News Kadaba Desk

ಮಾಣಿ-ಮೈಸೂರು ಹೆದ್ದಾರಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಗಳ ಮುಖಾಮುಖಿ ಢಿಕ್ಕಿ ► ಚಾಲಕರಿಬ್ಬರು ಮೃತ್ಯು, 20 ಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಮಡಿಕೇರಿ, ಫೆ.08. ಕೆಎಸ್ಸಾರ್ಟಿಸಿ ಬಸ್ ಗಳೆರಡರ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಎರಡೂ ವಾಹನಗಳ ಚಾಲಕರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 275 ರ ಸುಂಟಿಕೊಪ್ಪ ಸಮೀಪದ ಶಾಂತಿಗಿರಿ ಎಂಬಲ್ಲಿ ಗುರುವಾರದಂದು ನಡೆದಿದೆ. ಮೃತ ಚಾಲಕರನ್ನು ಪಾಲಾಕ್ಷ ಹಾಗೂ ಷರೀಪ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಓರ್ವ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದ್ದು, 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದ ಬಸ್ ಹಾಗೂ ಮೈಸೂರಿನಿಂದ ಕುಶಾಲನಗರ ಮಾರ್ಗವಾಗಿ ಮಡಿಕೇರಿಗೆ […]

ಮಾಣಿ-ಮೈಸೂರು ಹೆದ್ದಾರಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಗಳ ಮುಖಾಮುಖಿ ಢಿಕ್ಕಿ ► ಚಾಲಕರಿಬ್ಬರು ಮೃತ್ಯು, 20 ಕ್ಕೂ ಅಧಿಕ ಮಂದಿಗೆ ಗಾಯ Read More »

ಕರ್ನಾಟಕ

ಕೆಎಸ್ಸಾರ್ಟಿಸಿ ಬಸ್ – ಬೈಕ್ ಢಿಕ್ಕಿ ► ಬೈಕ್ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.08. ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಜಕ್ರಿಬೆಟ್ಟು ಎಂಬಲ್ಲಿ ಗುರುವಾರದಂದು ನಡೆದಿದೆ. ಗಾಯಾಳು ಯುವಕನನ್ನು ಬೈಕ್ ಸವಾರ ಬೆಳ್ತಂಗಡಿ ನಿವಾಸಿ ಅಶ್ವಿತ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಬೆಳ್ತಂಗಡಿಯಿಂದ ಬಂಟ್ವಾಳಕ್ಕೆ ತೆರಳುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಅಶ್ವಿತ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ

ಕೆಎಸ್ಸಾರ್ಟಿಸಿ ಬಸ್ – ಬೈಕ್ ಢಿಕ್ಕಿ ► ಬೈಕ್ ಸವಾರ ಗಂಭೀರ Read More »

ಕರಾವಳಿ

► ಜನಪದ ವಾಗ್ಮಿ ದಯಾನಂದ ಕತ್ತಲ್ಸರ್ ಗೆ ಕಾಂಗ್ರೆಸ್ ಗಾಳ ► ಬಿಜೆಪಿ ನಾಯಕರಿಗೆ ತಳಮಳ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.08. ಕಳೆದ 25 ವರ್ಷಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರುತ್ತಿರುವ ಎಸ್. ಅಂಗಾರರವರನ್ನು ಸೋಲಿಸಿ ಬಿಜೆಪಿಯ ಭದ್ರ ಕೋಟೆಯನ್ನು ಛಿದ್ರಗೊಳಿಸುವ ಪ್ರಯತ್ನದಲ್ಲಿರುವ ಕಾಂಗ್ರೆಸ್, ಜಾನಪದ ವಿದ್ವಾಂಸ ದಯಾನಂದ ಕತ್ತಲ್ಸರ್ ಅವರಿಗೆ ಗಾಳ ಹಾಕಿದ್ದು, ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಸುಳ್ಯ ವಿಧಾನಸಭಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಕತ್ತಲ್ಸರ್‌ ಅವರಿಗೆ ಕಾಂಗ್ರೆಸ್‌ ಸುಳ್ಯ ಘಟಕದಿಂದ ದಿಢೀರ್‌ ಕರೆ ಹೋಗಿದ್ದು, ಸುಳ್ಯದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕಾಂಗ್ರೆಸ್‌

► ಜನಪದ ವಾಗ್ಮಿ ದಯಾನಂದ ಕತ್ತಲ್ಸರ್ ಗೆ ಕಾಂಗ್ರೆಸ್ ಗಾಳ ► ಬಿಜೆಪಿ ನಾಯಕರಿಗೆ ತಳಮಳ Read More »

ಕರಾವಳಿ

ಟಾರ್ಗೆಟ್ ಇಲ್ಯಾಸ್ ಹಂತಕರಲ್ಲಿ ಓರ್ವ ಪೊಲೀಸ್ ಬಲೆಗೆ..? ► ಇತ್ತೀಚೆಗೆ ತನ್ನದೇ ಗ್ರೂಪ್‌ನಿಂದ ಕೊಲೆಯಾಗಿದ್ದ ಟಾರ್ಗೆಟ್ ಇಲ್ಯಾಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.08. ಇತ್ತೀಚಿಗೆ ತನ್ನದೇ ಗ್ರೂಪ್‌ನ ತಂಡದಿಂದ ಬರ್ಬರ ರೀತಿಯಲ್ಲಿ ಹತ್ಯೆಗೀಡಾಗಿದ್ದ ಉಳ್ಳಾಲದ ಟಾರ್ಗೆಟ್ ಗ್ರೂಪ್‌ನ ಪ್ರಮುಖನಾಗಿದ್ದ ಇಲ್ಯಾಸ್ ಕೊಲೆ ಆರೋಪಿಗಳಲ್ಲಿ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಟಾರ್ಗೆಟ್ ಗ್ರೂಪ್ ನ ಮುಖ್ಯಸ್ಥ ಇಲ್ಯಾಸ್ ಮರ್ಡರ್ ಪ್ರಕರಣದ ಆರೋಪಿ ಶಮೀರ್ ಎಂಬವನನ್ನು ಸಿಸಿಬಿ ಪೋಲೀಸರು ಕೇರಳದಲ್ಲಿ ಬಂಧಿಸಿ ಹೆಚ್ಚಿನ ತನಿಖೆಗಾಗಿ ಮಂಗಳೂರಿಗೆ ಕರೆ ತಂದಿದ್ದಾರೆ ಎನ್ನಲಾಗಿದೆ. ಇಲ್ಯಾಸ್ ನನ್ನು ನಾಲ್ಕು ಮಂದಿ ಹಂತಕರು ಕೊಲೆಗೈದಿದ್ದಾರೆನ್ನುವ ಪ್ರಾಥಮಿಕ ಮಾಹಿತಿಯಾಧರಿಸಿ ತನಿಖೆ

ಟಾರ್ಗೆಟ್ ಇಲ್ಯಾಸ್ ಹಂತಕರಲ್ಲಿ ಓರ್ವ ಪೊಲೀಸ್ ಬಲೆಗೆ..? ► ಇತ್ತೀಚೆಗೆ ತನ್ನದೇ ಗ್ರೂಪ್‌ನಿಂದ ಕೊಲೆಯಾಗಿದ್ದ ಟಾರ್ಗೆಟ್ ಇಲ್ಯಾಸ್ Read More »

ಕರಾವಳಿ

ರಾಜ್ಯದ ಹಲವೆಡೆ ವರ್ಷದ ಮೊದಲ ತುಂತುರು ಮಳೆಯ ಅನುಭವ ► ಇನ್ನೆರಡು ದಿನಗಳ ಕಾಲ ಮಳೆಯ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.08. ರಾಜ್ಯದ ಹಲವೆಡೆ ತುಂತುರು ಮಳೆಯಾಗಿದ್ದು, ಈ ವರ್ಷದ ಮೊದಲ ಮಳೆ ಹನಿಯು ಭೂಮಿಯನ್ನು ಸ್ಪರ್ಶಿಸಿದೆ‌. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಪರಿಣಾಮ ಇನ್ನು ಎರಡು ದಿನಗಳ ಕಾಲ ರಾಜ್ಯದ ಕರಾವಳಿ ಭಾಗ, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ಹಾಗೂ ಮಾಲ್ಡೀವ್ಸ್ ನಿಂದ ಕರ್ನಾಟಕದ ಕರಾವಳಿ ಪ್ರದೇಶದವರೆಗೆ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಎರಡು ದಿನಗಳ ಕಾಲ

ರಾಜ್ಯದ ಹಲವೆಡೆ ವರ್ಷದ ಮೊದಲ ತುಂತುರು ಮಳೆಯ ಅನುಭವ ► ಇನ್ನೆರಡು ದಿನಗಳ ಕಾಲ ಮಳೆಯ ಸಾಧ್ಯತೆ Read More »

ಕರ್ನಾಟಕ

ನೀವು ಉಪಯೋಗಿಸುವ ಟೂತ್‌ಪೇಸ್ಟ್ ಗುಣಮಟ್ಟದ ಬಗ್ಗೆ ನಿಮಗೆಷ್ಟು ಗೊತ್ತು…? ► ಸ್ವಲ್ಪ ಯಾಮಾರಿದರೂ ಅಪಾಯ ಅಹ್ವಾನಿಸಿದಂತೆ…!

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಫೆ.07. ನಾವು ಪ್ರತಿದಿನ ವಿವಿಧ ಕಂಪೆನಿಗಳ ಟೂತ್‌ಪೇಸ್ಟ್ ಗಳನ್ನು ಬಳಸುತ್ತೇವೆ. ಕೆಲವರು ಬೆಲೆ ನೋಡಿ ಟೂತ್‌ಪೇಸ್ಟ್ ಖರೀದಿ ಮಾಡಿದ್ರೆ ಮತ್ತೆ ಕೆಲವರು ಬ್ರ್ಯಾಂಡ್ ನೋಡಿ ಖರೀದಿ ಮಾಡ್ತಾರೆ. ಆದರ ಟೂತ್‌ಪೇಸ್ಟ್ ಮೇಲೆ ಹಾಕಿರುವ ಬಣ್ಣದ ಗೆರೆಯ ಬಗ್ಗೆ ಯಾರೂ ತಿಳಿಯುವ ಗೋಜಿಗೇ ಹೋಗುವುದಿಲ್ಲ. ಒಂದೊಂದು ಬ್ರ್ಯಾಂಡ್ ಟೂತ್‌ಪೇಸ್ಟ್ ಗಳ ಮೇಲೆ ಒಂದೊಂದು ಬಣ್ಣದ ಗೆರೆ ಇರುತ್ತೆ. ಅವು ಅವುಗಳ ಬ್ರ್ಯಾಂಡ್ ನ ಸಾಮರ್ಥ್ಯದ ಬಗ್ಗೆ ಹೇಳುತ್ತದೆ. ನಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ

ನೀವು ಉಪಯೋಗಿಸುವ ಟೂತ್‌ಪೇಸ್ಟ್ ಗುಣಮಟ್ಟದ ಬಗ್ಗೆ ನಿಮಗೆಷ್ಟು ಗೊತ್ತು…? ► ಸ್ವಲ್ಪ ಯಾಮಾರಿದರೂ ಅಪಾಯ ಅಹ್ವಾನಿಸಿದಂತೆ…! Read More »

ಆರೋಗ್ಯ ಮಾಹಿತಿ

ಫೆ.18 ರಂದು ಬಿಜೆಪಿಯ ಮಾಸ್ಟರ್ ಮೈಂಡ್ ಅಮಿತ್ ಷಾ ಸುಬ್ರಹ್ಮಣ್ಯಕ್ಕೆ…? ► ಕರಾವಳಿಯಲ್ಲಿ ಹೆಣೆಯುತ್ತಾರಾ ಕಾಂಗ್ರೆಸ್ ಮುಕ್ತ ಕರ್ನಾಟಕದ ರಣತಂತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.08. ಗುಜರಾತ್‌ನಲ್ಲಿ ಆಡಳಿತದ ಚುಕ್ಕಾಣಿಯನ್ನು ಹಿಡಿದ ನಂತರ ಇದೀಗ ಕಾಂಗ್ರೆಸ್ ಮುಕ್ತ ಕರ್ನಾಟಕದ ಗುರಿಯನ್ನು ಹೊಂದಿರುವ ಬಿಜೆಪಿಯು ಇದೀಗ ಚುನಾವಣಾ ರಣತಂತ್ರವನ್ನು ಹೆಣೆದಿದ್ದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರು ಇದೀಗ ಬಿಜೆಪಿಯ ತವರಾದ ಕರಾವಳಿಗೆ ಆಗಮಿಸಲು ದಿನಾಂಕ ನಿಗದಿಯಾಗಿದೆ. ಫೆಬ್ರವರಿ 18 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಅವರು ದೇವಾಲಯದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಮರುದಿನ ಫೆಬ್ರವರಿ 19 ರಂದು

ಫೆ.18 ರಂದು ಬಿಜೆಪಿಯ ಮಾಸ್ಟರ್ ಮೈಂಡ್ ಅಮಿತ್ ಷಾ ಸುಬ್ರಹ್ಮಣ್ಯಕ್ಕೆ…? ► ಕರಾವಳಿಯಲ್ಲಿ ಹೆಣೆಯುತ್ತಾರಾ ಕಾಂಗ್ರೆಸ್ ಮುಕ್ತ ಕರ್ನಾಟಕದ ರಣತಂತ್ರ Read More »

ಕರಾವಳಿ

ಕೃಷ್ಣಮಠವನ್ನು ಸರಕಾರ ಸ್ವಾಧೀನಪಡಿಸಿದರೆ ನಾನು ನೌಕರನಾಗಿ ಮಠದಲ್ಲಿ ಇರಲಾರೆ ► ಪೇಜಾವರ ಶ್ರೀ ಆಕ್ರೋಶ

(ನ್ಯೂಸ್ ಕಡಬ) newskadaba.com ಉಡುಪಿ, ಫೆ.07. ಕೃಷ್ಣಮಠವನ್ನು ಸರಕಾರವು ಸ್ವಾಧೀನಪಡಿಸಿದರೆ ನಾನು ಸರಕಾರದ ನೌಕರನಾಗಿ ಮಠದಲ್ಲಿ ಇರಲಾರೆ. ನಾನು ಮಠದಿಂದ ಹೊರಬರುತ್ತೇನೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಾಲಯ ಮತ್ತು ಮಠಗಳ ಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ದೇವಾಲಯ ಮತ್ತು ಮಠಗಳ ಸ್ವಾಧೀನಕ್ಕೆ ಕೈ ಹಾಕುವ ಮೂಲಕ ಸರಕಾರವೇ ವಿಪಕ್ಷದ ಹೋರಾಟಕ್ಕೆ ಅಸ್ತ್ರ ಕೊಟ್ಟಂತಾಗಿದೆ. ಆದರೆ ನಾನು ಇದರ ವಿರುದ್ಧ ಹೋರಾಟ ಮಾಡುವುದಿಲ್ಲ. ಈ

ಕೃಷ್ಣಮಠವನ್ನು ಸರಕಾರ ಸ್ವಾಧೀನಪಡಿಸಿದರೆ ನಾನು ನೌಕರನಾಗಿ ಮಠದಲ್ಲಿ ಇರಲಾರೆ ► ಪೇಜಾವರ ಶ್ರೀ ಆಕ್ರೋಶ Read More »

ಕರ್ನಾಟಕ

ಬೆಳ್ಳಾರೆ: ಅಕ್ರಮ ಮರಳು ಅಡ್ಡೆಗೆ ದಾಳಿ ► ನಾಲ್ವರ ಬಂಧನ – 1 ಜೆಸಿಬಿ, 4 ಟಿಪ್ಪರ್ ವಶಕ್ಕೆ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಬೆಳ್ಳಾರೆ, ಫೆ.07. ಯಾವುದೇ ಪರವಾನಿಗೆ ಇಲ್ಲದೇ ಜೇಸಿಬಿ ಮೂಲಕ ಅಕ್ರಮವಾಗಿ ಮರಳನ್ನು ತೆಗೆಯುತ್ತಿದ್ದುದನ್ನು ಪತ್ತೆಹಚ್ಚಿರುವ ಬೆಳ್ಳಾರೆ ಪೊಲೀಸರು ಒಂದು ಜೇಸಿಬಿ, ನಾಲ್ಕು ಟಿಪ್ಪರ್ ಗಳನ್ನು ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಅಮರ ಮೂಡ್ನೂರು ಗ್ರಾಮದ ಚಿಲ್ಪಾರ್ ಬಳಿ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಜೆಸಿಬಿ ಬಳಸಿ ನದಿಯಿಂದ ಟಿಪ್ಪರ್ ಲಾರಿಗಳಿಗೆ ಮರಳು ತುಂಬಿಸುತ್ತಿರುವುದನ್ನು ಪತ್ತೆ ಹಚ್ಚಿ ಆರೋಪಿಗಳಾದ ಸೊಣಂಗೇರಿ ನಿವಾಸಿ ಬೆಳಿಯಪ್ಪ ಎಂಬವರ ಪುತ್ರ ಮಹೇಶ್ (30),

ಬೆಳ್ಳಾರೆ: ಅಕ್ರಮ ಮರಳು ಅಡ್ಡೆಗೆ ದಾಳಿ ► ನಾಲ್ವರ ಬಂಧನ – 1 ಜೆಸಿಬಿ, 4 ಟಿಪ್ಪರ್ ವಶಕ್ಕೆ Read More »

ಕರಾವಳಿ

ನಮೂನೆ 29, 30 ಭರ್ತಿ ಮಾಡದೆ ವಾಹನ ಮಾರಾಟ ಮಾಡುವವರಿಗೆ ಎಚ್ಚರಿಕೆ ► ವಾಹನ ಅಪಘಾತಕ್ಕೀಡಾದಲ್ಲಿ ಮಾರಾಟಗಾರರೇ ಜವಾಬ್ದಾರರು

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.07. ವಾಹನ ಮಾರಾಟಗಾರರು ನಮೂನೆ 29( ದ್ವಿಪ್ರತಿ), 30 ಭರ್ತಿ ಮಾಡದೇ ಹಾಗೂ ದಿನಾಂಕ ನಮೂದಿಸದೇ ಖಾಲಿ ನಮೂನೆಗಳಿಗೆ ಸಹಿ ಮಾಡಿ ಖರೀದಿದಾರರಿಗೆ ನೀಡುತ್ತಿರುವುದರಿಂದ ಇಂತಹ ವಾಹನಗಳು ಅಪಘಾತಕ್ಕೀಡಾದಲ್ಲಿ ಅಥವಾ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗಿಸಿದ್ದಲ್ಲಿ ವಾಹನ ಮಾರಾಟಗಾರರೇ ಜವಾಬ್ದಾರರಾಗುತ್ತಾರೆ ಎಂದು ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ವಾಹನ ಮಾರಾಟ ಮಾಡಿದ ದಿನಾಂಕದಿಂದ ಮಾರಾಟಗಾರರು 14 ದಿನಗಳೊಳಗಡೆ ಆರ್.ಟಿ.ಒ ಕಛೇರಿಗೆ ಮಾಹಿತಿ ನೀಡಿ ಸ್ವೀಕೃತಿ

ನಮೂನೆ 29, 30 ಭರ್ತಿ ಮಾಡದೆ ವಾಹನ ಮಾರಾಟ ಮಾಡುವವರಿಗೆ ಎಚ್ಚರಿಕೆ ► ವಾಹನ ಅಪಘಾತಕ್ಕೀಡಾದಲ್ಲಿ ಮಾರಾಟಗಾರರೇ ಜವಾಬ್ದಾರರು Read More »

ಕರಾವಳಿ
Scroll to Top