News Kadaba Desk

ಗುಂಡ್ಯ: ನಾಲ್ವರ ತಂಡದಿಂದ ಲಾರಿ ಚಾಲಕನಿಗೆ ಹಲ್ಲೆ ನಡೆಸಿ ದರೋಡೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.12. ಕಾರಿನಲ್ಲಿ ಬಂದ ನಾಲ್ವರ ತಂಡವೊಂದು ಲಾರಿ ಚಾಲಕನಿಗೆ ಹಲ್ಲೆ ನಡೆಸಿ ದರೋಡೆಗೈದ ಘಟನೆ ಗುರುವಾರ ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ  ಗುಂಡ್ಯ ಜಂಕ್ಷನ್ ನಿಂದ ನಾಲ್ಕು ಕಿ.ಮೀ. ಮುಂದಕ್ಕೆ ನಿರ್ಜನ ಪ್ರದೇಶದಲ್ಲಿ ನಡೆದಿದೆ. ತಂಡದಿಂದ ದರೋಡೆಗೊಳಗಾದವರನ್ನು ಕೆದಿಲ ಗ್ರಾಮದ ಪೇರಮೊಗರಿನ ಗಡಿಯಾರ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಅಬ್ದುಲ್ ರವೂಫ್ (26) ಎಂದು ಗುರುತಿಸಲಾಗಿದೆ. ಇವರಿಂದ ದರೋಡೆಕೋರರು ಸುಮಾರು 17 ಸಾವಿರ ರೂಪಾಯಿ ದರೋಡೆಗೈದಿದ್ದಾರೆ. […]

ಗುಂಡ್ಯ: ನಾಲ್ವರ ತಂಡದಿಂದ ಲಾರಿ ಚಾಲಕನಿಗೆ ಹಲ್ಲೆ ನಡೆಸಿ ದರೋಡೆ Read More »

ಕರಾವಳಿ

ಕೊಂಬಾರು: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.12. ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಠಾಣಾ ವ್ಯಾಪ್ತಿಯ ಕೊಂಬಾರು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಮೃತರನ್ನು ಶಿರಾಡಿ ಗ್ರಾಮದ ಕೊಂಬಾರು ನಿವಾಸಿ ಓ.ಜಿ. ಜೋನ್ (60) ಎಂದು ಗುರುತಿಸಲಾಗಿದೆ. ಎಂದಿನಂತೆ ಮನೆ ಬಳಿಯ ತೋಟಕ್ಕೆ ರಾತ್ರಿ 10 ಸುಮಾರಿಗೆ ನೀರು ಬಿಡಲು ಹೋಗಿದ್ದ ಇವರು ಅರ್ಧಗಂಟೆ ಕಳೆದರೂ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಸಂಶಯಗೊಂಡ ಮನೆಯವರು ಹುಡುಕಾಡಿದಾಗ ತೋಟದಲ್ಲಿರುವ ಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಕೈಯಲ್ಲಿದ್ದ ಟಾರ್ಚ್

ಕೊಂಬಾರು: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ

ವಿದ್ಯುತ್ ಬಿಲ್ ಕಟ್ಟದೆ ಸಂಪರ್ಕ ಕಡಿತಗೊಳಿಸಿದ್ದಕ್ಕಾಗಿ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ ► ಕಡಬ ಠಾಣೆಯೆದುರು ಜಮಾಯಿಸಿದ ಮೆಸ್ಕಾಂ ಲೈನ್ ಮ್ಯಾನ್ ಗಳು

(ನ್ಯೂಸ್ ಕಡಬ) newskadaba.com ಕಡಬ, ಜ.12. ವಿದ್ಯುತ್ ಬಿಲ್ ಬಾಕಿ ಇದ್ದುದಕ್ಕೆ ಸಂಪರ್ಕ ಕಡಿತಗೊಳಿಸಲು ತೆರಳಿದ್ದ ಮೆಸ್ಕಾಂ ಸಿಬ್ಬಂದಿಗೆ ವ್ಯಕ್ತಿಯೋರ್ವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಲೈನ್ ಮ್ಯಾನ್ ಗಳೆಲ್ಲ ಸೇರಿ ಕಡಬ ಪೊಲೀಸ್ ಠಾಣೆ ಬಳಿ ಜಮಾವಣೆಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕಡಬ ಸಮೀಪದ ರೆಂಜಿಲಾಡಿ ಗ್ರಾಮದ ಅಲಂಗಾಜೆ ತರ್ಪೇಲ್ ನಿವಾಸಿ ಟಿ.ವಿ.ಕುರಿಯನ್ ಎಂಬವರ ಮನೆಯ ವಿದ್ಯುತ್ ಬಿಲ್ 460 ರೂ. ಬಾಕಿ ಇದ್ದ ಕಾರಣ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಕಡಬ ರಮೇಶ್ ಪಾಟೀಲ್ ಎಂಬವರಿಗೆ ಕುರಿಯನ್

ವಿದ್ಯುತ್ ಬಿಲ್ ಕಟ್ಟದೆ ಸಂಪರ್ಕ ಕಡಿತಗೊಳಿಸಿದ್ದಕ್ಕಾಗಿ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ ► ಕಡಬ ಠಾಣೆಯೆದುರು ಜಮಾಯಿಸಿದ ಮೆಸ್ಕಾಂ ಲೈನ್ ಮ್ಯಾನ್ ಗಳು Read More »

ಕರಾವಳಿ

ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.12. ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಇಲ್ಲಿನ ಬಿಳಿಯೂರು ಎಂಬಲ್ಲಿ ಅಪರಿಚಿತ ಮಹಿಳೆಯ ಮೃತದೇಹವೊಂದು ಶುಕ್ರವಾರದಂದು ಪತ್ತೆಯಾಗಿದೆ. ಮೃತದೇಹವು ಕೊಳೆತಿದ್ದು, ಮೃತ ಮಹಿಳೆಗೆ ಸುಮಾರು 40 ರಿಂದ 42 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ಮೃತದೇಹದ ಬಳಿಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಸಾದದ ಚೀಲವೊಂದು ಪತ್ತೆಯಾಗಿದ್ದು, ಸುಬ್ರಹ್ಮಣ್ಯ ದೇವರ ದರ್ಶನ ಮಾಡಿ ತೆರಳಿರಬಹುದೆನ್ನಲಾಗಿದೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಅಥವಾ ಯಾರಾದರೂ ಕೊಲೆ ನಡೆಸಿ ಮೃತದೇಹವನ್ನು ನದಿ ತಟದಲ್ಲಿ ಹಾಕಿರಬಹುದಾ ಎನ್ನುವ ಬಗ್ಗೆ ಪೊಲೀಸ್

ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ Read More »

ಕರಾವಳಿ

ಸರಕಾರಿ ನೌಕರರಿಗೆ ರಾಜ್ಯ ಸರಕಾರದಿಂದ ಬಂಪರ್ ಗಿಫ್ಟ್ ► ವಾರದಲ್ಲಿ ಐದು ದಿನ ಕೆಲಸ, ಕನಿಷ್ಠ 16 ಸಾವಿರ – ಗರಿಷ್ಠ 1 ಲಕ್ಷ 32 ಸಾವಿರ ಸಂಬಳ ನಿಗದಿ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.12. ರಾಜ್ಯ ಸರಕಾರಿ ನೌಕರರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲು ಕೊನೆಗೂ ಸಿಎಂ ಸಿದ್ದರಾಮಯ್ಯ ಸರ್ಕಾರ ಸಿದ್ಧವಾಗಿದ್ದು, ಮುಂಬರುವ ಬಜೆಟ್ ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ ನೀಡುವುದು ಖಚಿತವಾಗಿದೆ. ಹಲವು ವರ್ಷಗಳಿಂದ ಸರಕಾರಿ ನೌಕರರು ಸಲ್ಲಿಸುತ್ತಿದ್ದ ಬೇಡಿಕೆಯನ್ನು ಆಡಳಿತದ ಕೊನೆಯಲ್ಲಿ ಘೋಷಿಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಬಾರಿ ಅಧಿಕಾರ ಹಿಡಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಹ್ಮಾಸ್ತ್ರ ಸಿದ್ಧಪಡಿಸಿದ್ದಾರೆ. ಸರಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ

ಸರಕಾರಿ ನೌಕರರಿಗೆ ರಾಜ್ಯ ಸರಕಾರದಿಂದ ಬಂಪರ್ ಗಿಫ್ಟ್ ► ವಾರದಲ್ಲಿ ಐದು ದಿನ ಕೆಲಸ, ಕನಿಷ್ಠ 16 ಸಾವಿರ – ಗರಿಷ್ಠ 1 ಲಕ್ಷ 32 ಸಾವಿರ ಸಂಬಳ ನಿಗದಿ..? Read More »

ಕರ್ನಾಟಕ

ಕಳಂಜಿಮಲೆ ಕಾಡಿನಲ್ಲಿ ಬೆಂಕಿ ಅನಾಹುತ ► ಕೋಟ್ಯಂತರ ಮೌಲ್ಯದ ಮರಗಳು ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 12. ಸಮೀಪದ ಕನ್ಯಾನ ಗ್ರಾಮದ ಕಳಂಜಿ ಮಲೆ ರಕ್ಷಿತಾರಣ್ಯಕ್ಕೆ ಬೆಂಕಿ ತಗುಲಿದ ಪರಿಣಾಮ ಸುಮಾರು 10 ಎಕರೆಯಷ್ಟು ಜಾಗದಲ್ಲಿದ್ದ ಬೆಲೆಬಾಳುವ ಮರಗಳು ಬೆಂಕಿಗಾಹುತಿಯಾದ ಘಟನೆ ಗುರುವಾರದಂದು ನಡೆದಿದೆ. ಮಧ್ಯಾಹ್ನ ವೇಳೆಗೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾಡ್ಗಿಚ್ಚಿನಂತೆ ಹರಡಿ ಬೆಲೆಬಾಳುವ ಮರಗಳು ಭಾಗಶಃ ಸುಟ್ಟು ಹೋಗಿವೆ‌. ಬಂಟ್ವಾಳದಿಂದ ಅಗ್ನಿಶಾಮಕ ದಳ ಆಗಮಿಸಿದ್ದರೂ ಬೆಂಕಿ ತೀವ್ರತೆ ಹೆಚ್ಚಾಗಿದ್ದರಿಂದ ತಡರಾತ್ರಿ ವರೆಗೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಅಗ್ನಿಶಾಮಕದಳದ ವಾಹನದಲ್ಲಿ ನೀರು ಖಾಲಿ ಆಗಿ ಆತಂಕದ

ಕಳಂಜಿಮಲೆ ಕಾಡಿನಲ್ಲಿ ಬೆಂಕಿ ಅನಾಹುತ ► ಕೋಟ್ಯಂತರ ಮೌಲ್ಯದ ಮರಗಳು ಬೆಂಕಿಗಾಹುತಿ Read More »

ಕರಾವಳಿ

ಇಂದು (ಜ.12) ಗೃಹ ಸಚಿವ ರಾಮಲಿಂಗಾ ರೆಡ್ಡಿ ದಕ್ಷಿಣ ಕನ್ನಡಕ್ಕೆ ► ದೀಪಕ್, ಬಶೀರ್ ನಿವಾಸಕ್ಕೆ ಭೇಟಿ ನೀಡಲಿರುವ ಸಚಿವರು

(ನ್ಯೂಸ್ ಕಡಬ) newskadaba.com ಮಂಗಳೂರು, ಜ.12. ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಒಂದು ದಿನದ ಭೇಟಿಗಾಗಿ ಇಂದು (ಜ.12) ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 8.55 ಕ್ಕೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು 9.15 ಕ್ಕೆ ಶಕ್ತಿನಗರದಲ್ಲಿ ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 10 ಗಂಟೆಗೆ ಮಂಗಳೂರು ಪೊಲೀಸ್ ಆಯುಕ್ತರ ಕಛೇರಿ ಮತ್ತು ಪಶ್ಚಿಮ ವಲಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಪ್ರಗತಿ ಪರಿಶೀಲನೆ

ಇಂದು (ಜ.12) ಗೃಹ ಸಚಿವ ರಾಮಲಿಂಗಾ ರೆಡ್ಡಿ ದಕ್ಷಿಣ ಕನ್ನಡಕ್ಕೆ ► ದೀಪಕ್, ಬಶೀರ್ ನಿವಾಸಕ್ಕೆ ಭೇಟಿ ನೀಡಲಿರುವ ಸಚಿವರು Read More »

ಕರ್ನಾಟಕ

ಇಂದು(ಜ.12) ದೀಪಕ್ ಮತ್ತು ಬಶೀರ್ ರಿಗೆ ಸಂತಾಪ ಸೂಚಕ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.12. ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಮತ್ತು ಬಶೀರ್ ರವರಿಗೆ ದ.ಕ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಸಹಯೋಗದಲ್ಲಿ ಸಂತಾಪ ಸೂಚನೆ ಮತ್ತು ಹತ್ಯೆಯ ವಿರುದ್ಧ ಖಂಡನಾ ಸಭೆಯು ಇಂದು (ಜನವರಿ 12) ಅಪರಾಹ್ನ 3 ಗಂಟೆಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಕೋಮು ಸಂಘರ್ಷಗಳು ಹೆಚ್ಚಾಗುತ್ತಿದ್ದು, ಅಮಾಯಕರು ಬಲಿಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಜ್ಞಾವಂತ ನಾಗರೀಕರು ರಾಜಕಾರಣಿಗಳ ನೀಚ ರಾಜಕೀಯದ ವಿರುದ್ಧ ಧ್ವನಿಯೆತ್ತಬೇಕಾಗಿರುವುದರಿಂದ ಶುಕ್ರವಾರದಂದು ನಡೆಯಲಿರುವ ಸಭೆಯಲ್ಲಿ

ಇಂದು(ಜ.12) ದೀಪಕ್ ಮತ್ತು ಬಶೀರ್ ರಿಗೆ ಸಂತಾಪ ಸೂಚಕ ಸಭೆ Read More »

ಕರಾವಳಿ

ನಾವೇನೂ ನಾಟಕ ಆಡಲು ಬಂದಿಲ್ಲ: ಪೊಲೀಸರ ವಿರುದ್ಧ ಹೇಳಿಕೆ ನೀಡುವವರಿಗೆ ಎಚ್ಚರಿಕೆ ನೀಡಿದ ಎಸ್ಪಿ ಅಣ್ಣಾಮಲೈ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ.11. ‘ಹಾವಿನ ಜೊತೆ ಸರಸವಾಡುವ ಕೆಲಸವನ್ನು ಯಾರೂ ಮಾಡಬೇಡಿ. ಹಾವಿನ ತಲೆಯಲ್ಲಿ ಹಿಡಿದರೂ ಹಾವು ಕಚ್ಚುತ್ತದೆ. ಬಾಲದಲ್ಲಿ ಹಿಡಿದರೂ ಹಾವು ಕಚ್ಚುತ್ತದೆ’ ಎಂದು ಮೂಡಿಗೆರೆ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಇಲಾಖೆಯ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವವರಿಗೆ ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಅಣ್ಣಾಮಲೈ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕೆಲವು ಸಂಘಟನೆಯವರು ಪೊಲೀಸ್ ಇಲಾಖೆಯ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ತಿದ್ದಾರೆ. ನಾವು ಖಾಕಿ ಬಟ್ಟೆ ಹಾಕಿ ಇಲ್ಲಿಗೆ ನಾಟಕ

ನಾವೇನೂ ನಾಟಕ ಆಡಲು ಬಂದಿಲ್ಲ: ಪೊಲೀಸರ ವಿರುದ್ಧ ಹೇಳಿಕೆ ನೀಡುವವರಿಗೆ ಎಚ್ಚರಿಕೆ ನೀಡಿದ ಎಸ್ಪಿ ಅಣ್ಣಾಮಲೈ Read More »

ಕರಾವಳಿ

ಮಂಗಳೂರು: ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅವಘಡ ► ನಿಟ್ಟುಸಿರು ಬಿಟ್ಟ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ಮಂಗಳೂರು, ಜ.11. ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಲಿದ್ದ ಭಾರೀ ಅವಘಡವೊಂದು ಏರ್ ಟ್ರಾಫಿಕ್ ಕಂಟ್ರೋಲರ್ ನ ಸಮಯ ಪ್ರಜ್ಞೆಯಿಂದಾಗಿ ಕೂದಲೆಳೆಯ ಅಂತರದಲ್ಲಿ ತಪ್ಪಿದ ಘಟನೆ ಗುರುವಾರದಂದು ನಡೆದಿದೆ. ಮಂಗಳೂರು ವಿಮಾನ ನಿಲ್ದಾಣದ ರನ್ ವೇ ಸುತ್ತಲಿದ್ದ ಹುಲ್ಲು ತೆಗೆಯುವುದಕ್ಕಾಗಿ ಬಂದಿದ್ದ ಟ್ರಾಕ್ಟರನ್ನು ಅದರ ಚಾಲಕ ರನ್ ವೇ ಅಂತ್ಯದಲ್ಲಿ ನಿಲ್ಲಿಸಿದ್ದ. ಅದಾಗಲೇ ಮುಂಬೈಗೆ ಹೊರಡಬೇಕಿದ್ದ ಜೆಟ್ ಏರ್ ವೇಸ್ ವಿಮಾನವು ಟೇಕ್ ಆಫ್ ಆಗುವ ಸಿದ್ಧತೆಯಲ್ಲಿರುವಾಗ ಟ್ರಾಕ್ಟರ್ ರನ್ ವೇ ಯಲ್ಲಿ

ಮಂಗಳೂರು: ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅವಘಡ ► ನಿಟ್ಟುಸಿರು ಬಿಟ್ಟ ಪ್ರಯಾಣಿಕರು Read More »

ಕರಾವಳಿ
Scroll to Top