News Kadaba Desk

ಕಡಬದ ಶೆರ್ಲಿ ಮನೋಜ್ ಜೇಸಿ ವಲಯ ತರಬೇತುದಾರರಾಗಿ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜು.27. ಇತ್ತೀಚೆಗೆ ಜೇಸಿಐ ಇಂಡಿಯಾವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಸಿದ ವಲಯ ತರಬೇತುದಾರರ ಕಮ್ಮಟದಲ್ಲಿ ಜೇಸಿಐ ಉಡುಪಿ-ಇಂದ್ರಾಳಿಯ ಅಧ್ಯಕ್ಷೆ, ಮಣಿಪಾಲದ ಶೆಫಿನ್ಸ್‌ ಸಮೂಹದ ಸಹ ನಿರ್ದೇಶಕಿ, ಕಡಬ ಇಚಿಲಂಪಾಡಿಯ ಥಾಮಸ್ ರವರ ಪುತ್ರಿ ಶ್ರೀಮತಿ ಶೆರ್ಲಿ ಮನೋಜ್ ರವರು ವಲಯ ತರಬೇತುದಾರರಾಗಿ ಮೂಡಿ ಬಂದಿದ್ದಾರೆ. ಇವರು ಮೂಲತಃ ಕಡಬದ ಕಳಾರ ನಿವಾಸಿ ಮನೋಜ್ ಪಿ.ಯಂ.ರವನ್ನು ವರಿಸಿ ಸುಮಾರು 29 ವರ್ಷಗಳಿಂದ ಉಡುಪಿಯ ಮಣಿಪಾಲದಲ್ಲಿ ನೆಲೆಸಿರುತ್ತಾರೆ. ಪ್ರಸಕ್ತ ಜೇಸಿಯ ವಲಯಾಧಿಕಾರಿಯಾಗಿರುವ ಇವರು ಉಡುಪಿ ಪರಿಸರದಲ್ಲಿ ಮತ್ತು ಜೇಸಿ […]

ಕಡಬದ ಶೆರ್ಲಿ ಮನೋಜ್ ಜೇಸಿ ವಲಯ ತರಬೇತುದಾರರಾಗಿ ಆಯ್ಕೆ Read More »

ಕರ್ನಾಟಕ

ಆಧಾರ್ ಕಾರ್ಡಿನ ವೆಬ್‍ಸೈಟಿಗೆ ಕನ್ನ ► ಕೋಟ್ಯಂತರ ಜನರ ಗೌಪ್ಯ ಮಾಹಿತಿ ಸೋರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.27. ಆಧಾರ್ ಕಾರ್ಡ್ ಬಗ್ಗೆ ಕೆಲವು ದಿನಗಳಿಂದ ಸುಪ್ರೀಂಕೋರ್ಟ್ ನಲ್ಲಿ ವಾದ-ಪ್ರತಿವಾದ ನಡೆಯುತ್ತಿರುವ ಬೆನ್ನಲ್ಲೇ, ಆಧಾರ್ ವೆಬ್‍ಸೈಟ್ uidai.gov.in ನ್ನು ಬೆಂಗಳೂರಿನ ಕಂಪೆನಿಯೊಂದು ಹ್ಯಾಕ್ ಮಾಡಿದೆ ಎನ್ನುವ ಆಘಾತಕಾರಿ ವಿಷಯ ಗುರುವಾರ ಸಂಜೆ ತಿಳಿದುಬಂದಿದೆ. ಇ-ಕೆವೈಸಿ ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಬೆಂಗಳೂರಿನ ಕ್ವರ್ಥ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿಯು ಆಧಾರ್‍ನ ಅಧಿಕೃತ ವೆಬ್‍ಸೈಟ್ uidai.gov.in ನ್ನು ಹ್ಯಾಕ್ ಮಾಡಿ ಗೌಪ್ಯ ಮಾಹಿತಿಯನ್ನ ಕಲೆಹಾಕಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಆಧಾರ್

ಆಧಾರ್ ಕಾರ್ಡಿನ ವೆಬ್‍ಸೈಟಿಗೆ ಕನ್ನ ► ಕೋಟ್ಯಂತರ ಜನರ ಗೌಪ್ಯ ಮಾಹಿತಿ ಸೋರಿಕೆ Read More »

ರಾಷ್ಟ್ರೀಯ ನ್ಯೂಸ್

ಬೈಕ್ – ಲಾರಿ ಢಿಕ್ಕಿ: ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 27. ಬೈಕ್ ಹಾಗೂ ಕಂಟೈನರ್ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಗರದ ನಂತೂರ್ ಜಂಕ್ಷನ್‍ನಲ್ಲಿ ಗುರುವಾರ ಸಂಜೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು, ಮಂಗಳೂರಿನಲ್ಲಿ ಸಹಕಾರ ಇಲಾಖೆಯಲ್ಲಿ ಆಡಿಟರ್ ಆಗಿ ಕೆಲಸ ನಿರ್ವಹಿಸುತ್ತಿರುವ  ಮಹೇಶ್ವರಪ್ಪ ಎಂಬವರ ಏಕೈಕ ಪುತ್ರಿ ನಗರದ ಪ.ಪೂ.ಕಾಲೇಜೊಂದರ ದ್ವಿತೀಯ ವರ್ಷದ ವಿದ್ಯಾರ್ಥಿನಿ ಬಿಂದು (18) ಎಂದು ಗುರುತಿಸಲಾಗಿದೆ. ಈ ಕೆ ತನ್ನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಂಟೈನರ್ ಲಾರಿ ಢಿಕ್ಕಿ ಹೊಡೆದಿದ್ದು, ಬಿಂದು ತೀವ್ರ

ಬೈಕ್ – ಲಾರಿ ಢಿಕ್ಕಿ: ವಿದ್ಯಾರ್ಥಿನಿ ಮೃತ್ಯು Read More »

ಕರಾವಳಿ

ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆಯ ಸುತ್ತ ಸಂಶಯದ ಹುತ್ತ ► ಕಾವ್ಯಳನ್ನು ಕೊಲೆ ಮಾಡಲಾಗಿದೆಯೆಂದು ಆರೋಪಿಸಿದ ಪೋಷಕರು

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಜು.27. ನ್ಯಾಶನಲ್ ಲೆವಲ್ ಬ್ಯಾಡ್ಮಿಂಟನ್ ಚಾಂಪಿಯನ್ ವಿದ್ಯಾರ್ಥಿನಿಯೊಬ್ಬಳು ವಾರದ ಹಿಂದೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಹೊಸ ತಿರುವನ್ನು ಪಡೆದುಕೊಂಡಿದೆ. ಇದು ಆತ್ಮಹತ್ಯೆಯಲ್ಲ ಇದು ಒಂದು ಕೊಲೆ ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದಾರೆ. ಮೂಡಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯಾಗಿದ್ದ ಕಾವ್ಯ(15) ಜುಲೈ 20ರಂದು ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಳೆ ಎಂದು ಶಾಲೆಯಿಂದ ಮನೆಯವರಿಗೆ ತಿಳಿಸಲಾಗಿತ್ತು. ಆದರೆ ಹೆತ್ತವರು ಅಲ್ಲಿಗೆ ತೆರಳುವಷ್ಟರಲ್ಲಿ ವಿದ್ಯಾರ್ಥಿನಿಯ ಶವವನ್ನು ಆಳ್ವಾಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಇದೀಗ ಹೆತ್ತವರು ಕಾವ್ಯ

ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆಯ ಸುತ್ತ ಸಂಶಯದ ಹುತ್ತ ► ಕಾವ್ಯಳನ್ನು ಕೊಲೆ ಮಾಡಲಾಗಿದೆಯೆಂದು ಆರೋಪಿಸಿದ ಪೋಷಕರು Read More »

ಕರಾವಳಿ

ಕೋಡಿಂಬಾಳ: ಮರ ಬಿದ್ದು ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಜು.27. ಇಲ್ಲಿಗೆ ಸಮೀಪದ ಕೋಡಿಂಬಾಳ ಎಂಬಲ್ಲಿ ಮನೆಯ ಮೇಲೆ ಮರವೊಂದು ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಹಾನಿಯಾದ ಘಟನೆ ಗುರುವಾರದಂದು ನಡೆದಿದೆ. ಕೋಡಿಂಬಾಳ ಪೆಲತ್ತೋಡಿ ನಿವಾಸಿ ಭವಾನಿ ಎಂಬವರ ಮನೆಯ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಗೇರು ಮರ ಬಿದ್ದ ಪರಿಣಾಮ ಮೇಲ್ಚಾವಣಿ ಕುಸಿದಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಅಪಾರ ನಷ್ಟವುಂಟಾಗಿದೆ ಎಂದು ತಿಳಿದುಬಂದಿದೆ.

ಕೋಡಿಂಬಾಳ: ಮರ ಬಿದ್ದು ಮನೆಗೆ ಹಾನಿ Read More »

ಕರಾವಳಿ

ಕೊಣಾಜೆಗೆ ತೆರಳುವ ಸರಕಾರಿ ಬಸ್ಸು ಹಠಾತ್ ಸಂಚಾರ ಸ್ಥಗಿತ ► ವಿದ್ಯಾರ್ಥಿಗಳಿಂದ ಸಂಚಾರ ನಿಯಂತ್ರಕರ ಕೇಂದ್ರಕ್ಕೆ ಮುತ್ತಿಗೆ

(ನ್ಯೂಸ್ ಕಡಬ) newskadaba.com ಕಡಬ, ಜು.27. ಕಡಬದಿಂದ ಕೊಣಾಜೆಗೆ ತೆರಳುವ ಸರಕಾರಿ ಬಸ್ಸನ್ನು ಸ್ಥಗಿತಗೊಳಿಸಿ ಹಠಾತ್ತನೆ ಪುತ್ತೂರಿಗೆ ಕಳುಹಿಸಿದರ ಪರಿಣಾಮ ವಿದ್ಯಾರ್ಥಿಗಳು ವಾಹನ ಸೌಕರ್ಯವಿಲ್ಲದೆ ಕಂಗೆಟ್ಟು ಕೆಎಸ್ಸಾರ್ಟಿಸಿ ಸಂಚಾರ ನಿಯಂತ್ರಕರ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಘಟನೆ ಗುರುವಾರ ಸಂಜೆ ನಡೆಯಿತು. ನಾಗರ ಪಂಚಮಿ ಆದುದರಿಂದ ಶಾಲೆಗಳಿಗೆ ರಜೆಯಿರಬಹುದೆಂದು ಭಾವಿಸಿ ಸುಬ್ರಹ್ಮಣ್ಯದಿಂದ ಕಡಬಕ್ಕೆ ಆಗಮಿಸಿ ಕೊಣಾಜೆಗೆ ತೆರಳಬೇಕಿದ್ದ ಬಸ್ಸಿನ ಚಾಲಕ – ನಿರ್ವಾಹಕರು ನೇರವಾಗಿ ಪುತ್ತೂರಿಗೆ ತೆರಳುವ ಪ್ರಯಾಣಿಕರಿಗೆ ಟಿಕೆಟ್ ನೀಡಿದ್ದರು. ಹಠಾತ್ತನೆ ಬಸ್ ಸ್ಥಗಿತಗೊಳಿಸಿದ್ದರಿಂದಾಗಿ ಆತಂಕಗೊಂಡ ವಿದ್ಯಾರ್ಥಿಗಳು

ಕೊಣಾಜೆಗೆ ತೆರಳುವ ಸರಕಾರಿ ಬಸ್ಸು ಹಠಾತ್ ಸಂಚಾರ ಸ್ಥಗಿತ ► ವಿದ್ಯಾರ್ಥಿಗಳಿಂದ ಸಂಚಾರ ನಿಯಂತ್ರಕರ ಕೇಂದ್ರಕ್ಕೆ ಮುತ್ತಿಗೆ Read More »

ಕರಾವಳಿ

ಕಡಬ: ಬಾಲಕಿಗೆ ಲೈಂಗಿಕ ಕಿರುಕುಳ ► ಫೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.27. ಠಾಣಾ ವ್ಯಾಪ್ತಿಯ ಮರ್ಧಾಳ ಎಂಬಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿಯನ್ನು ಕಡಬ ಪೊಲೀಸರು ಫೋಕ್ಸೋ ಕಾಯ್ದೆಯಡಿ ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಆರೋಪಿಯನ್ನು 102ನೇ ನೆಕ್ಕಿಲಾಡಿ ಗ್ರಾಮದ ಸಾಲೆತ್ತಡ್ಕ ನಿವಾಸಿ ಅಂದ್ರು ಎಂಬವರ ಪುತ್ರ ಯಶು ಯಾನೆ ಯಶೋಧರ ಎಂದು ಗುರುತಿಸಲಾಗಿದ್ದು, ಈತ ಎಪ್ರಿಲ್ ತಿಂಗಳಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದನೆನ್ನಲಾಗಿದೆ‌. ಪ್ರಸಕ್ತ ವರ್ಷದಲ್ಲಿ ಶಾಲೆಗೆ ತೆರಳಿದ ವಿದ್ಯಾರ್ಥಿನಿ ಮಂಕಾಗಿರುವುದನ್ನು ಕಂಡು ವಿಚಾರಿಸಿದ ಶಿಕ್ಷಕಿ

ಕಡಬ: ಬಾಲಕಿಗೆ ಲೈಂಗಿಕ ಕಿರುಕುಳ ► ಫೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ Read More »

ಕರಾವಳಿ

ಸುಳ್ಯ: ವ್ಯಕ್ತಿಯ ಕಲ್ಲಿನಿಂದ ಜಜ್ಜಿ ಕೊಲೆ

(ನ್ಯೂಸ್ ಕಡಬ) newskadaba.com ಸುಳ್ಯ, ಜು.27. ಅಪರಿಚಿತ ವ್ಯಕ್ತಿಯೋರ್ವರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಗೈದ ಘಟನೆ ಗುರುವಾರದಂದು ಬೆಳಕಿಗೆ ಬಂದಿದೆ. ಸುಳ್ಯದ ಪಾಲುಬಿದ್ದ ಕಟ್ಟಡವೊಂದರಲ್ಲಿ ಮಲಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದ ಸ್ಥಿತಿಯಲ್ಲಿ ಕಂಡು ಬಂದಿದೆ. ಬುಧವಾರ ರಾತ್ರಿ ಮಲಗಿದ್ದಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಗೈದಿರಬಹುದೆಂದು ಶಂಕಿಸಲಾಗಿದೆ. ಸ್ಥಳದಲ್ಲಿ ನೀರಿನ ಬಾಟಲ್ ಹಾಗೂ ತಿನ್ನಲೆಂದು ಬೇಕರಿಯಿಂದ ತಂದಿದ್ದ ಶ್ಯಾವಿಗೆಯ ಪ್ಯಾಕೆಟನ್ನು ತೆರೆದ ಸ್ಥಿತಿಯಲ್ಲಿ ಇಡಲಾಗಿದ್ದು, ಯಾವ ಉದ್ದೇಶಕ್ಕಾಗಿ ಕೊಲೆಗೈಯಲಾಗಿದೆ ಎನ್ನುವುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ

ಸುಳ್ಯ: ವ್ಯಕ್ತಿಯ ಕಲ್ಲಿನಿಂದ ಜಜ್ಜಿ ಕೊಲೆ Read More »

ಕರಾವಳಿ

ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.27. ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ ಕೆಲ ದಿನಗಳ ಅನಾರೋಗ್ಯದಿಂದಾಗಿ ಹೃದಯಾಘಾತದಿಂದಾಗಿ ಗುರುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಗ್ರಾಮವೊಂದರಲ್ಲಿ 1936 ಡಿಸೆಂಬರ್ 25 ರಂದು ಜನಿಸಿದ್ದ ಇವರು ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ನಗರದ ವಿಕ್ರಮ್‌ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸಿತ್ತು. ಆದರೆ ಮತ್ತೆ ಆರೋಗ್ಯ ಹದಗೆಟ್ಟ

ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ವಿಧಿವಶ Read More »

ಕರ್ನಾಟಕ

ನಾಗರ ಪಂಚಮಿ ಹಬ್ಬದ ಮಹತ್ವ

(ನ್ಯೂಸ್ ಕಡಬ) newskadaba.com ಧಾರ್ಮಿಕ, ಜು.27. ಶ್ರಾವಣದಲ್ಲಿ ಬರುವ ಹಬ್ಬಗಳಿಗೆ ಮುನ್ನುಡಿ ಬರೆಯುವಂತಹ ವಿಶೇಷ ಹಬ್ಬ ನಾಗರ ಪಂಚಮಿ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಗರಪಂಚಮಿ ಎಂದರೆ ಒಡ ಹುಟ್ಟಿದವರ ಹಬ್ಬ. ಹೆಣ್ಣು ಮಕ್ಕಳ ಹಬ್ಬ. ನಾಗಪ್ಪನಿಗೆ ಹಾಲು ಎರೆದು ಆಚರಿಸುವ ಹಬ್ಬವಾಗಿದೆ. ಈ ಹಬ್ಬಕ್ಕೆ ಗರುಡ ಪಂಚಮಿ ಎಂಬ ಹೆಸರು ಕೂಡ ಇದೆ. ನಾಗರ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ನಾಗರಕಲ್ಲಿಗೆ ಅಥವಾ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸಲಾಗುತ್ತದೆ.

ನಾಗರ ಪಂಚಮಿ ಹಬ್ಬದ ಮಹತ್ವ Read More »

ಕರಾವಳಿ
Scroll to Top