ಬ್ರೇಕಿಂಗ್ ನ್ಯೂಸ್

ಡ್ರಗ್ಸ್ ಅಮಲಿನಲ್ಲಿ ಅಸಭ್ಯ ವರ್ತನೆ ಬಂಟ್ವಾಳ ಪೊಲೀಸರ ಬಲೆಗೆ ಬಿದ್ದ ಇಬ್ಬರು ಕಿಡಿಗೇಡಿಗಳು

(ನ್ಯೂಸ್‌ ಕಡಬ) newskadaba.com,ಫೆ.27: ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ ಘಟನೆ ಬಿ ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ನಿವಾಸಿಗಳಾದ ಅಬ್ದುಲ್ ರಜಾಕ್ ಹಾಗೂ ಫೆಬಿಯಸ್ ಜೈಸನ್ ಪಿರೇರಾ (24) ಎಂದು ಗುರುತಿಸಲಾಗಿದೆ. ಫೆ 25 ರಂದು ಬೆಳಿಗ್ಗೆ ಬಂಟ್ವಾಳ ತಾಲೂಕು ಬಿ ಮೂಡಾ ಗ್ರಾಮದ ಪಲ್ಲಮಜಲು ಎಂಬಲ್ಲಿ, ಸಾರ್ವಜನಿಕ ಮೈದಾನದಲ್ಲಿ 2  ವ್ಯಕ್ತಿಗಳು ಮಾದಕ ವಸ್ತು ಸೇವಿಸಿ ನಶೆ […]

ಡ್ರಗ್ಸ್ ಅಮಲಿನಲ್ಲಿ ಅಸಭ್ಯ ವರ್ತನೆ ಬಂಟ್ವಾಳ ಪೊಲೀಸರ ಬಲೆಗೆ ಬಿದ್ದ ಇಬ್ಬರು ಕಿಡಿಗೇಡಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಫೆ.27: ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಒಣಹವೆ ಇರಲಿದ್ದು, ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ : ಸಂಸ್ಥೆಯ ಮುಖ್ಯಸ್ಥರೊಬ್ಬರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಒಬ್ಬ ಆರೆಸ್ಟ್

(ನ್ಯೂಸ್‌ ಕಡಬ) newskadaba.com,   ಫೆ.24: ಶಾಲಾ ಮಕ್ಕಳಿಗೆ ಸಂವಹನ ಕೌಶಲ ತರಬೇತಿ ನೀಡುವ ನಗರದ ಸಂಸ್ಥೆಯೊಂದರ ಮುಖ್ಯಸ್ಥರನ್ನು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಖಾಸಗಿ ವೀಡಿಯೋ ಇದೆ ಎಂದು ಬ್ಲ್ಯಾಕ್ ಮೇಲ್ ಮಾಡಿ ಈಗ ಬಂಧಿತನಾಗಿದ್ದಾನೆ. ಆರೋಪಿ ಉಡುಪಿ ಕಾಪುವಿನ ಅಭಿಷೇಕ್‌ ಸುರೇಂದ್ರ ಪೂಜಾರಿ ಬಂಧಿತ. ಮಾರ್ಫ್‌ ಮಾಡಲಾದ ವೀಡಿಯೋ ಇರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿರುವುದಾಗಿ ಸಂಸ್ಥೆ ಮಾಲಕರ ಪುತ್ರಿ ನೀಡಿದ ದೂರಿನನ್ವಯ ಉರ್ವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ……

ಉಡುಪಿ : ಸಂಸ್ಥೆಯ ಮುಖ್ಯಸ್ಥರೊಬ್ಬರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಒಬ್ಬ ಆರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಫೆ.26ಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಭಾರತಕ್ಕೆ ಭೇಟಿ

(ನ್ಯೂಸ್‌ ಕಡಬ) newskadaba.com,ಫೆ.24: ಫೆ.26ಕ್ಕೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭಾರತಕ್ಕೆ ಆಗಮಿಸಲಿದ್ದಾರೆ. ಫೆ.26ರಿಂದ ಮಾ.7ರವರೆಗೆ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ಗೆ ಪ್ರಯಾಣ ಬೆಳೆಸಲಿರುವ ಮಾರ್ಕ್ ಕಾರ್ನಿ ಅವರು ಮೊದಲು ಮುಂಬೈಗೆ ಭೇಟಿ ನೀಡಲಿದ್ದಾರೆ. ನಂತರ ದೆಹಲಿಗೆ ಭೇಟಿ ನೀಡಿ, ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ.. ಭೇಟಿ ವೇಳೆ, ನಾಯಕರು ಕೆನಡಾ-ಭಾರತ ಸಂಬಂಧವನ್ನು ಉನ್ನತೀಕರಿಸುವ ಮತ್ತು ವಿಸ್ತರಿಸುವತ್ತ ಗಮನಹರಿಸಲಿದ್ದಾರೆ. ವ್ಯಾಪಾರ, ಇಂಧನ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ, ಪ್ರತಿಭೆ ಮತ್ತು ಸಂಸ್ಕೃತಿ ಮತ್ತು ರಕ್ಷಣೆಯಲ್ಲಿ ಮಹತ್ವಾಕಾಂಕ್ಷೆಯ

ಫೆ.26ಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಭಾರತಕ್ಕೆ ಭೇಟಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಜೇಶ್ವರ : ವ್ಯಕ್ತಿಯ ಅಪಹರಣ- ನಾಲ್ಕು ಮಂದಿ ಆರೆಸ್ಟ್

(ನ್ಯೂಸ್‌ ಕಡಬ) newskadaba.com,ಫೆ.24: ವ್ಯಕ್ತಿ ಯೋರ್ವನನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿದ ಘಟನೆ ಮಂಜೇಶ್ವರದ ಪಾವೂರು ನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಪಟ್ಟಂತೆ ನಾಲ್ವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 20 ರಂದು ರಾತ್ರಿ ಘಟನೆ ನಡೆದಿತ್ತು. ಪಾವೂರು ಕೊಂಬಗುಡಿಯ ಅಬ್ದುಲ್ ರಹಮಾನ್ ಎಂಬವರನ್ನು ರಾತ್ರಿ 10.30 ರ ಸುಮಾರಿಗೆ ಕಾರಿನಲ್ಲಿ ಬಂದ ತಂಡವೊಂದು ಬಲವಂತವಾಗಿ ಅಪಹರಿಸಿತ್ತು. ಈ ಬಗ್ಗೆ ಪತ್ನಿ ತಾಹಿರಾ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಘಟನೆಗೆ ಸಂಬಂಧಪಟ್ಟಂತೆ ಪಾವೂರು ಕುಂಡಾಪು ವಿನ ಗಫೂರ್

ಮಂಜೇಶ್ವರ : ವ್ಯಕ್ತಿಯ ಅಪಹರಣ- ನಾಲ್ಕು ಮಂದಿ ಆರೆಸ್ಟ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ಚಿನ್ನದ ದರ

(ನ್ಯೂಸ್‌ ಕಡಬ) newskadaba.com,ಫೆ.24: ಜಾಗತಿಕ ಮಾರುಕಟ್ಟೆಗಳ ಏರಿಳಿತದಿಂದ ಚಿನ್ನ ಬೆಳ್ಳಿ ದರದಲ್ಲೂ ಏರಿಳಿತ ಕಂಡುಬರುತ್ತಿದೆ. ಚಿನ್ನದ ದರದಲ್ಲಿ ಹಾಗೂ ಬೆಳ್ಳಿಯಲ್ಲಿ ಇಂದು ಕುಸಿತ ಉಂಟಾಗಿದೆ. ಅಮೆರಿಕದ ಡಾಲರ್ ನಿಂದಾಗಿ ಒತ್ತಡಕ್ಕೊಳಗಾಗಿ, ಮೌಲ್ಯ ಹೆಚ್ಚಾಗಿದ್ದರಿಂದ ಲೋಹಗಳ ಬೆಲೆ ಇಳಿಕೆ ಆಗಿದೆ. ಪ್ರತಿಸುಂಕ ಹಾವಳಿ, ಅಮೆರಿಕ-ಇರಾನ್ ಸಂಘರ್ಷದ ನಡುವೆಯೂ ಡಾಲರ್ ಬಲಗೊಂಡ ಕಾರಣ ಚಿನ್ನ ಬೆಳ್ಳಿ ದರ ಕುಸಿದಿದೆ. ಆದರೆ ಈ ಇಳಿಕೆ ತಾತ್ಕಾಲಿಕವಾಗಿದ್ದು ಮತ್ತೆ ಬೆಲೆ ಏರಿಳಿತ ಕಾಣುವ ಸಾಧ್ಯತೆ ಇದೆ. ಚಿನ್ನದ ಇಂದಿನ ದರ ಎಷ್ಟಿದೆ? ಫೆಬ್ರವರಿ

ಇಂದಿನ ಚಿನ್ನದ ದರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಾ.11ರಿಂದ ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್‌ : ಎಚ್ಚರ

(ನ್ಯೂಸ್‌ ಕಡಬ) newskadaba.com,ಫೆ.24: ವರ್ಗಾವಣೆ ನೀತಿ ಬದಲಾವಣೆ, ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯರು ಮಾರ್ಚ್ 11 ರಿಂದ 15 ರವರೆಗೆ ಹೊರರೋಗಿಗಳ (ಒಪಿಡಿ) ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ… ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರನಾಥ್‌ ಎಂ.ಮೇಟಿ ಅವರು, ರಾಜ್ಯ ಸರ್ಕಾರ ಪ್ರತಿಭಟನೆಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾರ್ಚ್ 16 ರಿಂದ ಆರೋಗ್ಯ ಇಲಾಖೆಯ ಎಲ್ಲಾ

ಮಾ.11ರಿಂದ ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್‌ : ಎಚ್ಚರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

(ನ್ಯೂಸ್‌ ಕಡಬ) newskadaba.com,ಫೆ.24: ಸುಳ್ಯ-ಬೆಳ್ಳಾರೆ ರಸ್ತೆಯ ಬೆಂಗಮಲೆ ಎಂಬಲ್ಲಿ ಸೋಮವಾರ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿದೆ.ಕಾರಿನಲ್ಲಿದ್ದ ಬ್ಯಾಂಕ್ ಮ್ಯಾನೇಜರ್ ಉತ್ಸವ್ ಚಕ್ರವರ್ತಿ ಮತ್ತು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ಉಮ್ಮರ್ ಎಂಬುವವರಿಗೆ ಸೇರಿದ ಬಾಡಿಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.ಘಟನೆಯಿಂದಾಗಿ ಸುಮಾರು ಅರ್ಧ ಗಂಟೆ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ನಂತರ ಸ್ಥಳೀಯರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು..

ಸುಳ್ಯದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆಯ ಸೂಚನೆ

(ನ್ಯೂಸ್‌ ಕಡಬ) newskadaba.com,ಫೆ.24: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ ಆವರಿಸಿದ್ದು, ಇನ್ನು ಕೆಲ ದಿನಗಳಲ್ಲಿ ಬೆಂಗಳೂರು ಬಿಸಿಲಿನ ಬೇಗೆಯಿಂದ ತತ್ತರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಇಂದು ರಾಜ್ಯದ ಹಲವೆಡೆ ಗುಡುಗು, ಸಿಡಿಲು ಕಾಣಿಸಿಕೊಳ್ಳುವ ಸಂಭವವಿದ್ದು, 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ರಾಜ್ಯದಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 38ರಿಂದ 39 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೀದರ್, ಕಲಬುರ್ಗಿ, ಹಾಸನ, ಮೈಸೂರು

ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆಯ ಸೂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು ಸಾರಿಗೆಯಲ್ಲಿ ಹೊಸ ಕ್ರಾಂತಿ ರಸ್ತೆಗಿಳಿಯಲು ಸಿದ್ಧವಾದ ಮೊದಲ ಖಾಸಗಿ ಇ-ಬಸ್!

(ನ್ಯೂಸ್‌ ಕಡಬ) newskadaba.com,ಫೆ.24: ಮಂಗಳೂರಿನ ಸಾರಿಗೆ ಇತಿಹಾಸದಲ್ಲಿ ಹೊಸ ಕ್ರಾಂತಿ ಆರಂಭವಾಗುತ್ತಿದ್ದು, ನಗರದ ಮೊದಲ ಖಾಸಗಿ ಎಲೆಕ್ಟ್ರಿಕ್ ಬಸ್ ಮಾರ್ಗ ಸಂಖ್ಯೆ 27ರಲ್ಲಿ ಸಂಚರಿಸಲು ಸಜ್ಜಾಗಿದೆ. 1914ರಲ್ಲಿ ದೇಶದ ಮೊದಲ ಖಾಸಗಿ ಬಸ್ ಸೇವೆಗೆ ನಾಂದಿ ಹಾಡಿದ್ದ ಮಂಗಳೂರು, ಈಗ ಇ-ಬಸ್ ಮೂಲಕ ಪರಿಸರ ಸ್ನೇಹಿ ಸಾರಿಗೆಗೆ ಮಾದರಿಯಾಗುತ್ತಿದೆ. * ಬಸ್ ವಿವರ: 9 ಮೀಟರ್ ಉದ್ದ, 32–41 ಆಸನಗಳ ಸಾಮರ್ಥ್ಯದ ಹವಾನಿಯಂತ್ರಿತ (AC) ಬಸ್.ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ ಸಂಚಾರ, ಕೇವಲ 2 ಗಂಟೆಯಲ್ಲಿ

ಮಂಗಳೂರು ಸಾರಿಗೆಯಲ್ಲಿ ಹೊಸ ಕ್ರಾಂತಿ ರಸ್ತೆಗಿಳಿಯಲು ಸಿದ್ಧವಾದ ಮೊದಲ ಖಾಸಗಿ ಇ-ಬಸ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top