News Kadaba Desk

ವಿವಿಧ ಬೇಡಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರಿಂದ ಅಲ್ಲಲ್ಲಿ ಮುಷ್ಕರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.09. ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯ ಮುಂದೆ ಹಾಗೂ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕು ಕಚೇರಿಯೆದುರು ಶುಕ್ರವಾರದಂದು ಮುಷ್ಕರ ನಡೆಯಿತು. ಮುಷ್ಕರವನ್ನು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ‌ ಉದ್ಘಾಟಿಸಿದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್, ಮಾಜಿ ಕಾರ್ಪೊರೇಟರ್ ಜಯಂತಿ ಬಿ.ಶೆಟ್ಟಿ ಮಾತನಾಡಿದರು. ಬಿಸಿಯೂಟ ನೌಕರರಿಗೆ 5 […]

ವಿವಿಧ ಬೇಡಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರಿಂದ ಅಲ್ಲಲ್ಲಿ ಮುಷ್ಕರ Read More »

ಕರಾವಳಿ

ದಕ್ಷಿಣ ಕನ್ನಡದಲ್ಲಿ ಇನ್ಮುಂದೆ ಆನ್‌ಲೈನ್‌ನಲ್ಲಿ ಪ್ರಥಮ ಪಿಯುಸಿ ಫಲಿತಾಂಶ ► ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದಿಂದ ನೂತನ ಪ್ರಯೋಗ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.09. ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘವು ಪ್ರಥಮ ಪಿಯುಸಿ ಫಲಿತಾಂಶಗಳ ಪ್ರಕಟನೆಗೆ ಏಕರೂಪದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ನಗರದ ಸರೋಜಿನಿ ಮಧುಸೂದನ ಕುಶೆ ಶಿಕ್ಷಣ ಸಂಸ್ಥೆಗಳ ಕಟ್ಟಡದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಯಿತು.   ರಾಜ್ಯದಲ್ಲಿಯೇ ಇದು ವಿನೂತನ ಪ್ರಯೋಗವಾಗಿದ್ದು, ಪ್ರಥಮ ಪಿಯುಸಿ ಫಲಿತಾಂಶ ಏಕರೂಪದಲ್ಲಿ, ಏಕಕಾಲದಲ್ಲಿ ‘ಸುವಿದ್ಯಾ’ ಪೋರ್ಟಲ್ ಮೂಲಕ ಆನ್‌ಲೈನ್‌ ನಲ್ಲಿ ಈ ಸಾಲಿನಿಂದ ಫಲಿತಾಂಶ ಲಭ್ಯವಾಗಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ಈ

ದಕ್ಷಿಣ ಕನ್ನಡದಲ್ಲಿ ಇನ್ಮುಂದೆ ಆನ್‌ಲೈನ್‌ನಲ್ಲಿ ಪ್ರಥಮ ಪಿಯುಸಿ ಫಲಿತಾಂಶ ► ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದಿಂದ ನೂತನ ಪ್ರಯೋಗ Read More »

ಕರಾವಳಿ

ಸ್ಥಳೀಯ ಸುದ್ದಿಗಳಲ್ಲಿ ಒಂದು ಹೊಸ ಮೈಲಿಗಲ್ಲು ► ಕನಿಷ್ಠ ಅಂತರದಲ್ಲಿ ಗರಿಷ್ಠ ಓದುಗರ ಬಳಗದೊಂದಿಗೆ ‘ನ್ಯೂಸ್ ಕಡಬ’ ಸುದ್ದಿ ಜಾಲತಾಣ

(ನ್ಯೂಸ್ ಕಡಬ) newskadaba.com ಕಡಬ, ಫೆ.09. ಸ್ಥಳೀಯ ಸುದ್ದಿಗಳಿಗೆ ಮಹತ್ವವನ್ನು ನೀಡಿ ಕಡಬ ತಾಲೂಕನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿರುವ ಅಂತರ್ಜಾಲ ಸುದ್ದಿ ಸಂಸ್ಥೆ ‘newskadaba.com’ ಇದೀಗ ಹೊಸತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. 2016 ರ ಜೂನ್ 03 ರಂದು ಆರಂಭವಾದ ಈ ಸಂಸ್ಥೆಯು ಕೆಲವೇ ತಿಂಗಳುಗಳಲ್ಲಿ ಹಲವು ತಾಂತ್ರಿಕ ತೊಂದರೆಗಳಿಂದಾಗಿ ಕೆಲಕಾಲ ಸ್ಥಗಿತಗೊಂಡಿತ್ತು. ನಂತರ 2017 ಜೂನ್ 07 ರಂದು ನೂತನ ತಂತ್ರಜ್ಞಾನದೊಂದಿಗೆ ಆರಂಭಗೊಂಡು ಇದೀಗ ಕಡಬ ಪರಿಸರದಲ್ಲಿ ಮನೆಮಾತಾಗಿದೆ. ಆರಂಭದಲ್ಲಿ ಒಂದು ಸಾವಿರದಿಂದ ಎರಡು ಸಾವಿರದಷ್ಟಿದ್ದ ನಮ್ಮ ಓದುಗರ

ಸ್ಥಳೀಯ ಸುದ್ದಿಗಳಲ್ಲಿ ಒಂದು ಹೊಸ ಮೈಲಿಗಲ್ಲು ► ಕನಿಷ್ಠ ಅಂತರದಲ್ಲಿ ಗರಿಷ್ಠ ಓದುಗರ ಬಳಗದೊಂದಿಗೆ ‘ನ್ಯೂಸ್ ಕಡಬ’ ಸುದ್ದಿ ಜಾಲತಾಣ Read More »

ಕರ್ನಾಟಕ

ನಿರುದ್ಯೋಗ ಸಮಸ್ಯೆಯೇ…? ನಿಮಗಾಗಿ ಕಾಯುತ್ತಿವೆ ಸಾವಿರಾರು ಉದ್ಯೋಗಗಳು ► ಫೆ.17 ರಂದು ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ ‘ದಿಶಾ ಕೆರಿಯರ್ ಫೆಸ್ಟ್’

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.09. ನಿರುದ್ಯೋಗಿ ಯುವಜನತೆಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಫೆಬ್ರವರಿ 17 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳ ‘ದಿಶಾ ಕ್ಯಾರಿಯರ್ ಫೆಸ್ಟ್’ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಲಭ್ಯವಿರಲಿದ್ದು, ಜಿಲ್ಲೆಯ ಯುವಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಿಂದ ಡಾ.ಎಂ.ಆರ್. ರವಿ ಕರೆ ನೀಡಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ನಡೆದ ಉದ್ಯೋಗ ಮೇಳ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿರುದ್ಯೋಗ ಸಮಸ್ಯೆಯೇ…? ನಿಮಗಾಗಿ ಕಾಯುತ್ತಿವೆ ಸಾವಿರಾರು ಉದ್ಯೋಗಗಳು ► ಫೆ.17 ರಂದು ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ ‘ದಿಶಾ ಕೆರಿಯರ್ ಫೆಸ್ಟ್’ Read More »

ಕರ್ನಾಟಕ

ತನ್ನ ಸಹಪಾಠಿಗಳ ನಿಂದನೆ ಮೇಘನಾ ಆತ್ಮಹತ್ಯೆಗೆ ಮುಳುವಾಯ್ತಾ.? ► ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಸೋತಿದ್ದ ಮೇಘನಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.09. ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಪಾಲ್ಗೊಂಡು ಸೋತಿದ್ದ ಹಿನ್ನೆಲೆಯಲ್ಲಿ ಬುಧವಾರದಂದು ಆತ್ಮಹತ್ಯೆಗೆ ಶರಣಾಗಿದ್ದ ಕುಮಾರಸ್ವಾಮಿ ಲೇಔಟ್‍ನ ದಯಾನಂದಸಾಗರ ಕಾಲೇಜಿನ 2 ನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ(18) ಪ್ರಕರಣಕ್ಕೆ ಇದೀಗ ಮಹತ್ವದ ಟ್ವಿಸ್ಟ್ ದೊರೆತಿದ್ದು, ತನ್ನ ಸಹಪಾಠಿಗಳೇ ಬೈದು ನಿಂದಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಸೋತಿದ್ದಕ್ಕೆ ವಿಜೇತ ಪಕ್ಷದವರು ಹಂಗಿಸಿದ್ದ ಕಾರಣ ಬೇಸರಗೊಂಡು ಮೇಘನಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿತ್ತು. ಆದರೆ ಮೇಘನಾ ಸಹಪಾಠಿಗಳಾದ

ತನ್ನ ಸಹಪಾಠಿಗಳ ನಿಂದನೆ ಮೇಘನಾ ಆತ್ಮಹತ್ಯೆಗೆ ಮುಳುವಾಯ್ತಾ.? ► ಸ್ಟೂಡೆಂಟ್ ಎಲೆಕ್ಷನ್ ನಲ್ಲಿ ಸೋತಿದ್ದ ಮೇಘನಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ Read More »

ಕರ್ನಾಟಕ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಯಾರಿ ಬಗ್ಗೆ ನೇರ ಫೋನ್ ಇನ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.09. ಮಾರ್ಚ್/ಏಪ್ರಿಲ್‍ನಲ್ಲಿ ನಡೆಯಲಿರುವ 2017-18ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ತಯಾರಿ ಬಗ್ಗೆ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಮಂಗಳೂರು ಟ್ಯೂಶನ್-ರಾಮನ್ ಪಬ್ಲಿಕೇಶನ್ ಇವರ ಪ್ರಯೋಜತ್ವದಲ್ಲಿ ಆಕಾಶವಾಣಿ, ಮಂಗಳೂರು ಇವರ ವತಿಯಿಂದ ನೇರ ಪೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ‌. ಫೆಬ್ರವರಿ 11 ರಂದು ಬೆಳಿಗ್ಗೆ 10.30 ರಿಂದ 11.30 ರವರೆಗೆ ವಿಜ್ಞಾನ ವಿಷಯದ ಬಗ್ಗೆ ಫೆಬ್ರವರಿ 18 ರಂದು ಬೆಳಿಗ್ಗೆ 10.30 ರಿಂದ 11.30 ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬಂಧಿಸಿದಂತೆ ನಡೆಯಲಿರುವ ಈ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಯಾರಿ ಬಗ್ಗೆ ನೇರ ಫೋನ್ ಇನ್ ಕಾರ್ಯಕ್ರಮ Read More »

ಕರಾವಳಿ

22 ನೇ ದಕ್ಷಿಣ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಅಂಚೆ ಕಾರ್ಡಿನಲ್ಲಿ ಚಿತ್ರ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.08. ಮಾರ್ಚ್ 5, 6 ಮತ್ತು 7 ರಂದು 3 ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜರಗಲಿರುವ 22 ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮೂಲದ ಸಾಹಿತಿಗಳ, ಸಾಧಕರ, ಕವಿಗಳ, ರಾಜಕೀಯ ಮತ್ತು ಸಾಮಾಜಿಕ ಮುತ್ಸದ್ದಿಗಳ ಚಿತ್ರಗಳನ್ನು ಆಹ್ವಾನಿಸಲಾಗಿದೆ. 10ನೇ ತರಗತಿಯ ಒಳಗಿನ ವಿದ್ಯಾರ್ಥಿಗಳು ಹಾಗೂ ಪಿಯುಸಿ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳು ಅಂಚೆಕಾರ್ಡಿನಲ್ಲಿ ಕೈಯಲ್ಲಿ ಬಿಡಿಸಿದ ಚಿತ್ರಗಳನ್ನು ಫೆಬ್ರವರಿ 28ರೊಳಗಾಗಿ ಶ್ರೀ

22 ನೇ ದಕ್ಷಿಣ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಅಂಚೆ ಕಾರ್ಡಿನಲ್ಲಿ ಚಿತ್ರ ಆಹ್ವಾನ Read More »

ಕರಾವಳಿ

ನೆಟ್ಟಣ: ದೇವಸ್ಥಾನಕ್ಕೆಂದು ಆಗಮಿಸಿ ಹಿಂತಿರುಗಿ ಹೋಗಲು ಹಣವಿಲ್ಲದೆ ಕಂಗಾಲಾದ ಪ್ರೇಮಿಗಳು ► ಅತ್ತಿತ್ತ ಅಲೆದಾಡುತ್ತಿದ್ದ ಪ್ರೇಮಿಗಳನ್ನು ಹಿಡಿದು ಕಡಬ ಠಾಣೆಗೆ ಒಪ್ಪಿಸಿದ ಊರವರು

(ನ್ಯೂಸ್ ಕಡಬ) newskadaba.com ಕಡಬ, ಫೆ.08. ದೇವಸ್ಥಾನಕ್ಕೆಂದು ಆಗಮಿಸಿ ಹಿಂತಿರುಗಿ ಊರಿಗೆ ಹೋಗಲು ದುಡ್ಡು ಇಲ್ಲದ ಪರಿಣಾಮ ರೈಲ್ವೇ ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಪ್ರೇಮಿಗಳಿಬ್ಬರನ್ನು ಊರವರು ವಿಚಾರಿಸಿ ಕಡಬ ಠಾಣೆಗೆ ಮಾಹಿತಿ ನೀಡಿದ ಘಟನೆ ನೆಟ್ಟಣದಲ್ಲಿ ನಡೆದಿದೆ. ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಹಾಸನ ಮೂಲದ ನೂತನ್ ಎಂಬಾತ ತನ್ನ ಪ್ರೇಯಸಿ ಕಾಲೇಜು ವಿದ್ಯಾರ್ಥಿನಿಯನ್ನು ಸುಬ್ರಹ್ಮಣ್ಯಕ್ಕೆ ಬರಹೇಳಿದ್ದು, ಅದರಂತೆ ಯುವತಿ ಆಗಮಿಸಿದ್ದಾಳೆನ್ನಲಾಗಿದೆ. ಆಗಮಿಸುವಾಗ ಯುವಕ ರೈಲು ಪ್ರಯಾಣಕ್ಕೆ ಬೇಕಾಗುವಷ್ಟು ಹಣವನ್ನು ಮಾತ್ರ ತಂದಿದ್ದು, ಸುಬ್ರಹ್ಮಣ್ಯಕ್ಕೆ ತಲುಪಿದಾಗ ಇವರಲ್ಲಿದ್ದ ಹಣ

ನೆಟ್ಟಣ: ದೇವಸ್ಥಾನಕ್ಕೆಂದು ಆಗಮಿಸಿ ಹಿಂತಿರುಗಿ ಹೋಗಲು ಹಣವಿಲ್ಲದೆ ಕಂಗಾಲಾದ ಪ್ರೇಮಿಗಳು ► ಅತ್ತಿತ್ತ ಅಲೆದಾಡುತ್ತಿದ್ದ ಪ್ರೇಮಿಗಳನ್ನು ಹಿಡಿದು ಕಡಬ ಠಾಣೆಗೆ ಒಪ್ಪಿಸಿದ ಊರವರು Read More »

ಕರಾವಳಿ

ಮಠ, ದೇಗುಲಗಳನ್ನು ನಿಯಂತ್ರಿಸುವ ಯಾವುದೇ ಉದ್ದೇಶ ಸರಕಾರಕ್ಕಿಲ್ಲ ► ವಿಧಾನ ಪರಿಷತ್ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.08. ‘ಮಠ ಹಾಗೂ ಮಠಗಳ ವಶದಲ್ಲಿರುವ ಹಿಂದೂ ದೇವಾಲಯಗಳನ್ನು ನಿಯಂತ್ರಿಸುವ ಯಾವುದೇ ಉದ್ದೇಶ ರಾಜ್ಯ ಸರಕಾರದ ಮುಂದೆ ಇಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಅವರು ಗುರುವಾರ ವಿಧಾನ ಪರಿಷತ್‌ ಕಲಾಪದಲ್ಲಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸದಸ್ಯರ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಜನರ ಅಭಿಪ್ರಾಯಗಳನ್ನು ಕೇಳಿದ್ದೇವು. ಈಗ ಆ ಪ್ರಸ್ತಾವನೆಯನ್ನು ಕೈಬಿಟ್ಟಿದ್ದೇವೆ. ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ತಿಳಿಸಿದರು. ಸುತ್ತೋಲೆಯನ್ನು ವಾಪಾಸ್ ಪಡೆದಿದ್ದು, ಅದು

ಮಠ, ದೇಗುಲಗಳನ್ನು ನಿಯಂತ್ರಿಸುವ ಯಾವುದೇ ಉದ್ದೇಶ ಸರಕಾರಕ್ಕಿಲ್ಲ ► ವಿಧಾನ ಪರಿಷತ್ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ Read More »

ಕರ್ನಾಟಕ

ಕನಿಷ್ಠ ವೇತನಕ್ಕೆ ಆಗ್ರಹಿಸಿ ಮೂರನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ತಯಾರಕರ ಮುಷ್ಕರ ► ಪ್ರತಿಭಟನಾ ನಿರತರಿಂದ ವಿಧಾನಸೌಧಕ್ಕೆ ಮುತ್ತಿಗೆ ಯತ್ನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.08. ಸುಪ್ರೀಂ ಕೋರ್ಟ್‌ ಆದೇಶದಂತೆ ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರದಿಂದ ಆರಂಭಿಸಿರುವ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಸಾವಿರಾರು ಕಾರ್ಯಕರ್ತೆಯರು ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದು ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬ್ಯಾರಿಕೇಡ್‌ಗಳನ್ನು ತಳ್ಳಿ ಮುಂದಕ್ಕೆ ಸಾಗಲು ಯತ್ನಿಸಿದ ಪ್ರತಿಭಟನಾ ನಿರತರನ್ನು ತಡೆಯಲು ಮಹಿಳಾ ಪೊಲೀಸ್‌

ಕನಿಷ್ಠ ವೇತನಕ್ಕೆ ಆಗ್ರಹಿಸಿ ಮೂರನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ತಯಾರಕರ ಮುಷ್ಕರ ► ಪ್ರತಿಭಟನಾ ನಿರತರಿಂದ ವಿಧಾನಸೌಧಕ್ಕೆ ಮುತ್ತಿಗೆ ಯತ್ನ Read More »

ಕರ್ನಾಟಕ
Scroll to Top