News Kadaba Desk

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನಿಗೆ ನೆರವಾಗುವಿರಾ..?

(ನ್ಯೂಸ್ ಕಡಬ) newskadaba.com ಪುತ್ತೂರು, ಜ.25. ಎಲ್ಲರಂತೆ ನಡೆದಾಡಿ ಸುಂದರ ಜೀವನ ನಿರ್ವಹಿಸಬೇಕಿದ್ದ ಯುವಕನೋರ್ವ ಸುಮಾರು ಆರು ವರ್ಷಗಳಿಂದ ಕಿಡ್ನಿ ವೈಫಲ್ಯ ತೊಂದರೆಯಿಂದ ಬಳಲುತ್ತಿದ್ದು, ಇದೀಗ ಚಿಕಿತ್ಸೆಗಾಗಿ ದಾನಿಗಳ ನೆರವು ಯಾಚಿಸಿದ್ದಾರೆ. ಇಲ್ಲಿನ ಮೊಟ್ಟೆತಡ್ಕ ನಿವಾಸಿಯಾದ ಅಬ್ದುಲ್ ಶಕೀರ್(30) ಸುಮಾರು 6 ವರುಷಗಳಿಂದ ಎರಡು ಕಾಲಿನ ಶಕ್ತಿಯನ್ನು ಕಳೆದುಕೊಂಡು ನಡೆದಾಡಲು ಆಗದೆ ಕಷ್ಟಕರ ಜೀವನ ಸಾಗಿಸುತ್ತಿದ್ದಾನೆ. ವಯಸ್ಸಾದ ತಾಯಿ ಮತ್ತು ಮಗ ಒಂದು ಸಣ್ಣ ಬಾಡಿಗೆ ಮನೆಯಲ್ಲಿ‌ ವಾಸಮಾಡುತ್ತಿದ್ದಾರೆ. ಇವರ ದಯನೀಯ ಸ್ಥಿತಿ ನೋಡುಗರ ಕಣ್ಣಲ್ಲಿ ನೀರು […]

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನಿಗೆ ನೆರವಾಗುವಿರಾ..? Read More »

ಕರಾವಳಿ

ಬಂದ್ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತ ► ಬಸ್ ಸಂಚಾರವಿಲ್ಲದೆ ಪರದಾಡಿದ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.25. ಮಹದಾಯಿ ವಿಚಾರವಾಗಿ ಗುರುವಾರದಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಕರೆ ಅಷ್ಟೇನೂ ಪರಿಣಾಮ ಬೀಳುವುದಿಲ್ಲದಿದ್ದರೂ, ಸರಕಾರಿ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಿರುವುದು ಜನಸಾಮಾನ್ಯರನ್ನು ಪರದಾಡುವಂತೆ ಮಾಡಿದೆ. ಕೆಲವು ಶಾಲೆಗಳಲ್ಲಿ ಪರೀಕ್ಷೆ ಇದ್ದರೂ ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಉಂಟಾಗಿದೆ.. ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ

ಬಂದ್ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತ ► ಬಸ್ ಸಂಚಾರವಿಲ್ಲದೆ ಪರದಾಡಿದ ಪ್ರಯಾಣಿಕರು Read More »

ಕರ್ನಾಟಕ

ಇಂದು(ಜ.25) ಕರ್ನಾಟಕ ಬಂದ್ ► ಪರೀಕ್ಷೆಗಳು ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.25. ಮಹದಾಯಿ ವಿಚಾರವಾಗಿ ಗುರುವಾರದಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇಂದು ನಡೆಯಬೇಕಿದ್ದ ಬಿ.ಎ., ಬಿ.ಕಾಂ., ಬಿ.ಬಿ.ಎಂ., ಬಿಎಸ್ಸಿ ಹಾಗೂ ಪಿ.ಜಿ. ಕೋರ್ಸ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪ್ರಥಮ ವರ್ಷದ ಪದವಿ ಪರೀಕ್ಷೆಗಳು ಫೆಬ್ರವರಿ 8 ರಂದು ನಡೆಯಲಿವೆ. 3 ನೇ ವರ್ಷದ ಬಿ.ಎ., ಬಿ.ಎಸ್ಸಿ. ಪರೀಕ್ಷೆಗಳನ್ನು ಫೆಬ್ರವರಿ 5 ಕ್ಕೆ ಮುಂದೂಡಲಾಗಿದೆ. 3 ನೇ ವರ್ಷದ ಬಿ.ಕಾಂ.,

ಇಂದು(ಜ.25) ಕರ್ನಾಟಕ ಬಂದ್ ► ಪರೀಕ್ಷೆಗಳು ಮುಂದೂಡಿಕೆ Read More »

ಕರ್ನಾಟಕ

ಹಿರಿಯ ಸಾಮಾಜಿಕ ಮುಂದಾಳು ಹಮೀದ್ ಕಂದಕ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.24. ಹಿರಿಯ ಸಾಮಾಜಿಕ ಮುಂದಾಳು, ಧಾರ್ಮಿಕ ನೇತಾರ ಹಾಜಿ ಹಮೀದ್ ಕಂದಕ್(68) ಬುಧವಾರ ಸಂಜೆ ಇಹಲೋಕ ತ್ಯಜಿಸಿದರು. ನಗರದ ವುಡ್ ಲ್ಯಾಂಡ್ ಹೊಟೇಲ್ ನಲ್ಲಿ ನಡೆಯುತ್ತಿದ್ದ ಅಹಿಂದ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿ ಭಾಷಣ ಮಾಡುತ್ತಿದ್ದಾಗ ಹಮೀದ್ ಕಂದಕ್ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಯುನಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಟ್ರಾವೆಲ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಹಮೀದ್ ಕಂದಕ್ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

ಹಿರಿಯ ಸಾಮಾಜಿಕ ಮುಂದಾಳು ಹಮೀದ್ ಕಂದಕ್ ಇನ್ನಿಲ್ಲ Read More »

ಕರಾವಳಿ

ವಿಟ್ಲ: ಮಹಿಳೆಯ ಜೊತೆ ಅನುಚಿತ ವರ್ತನೆ ► ಯುವಕ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ.24. ಜೆರಾಕ್ಸ್ ಮಾಡಿಸಲೆಂದು ಅಂಗಡಿಗೆ ಬಂದಿದ್ದ ಅನ್ಯ ಕೋಮಿನ ಯುವಕನೋರ್ವ ಅಂಗಡಿ ಮಾಲಕಿಯ ಜತೆ ಅಸಭ್ಯವಾಗಿ ವರ್ತಿಸಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ ಘಟನೆ ವಿಟ್ಲದಲ್ಲಿ ಬುಧವಾರ ರಾತ್ರಿ ನಡೆದಿದೆ. ವಿಟ್ಲ – ಮಂಗಳೂರು ರಸ್ತೆಯ ಜೆರಾಕ್ಸ್ ಅಂಗಡಿಯೊಂದಕ್ಕೆ ಬಂದ ಯುವಕನಿಗೆ ಮಹಿಳೆ ವಿದ್ಯುತ್ ಇಲ್ಲದೆ ಇರುವುದರಿಂದ ಬೇರೆ ಅಂಗಡಿಗೆ ತೆರಳಲು ಸೂಚಿಸಿದ್ದಾರೆ. ಆದರೆ ಯುವಕ ಮಹಿಳೆಯ ಮೊಬೈಲ್ ನಂಬರ್ ಕೇಳಿ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ತಕ್ಷಣ ಮಹಿಳೆಯು ಅಂಗಡಿಯ ಮುಂಭಾಗದಲ್ಲಿದ್ದ ತನ್ನ

ವಿಟ್ಲ: ಮಹಿಳೆಯ ಜೊತೆ ಅನುಚಿತ ವರ್ತನೆ ► ಯುವಕ ಪೊಲೀಸ್ ವಶಕ್ಕೆ Read More »

ಕರಾವಳಿ

ಸುಬ್ರಹ್ಮಣ್ಯ: ಕಾರು – ಆಟೋರಿಕ್ಷಾ ಢಿಕ್ಕಿ ► ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ.24. ಕಾರು ಹಾಗೂ ಆಟೋರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ಶಾಲಾ ವಿದ್ಯಾರ್ಥಿಗಳು ಸೇರಿ ನಾಲ್ವರು ಗಾಯಗೊಂಡ ಘಟನೆ ಸುಬ್ರಹ್ಮಣ್ಯದ ಪರ್ವತಮುಖಿ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಸುಬ್ರಹ್ಮಣ್ಯದ ಶಾಲೆಯೊಂದರ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೋರಿಕ್ಷಾಕ್ಕೆ ಪರ್ವತಮುಖಿ ಎಂಬಲ್ಲಿ ಮಾರುತಿ 800 ಕಾರು ಢಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಹಾಗೂ ರಿಕ್ಷಾ ಚಾಲಕ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಬ್ರಹ್ಮಣ್ಯ: ಕಾರು – ಆಟೋರಿಕ್ಷಾ ಢಿಕ್ಕಿ ► ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರಿಗೆ ಗಾಯ Read More »

ಕರಾವಳಿ

ಪುಣ್ಚತ್ತಾರು: ನೇಣು ಬಿಗಿದು ಯುವತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜ.24. ಮೂರ್ಛೆ ರೋಗ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಯೋರ್ವಳು ತನ್ನ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಣಿಯೂರಿನಲ್ಲಿ ಬುಧವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾಕೆಯನ್ನು ಪುಣ್ಚತ್ತಾರು ಸಮೀಪದ ನೋಲ್ಮೆ ನಿವಾಸಿ ಕುಶಾಲಪ್ಪ ಗೌಡರ ಪುತ್ರಿ ಪವಿತ್ರ (19) ಎಂದು ಗುರುತಿಸಲಾಗಿದೆ. ಪುಣ್ಚತ್ತಾರು ಎಂಬಲ್ಲಿ ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದ ಪವಿತ್ರ ಬುಧವಾರದಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆ ಛಾವಣಿಯ ಅಡ್ಡಕ್ಕೆ ಚೂಡಿದಾರ್ ಶಾಲು ಹಾಕಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುಣ್ಚತ್ತಾರು: ನೇಣು ಬಿಗಿದು ಯುವತಿ ಆತ್ಮಹತ್ಯೆ Read More »

ಕರಾವಳಿ

‌ಮಹದಾಯಿ ವಿಚಾರವಾಗಿ ನಾಳೆ (ಜ.25) ಕರ್ನಾಟಕ ಬಂದ್ ► ಶಾಲೆಗಳಿಗೆ ರಜೆ ನೀಡಲು ನಿರ್ಧಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.24. ಮಹದಾಯಿ ವಿಚಾರದಲ್ಲಿ ಪ್ರಧಾನ ಮಂತ್ರಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಲಾಗಿರುವ ಜನವರಿ 25 ರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ಆಡಳಿತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದ್ದಾರೆ. ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಬಂದ್ ಗೆ ಕರೆ ನೀಡಲಾಗಿದ್ದರೂ, ಬಂದ್ ಸಂದರ್ಭದಲ್ಲಿ

‌ಮಹದಾಯಿ ವಿಚಾರವಾಗಿ ನಾಳೆ (ಜ.25) ಕರ್ನಾಟಕ ಬಂದ್ ► ಶಾಲೆಗಳಿಗೆ ರಜೆ ನೀಡಲು ನಿರ್ಧಾರ Read More »

ಕರ್ನಾಟಕ

ಬಲ್ಯ: ನಾಟಿ ಮದ್ದಿಗೆ ತೆರಳಿದವರಿಗೆ ಜಾತಿ ನಿಂದನೆಯ ಆರೋಪ ► ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಜ.24. ನಾಟಿ ಮದ್ದಿಗೆಂದು ತೆರಳಿದ್ದ ಸಂದರ್ಭದಲ್ಲಿ ಜಾತಿ ನಿಂದನೆಗೈದಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ಕಡಬ ಠಾಣೆಗೆ ದೂರು ನೀಡಿದ ಘಟನೆ ಬುಧವಾರದಂದು ನಡೆದಿದೆ. ಆಲಂಕಾರು ಗ್ರಾಮದ ಕೇಪುಳು ನಿವಾಸಿ ರಾಘವ ಎಂಬವರು ಸೊಂಟ ನೋವಿಗೆ ಮಸಾಜ್ ಮಾಡಿಸಲೆಂದು ಮಂಗಳವಾರದಂದು ಬಲ್ಯ ಗ್ರಾಮದ ಪುತ್ತಿಲ ನಿವಾಸಿ ಅನುರಾಧ ಗೌಡ ಎಂಬವರ ಮನಯೊಳಗಡೆ ಹೋದದ್ದಕ್ಕೆ ಅನುರಾಧ ಗೌಡರು ಯಾವ ಜಾತಿಯವನೆಂದು ಕೇಳಿ ಹೀಯಾಳಿಸಿ ಅವ್ಯಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿದರೆಂದು ರಾಘವರು ಕಡಬ ಠಾಣೆಗೆ

ಬಲ್ಯ: ನಾಟಿ ಮದ್ದಿಗೆ ತೆರಳಿದವರಿಗೆ ಜಾತಿ ನಿಂದನೆಯ ಆರೋಪ ► ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು Read More »

ಕರಾವಳಿ

ಬಶೀರ್ ಹತ್ಯೆಗೆ ಜೈಲಿನಲ್ಲೇ ಸಂಚು ಹಾಕಿದ ಆರೋಪಿಗಳು ► ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಹೇಳಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.24. ಇತ್ತೀಚಿಗೆ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ನಡೆದಿದ್ದ ಬಶೀರ್ ಕೊಲೆಗೆ ಜೈಲಿನಲ್ಲೇ ಸಂಚು ರೂಪಿಸಲಾಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬೇರೆ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಿಥುನ್ ಕಲ್ಲಡ್ಕ, ತಿಲಕರಾಜ್ ಶೆಟ್ಟಿ, ರಾಜು ಅಲಿಯಾಸ್ ರಾಜೇಶ ಎಂಬವರು, ಜೈಲಿನಲ್ಲಿ ಇದ್ದುಕೊಂಡು ಕೊಟ್ಟಾರ ಚೌಕಿಯಲ್ಲಿ ಮುಸ್ಲಿಂ ವ್ಯಕ್ತಿಯ ಹತ್ಯೆಗೆ ಸಂಚು ರೂಪಿಸಿದ್ದರು. ಅದರಂತೆ ಬಶೀರ್ ಅವರ ಬಗ್ಗೆ ಮಾಹಿತಿ ಇದ್ದ

ಬಶೀರ್ ಹತ್ಯೆಗೆ ಜೈಲಿನಲ್ಲೇ ಸಂಚು ಹಾಕಿದ ಆರೋಪಿಗಳು ► ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಹೇಳಿಕೆ Read More »

ಕರಾವಳಿ
Scroll to Top