News Kadaba Desk

ಮೂರ್ತೆದಾರರ ಸಹಕಾರಿ ಸಂಘದಿಂದ ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಸಹಾಯಧನ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಆ.03. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಸಹಾಯಧನ ನೀಡಿ ಸಹಕರಿಸಲಾಯಿತು. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರರವರು ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ನಿರ್ದೇಶಕರಾದ ರೆ|ಫಾ| ಆ್ಯಂಟನಿ ಒಐಸಿಯವರಿಗೆ ಸಹಾಯಧನ ಹಸ್ತಾಂತರಿಸಿ ಮಾತನಾಡಿ, ಹಣಕಾಸು ಸಂಸ್ಥೆಗಳು, ಸಹಕಾರಿ ಸಂಘಗಳು, ಉದ್ಯಮಿಗಳು ನಿಜವಾಗಿ ಸಹಕರಿಸಬೇಕಾದ ದೇವರ ಮಕ್ಕಳು ಇರುವ ಈ ಶಾಲೆಗೆ ಅತೀ ಅಗತ್ಯವಾಗಿದೆ. ಇಲ್ಲಿ ಅದೆಷ್ಟೋ ವಿವಿಧ […]

ಮೂರ್ತೆದಾರರ ಸಹಕಾರಿ ಸಂಘದಿಂದ ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಸಹಾಯಧನ ಹಸ್ತಾಂತರ Read More »

ಕರಾವಳಿ

ನೂಜಿಬಾಳ್ತಿಲ ಗ್ರಾ.ಪಂ. PDO ಅರಂತೋಡಿಗೆ ವರ್ಗಾವಣೆ

(ನ್ಯೂಸ್ ಕಡಬ) newskadaba.com ಕಡಬ, ಆ.03. ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಕಳೆದ ಮೂರು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಜಯಪ್ರಕಾಶ್ ರವರಿಗೆ ವರ್ಗಾವಣೆಯಾಗಿದ್ದು ನೂಜಿಬಾಳ್ತಿಲ ಪಂಚಾಯತಿಗೆ ಕಡಬ ಗ್ರಾ.ಪಂ.ನಲ್ಲಿ ಕಾರ್ಯದರ್ಶಿಯಾಗಿರುವ ಆನಂದ ಎ.ರವರನ್ನು ಪ್ರಭಾರ ಅಭಿವೃದ್ದಿ ಅಧಿಕಾರಿಯಾಗಿ ನೇಮಕಗೊಳಿಸಲಾಗಿದೆ. ಕಳೆದ 3 ವರ್ಷದಿಂದ ನೂಜಿಬಾಳ್ತಿಲದಲ್ಲಿ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಪ್ರಕಾಶ್ ಎಂ.ರವರು ಸುಳ್ಯ ತಾಲೂಕಿನ ಆರಂತೋಡು ಪಂಚಾಯತಿಗೆ ವರ್ಗಾವಣೆಗೊಂಡಿದ್ದಾರೆ. ಬುಧವಾರದಂದು ಗ್ರಾ.ಪಂ.ನಲ್ಲಿ ಪ್ರಭಾರ ಅಭಿವೃದ್ದಿ ಅಧಿಕಾರಿಯವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.  

ನೂಜಿಬಾಳ್ತಿಲ ಗ್ರಾ.ಪಂ. PDO ಅರಂತೋಡಿಗೆ ವರ್ಗಾವಣೆ Read More »

ಕರಾವಳಿ

ಎಪಿಎಂಸಿ ನಾಮನಿರ್ದೇಶಿತ ಸದಸ್ಯರಾಗಿ ರಾಮಕೃಷ್ಣ ಹೊಳ್ಳಾರ್ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಆ.03. ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಾಮನಿರ್ದೇಶಿತ ಸದಸ್ಯರಾಗಿ ಕಡಬ ಪಣೆಮಜಲು ಮನೆತನದ, ಕೊಂಬಾರು ಹೊಳ್ಳಾರು ರಾಮಕೃಷ್ಣ ಹೊಳ್ಳಾರ್ ನೇಮಕಗೊಂಡಿದ್ದಾರೆ. ಪುತ್ತೂರು ಶಾಸಕಿ, ರಾಜ್ಯ ಸರ್ಕಾರದ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಈ ನೇಮಕ ಮಾಡಿದೆ. ರಾಮಕೃಷ್ಣ ಹೊಳ್ಳಾರುರವರು ಮೆಸ್ಕಾಂ ಕಡಬ ಶಾಖಾ ಸಲಹಾ ಸಮಿತಿ ಸದಸ್ಯರಾಗಿ, ಕೆಂಜಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ, ಕೊಂಬಾರು ಮುಗೇರಡ್ಕ ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ

ಎಪಿಎಂಸಿ ನಾಮನಿರ್ದೇಶಿತ ಸದಸ್ಯರಾಗಿ ರಾಮಕೃಷ್ಣ ಹೊಳ್ಳಾರ್ ನೇಮಕ Read More »

ಕರಾವಳಿ

ಬಿಜೆಪಿಯ ಸೇಡಿನ ರಾಜಕೀಯದಿಂದ ಡಿಕೆಶಿ ಮೇಲೆ ಐಟಿ ದಾಳಿ ► ನಾಳೆ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಆ.03. ಸಚಿವ ಡಿ.ಕೆ.ಶಿವಕುಮಾರ್ ಮನೆ ಹಾಗೂ ಕಚೇರಿಯ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ಖಂಡಿಸಿ ಆ.04 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಡಬ ವಿಶೇಷ ತಹಶೀಲ್ದಾರ್ ರವರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ ಹಾಗೂ ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸೇಡಿನ ರಾಜಕೀಯಕ್ಕಾಗಿ ಕಾನೂನನ್ನು ಗಾಳಿಗೆ ತೂರಿ ಆದಾಯ ತೆರಿಗೆ

ಬಿಜೆಪಿಯ ಸೇಡಿನ ರಾಜಕೀಯದಿಂದ ಡಿಕೆಶಿ ಮೇಲೆ ಐಟಿ ದಾಳಿ ► ನಾಳೆ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ Read More »

ಕರಾವಳಿ

ಕಡಬ: ತೀವ್ರ ತರದ ಜ್ವರಕ್ಕೆ ಮಹಿಳೆ ಬಲಿ

(ನ್ಯೂಸ್ ಕಡಬ) newskadaba.com ಕಡಬ, ಆ.03. ಕಡಬ ಗ್ರಾಮದ ಪಿಜಕ್ಕಳ ಲಕ್ಷ್ಮೀನಾರಾಯಣ ಆಚಾರಿ ಎಂಬವರ ಪತ್ನಿ ಪಿಜಕ್ಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಸುಗುಣ(35) ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಕಳೆದೊಂದು ವಾರದಿಂದ ತೀವ್ರ ತರದ ಜ್ವರದಿಂದ ಬಳಲುತ್ತಿದ್ದ ಸುಗುಣರವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರದಂದು ಮೃತರಾಗಿದ್ದಾರೆ. ಇವರು ಪತಿ ಲಕ್ಷ್ಮೀ ನಾರಾಯಣ, ಪುತ್ರ ರೀತೇಶ್ ಹಾಗೂ ಪುತ್ರಿ ಜ್ಯೋತಿಕಾರನ್ನು ಅಗಲಿದ್ದಾರೆ.

ಕಡಬ: ತೀವ್ರ ತರದ ಜ್ವರಕ್ಕೆ ಮಹಿಳೆ ಬಲಿ Read More »

ಕರಾವಳಿ

ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪನ್ ಕೈಕಂಬಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಆ.03. ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪನ್ ವಿಸ್ತಾರಕರಾಗಿ ಕಡಬ ಶಕ್ತಿ ಕೇಂದ್ರದ ಕೈಕಂಬ ಬೂತ್ ಸಮಿತಿಗೆ ಇತ್ತೀಚೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಡಬ ಶಕ್ತಿ ಕೇಂದ್ರ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಬಿಳಿನೆಲೆ ತಾ.ಪಂ.ಮಾಜಿ ಸದಸ್ಯೆ ಸರೋಜಿನಿ ಜಯಪ್ರಕಾಶ್, ಕಡಬ ಶಕ್ತಿ ಕೇಂದ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ್ ವಾಲ್ತಾಜೆ, ಬಿಳಿನೆಲೆ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರಘು ಚೆಂಡೆಹಿತ್ಲು, ಬಿಳಿನೆಲೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಗೌಡ ವಿ.,

ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪನ್ ಕೈಕಂಬಕ್ಕೆ ಭೇಟಿ Read More »

ಕರಾವಳಿ

ಕಡಬ ತಾಲೂಕು ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ► ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯ ಒಕ್ಕೂಟ ಜನಜಾಗೃತಿ ವೇದಿಕೆಯಲ್ಲಿ ಒಮ್ಮತದ ತೀರ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಆ.02. ಬಿಳಿನೆಲೆ ಗ್ರಾಮದಲ್ಲಿ ಮಾತ್ರವಲ್ಲದೆ ಇಡೀ ಕಡಬ ತಾಲೂಕು ವ್ಯಾಪ್ತಿಯಲ್ಲಿ ಮದ್ಯದಂಗಡಿ, ಬಾರ್ & ರೆಸ್ಟೋರೇಂಟ್, ರೆಸಾರ್ಟ್ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀಕ್ಷೇ.ಧ.ಗ್ರಾ.ಯೋಜನೆಯ ಬಿಳಿನೆಲೆ ವಲಯ ಒಕ್ಕೂಟ, ಬಿಳಿನೆಲೆ ಜನಜಾಗೃತಿ ವತಿಯಿಂದ ಆ.1 ರಂದು ಬಿಳಿನೆಲೆ ಶ್ರಿ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಬಿಳಿನೆಲೆ, ಕೊಂಬಾರು, ಕೈಕಂಬ, ಐತ್ತೂರು, ಒಕ್ಕೂಟ ಹಾಗೂ ವಲಯ ಜನಜಾಗೃತಿ ಸಮಿತಿ ವತಿಯಿಂದ ತೀರ್ಮಾನಿಸಿದ್ದಲ್ಲದೆ ಈ ಬಗ್ಗೆ ಬಿಳಿನೆಲೆ ಗ್ರಾ.ಪಂ.ಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಘಟನೆ ನಡೆಯಿತು. ಮನವಿ

ಕಡಬ ತಾಲೂಕು ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ► ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯ ಒಕ್ಕೂಟ ಜನಜಾಗೃತಿ ವೇದಿಕೆಯಲ್ಲಿ ಒಮ್ಮತದ ತೀರ್ಮಾನ Read More »

ಕರಾವಳಿ

ಮರ್ದಾಳ: ವಿವಾಹಿತ ಮಹಿಳೆ ನಾಪತ್ತೆ ► ಕಡಬ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಆ.02. ಅಂಗಡಿಗೆ ಸಾಮಾನು ತರಲೆಂದು ಹೋದ ಮಹಿಳೆಯೊರ್ವಳು ನಾಪತ್ತೆಯಾಗಿರುವ ಘಟನೆ ಜು.29ರಂದು ನಡೆದಿದ್ದು. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಹಿಳೆಯನ್ನು ಕುಡಾಲ ನಿವಾಸಿ ಸಿ. ರವಿಚಂದ್ರನ್ ಎಂಬವರ ಪತ್ನಿ ಜ್ಯೋತಿ ಎಂದು ಗುರುತಿಸಲಾಗಿದೆ. ರವಿಚಂದ್ರನ್ ಪತ್ನಿ ಹಾಗೂ 2 ವರ್ಷದ ಮಗುವಿನೊಂದಿಗೆ ಕುಡಾಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು. ರವಿಚಂದ್ರನ್ ಅವರ ಅಕ್ಕ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದ ಕಾರಣ ಜು.24ರಿಂದ ಮಂಗಳೂರಿನ ಆಸ್ಪತ್ರೆಯಲ್ಲೇ ಇದ್ದು, ಜು.29ರಂದು ಸಂಜೆ ಮನೆಯ

ಮರ್ದಾಳ: ವಿವಾಹಿತ ಮಹಿಳೆ ನಾಪತ್ತೆ ► ಕಡಬ ಠಾಣೆಯಲ್ಲಿ ದೂರು ದಾಖಲು Read More »

ಕರಾವಳಿ

ಲಂಚದ ಆರೋಪ ಆಧಾರ ರಹಿತ ► ಬಿಳಿನೆಲೆ ಗ್ರಾ.ಪಂ ಅಧ್ಯಕ್ಷರ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಕಡಬ, ಆ.02. ಕಟ್ಟಡ ಪರವಾನಗಿ ನೀಡಲು ಲಂಚ ಕೇಳಿದ್ದಾರೆ ಎಂದು ಉದ್ಯಮಿ ಕೆ.ಟಿ. ತೋಮ್ಸನ್ ಮಾಡಿರುವ ಅರೋಪ ಆಧಾರ ರಹಿತವಾಗಿದ್ದು, ಈ ವಿಚಾರದಲ್ಲಿ ಯಾವುದೇ ಸತ್ಯ ಪ್ರಮಾಣಕ್ಕೆ ಸಿದ್ದ ಎಂದು ಬಿಳಿನೆಲೆ ಗ್ರಾ.ಪಂ ಅಧ್ಯಕ್ಷೆ ಶಾರದ ದಿನೇಶ್ ಹೇಳಿದರು. ಅವರು ಬುಧವಾರ ಕಡಬ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಪಂಚಾಯಿತಿ ಸದಸ್ಯಳಾಗಿ ಅಧ್ಯಕ್ಷಳಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪುರಕವಾಗಿ ಕೆಲಸ ಮಾಡುತ್ತಿದ್ದೆನೆ. ನಾನು ಉತ್ತಮ ರೀತಿಯಲ್ಲಿ ಸಮಾಜ ಸೇವೆ

ಲಂಚದ ಆರೋಪ ಆಧಾರ ರಹಿತ ► ಬಿಳಿನೆಲೆ ಗ್ರಾ.ಪಂ ಅಧ್ಯಕ್ಷರ ಸ್ಪಷ್ಟನೆ Read More »

ಕರಾವಳಿ

ನೆಲ್ಯಾಡಿ: ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.02. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೆ ನೆಲ್ಯಾಡಿಯಲ್ಲಿ ಮದ್ಯದಂಗಡಿಯೊಂದಕ್ಕೆ ಪರವಾನಿಗೆ ನೀಡಿರುವ ಅಬಕಾರಿ ಇಲಾಖೆಯ ವಿರುದ್ಧ ನೆಲ್ಯಾಡಿಯಲ್ಲಿಂದು ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನೆಲ್ಯಾಡಿ ವಲಯ, ನೆಲ್ಯಾಡಿ-ಕೌಕ್ರಾಡಿ ಗ್ರಾಮಗಳ ಎಲ್ಲ ಸ್ತ್ರೀ ಶಕ್ತಿ ಸ್ವಸಹಾಯ ಮಹಿಳಾ ಸಂಘಟನೆಗಳು ಮತ್ತು ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಸಂಘಟಿಸಲಾಗಿರುವ ಈ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಗ್ರಾಮಾಂತರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ 220 ಮೀಟರ್ ಅಂತರದಲ್ಲಿ ಕಾರ್ಯಾಚರಿಸುತ್ತಿರುವ ಮದ್ಯದಂಗಡಿಗಳನ್ನು

ನೆಲ್ಯಾಡಿ: ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ Read More »

ಕರಾವಳಿ
Scroll to Top