News Kadaba Desk

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ► ತಂದೆ, ತಾಯಿ ಹಾಗೂ ಇಬ್ಬರು ಪುತ್ರಿಯರು

(ನ್ಯೂಸ್ ಕಡಬ) newskadaba.com ಉಡುಪಿ, ಜು.13. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಪಡುಬೆಲ್ಲೆ ಎಂಬಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಮೃತರನ್ನು ಕಳೆದ 30 ವರ್ಷಗಳಿಂದ ಪಡುಬೆಲ್ಲೆಯಲ್ಲಿ ಜ್ಯುವೆಲ್ಲರಿ ವ್ಯಾಪಾರ ನಡೆಸುತ್ತಿದ್ದ ಶಂಕರಾಚಾರ್ಯ (50), ಅವರ ಪತ್ನಿ ನಿರ್ಮಲ ಆಚಾರ್ಯ (44), ಮತ್ತು ಪುತ್ರಿಯರಾದ ಶ್ರುತಿ (23) ಹಾಗೂ ಶ್ರೇಯ (22) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ […]

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ► ತಂದೆ, ತಾಯಿ ಹಾಗೂ ಇಬ್ಬರು ಪುತ್ರಿಯರು Read More »

ಕರ್ನಾಟಕ

ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಯಾವುದೇ ಕೋಮು ಘರ್ಷಣೆಗಳು ನಡೆದಿಲ್ಲ ► ಕೆಲವು ಘಟನೆಗಳು ವೈಯಕ್ತಿಕ: ಪೊಲೀಸ್ ಅಧಿಕಾರಿಗಳಿಂದ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.12. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಕೆಲವು ಅಹಿತಕರ ಘಟನೆಗಳು ಜರುಗಿದ್ದು, ಕಳೆಡೆರಡು ದಿನಗಳಲ್ಲಿ ಯಾವುದೇ ಮತೀಯ ಗಲಭೆಗೆ ಹಾಗೂ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಕ್ರಮಗಳನ್ನು ತಗೆದುಕೊಂಡದ್ದು ಇರುತ್ತದೆ. ಕಳೆದ 24 ಗಂಟೆಗಳಲ್ಲಿ ನಡೆದಂತಹ ಘಟನೆಗಳು ಯಾವುದೇ ಮತೀಯ ವಿಚಾರಗಳಿಗೆ ಸಂಬಂಧಿಸಿದ್ದಾಗಿರುವುದಿಲ್ಲ. ಹಾಗೂ ಈ ವೇಳೆಯಲ್ಲಿ ನಡೆದಂತಹ ಮೂರು ಪ್ರಕರಣಗಳ ಸಂಕ್ಷಿಪ್ತ ವಿವರ ಕೆಳಕಂಡಂತೆ ಇರುತ್ತದೆ. ದಿನಾಂಕ 10-07-2017 ರಂದು ಸುಮಾರು 07-00 ಗಂಟೆಗೆ

ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಯಾವುದೇ ಕೋಮು ಘರ್ಷಣೆಗಳು ನಡೆದಿಲ್ಲ ► ಕೆಲವು ಘಟನೆಗಳು ವೈಯಕ್ತಿಕ: ಪೊಲೀಸ್ ಅಧಿಕಾರಿಗಳಿಂದ ಸ್ಪಷ್ಟನೆ Read More »

ಕರಾವಳಿ

ಸಮುದ್ರದಲ್ಲಿ ದೋಣಿ ಪಲ್ಟಿ: ಓರ್ವ ನಾಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು.12. ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿ ಮಗುಚಿಬಿದ್ದ ಪರಿಣಾಮ ಓರ್ವ ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ ಬೇಕಲ ಪಳ್ಳಿಕೆರೆಯಲ್ಲಿ ನಡೆದಿದೆ. ಈ ವೇಳೆ ದೋಣಿಯಲ್ಲಿದ್ದ ಇತರ ನಾಲ್ವರು ಈಜಿ ದಡ ಸೇರಿದ್ದಾರೆ. ತೃಕ್ಕನಾಡಿನ ಕೊಟ್ಟನ್( 54) ನಾಪತ್ತೆಯಾದವರು. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಈ ದುರಂತೆ ಸಂಭವಿಸಿದೆ. ಕೊಟ್ಟನ್ ಸೇರಿದಂತೆ ಐವರು ಬೆಸ್ತರು ಪಳ್ಳಿಕೆರೆ ತೀರದಿಂದ ಮೀನುಗಾರಿಕೆಗೆ ದೋಣಿಯಲ್ಲಿ ತೆರಳಿದ್ದರು. ಅಲ್ಪಮುಂದೆ ಸಾಗುತ್ತಿದ್ದಂತೆ ಕಡಲಿನ ತೆರೆಗಳ ಅಬ್ಬರಕ್ಕೆ ದೋಣಿ ಮಗುಚಿ

ಸಮುದ್ರದಲ್ಲಿ ದೋಣಿ ಪಲ್ಟಿ: ಓರ್ವ ನಾಪತ್ತೆ Read More »

ರಾಷ್ಟ್ರೀಯ ನ್ಯೂಸ್

ಇಚಿಲಂಪಾಡಿ ಚರ್ಚಿನಲ್ಲಿ ಮತ್ತೆ ಕಳ್ಳತನಕ್ಕೆ ವಿಫಲ ಯತ್ನ ► ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಯ್ತು ಕಳ್ಳರ ಫೋಟೊ

(ನ್ಯೂಸ್ ಕಡಬ) newskadaba.com ಕಡಬ,ಜು.11. ಠಾಣಾ ವ್ಯಾಪ್ತಿಯ ಇಚಿಲಂಪಾಡಿ ಸೈಂಟ್ ಜಾರ್ಜ್ ಸಿರಿಯನ್ ಜಾಕೋಬೈಟ್ ಚರ್ಚಿಗೆ ನುಗಿರುವ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರದಂದು ರಾತ್ರಿ ಸಮಯದಲ್ಲಿ ಚರ್ಚಿಗೆ ಮುಂಭಾಗದಲ್ಲಿ ಬೈಕ್ ನಿಲ್ಲಿಸಿ ಇಬ್ಬರು ಯುವಕರು ಚರ್ಚಿಗೆ ಆಗಮಿಸಿ ಕಳ್ಳತನಕ್ಕೆ ಯತ್ನಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಘಟನೆ ಸೋಮವಾರದಂದು ಬೆಳಕಿಗೆ ಬಂದಿದ್ದು, ಮಂಗಳವಾರದಂದು ಕಡಬ ಠಾಣೆಗೆ ದೂರು ನೀಡಲಾಗಿದೆ. ಕಳೆದ ಜೂ. 15ರಂದು ಇದೇ ಚರ್ಚಿಗೆ ನುಗ್ಗಿದ್ದ ಕಳ್ಳರು ಚರ್ಚಿನ

ಇಚಿಲಂಪಾಡಿ ಚರ್ಚಿನಲ್ಲಿ ಮತ್ತೆ ಕಳ್ಳತನಕ್ಕೆ ವಿಫಲ ಯತ್ನ ► ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಯ್ತು ಕಳ್ಳರ ಫೋಟೊ Read More »

ಕರಾವಳಿ

ಉಪ್ಪಿನಂಗಡಿ: ಪಿಕಪ್ ಚಾಲಕನಿಗೆ ತಂಡದಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು.11. ವ್ಯಕ್ತಿಯೋರ್ವರ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಮಂಗಳವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಮಠ ನಿವಾಸಿ ಅಬ್ದುಲ್ ರಹ್ಮಾನ್ (೪೫) ಹಲ್ಲೆಗೊಳಗಾದವರು. ಇವರು ಗ್ಯಾಸ್ ಸಿಲಿಂಡರ್ ವಿತರಕ ಪಿಕಪ್ ಚಾಲಕನಾಗಿದ್ದು, ಎಂದಿನಂತೆ ಮಂಗಳವಾರ ಕೂಡ ಸೇಲ್ಸ್ ಮೆನ್ ರಝಾಕ್ ಅವರನ್ನು ಕರೆದುಕೊಂಡು ಬರಲು ಮೇದರಬೆಟ್ಟಿಗೆ ಬರುತಿದ್ದರು. ಆ ಸಂದರ್ಭ ಮೇದರಬೆಟ್ಟು ಬಳಿ ಇವರ ಟೆಂಪೋವನ್ನು ಅಡ್ಡಗಟ್ಟಿದ ಓಮ್ನಿಯಲ್ಲಿದ್ದ ತಂಡವೊಂದು ಹಲ್ಲೆ ನಡೆಸಿ, ಟೆಂಪೋಗೆ ಕಲ್ಲು ಹೊಡೆದು ಪರಾರಿಯಾಗಿದೆ. ಗಾಯಾಳು ಅಬ್ದುಲ್

ಉಪ್ಪಿನಂಗಡಿ: ಪಿಕಪ್ ಚಾಲಕನಿಗೆ ತಂಡದಿಂದ ಹಲ್ಲೆ Read More »

ಕರಾವಳಿ

ಇಂದಿನಿಂದ ಕಡಬದ ನವದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಮಾನ್ಸೂನ್ ಡಿಸ್ಕೌಂಟ್ ಸೇಲ್

(ನ್ಯೂಸ್ ಕಡಬ) newskadaba.com ಕಡಬ, ಜು.11. ಇಲ್ಲಿನ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ದುರ್ಗಾಂಬಿಕಾ ಟವರ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ನವದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಮಾನ್ಸೂನ್ ಡಿಸ್ಕೌಂಟ್ ಸೇಲ್ ಜುಲೈ 11 ಮಂಗಳವಾರದಿಂದ ಪ್ರಾರಂಭಗೊಂಡು ಜುಲೈ 20 ಗುರುವಾರದವರೆಗೆ ನಡೆಯಲಿದೆ. ಮಳೆಗಾಲದ ಹೊಚ್ಚ ಹೊಸ ಸಂಗ್ರಹದೊಂದಿಗೆ ಅತ್ಯಾಕರ್ಷಕ ವಿನ್ಯಾಸಗಳ ವಿನೂತನ ವಸ್ತ್ರಗಳನ್ನು ತರಿಸಲಾಗಿದ್ದು, ಗ್ರಾಹಕರು ಎಂದಿನಂತೆ ಸಹಕರಿಸಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಳಿಗಾಗಿ 9449302183 ಸಂಖ್ಯೆಯನ್ನು ಸಂಪರ್ಕಿಸಬಹುದು.

ಇಂದಿನಿಂದ ಕಡಬದ ನವದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಮಾನ್ಸೂನ್ ಡಿಸ್ಕೌಂಟ್ ಸೇಲ್ Read More »

ಕರಾವಳಿ

ಬಸ್ – ಕಾರು ಢಿಕ್ಕಿ: ಮಹಿಳೆ ಮೃತ್ಯು, ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ರಾಯಚೂರು, ಜು.10. ಬಸ್ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಬಸ್ ಪಲ್ಟಿಯಾದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ರಾಯಚೂರಿನ ಸಾತ್ ಮೈಲ್ ಬಳಿ ನಡೆದಿದೆ. ರಾಯಚೂರಿನಿಂದ ಗುಲ್ಬರ್ಗಾಕ್ಕೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗೆ ಎದುರಿನಿಂದ ತೆರಳುತ್ತಿದ್ದ ಕಾರು ಅಡ್ಡಾದಿಡ್ಡಿಯಾಗಿ ಚಲಿಸಿದ ಪರಿಣಾಮ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಾರಿಗೆ ಬಸ್ ರಸ್ತೆಯ ಪಕ್ಕದ ಹೊಲದಲ್ಲಿ ಪಲ್ಟಿಯಾಗಿದೆ. ಈ ವೇಳೆ ಬಸ್‍ನಲ್ಲಿದ್ದ ಅಮೃತಾ (25) ಮೃತಪಟ್ಟಿದ್ದು, 25 ಮಂದಿ

ಬಸ್ – ಕಾರು ಢಿಕ್ಕಿ: ಮಹಿಳೆ ಮೃತ್ಯು, ನಾಲ್ವರು ಗಂಭೀರ Read More »

ಕರ್ನಾಟಕ

ಕೋಮು ಭಂಗವುಂಟುಮಾಡುವವರಿಗೆ ಕಾದಿದೆ ಗಡಿಪಾರು ಶಿಕ್ಷೆ ► ಗೂಂಡಾ, ಕೋಕಾ ಕಾಯ್ದೆ ಹಾಕಲು ಸಿದ್ಧರಾಮಯ್ಯರಿಂದ ಸೂಚನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.10. ಕೋಮು ಸೌಹಾರ್ದತೆ ಹಾಳು ಮಾಡುವಂತಹ ಮತೀಯವಾದಿಗಳ ವಿರುದ್ಧ ಗೂಂಡಾ ಕಾಯ್ದೆ ಮತ್ತು ಕೋಕಾ ಕಾಯ್ದೆಯಡಿ ಕೇಸು ದಾಖಲಿಸಿ ಗಡಿಪಾರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸೋಮವಾರ ನಗರದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಪರಿಶೀಲನಾ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರಲ್ಲಿ ಮತೀಯ ಭಾವನೆ ಕೆರಳಿಸಿ ಶಾಂತಿಗೆ ಭಂಗ ಉಂಟುಮಾಡುವವರು ಯಾರೇ ಆದರೂ, ಅವರು ಯಾವುದೇ ಸಂಘಟನೆಗೆ ಸೇರಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ

ಕೋಮು ಭಂಗವುಂಟುಮಾಡುವವರಿಗೆ ಕಾದಿದೆ ಗಡಿಪಾರು ಶಿಕ್ಷೆ ► ಗೂಂಡಾ, ಕೋಕಾ ಕಾಯ್ದೆ ಹಾಕಲು ಸಿದ್ಧರಾಮಯ್ಯರಿಂದ ಸೂಚನೆ Read More »

ಕರ್ನಾಟಕ

ಅನಾರೋಗ್ಯದಿಂದಿದ್ದ ಕಡಬದ ಮಹಿಳೆ ವಿದೇಶದಲ್ಲಿ ಮೃತ್ಯು ► ಬಹ್ರೇನ್‌ನ ಸಲ್ಮಾನಿಯಾ ಆಸ್ಪತ್ರೆಯಿಂದ ಮೃತದೇಹ ನಾಳೆ ಹುಟ್ಟೂರಿಗೆ…

(ನ್ಯೂಸ್ ಕಡಬ) newskadaba.com ಕಡಬ, ಜು.10. ಇಲ್ಲಿಗೆ ಸಮೀಪದ ಮರ್ಧಾಳ ಪಾಲೆತ್ತಡ್ಕ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಎಂಬವರ ಪತ್ನಿ ಸಮೀರಾ (24) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ ಬಹರೈನಿನ ಸಲ್ಮಾನಿಯ ಆಸ್ಪತ್ರೆಯಲ್ಲಿ ಸೋಮವಾರದಂದು ಮೃತಪಟ್ಟಿದ್ದಾರೆ‌. ವರ್ಷದ ಹಿಂದೆ ಮದುವೆಯಾಗಿ ತನ್ನ ಗಂಡನೊಂದಿಗೆ ಬಹ್ರೇನ್ ಗೆ ತೆರಳಿದ್ದ ಸೆಮೀರಾ, ಜಾಂಡೀಸ್ ಕಾಯಿಲೆಗೆ ತುತ್ತಾಗಿ ಸುಮಾರು ದಿನಗಳ ಹಿಂದೆ ಭಾರತಕ್ಕೆ ಮರಳುವ ಉದ್ದೇಶದಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರೆನ್ನಲಾಗಿದೆ. ವಿಮಾನಕ್ಕೆ‌ ಹತ್ತಲು 5 ನಿಮಿಷಗಳು ಬಾಕಿ ಇರುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದಾಗಿ ತಕ್ಷಣವೇ

ಅನಾರೋಗ್ಯದಿಂದಿದ್ದ ಕಡಬದ ಮಹಿಳೆ ವಿದೇಶದಲ್ಲಿ ಮೃತ್ಯು ► ಬಹ್ರೇನ್‌ನ ಸಲ್ಮಾನಿಯಾ ಆಸ್ಪತ್ರೆಯಿಂದ ಮೃತದೇಹ ನಾಳೆ ಹುಟ್ಟೂರಿಗೆ… Read More »

ಅಂತರ್ರಾಷ್ಟ್ರೀಯ ನ್ಯೂಸ್

ಅಪಘಾತದ ಗಾಯಾಳು ಮುಸಲ್ಮಾನರನ್ನು ಆಸ್ಪತ್ರೆಗೆ ದಾಖಲಿಸಿದ ಹಿಂಜಾವೇ ಅಧ್ಯಕ್ಷ ► ಕರಾವಳಿಯ ಕೋಮು ಸಂಘರ್ಷದ ಮಧ್ಯೆಯೂ ಮಾನವೀಯತೆ ಜೀವಂತ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.10. ಕರಾವಳಿಯು ಕಳೆದ ಒಂದು ತಿಂಗಳಿನಿಂದ ಕೋಮು ದಳ್ಳುರಿಯಿಂದ ಹೊತ್ತಿ ಉರಿಯುತ್ತಿದ್ದು, ಕೋಮು ಸಂಘರ್ಷಕ್ಕೆ ಎರಡು ಹೆಣಗಳು ಉರುಳಿವೆ. ಎರಡೂ ಧರ್ಮಗಳ ನಡುವೆ ಸರಿಪಡಿಸಲಾಗದಷ್ಟು ದೊಡ್ಡ ಕಂದಕ ನಿರ್ಮಾಣವಾಗಿದೆ. ದಿನಂಪ್ರತಿ ಕೋಮು ಪ್ರಚೋದಿತ ಹಿಂಸಾಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ಬರುವ ವರದಿಗಳು ಜಿಲ್ಲೆಯ ಶಾಂತಿಪ್ರಿಯ ನಾಗರೀಕರನ್ನು ಆತಂಕಕ್ಕೀಡುಮಾಡಿದೆ. ಇವೆಲ್ಲದರ ಮಧ್ಯೆ 5 ದಿನಗಳ ಹಿಂದೆ ಪುತ್ತೂರಿನ ಅರಿಯಡ್ಕದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಗಾಯಾಳು ಯುವಕರನ್ನು ಹಿಂದೂ ಸಂಘಟನೆಯ ಪ್ರಮುಖರೊಬ್ಬರು ಆಸ್ಪತ್ರೆಗೆ

ಅಪಘಾತದ ಗಾಯಾಳು ಮುಸಲ್ಮಾನರನ್ನು ಆಸ್ಪತ್ರೆಗೆ ದಾಖಲಿಸಿದ ಹಿಂಜಾವೇ ಅಧ್ಯಕ್ಷ ► ಕರಾವಳಿಯ ಕೋಮು ಸಂಘರ್ಷದ ಮಧ್ಯೆಯೂ ಮಾನವೀಯತೆ ಜೀವಂತ Read More »

ಕರಾವಳಿ
Scroll to Top