತೆ ಉರುಳಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಬೈಕ್ ಸವಾರರು ಹಾಗೂ ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ಅಸ್ತವ್ಯಸ್ತ ದೃಶ್ಯ ಕಂಡುಬಂದಿದೆ. ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದ್ದು, ಕ್ರೇನ್ ರೈಲ್ವೆ ಸೇತುವೆ ಕಾಮಗಾರಿ ವೇಳೆ ಸಮತೋಲನ ಕಳೆದುಕೊಂಡು ಹಾದುಹೋಗುತ್ತಿದ್ದ ಪಿಕಪ್ ಟ್ರಕ್ ಮೇಲೆ ಬಿದ್ದಿತು ಎಂದು ಧಾರ್ ಜಿಲ್ಲಾ ಪೊಲೀಸ್

ಸೇತುವೆ ನಿರ್ಮಾಣ ಸ್ಥಳದಲ್ಲಿ ಕ್ರೇನ್ ಉರುಳಿ ಇಬ್ಬರು ದುರ್ಮರಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಪ್ರಭಾಕರ್ ಭಟ್ ವಿರುದ್ಧದ ದ್ವೇಷ ಭಾಷಣ ಪ್ರಕರಣ- ವಿಚಾರಣೆ ನ. 4 ಕ್ಕೆ ಮುಂದೂಡಿಕೆ

(ನ್ಯೂಸ್‌ ಕಡಬ) newskadaba.com,  ಅ..30: ಬೆಂಗಳೂರು: ಪ್ರಚೋದನಕಾರಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಆರ್‌ಎಸ್‌ಎಸ್ ನಾಯಕ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಅವರಿಗೆ ಮತ್ತೊಮ್ಮೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಅವರ ವಿರುದ್ಧ ಬಂಧನ ಸೇರಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಈ ಹಿಂದೆ ನಿರ್ದೇಶಿಸಿದ್ದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶವನ್ನು ಎತ್ತಿಹಿಡಿದು ವಿಚಾರಣೆಯನ್ನು ನವೆಂಬರ್ 4 ಕ್ಕೆ ಮುಂದೂಡಿದೆ. ಪುತ್ತೂರು ತಾಲೂಕಿನ ಉಪ್ಪಳಿಗೆಯಲ್ಲಿ ಅಕ್ಟೋಬರ್ 20

ಪುತ್ತೂರು: ಪ್ರಭಾಕರ್ ಭಟ್ ವಿರುದ್ಧದ ದ್ವೇಷ ಭಾಷಣ ಪ್ರಕರಣ- ವಿಚಾರಣೆ ನ. 4 ಕ್ಕೆ ಮುಂದೂಡಿಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬೆಂಗಳೂರು: “ವಿದ್ಯಾರ್ಥಿಗಳ ಉತ್ತೀರ್ಣ ಕನಿಷ್ಠ ಅಂಕ ಇಳಿಕೆ ಬೇಡ” : ಸಭಾಪತಿ ಬಸವರಾಜ ಹೊರಟ್ಟಿ

(ನ್ಯೂಸ್‌ ಕಡಬ) newskadaba.com,  ಅ.30 ಬೆಂಗಳೂರು:  ಶಾಲಾ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣ ಅಂಕಗಳನ್ನು 35ಕ್ಕೆ ತರುವಂತೆ ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯವರು ಆಗ್ರಹಿಸಿದ್ದಾರೆ. 33 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಉತ್ತೀರ್ಣರೆಂದು ಪರಿಗಣಿಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಈ ಹಿಂದೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಹೊರಟ್ಟಿಯವರು 33 ಅಂಕದ ಬದಲಿಗೆ 35 ಅಂಕಗಳನ್ನೇ ನಿಗದಿಪಡಿಸಬೇಕು. ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಹಿಂದಿದ್ದ ನಿಯಮವೇ ಉತ್ತಮ ಎಂದು

ಬೆಂಗಳೂರು: “ವಿದ್ಯಾರ್ಥಿಗಳ ಉತ್ತೀರ್ಣ ಕನಿಷ್ಠ ಅಂಕ ಇಳಿಕೆ ಬೇಡ” : ಸಭಾಪತಿ ಬಸವರಾಜ ಹೊರಟ್ಟಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top