ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ರಷ್ಯಾದ ಪೂರ್ವ ಕಮ್ಚಟ್ಕಾ ಪರ್ಯಾಯ ದ್ವೀಪದ ಕರಾವಳಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ! – News Kadaba

ರಷ್ಯಾದ ಪೂರ್ವ ಕಮ್ಚಟ್ಕಾ ಪರ್ಯಾಯ ದ್ವೀಪದ ಕರಾವಳಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ!

(ನ್ಯೂಸ್‌ ಕಡಬ) newskadaba.com,  ಸೆ. 19 ಮಾಸ್ಕೋ: ರಷ್ಯಾದಲ್ಲಿ ಶುಕ್ರವಾರ ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ.

ರಷ್ಯಾದ ಸಾಮಾಜಿಕ ಮಾಧ್ಯಮದಲ್ಲಿ ಭೂಕಂಪಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗಿವೆ. ವೀಡಿಯೋದಲ್ಲಿ ಮನೆಗಳಲ್ಲಿನ ಪೀಠೋಪಕರಣಗಳು, ವಸ್ತುಗಳು ಅಲುಗಾಡುತ್ತಿರುವ ಹಾಗೂ ಪಾರ್ಕ್ ಮಾಡಿದ ಕಾರುಗಳು ಹಿಂದಕ್ಕೆ ಮತ್ತು ಮುಂದಕ್ಕೆ ತೂಗಾಡುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ.

ಪ್ರದೇಶದ ರಾಜಧಾನಿ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯಿಂದ ಪೂರ್ವಕ್ಕೆ 128 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ. 10 ಕಿಲೋಮೀಟರ್  ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಮಾಹಿತಿ ನೀಡಿದೆ. ಅಮೆರಿಕದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಹತ್ತಿರದ ಕರಾವಳಿಯಲ್ಲಿ ಅಪಾಯಕಾರಿ ಅಲೆಗಳು ಏಳಬಹುದು ಎಂದು ಎಚ್ಚರಿಸಿದೆ.

“ಪ್ರಸ್ತುತ ಭೂಕಂಪದಿಂದಾಗಿ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಎಲ್ಲರೂ ಶಾಂತವಾಗಿರಲು ನಾನು ಕೇಳಿಕೊಳ್ಳುತ್ತೇನೆ. ಪರ್ಯಾಯ ದ್ವೀಪದ ಪೂರ್ವ ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ” ಎಂದು ಪ್ರದೇಶದ ಗವರ್ನರ್ ವ್ಲಾಡಿಮಿರ್ ಸೊಲೊಡೊವ್ ಹೇಳಿದ್ದಾರೆ.

Scroll to Top