ಬ್ರೇಕಿಂಗ್ ನ್ಯೂಸ್

ಮೌಲ್ಯಮಾಪನಕ್ಕೆ ನಿಯೋಜಿತರಾದ ಶಿಕ್ಷಕರಿಗೆ ರಾಷ್ಟ್ರೀಯ ಜನಗಣತಿ-2027ರ ಕಾರ್ಯದಿಂದ ವಿನಾಯಿತಿ

(ನ್ಯೂಸ್‌ ಕಡಬ) newskadaba.com,ಎ.11 : ಪರೀಕ್ಷಾ ಮೌಲ್ಯಮಾಪನ ಕೆಲಸಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು, ಉಪನ್ಯಾಸಕರು ಹಾಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕಾರಿ, ನೌಕರರಿಗೆ ರಾಷ್ಟ್ರೀಯ ಜನಗಣತಿ-2027ರ ಕಾರ್ಯದಿಂದ ವಿನಾಯಿತಿ ನೀಡಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಆದೇಶಿಸಿದೆ. ಜನಗಣತಿ ಕಾರ್ಯಕ್ಕಾಗಿ ರಾಜ್ಯ ಸರಕಾರವು ಶಿಕ್ಷಣ ಇಲಾಖೆಯ ಗ್ರೂಪ್‌ ಬಿ ಮತ್ತು ಸಿ ವೃಂದದ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಿದೆ. ಆದರೆ, ಶಿಕ್ಷಣ ಇಲಾಖೆಯ ಕೆಲಸ ಕಾರ್ಯಗಳ ಹಿತದೃಷ್ಟಿಯಿಂದ ಪರೀಕ್ಷಾ ಮರು ಮೌಲ್ಯಮಾಪನ ಕೆಲಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು, ಉಪನ್ಯಾಸಕರು ಹಾಗೂ ಶಾಲಾ […]

ಮೌಲ್ಯಮಾಪನಕ್ಕೆ ನಿಯೋಜಿತರಾದ ಶಿಕ್ಷಕರಿಗೆ ರಾಷ್ಟ್ರೀಯ ಜನಗಣತಿ-2027ರ ಕಾರ್ಯದಿಂದ ವಿನಾಯಿತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಂದಾಪುರ : ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ – ಮಹಿಳೆ ಮೃತ್ಯು

(ನ್ಯೂಸ್‌ ಕಡಬ) newskadaba.com,ಎ.11 : ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿಯೊಂದು ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ಬೀಜಾಡಿ ಡಿವೈಡರ್ ಬಳಿ ನಡೆದಿದೆ. ಮೃತರನ್ನು ವಡ್ಡರ್ಸೆ ನೀರುಕೊಡ್ಲು ನಿವಾಸಿ ದಿ. ಮಂಜುನಾಥ್ ಆಚಾರಿ ಎಂಬವರ ಪತ್ನಿ ಶಾರದಾ (55) ಎಂದು ಗುರುತಿಸಲಾಗಿದೆ. ಶಾರದಾ ಅವರು ಕೋಟೇಶ್ವರ ಅಂಕದಕಟ್ಟೆಯಲ್ಲಿರುವ ತಮ್ಮ ತಂಗಿಯ ಮನೆಗೆ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಈ ವೇಳೆ ಸ್ಕೂಟಿಯನ್ನು ಅವರ ಮಗ

ಕುಂದಾಪುರ : ಸ್ಕೂಟಿಗೆ ಟಿಪ್ಪರ್ ಲಾರಿ ಡಿಕ್ಕಿ – ಮಹಿಳೆ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

SSLC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ! ತೃತೀಯ ಭಾಷೆ, ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಪಾಸ್-ಫೇಲ್ ಬದಲು ಗ್ರೇಡ್ ಪದ್ಧತಿ ಜಾರಿ

(ನ್ಯೂಸ್‌ ಕಡಬ) newskadaba.com,ಎ.11 : ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿದೆ…. ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ (NSQF) ವಿಷಯಗಳಿಗೆ ಇನ್ನು ಮುಂದೆ ‘ಪಾಸ್-ಫೇಲ್’ ಪದ್ಧತಿ ಇರುವುದಿಲ್ಲ. ಬದಲಾಗಿ ಅಂಕಗಳ ಆಧಾರದ ಮೇಲೆ A, B, C ಗ್ರೇಡ್‌ಗಳನ್ನು ನೀಡಲಾಗುತ್ತದೆ. : ತೃತೀಯ ಭಾಷೆಯನ್ನು ಉತ್ತೀರ್ಣಕ್ಕೆ ಪರಿಗಣಿಸದ ಹಿನ್ನೆಲೆಯಲ್ಲಿ, ಒಟ್ಟು ಫಲಿತಾಂಶವನ್ನು 525 ಅಂಕಗಳಿಗೆ (ಈ ಮೊದಲು 625 ಇತ್ತು) ಸೀಮಿತಗೊಳಿಸಲಾಗುತ್ತದೆ. ಈ ಹೊಸ

SSLC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ! ತೃತೀಯ ಭಾಷೆ, ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಪಾಸ್-ಫೇಲ್ ಬದಲು ಗ್ರೇಡ್ ಪದ್ಧತಿ ಜಾರಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮದರಂಗಿ ಕಾರ್ಯಕ್ರಮದ ವೇಳೆ ಹಠಾತ್ ಕುಸಿತ; ನಿರೂಪಕನ ದುರಂತ ಅಂತ್ಯ

(ನ್ಯೂಸ್‌ ಕಡಬ) newskadaba.com,ಎ.11 : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಫರಂಗಿಪೇಟೆ ಅಬ್ಬೆಟ್ಟು ನಿವಾಸಿ ಅಶ್ವಿತ್ (32). ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ವೇದಿಕೆ ಏರಿ ಮಾತು ಆರಂಭಿಸುತ್ತಿದ್ದಂತೆಯೇ ಅಶ್ವಿತ್ ಹಠಾತ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮದರಂಗಿ ಕಾರ್ಯಕ್ರಮದ ವೇಳೆ ಹಠಾತ್ ಕುಸಿತ; ನಿರೂಪಕನ ದುರಂತ ಅಂತ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಚಲಿಸುತ್ತಿದ್ದಂತೆಯೇ ಬೆಂಕಿಗಾಹುತಿಯಾದ ಆಟೋ ರಿಕ್ಷಾ

(ನ್ಯೂಸ್‌ ಕಡಬ) newskadaba.com,ಎ.11: ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂರ್ಜೆ (ವಿಶಾಲನಗರ) ಎಂಬಲ್ಲಿ, ಬಿ.ಸಿ.ರೋಡು – ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ.ಬಾಂಬಿಲ ನಿವಾಸಿ ರೇವಣ್ಣ ಅವರಿಗೆ ಸೇರಿದ ಗ್ಯಾಸ್ ಕಿಟ್ ಹೊಂದಿದ್ದ ಆಟೋ ರಿಕ್ಷಾ ಇದಾಗಿದೆ. ರಿಕ್ಷಾದಲ್ಲಿ ಗ್ಯಾಸ್ ಖಾಲಿಯಾದ ಕಾರಣ ಪೆಟ್ರೋಲ್ ಬಳಸಿಕೊಂಡು ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಗ್ಯಾಸ್ ಸೋರಿಕೆಯ ವಾಸನೆ ಬಂದ ಕೂಡಲೇ ಚಾಲಕ ವಾಹನ ನಿಲ್ಲಿಸಿದ್ದಾರೆ.ರಿಕ್ಷಾದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಚಾಲಕ ರೇವಣ್ಣ ಅವರು ಸಮಯಪ್ರಜ್ಞೆ ಮೆರೆದು

ಬಂಟ್ವಾಳ: ಚಲಿಸುತ್ತಿದ್ದಂತೆಯೇ ಬೆಂಕಿಗಾಹುತಿಯಾದ ಆಟೋ ರಿಕ್ಷಾ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಎ.11: ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಭಾಗಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಏ.10 ರಿಂದ 12 ರ ವರೆಗೆ ಬಿಸಿಗಾಳಿ ಬೀಸುವ ಸೂಚನೆ ನೀಡಿದ್ದು, ಅಧಿಕ ಉಷ್ಣಾಂಶ ದಾಖಲಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನಲೆಯಲ್ಲಿ ಕರಾವಳಿ ಭಾಗದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ..

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ 7ನೇ Rank ಪಡೆದು ನೆಟ್ಟಣದ ಕೀರ್ತಿ ಹೆಚ್ಚಿಸಿದ ಸ್ವಾತಿ ಎಂ.ಸಿ

(ನ್ಯೂಸ್‌ ಕಡಬ) newskadaba.com  ,ಎ10  ​ಸುಬ್ರಹ್ಮಣ್ಯ: ಇತ್ತೀಚೆಗೆ ಪ್ರಕಟಗೊಂಡ 2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ ಎಂ.ಸಿ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಸ್ವಾತಿ ಅವರು ಒಟ್ಟು 600 ಅಂಕಗಳಿಗೆ 593 ಅಂಕಗಳನ್ನು ಪಡೆಯುವ ಮೂಲಕ ಶೇ. 98.83 ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ವಿಶೇಷವೆಂದರೆ ಇವರು ಐದು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ 7ನೇ Rank ಪಡೆದು ನೆಟ್ಟಣದ ಕೀರ್ತಿ ಹೆಚ್ಚಿಸಿದ ಸ್ವಾತಿ ಎಂ.ಸಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಿಯು ಬೋರ್ಡ್ ಐತಿಹಾಸಿಕ ಎಡವಟ್ಟು; ಹಿಂದಿ ವಿಷಯಕ್ಕೆ 100ಕ್ಕೆ 111 ಅಂಕ! ಶಿಕ್ಷಣ ಸಚಿವರೇ ಇದಕ್ಕೆ ಯಾರು ಹೊಣೆ?

(ನ್ಯೂಸ್‌ ಕಡಬ) newskadaba.com  ,ಎ10 : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪರೀಕ್ಷಾ ಮಂಡಳಿ ಮಾಡಿರುವ ಎಡವಟ್ಟು ಈಗ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ. ‘ಐತಿಹಾಸಿಕ ಫಲಿತಾಂಶ’ ಎಂದು ಬೀಗುತ್ತಿದ್ದ ಶಿಕ್ಷಣ ಸಚಿವರಿಗೆ ಮಂಡಳಿಯ ಈ ಎಡವಟ್ಟಿನ ಸಾಧನೆ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹಿಂದಿಗೆ ನೂರಕ್ಕೆ ನೂರಲ್ಲ.. ನೂರಕ್ಕೆ 111! ಸಾಮಾನ್ಯವಾಗಿ ಪರೀಕ್ಷೆ ನಡೆಯುವುದು 100 ಅಂಕಗಳಿಗೆ. ಆದರೆ ಪಿಯು ಬೋರ್ಡ್ ಮಾತ್ರ ವಿದ್ಯಾರ್ಥಿಯೊಬ್ಬನಿಗೆ ಹಿಂದಿ ವಿಷಯದಲ್ಲಿ ಬರೋಬ್ಬರಿ 111 ಅಂಕಗಳನ್ನು ನೀಡಿ ನೀಡಿ ಪಾಸ್ ಮಾಡುವ

ಪಿಯು ಬೋರ್ಡ್ ಐತಿಹಾಸಿಕ ಎಡವಟ್ಟು; ಹಿಂದಿ ವಿಷಯಕ್ಕೆ 100ಕ್ಕೆ 111 ಅಂಕ! ಶಿಕ್ಷಣ ಸಚಿವರೇ ಇದಕ್ಕೆ ಯಾರು ಹೊಣೆ? Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು ಜಾತ್ರೋತ್ಸವಕ್ಕೆ ಧ್ವಜಾರೋಹಣ

(ನ್ಯೂಸ್‌ ಕಡಬ) newskadaba.com  ,ಎ10 : ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.10ರಿಂದ ಆರಂಭಗೊಳ್ಳುವ ವರ್ಷಾವಧಿ ಜಾತ್ರೋತ್ಸವು ದೇವಳದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ದೊರೆಯಿತು.ಬೆಳಗ್ಗೆ 9.20ರ ನಂತರದ ವೃಷಭ ಲಗ್ನದಲ್ಲಿ ಸುಮಾರು 10.38ರ ಸಮಯಕ್ಕೆ ದೇವಾಲಯದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ್‌ ಭಟ್‌ ಪಂಜಿಗುಡ್ಡೆ ಸಹಿತ ಸದಸ್ಯರು, ಅಪಾರ ಭಕ್ತರು ಪಾಲ್ಗೊಂಡರು.

ಪುತ್ತೂರು ಜಾತ್ರೋತ್ಸವಕ್ಕೆ ಧ್ವಜಾರೋಹಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಘು ಬಿಜೂರ್ ರವರಿಗೆ ರಾಜ್ಯ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ

(ನ್ಯೂಸ್‌ ಕಡಬ) newskadaba.com  ,ಎ10: ರಘು ಬಿಜೂರ್ ರವರಿಗೆ ಏ.5 ರಂದು ರಾಜ್ಯ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಿಂದೂಸ್ತಾನಿ ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಧನೆಗಾಗಿ ಗಾನಸಿರಿ ಸಂಗೀತ ಕಲಾ ಪುತ್ತೂರು ಇವರ ವಜ್ರಮಹೋತ್ಸವ ಸಂದರ್ಭದಲ್ಲಿ ರಾಜ್ಯದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಕಲಾವಿದರನ್ನು ಗುರುತಿಸಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮಾಜಿ ಎಂ.ಎಲ್.ಎ, ಮಾಜಿ ಸಚಿವೆ ಶಕುಂತಲಾ ಶೆಟ್ಟಿ ಮತ್ತು ಸಂಗೀತ ವಿಧೂಷಿ ಡಾl ಅರವಿಂದ ಜಯಶ್ರೀ ಇವರ ಮೂಲಕ ನೀಡಲಾಯಿತು.

ರಘು ಬಿಜೂರ್ ರವರಿಗೆ ರಾಜ್ಯ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top