ಬಲ್ಯ: ನಾಟಿ ಮದ್ದಿಗೆ ತೆರಳಿದವರಿಗೆ ಜಾತಿ ನಿಂದನೆಯ ಆರೋಪ ► ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು



(ನ್ಯೂಸ್ ಕಡಬ) newskadaba.com ಕಡಬ, ಜ.24. ನಾಟಿ ಮದ್ದಿಗೆಂದು ತೆರಳಿದ್ದ ಸಂದರ್ಭದಲ್ಲಿ ಜಾತಿ ನಿಂದನೆಗೈದಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ಕಡಬ ಠಾಣೆಗೆ ದೂರು ನೀಡಿದ ಘಟನೆ ಬುಧವಾರದಂದು ನಡೆದಿದೆ.







ಆಲಂಕಾರು ಗ್ರಾಮದ ಕೇಪುಳು ನಿವಾಸಿ ರಾಘವ ಎಂಬವರು ಸೊಂಟ ನೋವಿಗೆ ಮಸಾಜ್ ಮಾಡಿಸಲೆಂದು ಮಂಗಳವಾರದಂದು ಬಲ್ಯ ಗ್ರಾಮದ ಪುತ್ತಿಲ ನಿವಾಸಿ ಅನುರಾಧ ಗೌಡ ಎಂಬವರ ಮನಯೊಳಗಡೆ ಹೋದದ್ದಕ್ಕೆ ಅನುರಾಧ ಗೌಡರು ಯಾವ ಜಾತಿಯವನೆಂದು ಕೇಳಿ ಹೀಯಾಳಿಸಿ ಅವ್ಯಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿದರೆಂದು ರಾಘವರು ಕಡಬ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಕಡಬ ಪೊಲೀಸರು ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top