ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಚಿಲಂಪಾಡಿ ಚರ್ಚಿನಲ್ಲಿ ಮತ್ತೆ ಕಳ್ಳತನಕ್ಕೆ ವಿಫಲ ಯತ್ನ ► ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಯ್ತು ಕಳ್ಳರ ಫೋಟೊ – News Kadaba

ಇಚಿಲಂಪಾಡಿ ಚರ್ಚಿನಲ್ಲಿ ಮತ್ತೆ ಕಳ್ಳತನಕ್ಕೆ ವಿಫಲ ಯತ್ನ ► ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಯ್ತು ಕಳ್ಳರ ಫೋಟೊ

(ನ್ಯೂಸ್ ಕಡಬ) newskadaba.com ಕಡಬ,ಜು.11. ಠಾಣಾ ವ್ಯಾಪ್ತಿಯ ಇಚಿಲಂಪಾಡಿ ಸೈಂಟ್ ಜಾರ್ಜ್ ಸಿರಿಯನ್ ಜಾಕೋಬೈಟ್ ಚರ್ಚಿಗೆ ನುಗಿರುವ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಭಾನುವಾರದಂದು ರಾತ್ರಿ ಸಮಯದಲ್ಲಿ ಚರ್ಚಿಗೆ ಮುಂಭಾಗದಲ್ಲಿ ಬೈಕ್ ನಿಲ್ಲಿಸಿ ಇಬ್ಬರು ಯುವಕರು ಚರ್ಚಿಗೆ ಆಗಮಿಸಿ ಕಳ್ಳತನಕ್ಕೆ ಯತ್ನಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಘಟನೆ ಸೋಮವಾರದಂದು ಬೆಳಕಿಗೆ ಬಂದಿದ್ದು, ಮಂಗಳವಾರದಂದು ಕಡಬ ಠಾಣೆಗೆ ದೂರು ನೀಡಲಾಗಿದೆ. ಕಳೆದ ಜೂ. 15ರಂದು ಇದೇ ಚರ್ಚಿಗೆ ನುಗ್ಗಿದ್ದ ಕಳ್ಳರು ಚರ್ಚಿನ ಶಿಲುಬೆ ಗೋಪುರದ ಬೀಗ ಒಡೆದು ಕಾಣಿಕೆ ಹುಂಡಿಯಲ್ಲಿದ್ದ ಚಿಲ್ಲರೆ ಹಣವನ್ನು ದೋಚಿದ್ದರು. ಇದೀಗ ರಾತ್ರಿ ಸಮಯದಲ್ಲಿ ಬಂದ ಯುವಕರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll to Top