ಬ್ರೇಕಿಂಗ್ ನ್ಯೂಸ್

ಭಾರತದಲ್ಲಿ ನೇಮಕಾತಿ ಆರಂಭಿಸಿದ ಸ್ಪೇಸ್‌‍ ಎಕ್ಸ್

(ನ್ಯೂಸ್‌ ಕಡಬ) newskadaba.com,  ನ.01 ಮುಂಬೈ: ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌‍ X ಸಂಸ್ಥೆ ಭಾರತದಲ್ಲಿ ತನ್ನ ಮೊದಲ ಸುತ್ತಿನ ನೇಮಕಾತಿಯನ್ನು ಪ್ರಾರಂಭಿಸಿದೆ.ಭಾರತದಲ್ಲಿ ತನ್ನ ಬಹುನಿರೀಕ್ಷಿತ ಉಪ ಗ್ರಹ ಬ್ರಾಡ್‌ಬ್ಯಾಂಡ್‌‍ ಬಿಡುಗಡೆಯತ್ತ ಮಹತ್ವದ ಹೆಜ್ಜೆಯಾಗಿ, ಸ್ಪೇಸ್‌‍X ಒಡೆತನದ ಸ್ಟಾರ್‌ಲಿಂಕ್‌ ದೇಶದಲ್ಲಿ ತನ್ನ ಮೊದಲ ಸುತ್ತಿನ ನೇಮಕಾತಿಯನ್ನು ಪ್ರಾರಂಭಿಸಿದೆ.ತನ್ನ ನೇಮಕಾತಿ ಅಭಿಯಾನದ ಭಾಗವಾಗಿ, ಎಲೋನ್‌ ಮಸ್ಕ್‌ ನಡೆಸುವ ಕಂಪನಿಯು ತನ್ನ ಲಿಂಕ್ಡ್ ಇನ್‌ ಮತ್ತು ಸ್ಪೇಸ್‌‍ಎಕ್‌್ಸ ವೃತ್ತಿಜೀವನದ ಪೋರ್ಟಲ್‌ನಲ್ಲಿ ಹಲವಾರು ಹುದ್ದೆಗಳನ್ನು ಪೋಸ್ಟ್‌ ಮಾಡಿದೆ. ಕಂಪನಿಯು ಅರ್ಜಿಗಳನ್ನು ಆಹ್ವಾನಿಸುತ್ತಿರುವ […]

ಭಾರತದಲ್ಲಿ ನೇಮಕಾತಿ ಆರಂಭಿಸಿದ ಸ್ಪೇಸ್‌‍ ಎಕ್ಸ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪೊಲೀಸರು ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದ ವಜಾ : ಗೃಹ ಸಚಿವ ಪರಮೇಶ್ವರ್

(ನ್ಯೂಸ್‌ ಕಡಬ) newskadaba.com,  ನ..01: ಪೊಲೀಸ್‌‍ ಇಲಾಖೆಯ ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದಲೇ ವಜಾಗೊಳಿಸಲಾ ಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭ್ರಷ್ಟಚಾರವನ್ನು ತಮ ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಕೆ. ಶಿವಕುಮಾರ್‌ ಎಂಬುವರು ತಮ ಮಗಳ ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ಸೇರಿದಂತೆ ವಿವಿಧ ಕೆಲಸಗಳಿಗೆ ಯಾವ ರೀತಿ ಲಂಚ ವಸೂಲಿ ಮಾಡಲಾಯಿತು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ

ಪೊಲೀಸರು ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದ ವಜಾ : ಗೃಹ ಸಚಿವ ಪರಮೇಶ್ವರ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ- ವಿವಿಧ ಕ್ಷೇತ್ರದ 68 ಸಾಧಕರು, 26 ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆ

(ನ್ಯೂಸ್‌ ಕಡಬ) newskadaba.com,  ನ.01 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ವರ್ಷದ ಪ್ರತಿಷ್ಠಿತ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದ್ದು, ಸಮಾಜಕ್ಕೆ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ವಿವಿಧ ಕ್ಷೇತ್ರಗಳ ಅತ್ಯುತ್ತಮ ವ್ಯಕ್ತಿಗಳನ್ನು ಗುರುತಿಸಿದೆ. ವಿವಿಧ ಕ್ಷೇತ್ರದ 68 ಸಾಧಕರು ಮತ್ತು 26 ಸಂಘ-ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ ಜೋಸೆಫ್ ಮಥಿಯಾಸ್, ರೆಮೋನಾ  ಇವೆಟ್‌ ಪಿರೇರಾ  ಮತ್ತು ಸತೀಶ್ ಇರಾ , ಅವರು ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಈ ವರ್ಷ

ಮಂಗಳೂರು : ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ- ವಿವಿಧ ಕ್ಷೇತ್ರದ 68 ಸಾಧಕರು, 26 ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ಪೂರ್ಣ: ಒಟ್ಟು 6.13 ಕೋಟಿ ಮಂದಿ ಸಮೀಕ್ಷೆ

(ನ್ಯೂಸ್‌ ಕಡಬ) newskadaba.com,  ನ.01: ಬೆಂಗಳೂರು ರಾಜ್ಯ ಹಿಂದುಳಿದ ವರ್ಗಗಗಳ ಆಯೋಗ ಕಳೆದ ಸೆ. 22ರಿಂದ ನಡೆಸುತ್ತಿದ್ದ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಶುಕ್ರವಾರ ಮುಕ್ತಾಯವಾಗಿದ್ದು, 6,13,83,908 ಜನರ ಮಾಹಿತಿ ಸಂಗ್ರಹಿಸಲಾಗಿದೆ. 2025ಕ್ಕೆ ರಾಜ್ಯದಲ್ಲಿ 6,85,38000 ಜನರು ಇರಬಹುದೆಂದು ಆಯೋಗ ಅಂದಾಜಿಸಿತ್ತು. ಆದರೆ 6.13 ಕೋಟಿ ಜನ ಮಾತ್ರ ಮಾಹಿತಿ ನೀಡಿದ್ದಾರೆ. 4,22,258 ಕುಟುಂಬಗಳು ಮಾಹಿತಿ ನೀಡಲು ನಿರಾಕರಿಸಿವೆ. ಅಲ್ಲದೆ, 34,49,681 ಮನೆಗಳು ಖಾಲಿ ಇಲ್ಲವೇ ಬೀಗ ಹಾಕಿದ್ದರಿಂದ ಸಮೀಕ್ಷೆ ಮಾಡಲಾಗಿಲ್ಲ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ

ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ಪೂರ್ಣ: ಒಟ್ಟು 6.13 ಕೋಟಿ ಮಂದಿ ಸಮೀಕ್ಷೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ನ.01 ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಇಂದು ಸಹ ಈ ಭಾಗಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಸಂಜೆ ಹಾಗೂ ಮುಂಜಾನೆಯ ವೇಳೆ ಚಳಿಯ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಇಳಿಕೆ

(ನ್ಯೂಸ್‌ ಕಡಬ) newskadaba.com,  ನ.01 ನವದೆಹಲಿ: ನವೆಂಬರ್‌ ತಿಂಗಳ ಮೊದಲ ದಿನವೇ ದೇಶದ ಜನತೆಗೆ ಗುಡ್‌ನ್ಯೂಸ್‌ ಸಿಕ್ಕಿದ್ದು, ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ತೈಲ ಮಾರುಕಟ್ಟೆ ಕಂಪನಿಗಳ ಅಧಿಸೂಚನೆಯ ಪ್ರಕಾರ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ನವೆಂಬರ್ 1 ರಿಂದ ರೂ. 4.5 ರಿಂದ ರೂ. 6.5 ವರೆಗೆ ಇಳಿಸಲಾಗಿದೆ. ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಈ ತಿಂಗಳು ಯಾವುದೇ ಬದಲಾವಣೆ ಆಗಿಲ್ಲ. ಈ

ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಇಳಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಕಾಣಿಯೂರು ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ದಾಟಿ ನಿಂತಿದ್ದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ

(ನ್ಯೂಸ್‌ ಕಡಬ) newskadaba.com,  ನ.01 : ಅಕ್ಟೋಬರ್ 29 ರಂದು ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಪ್ರತಿದಿನ ರಾತ್ರಿ 7:30 ರ ಸುಮಾರಿಗೆ ನಿಲ್ದಾಣ ತಲುಪಬೇಕಿತ್ತು.ದಿನನಿತ್ಯದಂತೆ ಕಾಣಿಯೂರು ನಿಲ್ದಾಣಕ್ಕೆ ಆಗಮಿಸಬೇಕಿದ್ದ ರೈಲನ್ನು, ಲೋಕೋ ಪೈಲಟ್ (ಚಾಲಕ) ಅತಿಯಾದ ವೇಗದಲ್ಲಿ ಚಲಾಯಿಸಿದ್ದರಿಂದ ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಅನ್ನು ದಾಟಿ, ನಿಲ್ದಾಣದ ಆಚೆ ಭಾಗದಲ್ಲಿ ನಿಂತಿತು. ರೈಲು ಸರಿಯಾದ ಸ್ಥಳದಲ್ಲಿ ನಿಲ್ಲದ ಕಾರಣ, ರೈಲಿನಿಂದ ಇಳಿಯಬೇಕಿದ್ದ ಪ್ರಯಾಣಿಕರು ತೀವ್ರ ಅನಾನುಕೂಲಕ್ಕೆ ಒಳಗಾದರು. ಮುಖ್ಯವಾಗಿ ರಾತ್ರಿಯ ಸಮಯವಾಗಿದ್ದರಿಂದ,

ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಕಾಣಿಯೂರು ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ದಾಟಿ ನಿಂತಿದ್ದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕನ್ನಡಿಗರಿಗೆ 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡದಲ್ಲೇ ಶುಭಾಶಯ ತಿಳಿಸಿದ ಮೋದಿ

(ನ್ಯೂಸ್‌ ಕಡಬ) newskadaba.com,  ನ.01 ಬೆಂಗಳೂರು: 70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ನಾಡಿನಾದ್ಯಂತ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ.. ಕೇಂದ್ರ

ಕನ್ನಡಿಗರಿಗೆ 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡದಲ್ಲೇ ಶುಭಾಶಯ ತಿಳಿಸಿದ ಮೋದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತೆಲಂಗಾಣ ನೂತನ ಸಚಿವರಾಗಿ ಅಜರುದ್ದೀನ್ ಪ್ರಮಾಣ ವಚನ ಸ್ವೀಕಾರ

(ನ್ಯೂಸ್‌ ಕಡಬ) newskadaba.com,  ಅ..31: ಕಾಂಗ್ರೆಸ್ ನಾಯಕ ಮತ್ತು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರು ಶುಕ್ರವಾರ ತೆಲಂಗಾಣ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ, ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ಮೊಹಮ್ಮದ್ ಅಜರುದ್ದೀನ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು.

ತೆಲಂಗಾಣ ನೂತನ ಸಚಿವರಾಗಿ ಅಜರುದ್ದೀನ್ ಪ್ರಮಾಣ ವಚನ ಸ್ವೀಕಾರ Read More »

ಬ್ರೇಕಿಂಗ್ ನ್ಯೂಸ್

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ದೋಷಾರೋಪಪಟ್ಟಿ ಸಲ್ಲಿಸಿದ ಎನ್ಐಎ

(ನ್ಯೂಸ್‌ ಕಡಬ) newskadaba.com,  ಅ..31: ಬರ್ಬರವಾಗಿ ಕೊಲೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಜರಂಗದಳದ ಕಾರ್ಯಕರ್ತ ಸುಹಾಸ್‌‍ ಶೆಟ್ಟಿ ಹತ್ಯೆಯು ಪೂರ್ವ ನಿಯೋಜಿತ ಕೃತ್ಯ ಎಂದು ರಾಷ್ಟ್ರೀಯ ತನಿಖಾ ದಳ( ಎನ್‌ ಐಎ) ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ (ಚಾರ್ಚ್‌ಶೀಟ್‌) ಸಲ್ಲಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ 1967, ಭಾರತೀಯ ನ್ಯಾಯಸಂಹಿತಾ 2023 ಮತ್ತು ಶಸಾ್ತ್ರಸ್ತ್ರ ಕಾಯಿದೆ, 1959ರ ವಿವಿಧ ವಿಭಾಗಗಳಡಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. 2025ರ ಮೇ ತಿಂಗಳಿನಲ್ಲಿ ಸುಹಾಸ್‌‍ ಶೆಟ್ಟಿಯನ್ನು ಮಾರಕಾಯುಧಗಳಿಂದ ಶಸ್ತ್ರಸಜ್ಜಿತವಾದ ಏಳು ಮಂದಿ ಬರ್ಭರವಾಗಿ ಹತ್ಯೆ ಮಾಡಿದ್ದರು.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ದೋಷಾರೋಪಪಟ್ಟಿ ಸಲ್ಲಿಸಿದ ಎನ್ಐಎ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top