News Kadaba Desk

ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ : ಟ್ರಂಪ್

(ನ್ಯೂಸ್‌ ಕಡಬ) newskadaba.com,  ನ.06:   ಈ ತಿಂಗಳ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ.20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ. ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ದಕ್ಷಿಣ ಆಫ್ರಿಕಾ, ನ. 22 ಮತ್ತು 23 ರಂದು ಜೋಹಾನ್‌್ಸಬರ್ಗ್‌ನಲ್ಲಿ ಶೃಂಗಸಭೆಯನ್ನು ಆಯೋಜಿಸಿದ್ದು,ಇದೇ ಮೊದಲ ಬಾರಿಗೆ ಜಿ.20 ನಾಯಕರ ಸಭೆ ಆಫ್ರಿಕನ್‌ ನೆಲದಲ್ಲಿ ನಡೆಯಲಿದೆ.ಫ್ಲೋರಿಡಾದಲ್ಲಿ ನಡೆದ ಅಮೇರಿಕಾ ಬಿಸಿನೆಸ್‌‍ ಫೋರಂ ಸಮೇಳನದಲ್ಲಿ ಅವರು ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. ನಾನು ಹೋಗುತ್ತಿಲ್ಲ.ಏಕೆಂದರೆ ಅಲ್ಲಿ ಎಲ್ಲವೂ ಸೆರಿಯಿಲ್ಲ […]

ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ : ಟ್ರಂಪ್ Read More »

ಅಂತರ್ರಾಷ್ಟ್ರೀಯ ನ್ಯೂಸ್

ಚಿನ್ನದ ಬೆಲೆಯಲ್ಲಿ ಇಳಿಕೆ

(ನ್ಯೂಸ್‌ ಕಡಬ) newskadaba.com,  ನ.06: ಚಿನ್ನ ಮತ್ತು ಬೆಳ್ಳಿ ಫ್ಯೂಚರ್ ಮಾರುಕಟ್ಟೆಗಳ ಬೆಲೆಯಲ್ಲಿ ಸಾಧಾರಣ ಏರಿಕೆ ಕಂಡುಬಂದಿದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿದೆ. ಬೆಳಿಗ್ಗೆ 9.45 ರ ಹೊತ್ತಿಗೆ, ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX)ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,20,617 ರೂ.ಗಳಲ್ಲಿ ಕಂಡುಬಂದಿದೆ. ಈ ಬೆಲೆಯನ್ನು ಹಿಂದಿನ ಅವಧಿಗೆ ಹೋಲಿಸಿದರೆ ಶೇ. 0.08 ರಷ್ಟು ಹೆಚ್ಚಾಗಿದೆ. MCX ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಡಿಸೆಂಬರ್ ವಿತರಣೆಗೆ ಬೆಳ್ಳಿಯ ಬೆಲೆಯೂ ಪ್ರತಿ ಕಿಲೋಗ್ರಾಂಗೆ 1,47,503

ಚಿನ್ನದ ಬೆಲೆಯಲ್ಲಿ ಇಳಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮತಗಳ್ಳತನ ಆರೋಪ: ‘ಭಾರತದ ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’- ಬ್ರೆಜಿಲ್ ಮಾಡೆಲ್ ಸ್ಪಷ್ಟನೆ

(ನ್ಯೂಸ್‌ ಕಡಬ) newskadaba.com,  ನ.06:   ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ ಆರೋಪ ಮಾಡಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪವನ್ನು ಸ್ವತಃ ಬ್ರೆಜಿಲಿಯನ್‌ ಮಾಡೆಲ್‌ ಲ್ಲಗಲ್ಲಗಳೆದು ಸ್ಪಷ್ಟನೆ ನೀಡಿದ್ದಾರೆ. ಹರಿಯಾಣ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಬ್ರೆಜಿಲ್‌ ರೂಪದರ್ಶಿ 22 ಕಡೆ ಮತ ಚಲಾಯಿಸಿದ್ದಾರೆ ಎಂದು ಸುದ್ದಿಗೋಷ್ಠಿ ನಡೆಸಿ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಆರೋಪದ ಬಗ್ಗೆ ಬ್ರೆಜಿಲ್‌ ಮಾಡೆಲ್‌ ಲಾರಿಸಾ ಪ್ರತಿಕ್ರಿಯೆ ನೀಡಿದ್ದಾರೆ. ಅವರು ನನ್ನ ಹಳೆಯ ಫೋಟೊ ಬಳಸಿ ಸೀಮಾ ಮತ್ತು ಸರಸ್ವತಿ

ಮತಗಳ್ಳತನ ಆರೋಪ: ‘ಭಾರತದ ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’- ಬ್ರೆಜಿಲ್ ಮಾಡೆಲ್ ಸ್ಪಷ್ಟನೆ Read More »

ಕರಾವಳಿ

ಶಿವಮೊಗ್ಗ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ – ಸಾಗರ KSRTC ಡಿಪೋ ಭದ್ರತಾ ಸಿಬ್ಬಂದಿ ಸಾವು

(ನ್ಯೂಸ್‌ ಕಡಬ) newskadaba.com,  ನ.06 ಶಿವಮೊಗ್ಗ: ಸಾಗರದ ಕೆಎಸ್ಆರ್‌ಟಿಸಿ ಡಿಪೋದ ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಮೃತರನ್ನು ಸಾಗರದ ನಿವಾಸಿ ಸಂದೀಪ್ (41) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಪಾಳಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸಂದೀಪ್​ರನ್ನು ಸಹೋದ್ಯೋಗಿಗಳು ಬಸ್ಸಿನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಷ್ಟರಲ್ಲೇ ಸಂದೀಪ್ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಬಂದ ಸಿಬ್ಬಂದಿ ಚಂದ್ರು ಮಾತನಾಡಿ, ನಾನು ಬಸ್​ನಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ‌

ಶಿವಮೊಗ್ಗ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ – ಸಾಗರ KSRTC ಡಿಪೋ ಭದ್ರತಾ ಸಿಬ್ಬಂದಿ ಸಾವು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಸ್ಟ್ರೇಲಿಯಾ ಎದುರು ಟಾಸ್ ಸೋತ ಭಾರತ ತಂಡ ಮೊದಲ ಬ್ಯಾಟಿಂಗ್!

(ನ್ಯೂಸ್‌ ಕಡಬ) newskadaba.com,  ನ.06:   ಇಲ್ಲಿನ ಕ್ಯಾರೆರಾ ಓವಲ್‌ ಕ್ರೀಡಾಂಗಣದಲ್ಲಿನಡೆಯುತ್ತಿರುವ ನಾಲ್ಕನೇ ಟಿ20ಐ ಪಂದ್ಯದಲ್ಲಿ(IND vs AUS) ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್‌ ಮಾರ್ಷ್‌ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಭಾರತ ತಂಡವನ್ನು (India) ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಲಾಗಿದೆ. ಆ ಮೂಲಕ ಪ್ರವಾಸಿ ತಂಡವನ್ನು ಕಡಿಮೆ ಮೊತ್ತಕ್ಕೆ ಆಲ್‌ಔಟ್‌ ಮಾಡಲು ಆತಿಥೇಯ ತಂಡದ ನಾಯಕ ಯೋಜನೆ ರೂಪಿಸಿದ್ದಾರೆ. ಭಾರತ

ಆಸ್ಟ್ರೇಲಿಯಾ ಎದುರು ಟಾಸ್ ಸೋತ ಭಾರತ ತಂಡ ಮೊದಲ ಬ್ಯಾಟಿಂಗ್! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್

ನಂದಿನಿ ತುಪ್ಪ ದರ ಹೆಚ್ಚಳ

(ನ್ಯೂಸ್‌ ಕಡಬ) newskadaba.com,  ನ.06 ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲ ಜಿಎಸ್ ಟಿ ಬೆಲೆ ಇಳಿಕೆಯ ಬೆನ್ನಲ್ಲೇ ನಂದಿನಿ ತುಪ್ಪದ ಬೆಲೆಯನ್ನು 610 ರೂಪಾಯಿಗಳಿಂದ 700ರೂಪಾಯಿಗೆ ಹೆಚ್ಚಳ ಮಾಡಿದೆ. ಈ ನಿರ್ಧಾರವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ನಂದಿನಿ ತುಪ್ಪದ ಬೆಲೆ ಏಕೆ ಏಕಾಏಕಿ 90 ರೂಪಾಯಿ ಹೆಚ್ಚಾಗಿದೆ ಎಂದು ಇಂದು ಮಾಧ್ಯಮ ಪ್ರತಿನಿಧಿಗಳು ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದರು. ಅದಕ್ಕೆ

ನಂದಿನಿ ತುಪ್ಪ ದರ ಹೆಚ್ಚಳ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನಲ್ಲಿ ಬೆಂಕಿ ಅನಾಹುತ

(ನ್ಯೂಸ್‌ ಕಡಬ) newskadaba.com,  ನ.06 ಲಖನೌ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನ ಖ್ಯಾತಿಗೆ ಕಳಂಕ ತರುವ ಮತ್ತೊಂದು ಪ್ರಯತ್ನ ನಡೆದಿದೆ. ತಾಜ್‌ನ ಮುಖ್ಯ ಗುಮ್ಮಟದಿಂದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಮೇಲೇರುತ್ತಿರುವುದನ್ನು ತೋರಿಸುವ 33 ಸೆಕೆಂಡುಗಳ ವೀಡಿಯೊ ವೈರಲ್ ಆಗುತ್ತಿದೆ. ಈ Al- ರಚಿತ ವೀಡಿಯೊವನ್ನು ಆಸ್ಟ್ರೇಲಿಯಾದ ನಟ ಆಡ್ರಿಯನ್ ಜೀ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಆದರೆ ಈಗ ಅದನ್ನು ವಿರೂಪಗೊಳಿಸಿ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಸೆಪ್ಟೆಂಬರ್ 29 ರಂದು

ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನಲ್ಲಿ ಬೆಂಕಿ ಅನಾಹುತ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು : ಮಗಳೊಂದಿಗೆ ಆತ್ಮಹತ್ಯೆಗೆ ಯತ್ನ ಪ್ರಕರಣ – ಇನ್ನುಮುಂದೆ ಅಜ್ಜನ ಆರೈಕೆಯಲ್ಲಿರಲಿದೆ ಮಗು

(ನ್ಯೂಸ್‌ ಕಡಬ) newskadaba.com,  ನ.06 ಮಂಗಳೂರು: ತನ್ನ ಚಿಕ್ಕ ಮಗಳೊಂದಿಗೆ ಸಮುದ್ರಕ್ಕೆ ಹಾರಿ, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಮಗುವನ್ನು ಆಕೆಯ ಅಜ್ಜನಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯೊಂದಿಗಿನ ಜಗಳದಿಂದಾಗಿ ಆ ವ್ಯಕ್ತಿ ತನ್ನ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ವರದಿಯಾಗಿದೆ. ಪೊಲೀಸರು ಕ್ಷಿಪ್ರವಾಗಿ ಕ್ರಮ ಕೈಗೊಂಡು ಸಕಾಲದಲ್ಲಿ ಇಬ್ಬರನ್ನೂ ರಕ್ಷಿಸುವಲ್ಲಿ ಯಶಸ್ವಿಯಾದರು….ಗಂಡ –ಹೆಂಡತಿಯ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಗಳು ನಡೆದವು, ಆದರೆ ಹೆಂಡತಿ ರಾಜಿ ಮಾಡಿಕೊಳ್ಳಲು ನಿರಾಕರಿಸಿ ವಿಚ್ಛೇದನಕ್ಕೆ ಒತ್ತಾಯಿಸಿದಳು. ನ್ಯಾಯಾಲಯದ

ಮಂಗಳೂರು : ಮಗಳೊಂದಿಗೆ ಆತ್ಮಹತ್ಯೆಗೆ ಯತ್ನ ಪ್ರಕರಣ – ಇನ್ನುಮುಂದೆ ಅಜ್ಜನ ಆರೈಕೆಯಲ್ಲಿರಲಿದೆ ಮಗು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆನ್ ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಗೆ 9.2 ಲಕ್ಷ ರೂ. ವಂಚನೆ..!

(ನ್ಯೂಸ್‌ ಕಡಬ) newskadaba.com,  ನ.06:   ಬೈಲಹೊಂಗಲದ ನಿವಾಸಿಯೊಬ್ಬರು ಆನ್‌ಲೈನ್ ಹೂಡಿಕೆ ವಂಚನೆಗೆ ಬಲಿಯಾಗಿದ್ದು, 9,23,948 ರೂ.ಗಳನ್ನು ಕಳೆದುಕೊಂಡಿದ್ದಾರೆ. ಬೈಲಹೊಂಗಲದ ನಿವಾಸಿ ಪ್ರವೀಣ್ ಅನಂತ್ ರೇಣಿಕೆ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ‘ಓರಿಯೊನೆಕ್ಸ್ ಮಾರ್ಕೆಟ್ಸ್’ ಎಂಬ ನಕಲಿ ಕಂಪನಿಯ ಮೂಲಕ ಹೆಚ್ಚಿನ ಲಾಭದ ಭರವಸೆ ನೀಡಿ ವಂಚಿಸಲಾಗಿದ್ದು, ಈ ಸಂಬಂಧ ಬೆಳಗಾವಿಯ ಜಿಲ್ಲಾ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಕ್ಟೋಬರ್ 13 ರಂದು, ಪ್ರವೀಣ್ ಅನಂತ್ ರೇಣಿಕೆ ಅವರ ಬ್ಯಾಂಕ್ ಖಾತೆಗೆ ಲಿಂಕ್

ಆನ್ ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಗೆ 9.2 ಲಕ್ಷ ರೂ. ವಂಚನೆ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ವಿಧಿವಶ

(ನ್ಯೂಸ್‌ ಕಡಬ) newskadaba.com,  ನ.06 ಬೆಂಗಳೂರು: ಕನ್ನಡದ ಖ್ಯಾತ ಖಳನಟ ಹರೀಶ್ ರಾಯ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ನಿಧನ ಹೊಂದಿದ್ದಾರೆ. ‘ಓಂ’, ‘ನಲ್ಲ’, ‘ಕೆಜಿಎಫ್’, ‘ಕೆಜಿಎಫ್ 2’ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ತಮ್ಮ ಶಕ್ತಿಶಾಲಿ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು, ಕಳೆದ ಕೆಲವು ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್ ನೊಂದಿಗೆ ಹೋರಾಟ ನಡೆಸುತ್ತಿದ್ದರು. ಹರೀಶ್ ರಾಯ್ ಅವರ ಆರೋಗ್ಯ ಕಳೆದ ತಿಂಗಳುಗಳಿಂದ ಹದಗೆಡುತ್ತಲೇ ಇತ್ತು. ಹೊಟ್ಟೆ ಉಬ್ಬರಗೊಂಡು ದೇಹ ಕೃಷಗೊಂಡಿದ್ದ ಅವರು ಗುರುತೇ

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ವಿಧಿವಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top